ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಚೀನಾ ಮೂಲದ ಒನ್‌ಪ್ಲಸ್, ಹೊಸ ಒನ್‌ಪ್ಲಸ್ ಟಿವಿ ಯು1ಎಸ್(OnePlus TV U1S) ಜೊತೆಗೆ, ಭಾರೀ ಚರ್ಚೆಗೆ ಕಾರಣವಾಗಿದ್ದ ನಾರ್ಡ್ ಸಿಇ 5ಜಿ(Nord CE 5G) ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಸ್ಮಾರ್ಟ್‌ಫೋನ್‌ಗಳ ಮೂಲಕವೇ ಹೆಚ್ಚು ಪ್ರಖ್ಯಾತವಾಗಿದ್ದ ಒನ್‌ಪ್ಲಸ್ ಸ್ಮಾರ್ಟ್ ವೀಯರಬಲ್ ಮತ್ತು ಟಿವಿಗಳ ಉತ್ಪಾದನೆಯಲ್ಲ ತೊಡಗಿ ಯಶಸ್ಸು ಕಂಡಿದೆ. 2019ರಿಂದಲೇ ಭಾರತೀಯ ಮಾರುಕಟ್ಟೆಗೆ ಒನ್‌ಪ್ಲಸ್ ಟಿವಿಯನ್ನು ಬಿಡುಗಡೆ ಮಾಡುತ್ತ ಬಂದಿದೆ. ಇದೀಗ ಕಂಪನಿಯ ಹೊಸ ಟಿವಿಯನ್ನು ಭಾರತಕ್ಕೆ ಪರಿಚಯಿಸಿದೆ. 

6000mAh ಬ್ಯಾಟರಿಯ ರಿಯಲ್‌ಮಿ ಸಿ25ಎಸ್ ಫೋನ್ ಮಾರಾಟ ಶುರು

ಅದೇ ರೀತಿ, ಕಳದೆ ಜುಲೈನಲ್ಲಿ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ ಅನ್ನುಬಿಡುಗಡೆ ಮಾಡಲಾಗಿತ್ತು. ಇದೀಗ ಅದರ ಮುಂದುವರಿದ ಆವೃತ್ತಿ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಜೂನ್ 16ರಿಂದ ಈ ಸ್ಮಾರ್ಟ್‌ಫೋನ್, ಅಮೆಜಾನ್ ಇಡಿಂಯಾ, ಒನ್‌ಪ್ಲಸ್ ಆನ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಈ ಫೋನ್ ಬೆಲೆ ಭಾರತದಲ್ಲಿ 22,900 ರೂ.ಗೆ ನಿಗದಿ ಮಾಡಲಾಗಿದೆ.

ಒನ್‌ಪ್ಲಸ್ ಟಿವಿ ಯು1ಎಸ್ ಟಿವಿ ಬೆಲೆ 37,999 ರೂಪಾಯಿಯಾಗಿದ್ದು, ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ ಹಾಗೂ ಕಂಪನಿಯ ಅಧಿಕೃತ ವೆಬ್‌ಸೈಟ್ ಒನ್‌ಪ್ಲಸ್‌ನಲ್ಲಿ  ಮಾರಾಟಕ್ಕೆ ಸಿಗಲಿದೆ.

 

 

ಒನ್‌ಪ್ಲಸ್ ಟಿವಿ ಯು1ಎಸ್ ಮೂರು ವೆರಿಯೆಂಟ್‌ಗಳಲ್ಲಿ ಸಿಗುತ್ತದೆ.  50 ಇಂಚ್, 55 ಇಂಚ್ ಮತ್ತು 65 ಇಂಚ್‌ ಸ್ಕ್ರೀನ್ ವೆರಿಯೆಂಟ್‌ಗಳಲ್ಲಿ ಈ ಟಿವಿ ಮಾರಾಟಕ್ಕೆ ಸಿಗಲಿದೆ. ಈ ಮೂರು ವೆರಿಯೆಂಟ್‌ಗಳಲ್ಲಿ 4ಕೆ ಡಿಸ್‌ಪ್ಲೇ ಇದ್ದು, ಎಚ್‌ಡಿಆರ್ 10 ಪ್ಲಸ್ ಮತ್ತು ಎಚ್‌ಎಲ್ ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುತ್ತದೆ.

ಲೋಯೆರ್ ರೆಸೋಲೆಷನ್ ಮತ್ತು ವಿಶುಯಲ್ ಸುಧಾರಣೆ ಫಲವಾಗಿ ಈ ಟಿವಿಯು ಗಾಮಾ ಎಂಜಿನ್ ಆಪ್ಟಿಮೈಜಷನ್(ಜಿಇಎ)ನೊಂದಿಗೆ ಬರುತ್ತದೆ. ಅಲ್ಲದೇ ಈಗಾಗಲೇ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಟಿವಿಯ ಎಲ್ಲ ಆಫರ್‌ಗಳನ್ನು ಈ ಟಿವಿಯೂ ಒಳಗೊಂಡಿದೆ. ಒನ್‌ಪ್ಲಸ್ ಟಿವಿ ಯು1ಎಸ್ ಕೂಡ ಆಂಡ್ರಾಯ್ಡ್ 10 ಆಧಾರಿತವಾಗಿದ್ದು, ಗೂಗಲ್ ಅಸಿಸ್ಟೆಂಟ್ ಕೂಡ ಇದೆ. ನೆಟಿಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಗೂಗಲ್‌ ಅಸಿಸ್ಟೆಂಟ್‌ಗೆ ಮೀಸಲಾಗಿರುವ ಬಟನ್‌ಗಳನ್ನು ಒಳಗೊಂಡಿರುವ ರಿಮೋಟ್ ಕೂಡ ಟಿವಿಯೊಂದಿಗೆ  ಬರುತ್ತದೆ.

ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

ಈ ಟಿವಿಯ ಆಡಿಯೋ  ಬಗ್ಗೆ ಹೇಳುವುದಾದರೆ, ಡಾಲ್ಬಿ ಆಡಿಯೋ ಸಪೋರ್ಟ್ ಒದಗಿಸುವ ಮತ್ತು ಡಯಾನ್ಆಡಿಯೋ ಕೋ ಟ್ಯೂನ್ಡ್ ಆಗಿರುವ 30 ವ್ಯಾಟ್ ಸ್ಪೀಕರ್‌ಗಳನ್ನು ಈ ಟಿವಿ ಹೊಂದಿದೆ. ಆಡಿಯೋ ವಿಚಾರದಲ್ಲಿ ಈ ಟಿವಿ, ತನ್ನ ಪ್ರತಿಸ್ಪರ್ಧಿ ಟಿವಿಗಳಿಗಿಂತಲೂ ಮುಂದಿದೆ. ಈ ಟಿವಿಯಿಂದ ವಿಡಿಯೋ ಕಾಲ್ ಮಾಡಬಹುದು. ಆದರೆ, ವಿಡಿಯೋ ಕ್ಯಾಮೆರಾವನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಈ ಕ್ಯಾಮೆರಾ ಬೆಲೆ 2,999 ರೂಪಾಯಿ ಆಗಿದೆ.

ಒನ್‌ಪ್ಲಸ್ ಟಿವಿ ಯು1ಎಸ್ ಟಿವಿಯ ಜತೆಗೆ ಬಿಡುಗಡೆಯಾಗಿರುವ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಹಲವು ಪ್ರಿಮೀಯಂ ಸ್ಮಾರ್ಟ್‍ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳ  ಸಾಲಿಗೆ ಈ ಹೊಸ ಸ್ಮಾರ್ಟ್‌ಫೋನ್ ಸೇರ್ಪಡೆಯಾಗಿದೆ ಎಂದು ಹೇಳಬಹುದು.

ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. ಹೆಚ್ಚಾಗಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾಡುವ ಕಂಪನಿಯು, ತನ್ನದೇ ಆದ ಗ್ರಾಹಕ ವಲಯವನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಚೀನಾ ಮೂಲದ ಹಲವು ಸ್ಮಾರ್ಟ್‌ಫೋನ್ ಕಂಪನಿಗಳು ಭಾರತದಲ್ಲಿ ತಮ್ಮ ಮಾರಾಟವನ್ನು ವಿಸ್ತರಿಸಿಕೊಂಡು ಯಶಸ್ವಿಯಾಗಿವೆ. ಅವುಗಳ ಸಾಲಿಗೆ ಈ ಒನ್‌ಪ್ಲಸ್ ಕಂಪನಿಯೂ ಸೇರುತ್ತದೆ.

ಟಿಕ್ ಟಾಕ್ ನಿಷೇಧ ತೆರವು ಮಾಡಿದ ಅಮೆರಿಕ, ಭಾರತದಲ್ಲೂ ರದ್ದಾಗುತ್ತಾ?