ಮೊಬೈಲ್ ಎಕ್ಸ್‌ಪೀಯರೆನ್ಸ್ ಸೆಪ್ಟೆಂಬರ್ 2020 ಪ್ರಶಸ್ತಿ ಗೆದ್ದ Airtel; ಜೊತೆಗೆ ಮುಡಿಗೆ 4 ಗರಿ

ಕೊರೋನಾ ವೈರಸ್ ಕಾರಣದಿಂದ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ಜನರೂ ಇಂಟರ್ನೆಟ್ ಬಳಸುವುದು ಹೆಚ್ಚಾಗಿದೆ. ಜೊತೆಗೆ ವೀಡಿಯೋ ವೀಕ್ಷಣೆ, ಗೇಮಿಂಗ್ ಎಲ್ಲವೂ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಅತ್ಯುತ್ತಮ ಸೇವೆಗಾಗಿ ಏರ್‌ಟೆಲ್ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

Airtel emerges winner at Mobile Experiences Awards Sept 2020

ಭಾರತದಲ್ಲಿ ಸರಿ ಸುಮಾರು 697 ದಶಲಕ್ಷ ಇಂಟರ್ನೆಟ್ ಬಳಕೆದಾರರಿದ್ದು, ಅದರಲ್ಲಿ ಸುಮಾರು 448 ದಶಲಕ್ಷ ಮಂದಿ ಮೊಬೈಲ್ ಇಂಟರ್ನೆಟ್ ಬಳಸುತ್ತಾರೆ. 2019ರಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆದಾರರು 420 ದಶಲಕ್ಷ ಮಂದಿ ಇದ್ದರೆ, ಆ ಸಂಖ್ಯೆ ಇದೀಗ ಶೇ.7ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಅದರಲ್ಲಿಯೂ ಮೊಬೈಲ್‌ನಲ್ಲಿ ಡೇಟಾ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದರಿಂದ ಭಾರತದ ಟೆಲಿಕಾಂ ಕ್ಷೇತ್ರ ಹಾಗೂ ಮೊಬೈಲ್ ಫೋನ್ ಮಾರುಕಟ್ಟೆ ವಿಸ್ತರಣೆಗೆ ಪೂರಕ ವಾತಾವರಣ ಎಂದರ್ಥ. 

ಅತೀ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಲು ಟೆಲಿಕಾಂ ಕಂಪನಿಗಳು ಏಕಿಷ್ಟು ಸ್ಪರ್ಧೆಗಿಳಿದಿವೆ ಎಂಬುವುದು ಈ ಇಂಟರ್ನೆಟ್ ಬಳಕೆದಾರರ ಅಂಕಿ ಸಂಖ್ಯೆ ಗಮನಿಸಿದರೆ ಅರ್ಥವಾಗುತ್ತದೆ. ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಪ್ರತೀ ವರ್ಷವೂ ಎಲ್ಲಾ ಟೆಲಿಕಾಂ ಕಂಪನಿಗಳು ವಿವಿಧ ಬೆಲೆಯುಳ್ಳ ಇಂಟರ್ನೆಟ್ ಸೇವೆ ಒದಗಿಸಲು ಹಲವು ಯೋಜನೆಗಳನ್ನು ಘೋಷಿಸುತ್ತವೆ. ಆದರೆ, ಯಾರು ಅತ್ಯುತ್ತಮ ಸೇವೆ ಒದಿಗಸುತ್ತಾರೆಂಬುದನ್ನು ನಿರ್ಧರಿಸುವುದು ಬಳಕೆದಾರರಿಗೆ ಅಷ್ಟು ಸುಲಭದ ವಿಷಯವಿಲ್ಲ. ಈ ಗ್ರಾಹಕರಿಗೆ ನೆರವಾಗಲು ಓಪನ್ ಸಿಗ್ನಲ್ ಎಂಬ ಜಾಗತಿಕ ಸ್ಟಾಂಡರ್ಡ್ ಇರುವ ಸ್ವಾಯತ್ತ ಸಂಸ್ಥೆಯೊಂದು ರಿಯಲ್ ಟೈಮಲ್ಲಿ ಇಂಟರ್ನೆಟ್ ಬಳಸುವವರ ಸಮೀಕ್ಷೆ ನಡೆಸಿ ಯಾವ ಕಂಪನಿ ಒಳ್ಳೆಯದೆಂದು ಗ್ರಾಹಕರು ನಿರ್ಧರಿಸಲು ನೆರವಾಗುತ್ತದೆ. ಹತ್ತು ಹಲವು ಮಾನದಂಡಗಳ ಆಧಾರದ ಮೇಲೆ ಎಲ್ಲ ಕಂಪನಿಗಳ ಸೇವೆ ಹೇಗಿದೆ ಎಂಬುದನ್ನು ನಿರ್ಧರಿಸಿ, ವರದಿಯೊಂದನ್ನು ಬಿಡುಗಡೆ ಮಾಡುತ್ತದೆ. ಸಮೀಕ್ಷೆಯಲ್ಲಿ ವೀಡಿಯೋ ಸ್ಟ್ರೀಮಿಂಗ್ ಗುಣಮಟ್ಟ, 4ಜಿ ಕವರೇಜ್ ಮತ್ತು ಸೇವೆ, ಗೇಮಿಂಗ್ ಅನುಭವ ಮತ್ತು ಡೌನ್‌ಲೋಡ್‌ಗೆ ತೆಗೆದುಕೊಳ್ಳುವ ಸಮಯ ಸೇರಿ ಇತರೆ ವಿಷಯಗಳನ್ನು ಬಳಕೆದಾರರದಿಂದ ಮಾಹಿತಿ ಪಡೆದು, ವರದಿ ಸಿದ್ಧಗೊಳಿಸುತ್ತದೆ.

ಓಪನ್ ಸಿಗ್ನಲ್ ಸೆಪ್ಟೆಂಬರ್ 2020ರ ಈ ವರದಿ ಬಿಡುಗಡೆ ಮಾಡಿದ್ದು, ಏಳರಲ್ಲಿ ನಾಲ್ಕು ವರ್ಗಗಳಾದ ವೀಡಿಯೋ ವೀಕ್ಷಣೆ, ಗೇಮಿಂಗ್, ವಾಯ್ಸ್ ಆ್ಯಪ್ ಮತ್ತು ಡೌನ್‌ಲೋಡ್ ಸ್ಪೀಡಿನ ಅನುಭವದಲ್ಲಿ Airtel ಅತ್ಯುತ್ತಮ ಸೇವೆ ಸಲ್ಲಿಸುವತ್ತಿರುವ ಕಂಪನಿ ಎಂಬ ಪ್ರಶಸ್ತಿಗೆ ಭಾಜನವಾಗಿದೆ.

ವೀಡಿಯೋ ಎಕ್ಸ್‌ಪಿರಿಯನ್ಸ್
ಎರಡನೇ ತ್ರೈವಾರ್ಷಿಕದಲ್ಲಿ ಭಾರತದಲ್ಲಿ ವೀಡಿಯೋ ವೀಕ್ಷಿಸುವವರು ಹಾಗೂ ಅದಕ್ಕಾಗಿ ಮೊಬೈಲ್ ಬಳಸುವವರ ಸಂಖ್ಯೆ ಶೇ.40ರಷ್ಟು ಹೆಚ್ಚಾಗಿದೆ. ಹಲವು ಒಟಿಟಿ ಪ್ಲ್ಯಾಟ್‌ಫಾರ್ಮ್ಸ್ ಹಾಗೂ ಇತರೆ ಸೋಷಿಯಲ್ ಮೀಡಿಯಾಗಳು ವೀಡಿಯೋ ವೀಕ್ಷಣೆಗೆ ಹೆಚ್ಚು ಅನುಕೂಲವಾಗುವಂಥ ವ್ಯವಸ್ಥೆ ರೂಪಿಸಿದ್ದರಿಂದ ಸಹಜವಾಗಿಯೇ ವೀಡಿಯೋ ವೀಕ್ಷಿಸುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ವೀಡಿಯೋ ವೀಕ್ಷಿಸಲು ಡೇಟಾ ಹಾಗೂ ಅದರ ಗುಣಮಟ್ಟ ಅತ್ಯುತ್ತಮವಾಗಿಯೇ ಇರಬೇಕು. ಈ ಮಾನದಂಡದಲ್ಲಿ Airtel ಅತ್ಯುತ್ತಮ ಸೇವೆ ಸಲ್ಲಿಸಿದ್ದು, ಸತತವಾಗಿ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ತನ್ನ ಸ್ಕೋರನ್ನು Airtel ಶೇ. 6.3ರಷ್ಟು ಹೆಚ್ಚಿಸಿಕೊಂಡಿದೆ. ಕೇವಲ Airtel ಬಳಕೆದಾರರು ಮಾತ್ರ ಯಾವುದೇ ತೊಂದರೆ ಇಲ್ಲದೇ ವೀಡಿಯೋ ವೀಕ್ಷಿಸಲು ಸಾಧ್ಯವಾಗುತ್ತಿದ್ದು, 'ಗುಡ್' ಅನುಭವ ಪಡೆದುಕೊಳ್ಳುತ್ತಿದ್ದಾರೆ. 

Airtel emerges winner at Mobile Experiences Awards Sept 2020

ಗೇಮ್ಸ್ ಎಕ್ಸ್‌ಪೀಯರಿಯನ್ಸ್
ಇತ್ತೀಚಿನ ದಿನಗಳಲ್ಲಿ ಗೇಮಿಂಗ್ ತನ್ನದೇ ಆದ ಮಹತ್ವ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಮೊಬೈಲ್ ಬಳಕೆದಾರರು ಹೆಚ್ಚು ಗೇಮಿಂಗ್‌ನಲ್ಲಿ ಭಾಗಿಯಾಗುವುದನ್ನು ಕಾಣಬಹುದು. ಬ್ರೌಸರ್ಸ್ ಬಳಸಿಯೋ ಅಥವಾ ಆ್ಯಪ್ ಆಧಾರಿತ ವೇದಿಕೆಗಳಲ್ಲಿ ಮೊಬೈಲ್ ಬಳಕೆದಾರರು ಗೇಮಿಂಗ್‌ನಲ್ಲಿ ತೊಡಗುತ್ತಾರೋ ಗೊತ್ತಿಲ್ಲ. ಆದರೆ, ಈ ಉದ್ಯಮವೀಗ ಬಿಲಿಯನ್ ಡಾಲರ್‌ ಮಾರಕಟ್ಟೆ ವಿಸ್ತರಿಸಿಕೊಂಡಿದೆ. 2020ರ ಅಂತ್ಯದಲ್ಲಿ ಸುಮಾರು 628 ದಶಲಕ್ಷ ಭಾರತದ ಮೊಬೈಲ್ ನೆಟ್ವರ್ಕ್ ಬಳಕೆದಾರರು ಮೊಬೈಲ್ ಮೂಲಕ ಗೇಮ್ಸ್‌ಗೆ ಪ್ರವೇಶಿಸುತ್ತಾರೆ. ಈ ಕಾರಣದಿಂದ ಇಂಟರ್ನೆಟ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಗೇಮಿಂಗ್ ಅನುಭವ ನೀಡುವುದು ಈಗಿನ ಅನಿವಾರ್ಯ. ಓಪನ್ ಸಿಗ್ನಲ್ ಇದೇ ಮೊದಲ ಬಾರಿಗೆ ಸೆಪ್ಟೆಂಬರ್ 2020ರಲ್ಲಿ ಮೊಬೈಲ್ ಗ್ರಾಹಕರು ಗೇಮಿಂಗ್ ಅನುಭವವನ್ನು ಹೇಗೆ ಪಡೆಯುತ್ತಿದ್ದಾರೆಂಬ ಸಮೀಕ್ಷೆ ನಡೆಸಿದೆ, ಭಾರತದ ವಿವಿಧ ಆಪರೇಟರ್ಸ್‌ ಸೇವೆಯನ್ನು ಪರೀಕ್ಷಿಸಿದೆ. 100ರಲ್ಲಿ 55.6 ಸ್ಕೋರ್ ಪಡೆಯುವುದರ ಮೂಲಕ Airtel ಅತ್ಯುತ್ತಮ ಸೇವಾ ಸಂಸ್ಥೆಯಾಗಿ ಹೊರ ಹೊಮ್ಮಿದ್ದು, ಓಪನ್ ಸಿಗ್ನಲ್‌ನ ಗೇಮ್ಸ್ ಎಕ್ಸ್‌ಪಿರೀಯನ್ಸ್ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದೆ. 
  
ವಾಯ್ಸ್ ಆ್ಯಪ್ ಅನುಭವ
ವಾಯ್ಸ್ ಸೇವೆಯನ್ನು ಪರಿಗಣಿಸಿ ಓಪನ್ ಸಿಗ್ನಲ್ ವಾಯ್ಸ್ ಆ್ಯಪ್ ಅನುಭವವದ ಗುಣಮಟ್ಟವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ವಾಟ್ಸ್  ಆ್ಯಪ್,  ಫೇಸ್‌ಬುಕ್ ಮೆಸೆಂಜರ್, ಸ್ಕೈಪ್ ಮುಂತಾದ ಆ್ಯಪ್‌ಗಳಲ್ಲಿ ವಾಯ್ಸ್ ಗುಣಮಟ್ಟ ಪರೀಕ್ಷಿಸಿ ಸಂಸ್ಥೆ ನೆಟ್ವರ್ಕ್ ಕಂಪನಿಗಳಿಗೆ ಅಂಕಗಳನ್ನು ನೀಡುತ್ತದೆ.  ಈ ವರ್ಗದಲ್ಲಿ Airtel ಸತತವಾಗಿ ಎರಡನೇ ಬಾರಿಗೆ ಮೊದಲ ಸ್ಥಾನವನ್ನು ಅಲಂಕರಿಸಿದ್ದು, ನೂರಕ್ಕೆ 75.5 ಪಾಯಿಂಟ್ಸ್ ಪಡೆದಿವೆ. ಇದರರ್ಥ ಏರ್‌ಟೆಲ್ ಗ್ರಾಹಕರು ಅತ್ಯದ್ಭುತ ವಾಯ್ಸ್ ಸೇವೆ ಪಡೆಯುತ್ತಿದ್ದು, ಮತ್ತೊಂದು ಕಡೆಯಿಂದ ಏನು ಹೇಳುತ್ತಿದ್ದಾರೆಂಬುದನ್ನು ಮತ್ತೆ ಕೇಳುವ ಅಗತ್ಯ ಬರುವುದಿಲ್ಲ. ಅದ್ಭುತ ಅನುಭವ ನೀಡುವ ವಾಯ್ಸ್ ಸೇವೆ ನೀಡುವಲ್ಲಿ Airtel ಯಶಸ್ವಿಯಾಗಿದೆ.

ಡೌನ್‌ಲೋಡ್ ಸ್ಪೀಡ್ ಅನುಭವ
ಮೊಬೈಲ್ ಫೋನ್‌ನಲ್ಲಿ ಬೇರೆ ಬೇರೆ ರೀತಿಯ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ತೆಗೆದುಕೊಳ್ಳುವ ಸಮಯದ ಆಧಾರದ ಮೇಲೆ ಈ ವಿಭಾಗದಲ್ಲಿ ಅಂಕ ನೀಡಲಾಗುತ್ತದೆ. ಡೌನ್‌ಲೋಡ್ ಸ್ಪೀಡ್ ಅನುಭವದಲ್ಲಿ  ಗ್ರಾಹಕನ ಅನುಭವದ ಆಧಾರದ ಮೇಲೆ Airtel 10.4 ಎಂಬಿಪಿಎಸ್ ಸ್ಕೋರ್‌ನೊಂದಿಗೆ ಸತತ ಆರನೇ ಬಾರಿ ಮೊದಲ ಸ್ಥಾನವನ್ನು ಅಲಂಕರಿಸುವುದರಲ್ಲಿ ಯಶಸ್ವಿಯಾಗಿದೆ.

ಈ ಸಾರಿ ಏಳು ವಿಭಾಗಗಳಲ್ಲಿ ನೀಡುವ ಪ್ರಶಸ್ತಿಗಳಲ್ಲಿ ನಾಲ್ಕರಲ್ಲಿ Airtel ಪ್ರಶಸ್ತಿ ಗೆದ್ದಿದ್ದು, ಭಾರತದಲ್ಲಿ ಪ್ರಶ್ನಾತೀತ ಇಂಟರ್ನೆಟ್ ಪ್ರೊವೈಡರ್ ಎಂಬುದನ್ನು ಸಾಬೀತು ಪಡಿಸಿದೆ. 2020ರ ಆರಂಭದಿಂದಲೂ Airtel ಅಭಿಯಾನವೊಂದನ್ನು ಹಮ್ಮಿಕೊಂಡಿದ್ದು, ಗ್ರಾಹಕರಿಂದ ಸೇವೆಗೆ ಸಂಬಂಧಿಸಿದಂತೆ ಶೂನ್ಯ ದೂರು ದಾಖಲಿಸಿಕೊಳ್ಳುವ ಗುರಿಯತ್ತ ಸಾಗಲು ಕಾರ್ಯ ಪ್ರವೃತ್ತವಾಗಿದೆ. ಇದೀಗ ಓಪನ್ ಸಿಗ್ನಲ್ ವರದಿ Airtel ಗ್ರಾಹಕರಿಗೆ ಅತ್ಯತ್ತಮ ಸೇವೆ ಸಲ್ಲಿಸುವಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಹಾಗೂ ಅತ್ಯುತ್ತಮ ಮೊಬೈಲ್ ನೆಟ್ವರ್ಕ್ ಅನುಭವ ಪಡೆಯುವಂತೆ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ.  


Airtel ಸೇವೆ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
 

Airtel emerges winner at Mobile Experiences Awards Sept 2020

Latest Videos
Follow Us:
Download App:
  • android
  • ios