ರಿಲಾಯನ್ಸ್ ಜಿಯೋ ದೇಶದ ಮೂಲೆ ಮೂಲೆಗಳಲ್ಲಿ ಡೆಲಿಕಾಂ ನೆಟ್‌ವರ್ಕ್ ಜಾಲ ವಿಸ್ತರಿಸುತ್ತಿದೆ. ಇದೀಗ ಕೊಡಗಿನ ತಲಕಾವೇರಿಯಲ್ಲಿ ಜಿಯೋ 4ಜಿ ಆರಂಭಗೊಂಡಿದೆ.  

ಬೆಂಗಳೂರು(ಫೆ.17): ಕೊಡಗು ಜಿಲ್ಲೆಯ ತಲಕಾವೇರಿ ಕಾವೇರಿ ನದಿಯ ಉಗಮ ಸ್ಥಾನ. ಹಿಂದೂಗಳ ಪವಿತ್ರ ಸ್ಥಳವಾಗಿದೆ. ಕೊಡಗಿನ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟಗಳ ಬಳಿ ಇರುವ ತಲಕಾವೇರಿಯಲ್ಲಿ ರಿಲಯನ್ಸ್ ಜಿಯೋ ಟ್ರೂ 4ಜಿ ಲಾಂಚ್ ಮಾಡಲಾಗಿದೆ. ಜಿಯೋ ನಡೆಯಿಂದ ತಲಕಾವೇರಿ ಬೆಟ್ಟದ ತಪ್ಪಲಿನಲ್ಲಿರುವ ಕುಟುಬಗಳು, ತಲಕಾವೇರಿಗೆ ಆಗಮಿಸುವ ಭಕ್ತರಿಗೆ ನೆರವಾಗಲಿದೆ. ಈಗ ಲಭ್ಯವಿರುವ ಜಿಯೋ ನೆಟ್‌ವರ್ಕ್‌ ಮೂಲಕವಾಗಿ ತಮ್ಮ ಮಕ್ಕಳು ಪ್ರತಿ ದಿನ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಯುವಕರು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲು ಅಥವಾ ಸುರಕ್ಷಿತ ವಾತಾವರಣದಲ್ಲಿ ಅನಿಯಮಿತ ಮನರಂಜನೆ ಪಡೆಯಲು ಸಾಧ್ಯ. 

Add Asianetnews Kannada as a Preferred SourcegooglePreferred

ದೂರಸಂಪರ್ಕ ಸೇವೆಗಳ ಕೊರತೆಯಿಂದಾಗಿ ತಲಕಾವೇರಿಯ ಜನರು ಹೊರ ಜಗತ್ತಿಗೆ ಮೂಲಭೂತವಾದ ಸಂಪರ್ಕದಿಂದ ವಂಚಿತರಾಗಿದ್ದರು. ಜಿಯೋದಿಂದ ಸೌರ ಶಕ್ತಿಯನ್ನು ಬಳಸಿಕೊಂಡು, ಹಸಿರು ಟವರ್ ನೊಂದಿಗೆ ಟ್ರೂ 4ಜಿ ಒದಗಿಸುತ್ತದೆ.ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ವೇಗವರ್ಧಕವಾಗಿದೆ ಜಿಯೋ. ಇನ್ನು ಜಿಯೋ ತನ್ನ ಸೇವೆಗಳ ಮೂಲಕವಾಗಿ ಪ್ರಾರಂಭದಿಂದಲೂ ಡಿಜಿಟಲ್ ಕ್ರಾಂತಿಯನ್ನು ಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯರಿಗೆ ಡೇಟಾದ ಶಕ್ತಿ ನೀಡಿತು. ಈ ಡಿಜಿಟಲ್ ಕ್ರಾಂತಿಯಿಂದಾಗಿ ಈಗ ನಮ್ಮ ದೇಶದ ದೂರದ ಭಾಗಗಳಿಗೆ ಇನ್ನಷ್ಟು ಸಂಪರ್ಕಿಸಬಹುದಾಗಿದೆ. 

ದಾವಣಗೆರೆ, ಶಿವಮೊಗ್ಗ ಸೇರಿ ಕರ್ನಾಟಕದ 5 ನಗರದಲ್ಲಿ ಜಿಯೋ 5ಜಿ ಸೇವೆ!

ಕರ್ನಾಟಕದಲ್ಲಿ ಜಿಯೋದ ಈ ಹೊಸ ಉಪಕ್ರಮವು ಕೊಡುಗೆಗಳ ಗುಚ್ಛದ ಮೂಲಕ ಗಮನ ಸೆಳೆಯುತ್ತದೆ ಮತ್ತು ಜಿಯೋ ಡಿಜಿಟಲ್ ಲೈಫ್ ರಾಜ್ಯದ ಚಂದಾದಾರರಿಗೆ ತರುವ ಪ್ರಯೋಜನಗಳನ್ನು ತೆರೆದಿಡುತ್ತದೆ.

ಜಿಯೋ ನೀಡುತ್ತಿರುವ ಪ್ರಯೋಜನಗಳು ಈ ಕೆಳಕಂಡವುಗಳನ್ನೂ ಒಳಗೊಂಡಿವೆ: 
- ಕರ್ನಾಟಕದಾದ್ಯಂತ ತಡೆರಹಿತ ಸಂಪರ್ಕ, ದೃಢ ಮತ್ತು ವ್ಯಾಪಕವಾದ 4ಜಿ ನೆಟ್‌ವರ್ಕ್
- ಅನಿಯಮಿತ ಧ್ವನಿ ಮತ್ತು ಡೇಟಾ ಪ್ರಯೋಜನಗಳು
- ಜಿಯೋ ಟಿವಿ (ಪ್ರಯಾಣದಲ್ಲಿರುವಾಗ ಹೆಚ್ಚು ಜನಪ್ರಿಯವಾಗಿರುವ, ಕ್ಯಾಚ್-ಅಪ್ ಟಿವಿ ಅಪ್ಲಿಕೇಷನ್), ಜಿಯೋಸಿನಿಮಾ ಮತ್ತು ಇತರವುಗಳನ್ನು ಒಳಗೊಂಡಿರುವ ಜಿಯೋ ಪ್ರೀಮಿಯಂ ಅಪ್ಲಿಕೇಷನ್‌ಗಳ ಬಳಕೆ‌ಗೆ ಅವಕಾಶ.
- ಕರ್ನಾಟಕದಾದ್ಯಂತ ಜಿಯೋ ಸಿಮ್‌ಗಳ ಸುಲಭ ಲಭ್ಯತೆ
- ಸರಳ ಮತ್ತು ಅನುಕೂಲಕರ ಸೇರ್ಪಡೆ ಅನುಭವ

ಸಂಕ್ರಾಂತಿ ಹಬ್ಬಕ್ಕೆ ಜಿಯೋ ಕೊಡುಗೆ, ಉಡುಪಿ, ಬಳ್ಳಾರಿ ಸೇರಿ ಕರ್ನಾಟಕ 5 ನಗರದಲ್ಲಿ ಜಿಯೋ 5ಜಿ ಆರಂಭ!

ಗ್ರಾಹಕರ ಸಂತೋಷವು ಜಿಯೋ ಅನುಭವದ ಮೂಲಾಧಾರವಾಗಿದೆ. ಈ ಉಪಕ್ರಮದ ಮೂಲಕವಾಗಿ ಜಿಯೋ ತನ್ನ ದೃಢವಾದ ನೆಟ್‌ವರ್ಕ್ ಮತ್ತು ಜಿಲ್ಲೆಯಾದ್ಯಂತ ವ್ಯಾಪಕವಾದ ಲಭ್ಯತೆಯ ಮೂಲಕ ತಲಕಾವೇರಿಯಲ್ಲಿನ ಸ್ಥಳೀಯ ಕುಟುಂಬಗಳಿಗೆ ಎಲ್ಲೆಡೆಯೂ ಎಲ್ಲ ಸಮಯದಲ್ಲಿಯೂ ತಡೆರಹಿತ ಅನುಭವ ನೀಡುವುದನ್ನು ಮುಂದುವರಿಸುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ.