ಕಳೆದ ಕೆಲವು ದಿನಗಳಿಂದ ಭಾರೀ ಕುತೂಹಲ ಮೂಡಿಸಿರುವ ರಿಯಲ್‌ಮಿ ಕಂಪನಿ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ ಸಿ25ಎಸ್ (realme C25s) ಜೂನ್ 9ರಿಂದ ಮಾರಾಟಕ್ಕೆ ದೊರೆಯಲಿದೆ. ಈ ಬಗ್ಗೆ ಕಂಪನಿ ಅಧಿಕೃತ ವೆಬ್‌ತಾಣದಲ್ಲಿ ಮಾಹಿತಿ ನೀಡಲಾಗಿದೆ. 

ಬಜೆಟ್ ಫೋನ್ ಎನಿಸಿಕೊಂಡಿರುವ ರಿಯಲ್‌ಮಿ ಸಿ25ಎಸ್ ಸ್ಮಾರ್ಟ್‌ಫೋನ್  ಬಗ್ಗೆ ಕೆಲವು ದಿನಗಳಿಂದ ಸದ್ದು ಜೋರಾಗಿದ್ದರೂ ಚೀನಾ ಮೂಲದ ರಿಯಲ್ ಮಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ಸದ್ದಿಲ್ಲದೇ ಬಿಡುಗಡೆ ಮಾಡಿದೆ. ಜೂನ್ 9 ರಿಂದ ಮಾರಾಟ ಆರಂಭಿಸಲಿದೆ. ಈ ಬಗ್ಗೆ ಟ್ವಿಟರ್‌ನಲ್ಲೂ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. 

ಐಫೋನ್ ಗ್ರಾಹಕರು ತಮ್ಮ ನಿಷ್ಠೆ ಬದಲಿಸಿದ್ರಾ? ಆಂಡ್ರಾಯ್ಡ್‌ನತ್ತ ಲಗ್ಗೆ ಇಟ್ಟ ಬಳಕೆದಾರರು!

ರಿಯಲ್‌ಮಿ ಸಿ25ಎಸ್ ಸ್ಮಾರ್ಟ್‌ಫೋನ್‌ನ ಬೆಲೆ, ವಿನ್ಯಾಸ ಮತ್ತು ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿಯನ್ನು ಕಂಪನಿ ತನ್ನ ಅಧಿಕೃತ ವೆಬ್‌ತಾಣದಲ್ಲಿ ಹಂಚಿಕೊಂಡಿದೆ. ಬಜೆಟ್ ಸ್ಮಾರ್ಟ್‌ಫೋನ್ ರಿಯಲ್‌ಮಿ ಸಿ25ಎಸ್ ಮೀಡಿಯಾ ಟೆಕ್ ಹೆಲಿಯೊ ಜಿ85 ಎಸ್ಒಸಿ ಆಧರಿತವಾಗಿದೆ. ಮತ್ತು 6000 mAh ಬ್ಯಾಟರಿಯನ್ನು ನೀಡಲಾಗಿದೆ. ಬ್ಯಾಟರಿ ಸಾಮರ್ಥ್ಯದ ದೃಷ್ಟಿಯಿಂದ ನೋಡಿದರೆ ಈ ಸ್ಮಾರ್ಟ್‌ಫೋನ್ ಅತ್ಯದ್ಭುತವಾಗಿದೆ ಎಂದು ಹೇಳಬಹುದು. ಈ ಸೆಗ್ಮೆಂಟ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಸಾಮರ್ಥ್ಯದ  ಬ್ಯಾಟರಿಯನ್ನು ಹೊಂದಿದ ಸ್ಮಾರ್ಟ್‌ಫೋನ್ ಇದು ಮಾತ್ರವೇ ಆಗಿರಬಹುದು!
 

ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇರಲಿದೆ. ಈಗ ಬಿಡುಗಡೆಯಾಗುತ್ತಿರುವ ರಿಯಲ್ ಮೀ 25 ಸ್ಮಾರ್ಟ್‌ಪೋನ್, ಈ ಹಿಂದೆ ಭಾರತೀಯ ಮಾರುಕಟ್ಟೆಗೆ ಏಪ್ರಿಲ್‌ನಲ್ಲಿ  ಬಿಡುಗಡೆಯಾಗಿದ್ದ ರಿಯಲ್‌ಮಿ ಸಿ25ಗಿಂತಲೂ ಸ್ವಲ್ಪ ಅಪ್‌ಗ್ರೇಡೆಡ್ ವರ್ಷನ್ ಆಗಿದೆ. 

 

 

ಜೂನ್ 9ರಿದಂ ಮಾರಾಟಕ್ಕೆ ಲಭ್ಯವಾಗಲಿರುವ ರಿಯಲ್‌ಮಿ ಸಿ25 ಎರಡು ಮಾಡೆಲ್‌ಗಳಲ್ಲಿ ಸಿಗಲಿದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದ ರಿಯಲ್‌ ಮಿ ಸಿ25 ಸ್ಮಾರ್ಟ್‌ಫೋನ್ ಬೆಲೆ 9,999 ರೂಪಾಯಿ ಇದ್ದರೆ, 4 ಜಿಬಿ ರ್ಯಾಮ್ ಮತ್ತು 128 ಜಿಬಿ ಸಾಮರ್ಥ್ಯದ ಫೋನ್ ಬೆಲೆ 10,999 ರೂಪಾಯಿಯಾಗಿದೆ. ಅಂದರೆ, ಹೆಚ್ಚು ಕಡಿಮೆ 2000 ರೂಪಾಯಿ ವ್ಯತ್ಯಾಸವಾಗಲಿದೆ. ಹೇಗೆ ನೋಡಿದರೆ, ಈ ಫೋನ್ ಕೈಗೆಟುಕುವ ದರವನ್ನು ಹೊಂದಿದೆ ಎಂದು ಹೇಳಬಹುದು.

ವಾಟರೀ ಗ್ರೇ ಮತ್ತು ವಾಟರೀ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ರಿಯಲ್‌ಮಿ ಸಿ 25 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಿಗಲಿದೆ. ರಿಯಲ್ ಮಿ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಈ ಫೋನ್ ಸಿಗಲಿದೆ. 

ಮೊಬೈಲ್‌ಗಳಲ್ಲೂ ಟಾಟಾ ಸ್ಕೈ ಬಿಂಜ್ ಒಟಿಟಿ ಕಂಟೆಂಟ್ ಸರ್ವೀಸ್!

ರಿಯಲ್ ಮಿ ಸಿ25ಎಸ್ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 11 ಆಧರಿತ ಯುಐ2.0 ಆಪರೇಟಿಂಗ್ ಸಾಫ್ಟ್‌ವೇರ್ ಒಳಗೊಂಡಿದೆ. ಈ ಫೋನ್, 6.5 ಇಂಚ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಮಲ್ಟಿ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಹೆಲಿಯೋ ಜಿ85 ಎಸ್ಒಸಿ ಆಧರಿತವಾಗಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 4 ಜಿಬಿ ರ್ಯಾಮ್ ಸಂಯೋಜನೆಯಾಗಿದೆ ಮತ್ತು 128 ಜಿಬಿವರೆಗೂ ಸ್ಟೋರೇಜ್ ನೀಡಲಾಗುತ್ತದೆ. ಜೊತೆಗೆ ಗ್ರಾಹಕರು ಸ್ಟೋರೇಜ್ ಸಾಮರ್ಥ್ಯವನ್ನು 256 ಜಿಬಿವರೆಗೂ ಮೈಕ್ಸೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. 

ರಿಯಲ್‌ಮಿ ಸಿ25 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳಿದ್ದು, ಈ ಪೈಕಿ ಮೊದಲನೆಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಕ್ಯಾಮೆರಾವಿದೆ. ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಗಳಾಗಿವೆ. ಸೂಪರ್‌ ನೈಟ್‌ಸ್ಕೋಪ್, ಅಲ್ಟ್ರಾ ಮ್ಯಾಕ್ರೋ ಮ್ಯಾಡ್ ಇತ್ಯಾದಿ ಫೀಚರ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಾಗಿ ಕಂಪನಿ ಫ್ರಂಟ್‌ನಲ್ಲಿ 8 ಮೆಗಾ ಫಿಕ್ಸೆಲ್ ಕ್ಯಾಮೆರಾ ನೀಡಿದೆ. 

ಈ ಸ್ಮಾರ್ಟ್‌ಫೋನ್‌ನ ಮತ್ತೊಂದು ವಿಶೇಷ ಎಂದರೆ-ಬ್ಯಾಟರಿ. 6,000 mAh ಬ್ಯಾಟರಿಯನ್ನು ಕಂಪನಿಯು ಒದಗಿಸುತ್ತದೆ. ಈ ಬ್ಯಾಟರಿಯು 18 ವ್ಯಾಟ್ ಫಾಸ್ಟ್ ಚಾರ್ಚಿಂಗ್‌ಗೆ ಸಪೋರ್ಟ್ ಮಾಡುತ್ತದೆ.  ಫೋನ್ ಹಿಂಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಇರಲಿದೆ.

ಅಗ್ಗದ ಬೆಲೆಗೆ ಐಟೆಲ್ ಎ23 ಪ್ರೋ ಸ್ಮಾರ್ಟ್‌ಫೋನ್, ಸಖತ್ ಫೀಚರ್ಸ್