Asianet Suvarna News Asianet Suvarna News

ಸಂಕ್ರಾಂತಿ ಹಬ್ಬಕ್ಕೆ ಜಿಯೋ ಕೊಡುಗೆ, ಉಡುಪಿ, ಬಳ್ಳಾರಿ ಸೇರಿ ಕರ್ನಾಟಕ 5 ನಗರದಲ್ಲಿ ಜಿಯೋ 5ಜಿ ಆರಂಭ!

ಮಕರ ಸಂಕ್ರಾಂತಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಕೊಡುಗೆ ನೀಡಿದೆ.  ಕರ್ನಾಟಕದ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿ ಸೇರಿದಂತೆ 8 ರಾಜ್ಯಗಳ 16 ನಗರಗಳಲ್ಲಿ ಜಿಯೋ ಟ್ರು 5ಜಿ ಸೇವೆ ಆರಂಭಿಸಲಾಗಿದೆ. 

Udupi to Bellary Reliance jio launches tru 5g service in 5 cities of Karnataka on occasion of Makara sankranti ckm
Author
First Published Jan 14, 2023, 9:32 PM IST

ಬೆಂಗಳೂರು(ಜ.14): ಮಕರ ಸಂಕ್ರಾಂತಿಯ ದಿನ ಜಿಯೋ ತನ್ನ ಟ್ರೂ 5ಜಿ ಸೇವೆಯನ್ನು ಕರ್ನಾಟಕದ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿ, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್‌ಗಢ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಪ್ರಾರಂಭಿಸಿದೆ. ಇದರಲ್ಲಿ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿಯಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

ತಂತ್ರಜ್ಞಾನವು ಒಂದು ಉತ್ತಮ ಒಗ್ಗೂಡಿಸುವ ಸಾಧನವಾಗಿದೆ. ಮಕರ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಸೇರಿದಂತೆ ಹಬ್ಬಗಳನ್ನು ಆಚರಿಸುವ ಇಂತಹ ಮಂಗಳಕರ ಸಮಯದಲ್ಲಿ ಕರ್ನಾಟಕ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಎಂಟು ರಾಜ್ಯಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ಹೆಮ್ಮೆಪಡುತ್ತದೆ ಎಂದು ಜಿಯೋ ವಕ್ತಾರರು ಹೇಳಿದ್ದಾರೆ.

 

ಜಿಯೋದಿಂದ ಬಂಪರ್ ಆಫರ್, ಕೇವಲ 61 ರೂಪಾಯಿಗೆ 5G ಡೇಟಾ ಪ್ಯಾಕ್!

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್‌ಗಢ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ರಾಜ್ಯ ಸರ್ಕಾರಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ಜಿಯೋ ಟ್ರೂ 5ಜಿ ವ್ಯಾಪ್ತಿ ವಿಸ್ತರಿಸಲು ಮತ್ತು ಜಿಯೋ ಟ್ರೂ 5ಜಿ ತಂತ್ರಜ್ಞಾನದ ಪ್ರಯೋಜನಗಳು ದೇಶಾದ್ಯಂತ ಬಳಕೆದಾರರನ್ನು ತಲುಪುವಂತೆ ಮಾಡಲು ನಮ್ಮ ಪ್ರಯತ್ನದಲ್ಲಿ ಎಲ್ಲ ರಾಜ್ಯಗಳ ಸರ್ಕಾರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಜಿಯೋ ವಕ್ತಾರರು ಹೇಳಿದ್ದಾರೆ.

ಜನವರಿ 14ರಿಂದ ಕರ್ನಾಟಕದ ಉಡುಪಿ-ಮಣಿಪಾಲ, ವಿಜಯಪುರ, ಕಲಬುರಗಿ ಬಳ್ಳಾರಿ, ಛತ್ತೀಸ್‌ಗಢ (ರಾಯಪುರ, ದುರ್ಗ್, ಭಿಲಾಯಿ), ಬಿಹಾರ (ಪಾಟ್ನಾ, ಮುಜಾಫರ್‌ಪುರ), ಜಾರ್ಖಂಡ್ (ರಾಂಚಿ, ಜಮ್ಷೆಡ್‌ಪುರ), ಒಡಿಶಾ (ರೂರ್ಕೆಲಾ ಮತ್ತು ಬ್ರಹ್ಮಪುರ), ಕೇರಳ (ಕೊಲ್ಲಂ), ಆಂಧ್ರಪ್ರದೇಶ (ಎಲೂರು), ಮಹಾರಾಷ್ಟ್ರ (ಅಮರಾವತಿ) ಹೀಗೆ 8 ರಾಜ್ಯಗಳ, 16 ನಗರಗಳಲ್ಲಿ ಜಿಯೋ ಬಳಕೆದಾರರು ಜಿಯೋ ವೆಲ್ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ, ಇದರಲ್ಲಿ ಅವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾ ಪಡೆಯುತ್ತಾರೆ.

ದೇಶಾದ್ಯಂತ ಟ್ರೂ 5ಜಿ ಜಾರಿಯ ‌ವೇಗ ಮತ್ತು ತೀವ್ರತೆಯನ್ನು ನಾವು ಹೆಚ್ಚಿಸುತ್ತಿರುವುದರಿಂದ, 8 ರಾಜ್ಯಗಳಾದ್ಯಂತ 16 ಹೊಸ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳ ಪ್ರಾರಂಭವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. 2023ರಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ರೂಪಾಂತರ ಪ್ರಯೋಜನಗಳನ್ನು ಪ್ರತಿ ಜಿಯೋ ಬಳಕೆದಾರರು ಆನಂದಿಸಲು ತ್ವರಿತಗತಿಯಲ್ಲಿ ಜಿಯೋ ಟ್ರುಜಿ ಆರಂಭಿಸಲಾಗುತ್ತಿದೆ.

ಹೊಸ ವರ್ಷಕ್ಕೆ ಜಿಯೋ ಕೊಡುಗೆ, ಮೈಸೂರಿನಲ್ಲಿ ಟ್ರೂ 5ಜಿ ಸೇವೆ ಆರಂಭ!

ಜಿಯೋ ಇಂಜಿನಿಯರ್‌ಗಳು ಟ್ರೂ-5ಜಿ ಪ್ರಯೋಜನಗಳನ್ನು ಪ್ರತಿ ಭಾರತೀಯರಿಗೂ ತಲುಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರು ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಈ ಹೊಸ ಟ್ರೂ 5ಜಿ-ಚಾಲಿತ ನಗರಗಳು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ, ವಾಣಿಜ್ಯ ಮತ್ತು ಕೈಗಾರಿಕಾ ತಾಣಗಳಾಗಿವೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶಗಳ ಗ್ರಾಹಕರು ಅತ್ಯುತ್ತಮ ದೂರಸಂಪರ್ಕ ಸೇವೆಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ ಎಂದರು.
 

Follow Us:
Download App:
  • android
  • ios