ವೆಬ್ ಸಿರೀಸ್‌ ಸಬ್‌ಸ್ಕ್ರಿಪ್ಷನ್‌ಗಾಗಿ ಭಾರೀ ಹಣ ಕಟ್ಟುತ್ತಿದ್ದೀರಾ? ಇವಿನ್ನು ಏರ್ಟೆಲ್ ಮೂಲಕ ಉಚಿತ!

ಕೋವಿಡ್ 19ರ ಸಂಬಂಧ ಸಾಕಷ್ಟು ಬದಲಾವಣೆಗಳಾಗಿದ್ದಂತೂ ಸುಳ್ಳಲ್ಲ. ಕಚೇರಿಗೆ ಹೋದರೆ ಮಾತ್ರ ಕೆಲಸವಾಗುತ್ತದೆ ಎಂಬ ಕಲ್ಪನೆ ದೂರ ಮಾಡಿ ವರ್ಕ್ ಫ್ರಂ ಹೋಂ ಮಾಡುವಂತೆ ಮಾಡಿತು. ಧಾರಾವಾಹಿ, ಸಿನೆಮಾ, ವೆಬ್ ಸರಣಿಗಳನ್ನು ನೋಡಲು ಸಮಯವೇ ಸಾಲುತ್ತಿಲ್ಲ ಎನ್ನುವವರರಿಗೆ ಸಾಕಷ್ಟು ಸಮಯ ಕೊಟ್ಟು ಇವುಗಳನ್ನು ವೀಕ್ಷಿಸುವಂತೆ ಮಾಡಿತು. ಆದರೆ, ನೆಚ್ಚಿನ ವೆಬ್ ಸೀರೀಸ್‌ಗಳು ಕೆಲವೊಮ್ಮೆ ಬೇರೆ ಬೇರೆ ಆನ್‌ಲೈನ್ ವೇದಿಕೆಯಲ್ಲಿರುವ ಕಾರಣ ಅವುಗಳ ಸಬ್‌ಸ್ಕ್ರಿಪ್ಷನ್ ಸ್ವಲ್ಪ ದುಬಾರಿಯಾಗುವಂತೆ ಮಾಡಿತು. ಆದರೆ, ಏರ್ಟೆಲ್ ಇದಕ್ಕೊಂದು ಅದ್ಭುತ ಪರಿಹಾರವನ್ನು ಕೊಟ್ಟಿದೆ. ಅದು ಏನು..? ಎತ್ತ ಎಂಬ ಬಗ್ಗೆ ಇಲ್ಲಿ ನೋಡಿ...

Paying for too many OTT subscriptions you can watch for free in Airtel

ತಂತ್ರಜ್ಞಾನಗಳೆಂದರೆ ಹಾಗೆ ದಿನೇ ದಿನೆ ಅಪ್ಡೇಟ್ ಆಗುತ್ತಲೇ ಇರುತ್ತವೆ. ಇಂದು ಇವು ನಮ್ಮ ನಿತ್ಯದ ಅವಶ್ಯಕತೆಗಳಲ್ಲೊಂದಾಗಿ ಮಾರ್ಪಟ್ಟಿವೆ. ಎಲ್ಲವೂ ನಮ್ಮ ಬೆರಳ ತುದಿಯಲ್ಲೇ ಸಿಗುತ್ತಲಿವೆ. ಮನೋರಂಜನೆಗಾಗಿ ನಾವಿಂದು ಚಿತ್ರಮಂದಿರಕ್ಕೇ ಹೋಗಬೇಕೆಂದಿಲ್ಲ, ನಮ್ಮ ಮೊಬೈಲ್‌ನಲ್ಲಿ ಇಲ್ಲವೇ ಮನೆಯೊಳಗೆ ಬೆಚ್ಚಗೆ ಕುಳಿತು ಟಿವಿ ಇಲ್ಲವೇ ಮೊಬೈಲ್ ಮುಖೇನವೇ ವೀಕ್ಷಿಸಬಹುದು. ಅಲ್ಲದೆ, ಈ ವರ್ಷ 2020 ಸಾಕಷ್ಟು ಅನುಭವಗಳನ್ನು ಕೊಟ್ಟಿದೆ. ಕೋವಿಡ್ 19ರ ಪರಿಣಾಮ ಭಾರೀ ಪ್ರಮಾಣದಲ್ಲಿ ಬದಲಾವಣೆಗಳಾಗಿವೆ. ಯಾರೂ ಎಲ್ಲೂ ಹೆಚ್ಚಿಗೆ ಹೊರಗೆ ಹೋಗುವಂತಿಲ್ಲ. ವರ್ಕ್ ಫ್ರಂ ಹೋಂ ಮೂಲಕ ಮನೆಯಲ್ಲೇ ಆಫೀಸ್ ಕೆಲಸ ಹೀಗೆ ಬಿಡುವಿನ ಸಮಯ ಸಾಕಷ್ಟು ಸಿಕ್ಕಿತು. ಇದರ ಪರಿಣಾಮ ಜನ ಆನ್‌ಲೈನ್ ವೇದಿಕೆ ಮೂಲಕ ಮನೋರಂಜನೆಗಳ ಮೊರೆಹೋದರು. ಇಂಥ ಸಮಯದಲ್ಲಿ ಜನರನ್ನು ಸೆಳೆದಿದ್ದು ಮಾತ್ರ ವೆಬ್ ಸರಣಿಗಳು.

ಹೌದು. ಇದು ವೆಬ್ ಸರಣಿಗಳ ದುನಿಯಾ ಎಂದರೆ ತಪ್ಪಾಗಲಾರದು. ಈಗಂತೂ ಸಿನೆಮಾ, ಧಾರಾವಾಹಿ, ವೆಬ್ ಸರಣಿಗಳಿಗೆ ಓಟಿಟಿ ( ಓವರ್ ದಿ ಟಾಪ್) ಮೂಲಕ ಆಯಾ ಆ್ಯಪ್‌ಗಳಿಗೆ ಸಬ್‌ಸ್ಕ್ರಿಪ್ಷನ್ ಆದರೆ ಸಾಕು. ಮನೆಯಲ್ಲೇ ಕುಳಿತು ಬೇಕಾದ ಸಮಯದಲ್ಲಿ ವೀಕ್ಷಣೆ ಮಾಡಬಹುದು. 2020ರ ಮಾರ್ಚ್‌ನಿಂದ ಇಲ್ಲಿಯವರೆಗೂ ಸಾಕಷ್ಟು ಮಂದಿ ವೆಬ್ ಸೀರೀಸ್‌ನತ್ತ ಒಲವು ತೋರಿದ್ದು, ಭಾರೀ ಪ್ರಮಾಣದಲ್ಲಿ ಸಬ್‌ಸ್ಕ್ರೈಬ್ ಆಗಿದ್ದಾರೆ. 



ಇದನ್ನು ಓದಿ: ಅಂಡಮಾನ್ ನಿಕೋಬಾರ್‌ನಲ್ಲಿಯೂ ಸಿಗುತ್ತೆ ಹೈ ಸ್ಪೀಡ್ ಇಂಟರ್ನೆಟ್

ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿ ಇರುತ್ತದೆ. ಹೀಗಾಗಿ ಒಂದೇ ಆನ್‌ಲೈನ್ ವೇದಿಕೆಯಲ್ಲಿ ಬರುವ ವೆಬ್‌ ಸೀರೀಸ್‌ಗಳನ್ನೇ ಎಲ್ಲರೂ ಮೆಚ್ಚಿಕೊಂಡಿರುವುದಿಲ್ಲ. ಬದಲಾಗಿ ಬೇರೆ ಬೇರೆ ಆ್ಯಪ್‌ಗಳಲ್ಲಿ ಬರುವ ವೆಬ್ ಸೀರೀಸ್‌ಗೋಸ್ಕರ ಎಲ್ಲವಕ್ಕೂ ಅನಿವಾರ್ಯವಾಗಿ ಸಬ್‌ಸ್ಕ್ರಿಪ್ಷನ್ ಮಾಡಿಕೊಳ್ಳಬೇಕಾಗುತ್ತದೆ. 

ಸರ್ವೇ ಏನು ಹೇಳುತ್ತೆ ಗೊತ್ತಾ..?
ಮಾರುಕಟ್ಟೆ ಅಧ್ಯಯನ ಹಾಗೂ ವಿಶ್ಲೇಷಣಾ ಸಂಸ್ಥೆಯಾದ ವೆಲೋಸಿಟಿ ಎಂಆರ್ ಸರ್ವೇ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ ಬರೋಬ್ಬರಿ ಶೇಕಡಾ 73ರಷ್ಟು ಮಂದಿ ವಿವಿಧ ಆನ್‌ಲೈನ್ ವೇದಿಕೆಗಳಿಗೆ ಸಬ್‌ಸ್ಕ್ರೈಬ್ ಆಗಿದ್ದಾರೆ. ಅಲ್ಲದೆ, ಈ ಸಮಯದಲ್ಲಿ ಸಾಕಷ್ಟು ಹೊಸ ಹೊಸ ವೆಬ್ ಸೀರೀಸ್‌ಗಳು ಹಾಗೂ ಚಲನಚಿತ್ರಗಳು ವಿವಿಧ ಓಟಿಟಿ ವೇದಿಕೆಗಳ ಮೂಲಕ ಬಿಡುಗಡೆಗೊಂಡವು. ಇದರ ಪರಿಣಾಮ ಜನರೂ ಸಹ ತಮ್ಮ ಅಭಿರುಚಿಗೆ ತಕ್ಕಂತೆ ಬಹುತೇಕ ಕಡೆ ಸಬ್‌ಸ್ಕ್ರೈಬ್ ಆಗಿದ್ದರ ಬಗ್ಗೆ ಸರ್ವೇ ಮೂಲಕ ಬೆಳಕಿಗೆ ಬಂದಿದೆ. 

ದುಬಾರಿ ದುನಿಯಾಕ್ಕೆ ಇಲ್ಲಿದೆ ಪರಿಹಾರ…!
ಹಲವು ಸೇವೆಗಳಿಗೆ ವಿವಿಧ ಆ್ಯಪ್‌ಗಳಿಗೆ ಸಬ್‌ಸ್ಕ್ರೈಬ್ ಮಾಡಿಕೊಳ್ಳುವುದರಿಂದ ಗ್ರಾಹಕರಿಗೆ ಅತಿ ದುಬಾರಿಯಾಗುತ್ತದೆ. ಇದಲ್ಲದೆ, ಇವುಗಳ ನಿರ್ವಹಣೆ ಮಾಡುವುದೂ ಸಹ ಅಷ್ಟೇ ಕಷ್ಟ. ಇದರೊಂದಿಗೆ ನೀವು ಮನೆಯಲ್ಲಿ ಡಿಟಿಎಚ್ ಸಂಪರ್ಕವನ್ನು ಹೊಂದಿದ್ದರೆ ಅದಕ್ಕೂ ಸಹ ಹಣ ಪಾವತಿ ಮಾಡಬೇಕಾಗುತ್ತದೆ. ಇದು ನಿಮಗೆ ಮತ್ತೊಂದು ಹೊರೆಯಾಗಿ ಪರಿಣಮಿಸುತ್ತದೆ. 

ಏರ್‌ಟೆಲ್‌ನಿಂದ ಹೊಸ ಪರಿಹಾರ...!
ನಿಮ್ಮ ಈ ಎಲ್ಲ ಸಮಸ್ಯೆಗಳಿಗೆ ಏರ್ಟೆಲ್ ಪರಿಹಾರವೊಂದನ್ನು ನೀಡುತ್ತಿದೆ. ಹೊಸ ಏರ್ಟೆಲ್ ಎಕ್ಸ್‌ಟ್ರೀಮ್ ಬಾಕ್ಸ್ (Airtel Xstream Box) ಮೂಲಕ ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇದೊಂದು ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್ ಆಗಿದ್ದು, ಇದರಲ್ಲಿ ಡಿಟಿಎಚ್ ಚಾನೆಲ್‌ಗಳನ್ನು ಹಾಗೂ ವೆಬ್ ಸೀರೀಸ್‌ಗಳನ್ನು ಟಿವಿಯಲ್ಲಿಯೇ ವೀಕ್ಷಿಸಬಹುದಾಗಿದೆ. ಈ ಚಿಕ್ಕ ಡಿವೈಸ್ ಒಂದು ನಿಮಗೆ ಸೆಟ್ ಟಾಪ್ ಬಾಕ್ಸ್ ರೀತಿಯಾಗಿಯೂ ಕಾರ್ಯನಿರ್ವಹಿಸುವುದಲ್ಲದೆ, ಫೈರ್ ಸ್ಟಿಕ್ ಮಾದರಿಯಾಗಿಯೂ ಕೆಲಸ ಮಾಡುತ್ತದೆ. 

ಇದನ್ನು ಓದಿ: ಮೊಬೈಲ್ ಎಕ್ಸ್‌ಪೀಯರೆನ್ಸ್ ಪ್ರಶಸ್ತಿ ಗೆದ್ದ ಏರ್‌ಟೆಲ್

ಈ ನೂತನ ಏರ್ಟೆಲ್ ಎಕ್ಸ್‌ಟ್ರೀಮ್ ಬಾಕ್ಸ್ (ಎಎಕ್ಸ್‌ಬಿ) ನಲ್ಲಿ ಕೆಲವೊಂದು ಸ್ಟ್ರೀಮಿಂಗ್ ಆ್ಯಪ್‌ಗಳು ಮೊದಲೇ ಇನ್ಸ್ಟಾಲ್ ಆಗಿರುತ್ತವೆ. ಅವುಗಳಾದ ಡಿಸ್ನಿ + ಹಾಟ್ ಸ್ಟಾರ್, ಅಮೇಜಾನ್ ಪ್ರೈಂ ವಿಡಿಯೋ, ಜೀ 5 ಇತ್ಯಾದಿಗಳನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸಬಹುದು. ಅಲ್ಲದೆ, ಡಿಟಿಎಚ್‌ಗಳಲ್ಲಿ ಬರುವ 500ಕ್ಕೂ ಹೆಚ್ಚು ಚಾನೆಲ್‌ಗಳೂ ಸಹ ಇದರಲ್ಲಿ ಲಭ್ಯವಿದೆ. ಜೊತೆಗೆ ಏರ್ಟೆಲ್ ಎಕ್ಸ್‌ಟ್ರೀಮ್ ಆ್ಯಪ್‌ನಲ್ಲಿಯೇ ಸುಮಾರು 10 ಸಾವಿರಕ್ಕೂ ಹೆಚ್ಚು ಸಿನೆಮಾಗಳು, ಧಾರಾವಾಹಿಗಳು, ವೆಬ್ ಸರಣಿಗಳಿವೆ. 

ಏರ್ಟೆಲ್ ಏನು ಹೇಳುತ್ತೆ..?
ಈಗ ಬದಲಾಗುತ್ತಿರುವ ಟ್ರೆಂಡ್ ಅನ್ನು ಗುರುತಿಸಿ ನಾವು ಸ್ಮಾರ್ಟ್ ಡಿವೈಸ್ ಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇವೆ. ಇದು ಆಂಡ್ರಾಯ್ಡ್ ಆಧಾರಿತ ಡಿವೈಸ್ ಆಗಿದ್ದು, ಇಂಟರ್ನೆಟ್ ಸೌಲಭ್ಯವುಳ್ಳ ಟಿವಿ ಮೂಲಕ ಪ್ಲೇಸ್ಟೋರ್‌ಗೆ ಹೋಗಿ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದರ ಜೊತೆಗೆ ನಿಮ್ಮ ಮೊಬೈಲ್ ಮೂಲಕವೇ ಟಿವಿಯಲ್ಲಿ ಗೇಮ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಬ್ಲೂಟೂತ್ ಕನೆಕ್ಷನ್ ಕೂಡ ಲಭ್ಯವಿದೆ ಎಂದು ಏರ್ಟೆಲ್ ಸಂಸ್ಥೆ ಹೇಳಿಕೊಂಡಿದೆ. 

ಏರ್ಟೆಲ್ ಎಕ್ಸ್‌ಟ್ರೀಮ್ ಬಾಕ್ಸ್‌ನಲ್ಲಿ ಏನೇನಿದೆ ಎಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಿ…

ಇದನ್ನು ಓದಿ: ವಾಟ್ಸಾಪ್‌ನಲ್ಲೂ ಬಂದಿದೆ ತನ್ನಿಂತಾನೇ ‘ಅಳಿಸುವ ಮೆಸೇಜ್‌’ ಆಯ್ಕೆ

ನಿಮಗೆ ಈ ಸೇವೆ ಸಂಪೂರ್ಣ ಉಚಿತ…!
ಏರ್ಟೆಲ್ ಎಕ್ಸ್‌ಟ್ರೀಮ್ ಬಾಕ್ಸ್ ನಿಮ್ಮ ದುಬಾರಿ ಹೊರೆಯನ್ನು ನಿಜವಾಗಿಯೂ ಕಡಿಮೆ ಮಾಡಿದೆಯಲ್ಲವೇ..? ಇಲ್ಲಿ ನಿಮಗೊಂದು ಸಂತಸದ ಸುದ್ದಿ ಇದೆ. ವೆಬ್ ಸೀರೀಸ್ ಸಬ್‌ಸ್ಕ್ರಿಪ್ಷನ್ ಹಾಗೂ ಏರ್ಟೆಲ್ ಎಕ್ಸ್‌ಟ್ರೀಮ್ ಆ್ಯಪ್ ಅನ್ನು ಸಂಪೂರ್ಣ ಉಚಿತವಾಗಿ ಪಡೆಯಿರಿ. ಇದಕ್ಕಾಗಿ ನೀವು ಬ್ರಾಡ್‌ಬ್ಯಾಂಡ್ ಸೇವೆಯಾದ ಏರ್ಟೆಲ್ ಎಕ್ಸ್‌ಟ್ರೀಮ್ ಫೈಬರ್ ಸಂಪರ್ಕ ಹೊಂದಿದರೆ ಸಾಕು. ನಿಮಗೆ ಎಲ್ಲ ಮನೋರಂಜನೆಯೂ ಇಲ್ಲಿ ಉಚಿತ… ಉಚಿತ… ಉಚಿತ…

Paying for too many OTT subscriptions you can watch for free in Airtel

Latest Videos
Follow Us:
Download App:
  • android
  • ios