- Home
- Technology
- What's New
- Robot Trainers: ಪಾತ್ರೆ ತೊಳೆದರೆ 85 ಸಾವಿರ ರೂ. ಸಂಬಳ ಕೊಡ್ತಾರಾ? ಈ ಹೊಸ ಜಾಬ್ ಬಗ್ಗೆ ನಿಮಗೆ ಗೊತ್ತಾ?
Robot Trainers: ಪಾತ್ರೆ ತೊಳೆದರೆ 85 ಸಾವಿರ ರೂ. ಸಂಬಳ ಕೊಡ್ತಾರಾ? ಈ ಹೊಸ ಜಾಬ್ ಬಗ್ಗೆ ನಿಮಗೆ ಗೊತ್ತಾ?
ಚೀನಾದಲ್ಲಿ ರೋಬೋಗಳಿಗೆ ತರಬೇತಿ ನೀಡುವ ರೋಬೋಟ್ ಟ್ರೈನರ್ಸ್ ಉದ್ಯೋಗಗಳು ಟ್ರೆಂಡಿಂಗ್‌ನಲ್ಲಿದೆ. ಮನುಷ್ಯರು ಮಾಡುವ ಕೆಲಸಗಳನ್ನು ರೋಬೋಗಳಿಗೆ ಕಲಿಸುತ್ತಿರವ ಈ ತಂತ್ರಜ್ಞಾನ ಭವಿಷ್ಯದಲ್ಲಿ ಮನೆಕೆಲಸದವರ ಉದ್ಯೋಗ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ತಿಳಿದರೆ ನಿಮಗೆ ಖಂಡಿತ ಅಚ್ಚರಿ ಆಗುತ್ತದೆ.

ರೋಬೋಗಳಿಗೆ ಮಾನವನ ತರಬೇತಿ, ಹೊಸ ಉದ್ಯೋಗ
ಆರ್ಟಿಫಿಶಿಯಲ್ ಇಂಟೆಲೆಜೆನ್ಸ್, ರೋಬೋಟಿಕ್ಸ್ ರಂಗದಲ್ಲಿ ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಆದರೆ ತಂತ್ರಜ್ಞಾನ ಎಷ್ಟು ಹೆಚ್ಚಾದರೂ, ಮನುಷ್ಯರು ಮಾಡುವ ಸಾಮಾನ್ಯ ಕೆಲಸಗಳನ್ನು ಈ ಯಂತ್ರಳಿಗೆ ಕಲಿಸುವುದು ಬಹಳ ಸವಾಲಿನ ಕೆಲಸವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಿದ್ದು, ಹೊಸ ಉದ್ಯೋಗ ಕ್ಷೇತ್ರ ಉದಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಉದ್ಯೋಗದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ತರಬೇತಿ ನೀಡುವವರ ಕೆಲಸ ಏನು?
ಮನೆಗಳು ಸೇರಿದಂತೆ ಫ್ಯಾಕ್ಟರಿಗಳಲ್ಲಿ ಮನುಷ್ಯರನ್ನು ಹೋಲುವ ಎಐ ತಂತ್ರಜ್ಞಾನಕ್ಕೆ ಕಲಿಸುವುದೆ ಈ ತರಬೇತುದಾರರ ಕೆಲಸವಾಗಿದೆ. ಇದಕ್ಕಾಗಿ ಇವರು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ತರಬೇತುದಾರರು ತಮ್ಮ ದೇಹಕ್ಕೆ ಮೋಶನ್ ಸೆನ್ಸಾರ್, ಸೆನ್ಸಾರ್ ಬ್ರಾಸ್ಲೈಟ್, ತಲೆಯ ಮೇಲೆ ಕ್ಯಾಮೆರಾ ಅಳವಡಿಕೊಳ್ಳಬೇಕು. ಕಂಪ್ಯೂಟರ್ ಸ್ಕ್ರೀನ್ ಮೇಲೆ ಸಿಗುವ ಸೂಚನೆಯಂತೆ ಬಟ್ಟೆ ಮಡಚುವುದು, ಪಾತ್ರೆ ಕ್ಲೀನ್ ಮಾಡುವುದು, ವಸ್ತುಗಳನ್ನು ಜೋಡಿಸುವುದು, ಟೇಬಲ್ ಕ್ಲೀನ್ ಮಾಡುವ ದಿನನಿತ್ಯದ ಕೆಲಸಗಳನ್ನು ಮಾಡಬೇಕಾಗುತ್ತದೆ. ಇವರು ಮಾಡುವ ಪ್ರತಿ ಕೆಲಸವೂ ಡೇಟಾವಾಗಿ ಸಂಗ್ರಹಣೆಯಾಗಿ, ಭವಿಷ್ಯದಲ್ಲಿ ರೋಬೋಗಳಿಗೆ ತರಬೇರತಿ ನೀಡಲು ಇದನ್ನು ಒಂದು ಟ್ರೈನಿಂಗ್ ಸೆಟ್ ಆಗಿ ಬದಲಾವಣೆ ಮಾಡಲಾಗುತ್ತದೆ.
ಅಷ್ಟೊಂದು ಸುಲಭವಲ್ಲ ಈ ಕೆಲಸ!
ಚೀನಾದಲ್ಲಿ ಇಂತಹ ಉದ್ಯೋಗಗಳಿಗೆ ಪ್ರಕಟಣೆಗಳು ಹೆಚ್ಚಾಗುತ್ತಿದ್ದಂತೆ ಹಲವು ಯುವಕರು, ನಿರುದ್ಯೋಗಿಗಳು, ಹಿರಿಯರು, ಇಂಟರ್ ವಿದ್ಯಾರ್ಥಿಗಳು ಈ ಕೆಲಸ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇಂತಹವರಿಗೆ ತಿಂಗಳಿಗೆ 4 ಸಾವಿರದಿಂದ 6 ಸಾವಿರ ಯುವಾನ್ ಅಂದರೆ ಭಾರತದ ಕರೆನ್ಸಿಯಲ್ಲಿ ಸುಮಾರು 85 ಸಾವಿರ ಸಂಬಳ ನೀಡಲಾಗುತ್ತದೆ. ಆದರೆ ಈ ಕೆಲಸ ಮಾಡಲು ಬಹಳ ಮಾನಸಿಕ ಮತ್ತು ದೈಹಿಕ ಒತ್ತಡ ಇರುತ್ತದೆ. ಪ್ರತಿ ದಿನ ಟಾರ್ಗೆಟ್ ರೀಚ್ ಆಗಬೇಕು. ಕೆಲವು ದಿನಕ್ಕೆ 200 ಬಾರಿ ಪಾತ್ರೆ ತೊಳೆಯುವುದು, ಟೇಬಲ್ ಕ್ಲೀನ್ ಮಾಡುವುದು. ಡಿಜಿಟಲ್ ಸ್ಕ್ರೀನ್ ಮೂಲಕ ವೇಗವಾಗಿ, ನಿರಂತರವಾಗಿ ಸೂಚನೆಗಳನ್ನು ನೀಡಿ ಮೇಲ್ವಿಚಾರಣೆ ನಡೆಸಲಾಗುತ್ತದೆ. ಆದರೆ ರೋಬೋಗಳಿಗೆ ತರಬೇತಿ ನೀಡುವುದು ಚಿಕ್ಕ ಮಕ್ಕಳಿಗೆ ಕೆಲಸ ಹೇಳಿಕೊಟ್ಟಂತೆ ಇರುತ್ತದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮನುಷ್ಯರ ಉದ್ಯೋಗಗಳಿಗೆ ಕತ್ತರಿ ಬೀಳುತ್ತಾ?
ತಮ್ಮ ಶ್ರಮಕ್ಕೆ ತಕ್ಕ ಸಂಬಳ ನೀಡಲಾಗುತ್ತಿಲ್ಲ ಎಂದು ಹಲವರು ಕಾರ್ಮಿಕರು ಆರೋಪಿಸುತ್ತಿದ್ದಾರೆ. ಈ ರಂಗದ ದೊಡ್ಡ ಪ್ರಮಾದ ಎಂದರೆ, 'ಮನುಷ್ಯರಂತೆ ರೋಬೋಗಳು ಕೆಲಸ ಕಲಿಸಲಾಗುತ್ತಿದೆ.. ಆದರೆ ಮುಂದಿನ ದಿನಗಳಲ್ಲಿ ಇದೇ ರೋಬೋಗಳು ತಮಗೆ ತರಬೇತಿ ಕೊಟ್ಟ ಮನುಷ್ಯರ ಕೆಲಸಗಳನ್ನೇ ಕಿತ್ತುಕೊಳ್ಳುತ್ತವೆ' ಎಂದು ಓರ್ವ ನೆಟ್ಟಿಗ ಆತಂಕ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ಸದ್ಯ ನಮಗೆ ಸಾಕಷ್ಟು ರೀತಿಯಲ್ಲಿ ನೆರವು ನೀಡುತ್ತಿದ್ದರೂ, ಭವಿಷ್ಯದಲ್ಲಿ ಉದ್ಯೋಗಗಳು ಹೇಗೆ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುವುದಕ್ಕೆ ತಾಜಾ ಉದಾಹರಣೆಯಾಗಿದೆ.
ಭಾರತದಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿದೆಯಾ?
ಚೀನಾದಲ್ಲಿ ನಡೆಯುತ್ತಿರುವ ಈ ಪರಿಣಾಮಗಳು ಇತರ ದೇಶಗಳ ಮೇಲೆ, ಬಹುಮುಖ್ಯವಾಗಿ ಭಾರತದಂತಹ ದೇಶಗಳಿಗೆ ದೊಡ್ಡ ಅಲರ್ಟ್. ನಮ್ಮ ದೇಶದಲ್ಲಿ ಕಾರ್ಮಿಕರು, ಮನೆಕೆಲಸಗಾರರಿಗೆ ಬಹಳ ಬೇಡಿಕೆ ಇದೆ. ಕೋಟಿ ಕೋಟಿ ಜನರು ಈ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಹ್ಯೂಮನಾಯ್ಡ್ ರೋಬೋಗಳು, ಎಐ ಬಳಕೆಯೊಂದಿಗೆ ಮುಂದಿನ ದಿನಗಳಲ್ಲಿ ಈ ಕೆಲಸಗಳನ್ನು ಯಂತ್ರಗಳೇ ಮಾಡುವ ಸಾಧ್ಯತೆ ಇದೆ. ಅದೇ ಆದರೆ ನಮ್ಮ ದೇಶದ ಗೃಹ ಕಾರ್ಮಿಕರ ರಂಗದಲ್ಲಿ ಕೆಲಸ ಮಾಡುತ್ತಿರುವ ಮನೆಕೆಲಸ ಕಾರ್ಮಿಕರ ಮೇಲೆ ಪ್ರಭಾವ ಉಂಟು ಮಾಡುವ ನಿರೀಕ್ಷೆ ಇದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.









