ದೇಶದ ಮೂಲೆ ಮೂಲೆಯಲ್ಲೂ ನಮ್ಮ ನೆಟ್ವರ್ಕ್ ತಲುಪುತ್ತದೆ ಎಂದು ಹೇಳಿಕೊಳ್ಳುತ್ತಾ, ಗ್ರಾಹಕರಿಗೆ ಯಾವುದೇ ಪ್ರಶ್ನೆಯೇ ಇಲ್ಲದಂತೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುತ್ತೇವೆಂದು ಮಾತುಕೊಟ್ಟಿರುವ ಏರ್ಟೆಲ್, ಈಗ ದೇಶದ ದ್ವೀಪ ರಾಷ್ಟ್ರವಾದ ಅಂಡಮಾನ್-ನಿಕೋಬಾರ್ ನಲ್ಲಿಯೂ ಸಹ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಒದಗಿಸಿದೆ. 

ಈ ಮೂಲಕ ನುಡಿದಂತೆ ನಡೆಯುತ್ತಿದ್ದೇವೆಂದು ಸಂಸ್ಥೆ ಹೇಳಿಕೊಂಡಿದೆ. ಇಂದು ಇಂಟರ್ನೆಟ್ ಲಭ್ಯವಾಗುವುದು ದೊಡ್ಡ ವಿಷಯವಲ್ಲದಿದ್ದರೂ ಎಲ್ಲ ಅಗತ್ಯ ಸೇವೆಗಳಿಗೆ ಬೇಕೇ ಬೇಕು ಎಂಬ ಪರಿಸ್ಥಿತಿ ಬಂದೊದಿಗೆ. ಶಿಕ್ಷಣ, ಕೆಲಸ, ಬ್ಯಾಂಕಿಂಗ್, ಮನೋರಂಜನೆ ಹಾಗೂ ಸಂವಹನಗಳಿಗೆ ಮುಖ್ಯ ಸಾಧನವಾಗಿದೆ. ಇಂತಹ ಹೊತ್ತಿನಲ್ಲಿ ಅವುಗಳ ಸಮರ್ಪಕ ಬಳಕೆಯಾಗದಿದ್ದರೆ ಹೇಗೆ ಎಂಬ ಪ್ರಶ್ನೆಗಳೂ ಉದ್ಭವಿಸುವುದು ಸಹಜ. 

ಇದನ್ನು ಓದಿ: ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..!

ಮುಖ್ಯ ಭೂಮಿಕೆಯಿಂದ ದೂರ
2014ರಲ್ಲಿ 4ಜಿ ನೆಟ್ವರ್ಕ್ ಅನ್ನು ಮೊದಲ ಬಾರಿ ಅನಾವರಣಗೊಳಿಸಿರುವ ಕೀರ್ತಿ ಏರ್ಟೆಲ್‌ಗೆ ಸಲ್ಲುತ್ತದೆ. ಅಂದಿನಿಂದ ಇಂದಿನವರೆಗೆ ಇದಿಲ್ಲದೆ ಇರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಅಂಟಿಕೊಂಡಿದೆ. ಆದರೆ, ಅಂಡಮಾನ್-ನಿಕೋಬಾರ್ ಎಂಬ ಪುಟ್ಟ ದ್ವೀಪದಲ್ಲಿ ವಾಸಿಸುವವರ ಜಗತ್ತೇ ಬೇರೆ. ಅವರಿಗೆ ಇಂಥ ಯಾವುದೇ ಸಂಪರ್ಕ ಇರುವುದಿಲ್ಲ. ಅವರ ಭಾವನಾ ಜಗತ್ತೇ ಬೇರೆ. ಇದೊಂದು ಕೇಂದ್ರಾಡಳಿತ ಪ್ರದೇಶವಾಗಿದ್ದು, ಮುಖ್ಯ ಭೂಮಿಕೆಯಿಂದ ಬಹಳ ದೂರವೇ ಇದೆ. ಅಂಡಮಾನ್-ನಿಕೋಬಾರ್ ನಂತಹ ದ್ವೀಪದ ರಚನೆಯೇ ಬೇರೆ. ಇಲ್ಲಿನ ಭೌಗೋಳಿಕ ಪ್ರದೇಶಗಳಿಗನುಗುಣವಾಗಿ ಕೆಲವು ಸೌಲಭ್ಯಗಳನ್ನು ಹೊಂದುವುದು ತುಸು ಕಷ್ಟವೇ ಆಗಿದೆ. ಭಾರತದ ಬೇರೆ ಭಾಗಗಳಲ್ಲಿ 4ಜಿ ನೆಟ್ವರ್ಕ್ ಬಳಕೆಯಾದಂತೆ ಈ ದ್ವೀಪ ಸಮೂಹಗಳಲ್ಲಿ ಆಗದು. ಕಾರಣ, ವಿಸ್ಯಾಟ್ ತಂತ್ರಜ್ಞಾನದ ಮೂಲಕ 4ಜಿ ನೆಟ್ವರ್ಕ್ ಅನ್ನು ಕಳುಹಿಸಲಾಗುತ್ತಿದೆ. ಆದರೆ, ಇದರಿಂದ ಇಂಟರ್ನೆಟ್ ಸ್ಪೀಡ್ ಹಾಗೂ ಲಿಮಿಟ್‌ಗಳು ಗಣನೀಯವಾಗಿ ಇಳಿಕೆಯಾಗುತ್ತಲೇ ಹೋಗುತ್ತದೆ. 

ಇದನ್ನು ಓದಿ: ವಾಟ್ಸಪ್‌ನಲ್ಲಿ ಶೀಘ್ರ ಬರುತ್ತೆ ಇನ್ನೂ 138 ಹೊಸ ಇಮೋಜಿಗಳು..!

1224 ಕೋಟಿ ರೂಪಾಯಿಯ ಯೋಜನೆ
ಈಗ ಅಂಡಮಾನ್-ನಿಕೋಬಾರ್ ನಲ್ಲಿ ಏರ್ಟೆಲ್ 4ಜಿ ನೆಟ್ವರ್ಕ್ ಅನ್ನು ಬಿಡುಗಡೆಗೊಳಿಸಿದ್ದು, ದ್ವೀಪದಲ್ಲಿ ಇಂಟರ್ನೆಟ್ ಅನ್ನು ಲಾಂಚ್ ಮಾಡಿದವರಲ್ಲಿ ಈ ಸಂಸ್ಥೆಯೇ ಮೊದಲು ಎಂಬುದನ್ನು ಸಾಧಿಸಿದೆ. ಚೆನ್ನೈ- ಅಂಡಮಾನ್-ನಿಕೋಬಾರ್ ಐಲ್ಯಾಂಡ್ ಸಬ್ ಮೆರೇನ್ ಕೇಬಲ್ ಸಿಸ್ಟಮ್ (CANI-SMCP) ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 10 ರಂದು ಅನಾವರಣಗೊಳಿಸಿದ್ದರು. ಚೆನ್ನೈನಿಂದ ದ್ವೀಪದವರೆಗೆ ಸಮುದ್ರದೊಳಗೆ 2313 ಕಿಮೀ ಆಳದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್‌ವುಳ್ಳ 1224 ಕೋಟಿ ರೂಪಾಯಿಯ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಇದರಿಂದ ಅಂಡಮಾನ್ –ನಿಕೋಬಾರ್ ದ್ವೀಪದಲ್ಲಿಯೂ ಸಹ ಅತಿ ವೇಗದ 4ಜಿ ನೆಟ್ವರ್ಕ್ ಸೇವೆ ನೀಡಲು ಸಾಧ್ಯವಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಯಾವ್ಯಾವ ದ್ವೀಪದಲ್ಲಿ ಸೇವೆ?
ಪೋರ್ಟ್ ಬ್ಲೇರ್ ಹೊರತುಪಡಿಸಿದರೆ ಇತರೆ ಏಳು ದ್ವೀಪಗಳಿಗೆ ಈ ಕೇಬಲ್ ಸಂಪರ್ಕ ಸಾಧ್ಯವಾಗುತ್ತಿದೆ. ಸ್ವರಾಜ್ ದೀಪ್, ಲಾಂಗ್ ಐಲ್ಯಾಂಡ್, ರಣ್ಗಟ್, ಲಿಟ್ಲ್ ಅಂಡಮಾನ್, ಕಮೋರ್ಟಾ, ಕಾರ್ ನಿಕೋಬಾರ್ ಮತ್ತು ಗ್ರೇಟರ್ ನಿಕೋಬಾರ್ ದ್ವೀಪಗಳಿಗೆ ಈ ಸಂಪರ್ಕ ಲಭ್ಯವಾಗಲಿದ್ದು, ಈ ಎಲ್ಲ ಕಡೆ ಅತಿ ವೇಗದ 4ಜಿ ಸೌಲಭ್ಯ ಸಾಧ್ಯವಾಗಲಿದೆ. ದೇಶದ ಬೇರೆ ಭಾಗಗಳ ಜನರು ಈ ಇಂಟರ್ನೆಟ್ ಸೇವೆಯನ್ನು ಯಾವ ರೀತಿಯಾಗಿ ಹಲವು ವರ್ಷಗಳಿಂದ ಬಳಸುತ್ತಿದ್ದಾರೆಯೋ ಆ ಎಲ್ಲ ಸೇವೆಗಳನ್ನೂ ಏರ್ಟೆಲ್ ಈಗ ದ್ವೀಪದಲ್ಲಿ ನೀಡುತ್ತಿದೆ. ಇದಲ್ಲದೆ, ಏರ್ಟೆಲ್ ಭಾರತದ ಎಲ್ಲ ಕಡೆ 4ಜಿ ನೆಟ್ವರ್ಕ್ ಅನ್ನು ತಲುಪಿಸಲು ಪ್ರಯತ್ನಿಸುತ್ತಿದೆ. 

ಇದನ್ನು ಓದಿ: ಅಲಾರಾಂ ರೀತಿ ನಿಮ್ಮ G-Mail ಮೆಸೇಜ್‌ ಸ್ನೂಜ್ ಮಾಡಿ..!

ಮನೆ ಮನೆಗೆ ಸೇವೆ
ಇದರ ಜೊತೆಗೆ ಇತರ ಸೇವೆಗಳನ್ನೂ ಏರ್ಟೆಲ್ ನೀಡುತ್ತಿದ್ದು, ಮನೆ ಬಾಗಿಲಿಗೆ ತಲುಪಿಸುವ ಟೆಲಿಮೆಡಿಸಿನ್, ನೆಟ್ ಬ್ಯಾಂಕಿಂಗ್, ಇ-ಲರ್ನಿಂಗ್ ಸೇರಿ ಮುಂತಾದ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತಿದೆ. ಐಲ್ಯಾಂಡ್ ಗೆ ಹಲವು ಪ್ರವಾಸಿಗರು ಭೇಟಿ ನೀಡುವುದರಿಂದ ಸ್ಥಳೀಯ ಆದಾಯವೂ ಹೆಚ್ಚುವುದಲ್ಲದೆ, ಆರ್ಥಿಕ ಸ್ಥಿತಿಯನ್ನೂ ಉತ್ತಮಗೊಳಿಸುತ್ತದೆ. ಇದಲ್ಲದೆ, ವೇಗದ ಇಂಟರ್ನೆಟ್ ಸೇವೆ ನೀಡಿದರೆ, ಈ ಭಾಗದಲ್ಲಿ ಉದ್ಯೋಗ ಸಂಖ್ಯೆಯೂ ಹೆಚ್ಚುತ್ತದೆ ಎಂಬ ವಾದವೂ ಇದೆ.