Asianet Suvarna News Asianet Suvarna News

ಪಾರ್ಟ್ ಟೈಮ್ ಉದ್ಯೋಗ ನೆಪದಲ್ಲಿ ವಂಚಿಸಿ 15 ಕೋಟಿ ರೂ ಚೀನಾಗೆ ಕಳುಹಿಸಿದ ನಾಲ್ವರು ಅರೆಸ್ಟ್!

ಭಾರತದಲ್ಲಿ ಚೀನಾ ಪ್ರಾಯೋಜಿತ ವಂಚನೆಗಳು ಹೆಚ್ಚಾಗುತ್ತಿದೆ. ಇದೀಗ ಪಾರ್ಟ್ ಟೈಮ್ ಉದ್ಯೋಗ ಹೆಸರಿನಲ್ಲಿ ಮುಗ್ದ ಭಾರತೀಯರನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. 15 ಕೋಟಿ ರೂಪಾಯಿ ಸಂಗ್ರಹಿಸಿ ಚೀನಾಗೆ ಕಳುಹಿಸಿದ ನಾಲ್ವರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅತೀ ದೊಡ್ಡ ವಂಚನೆ ಬೆಳಕಿಗೆ ಬಂದಿದೆ.

Gurugram cyber crime police arrest 4 who cheat people on part time job transfer rs 15 crore to china citizens ckm
Author
First Published Feb 28, 2024, 1:16 PM IST

ಗುರುಗ್ರಾಂ(ಫೆ.28) ಸೈಬರ್ ವಂಚನೆ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದೆ. ಒಂದಲ್ಲೂ ಒಂದು ರೀತಿಯಲ್ಲಿ ಪ್ರತಿ ದಿನ ಮೋಸ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಇದೀಗ ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ನಾಲ್ವರು ಮುಗ್ದ ಜನರನ್ನು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದು ಆಘಾತವೆಂದರೆ, ಇದು ಕೂಡ ಚೀನಾ ಲಿಂಕ್ ಅನ್ನೋದು ಬಹಿರಂಗವಾಗಿದೆ. ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಗುರುಗ್ರಾಂ ಪೊಲೀಸರು ವಿವಿಧ ರಾಜ್ಯಗಳ ನಾಲ್ವರನ್ನು ಬಂಧಿಸಿದ್ದಾರೆ. ಈ ನಾಲ್ವರು ಜನರಿಂದ 15 ಕೋಟಿ ರೂಪಾಯಿ ಸಂಗ್ರಹಿಸಿ ಚೀನಾಗೆ ಕಳುಹಿಸುರುವುದು ಬಹಿರಂಗವಾಗಿದೆ. ಬಂಧಿತರಿಂದ ಮೂರು ಮೊಬೈಲ್ ಫೋನ್, 5 ಬ್ಯಾಂಕ್ ಕಿಟ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಹರ್ಯಾಣದ ಶುಗರ್ ಮಿಲ್ ಕಾಲೋನಿಯಾ ಚಂದ್ರಪ್ರಕಾಶ್ ತಿವಾರಿ, ಉತ್ತರ ಪ್ರದೇಶದ ಅಂಕಿತ್ ಹಾಗೂ ನಿತಿನ್ ಕುಮಾರ್, ಉತ್ತರ ಪ್ರದೇಶದ ತಾಜ್‌ಪುರ ಗ್ರಾಮದ ಅಭಿನವ್ ಎಂದು ಗುರುತಿಸಲಾಗಿದೆ.  ಚಂದ್ರಪ್ರಕಾಶ್ ತಿವಾರಿ ಈ ಗ್ಯಾಂಗ್‌ನ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇದಕ್ಕೂ ಮೊದಲು ನಾಲ್ವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳು ಕೂಡ ಇದೇ ಚೀನಾ ಲಿಂಕ್ ಪಾರ್ಟ್ ಟೈಮ್ ಉದ್ಯೋಗ ವಂಚನೆಯಲ್ಲಿ ತೊಡಗಿದ್ದರು. 

ಪಿಗ್ ಬುಚರಿಂಗ್ ಸ್ಕ್ಯಾಮ್, ಮುಂದಿನ ಸೈಬರ್ ಟಾರ್ಗೆಟ್ ನೀವಾಗಬಹುದು, ಎಚ್ಚೆತ್ತುಕೊಳ್ಳಿ!

ಬಂಧಿತರು ಚೀನಾದ ವಂಚಕರ ಜೊತೆ ಸಂಪರ್ಕದಲ್ಲಿದ್ದರು. ಅವರ ನಿರ್ದೇಶನದಂತೆ ಇಲ್ಲಿ ವಂಚನೆ ನಡೆಸಿ ಹಣ ವಸೂಲಿ ಮಾಡುತ್ತಿದ್ದರು. ಪಾರ್ಟ್ ಟೈಮ್ ಉದ್ಯೋಗದ ಉತ್ಯತ್ತಮ ಅವಕಾಶ ನಿಮಿಗಿದೆ ಎಂದು ಮುಗ್ದರನ್ನು ಈ ಜಾಲಕ್ಕೆ ಸಿಲುಕಿಸುತ್ತಿದ್ದರು. ಕೆಲವರ ಬಳಿ ಆರಂಭದಲ್ಲೇ ಹಣ ಪಾವತಿ ಮಾಡಿಸಿಕೊಂಡಿದ್ದಾರೆ. ಮತ್ತೆ ಕೆಲವರಿಗೆ ಸುಖಾಸುಮ್ಮನೆ ವೇತನ ನೀಡಿ ಬಳಿಕ ದುಪ್ಪಟ್ಟ ಹಣ ವಸೂಲಿ ಮಾಡಿದ್ದಾರೆ. 

ಗೋರಖ್‌ಪುರ್ ನಿವಾಸಿ ಈ ವಂಚನೆ ಕುರಿತು ಲಿಖಿತ ದೂರು ನೀಡಿದ್ದರು. ನವೆಂಬರ್ 30 ರಂದು ಈ ಪ್ರಕರಣ ಕುರಿತು ಮೊದಲ ದೂರು ದಾಖಲಾಗಿತ್ತು. ಸೈಬರ್ ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸಲು ಆರಂಭಿಸಿದ್ದರು. ದೂರುದಾರ 8.5 ಲಕ್ಷ ರೂಪಾಯಿ ಹೂಡಿಕೆ ಮಾಡಿ ಪಾರ್ಟ್ ಟೈಮ್ ಉದ್ಯೋಗ ಆಮಿಷಕ್ಕೆ ಬಲಿಯಾಗಿದ್ದೇನೆ ಎಂದು ದೂರು ನೀಡಿದ್ದರು. 

ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷ; ಮಹಿಳಾ ಟೆಕ್ಕಿಗೆ ಬರೋಬ್ಬರಿ 18ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು!

ವ್ಯಾಟ್ಸ್ಆ್ಯಪ್ ಮೂಲಕ ಕೆಲ ಟಾಸ್ಕ್‌ಗಳನ್ನು ನೀಡಲಾಗುತ್ತಿತ್ತು. ಈ ಟಾಸ್ಕ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ವೇತನ ರೂಪದಲ್ಲಿ ಕೆಲ ಹಣವನ್ನು ಜನರಿಗೆ ಪಾವತಿಸಲಾಗಿದೆ. ಬಳಿಕ ಮುಗ್ದರಿಂದ ಹಣ ವಸೂಲಿ ಆರಂಭಿಸುತ್ತಾರೆ. ಹಲರು ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

Follow Us:
Download App:
  • android
  • ios