Asianet Suvarna News Asianet Suvarna News

ಟಿಕ್ ಟಾಕ್ ನಿಷೇಧ ತೆರವು ಮಾಡಿದ ಅಮೆರಿಕ, ಭಾರತದಲ್ಲೂ ರದ್ದಾಗುತ್ತಾ?

ಚೀನಾದ ಮೂಲದ ಟಿಕ್ ಟಾಕ್ ಮತ್ತು ವಿಚಾಟ್ ಆಪ್‌ಗಳ ಈ ಹಿಂದೆ ಟ್ರಂಪ್ ಆಡಳಿತ ಹೇರಿದ್ದ ನಿಷೇಧವನ್ನು ಅಮೆರಿಕದ ಜೋ ಬೈಡೆನ್ ಆಡಳಿತವು ಈಗ ತೆರವು ಮಾಡಿದೆ. ಆದರೆ, ಅಮೆರಿಕನ್ನರ ಡೇಟಾ ಸಂರಕ್ಷಣೆಗೆ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸುವಂತೆ ವಾಣಿಜ್ಯ ಇಲಾಖೆಗೆ ಸೂಚಿಸಿದೆ.
 

Biden administration removes ban chines apps TiK Tok and WeChat
Author
Bengaluru, First Published Jun 10, 2021, 12:57 PM IST

ಮೈಕ್ರೋ ವಿಡಿಯೋ ಬ್ಲಾಗಿಂಗ್ ತಾಣ ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ ಆಪ್‌ಗಳನ್ನು ಅಮೆರಿಕ, ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ನಿಷೇಧಿಸಿ, ಚೀನಾಗೆ ಬಿಸಿ ಮುಟ್ಟಿಸಿದ್ದವು. ಆದರೆ, ಈಗ ಒಂದೊಂದಾಗಿ ಈ ದೇಶಗಳು ನಿಷೇಧವನ್ನು ತೆರವುಗೊಳಿಸುತ್ತಿವೆಯೇ?

ಹೌದು, ಜೋ ಬೈಡೆನ್ ನೇತೃತ್ವದ ಅಮೆರಿಕದ ಆಡಳಿತವು ಚೀನಾ ಮೂಲದ ಟಿಕ್ ಟಾಕ್ ಮೇಲೆ ಹೇರಿದ್ದ ನಿಷೇಧವನ್ನು ರದ್ದು ಮಾಡಿದೆ. ಚೀನಾದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದ ಈ ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಡಳಿತವು ಚೀನಾ ಮೂಲದ ಟಿಕ್ ಟಾಕ್, ವಿ ಚಾಟ್ ಸೇರಿದಂತೆ ಅನೇಕ ಆಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.

ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

ಡೋನಾಲ್ಡ್ ಟ್ರಂಪ್ ಹೊರಡಿಸಿದ್ದ ಅನೇಕ ಆದೇಶಗಳನ್ನು ಹಾಲಿ ಬೈಡೆನ್ ಆಡಳಿತವು ಹಿಂಪಡೆಯುತ್ತಿದ್ದು, ಅದರಲ್ಲಿ ಈ ಟಿಕ್ ಟಾಕ್ ಮತ್ತು ವಿ ಚಾಟ್ ನಿಷೇಧ ಆದೇಶ ರದ್ದೂ ಸೇರಿದೆ. ಆದರೆ, ಟಿಕ್ ಟಾಕ್ ಮತ್ತು ವಿ ಚಾಟ್ ಸೇರಿ ಇಂಥ ಮೊಬೈಲ್ ಆಪ್‌ಗಳಿಂದಾಗಿ ಉಂಟಾಗುವ ಸುರಕ್ಷತೆಯ ಆತಂಕದ ಬಗ್ಗೆ ಪರಿಶೀಲನೆ ನಡೆಸುವಂತೆ ಬೈಡೆನ್ ಆಡಳಿತವು ವಾಣಿಜ್ಯ ಇಲಾಖೆಗೆ ಸೂಚಿಸಿದೆ.

ಸಂಪರ್ಕಿತ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ಒಳಗೊಂಡ ನಿರಂತರ ಕಾರ್ಯಾಚರಣೆ ಮೌಲ್ಯಮಾಪನ ಮಾಡಲು ವಾಣಿಜ್ಯ ಇಲಾಖೆಯ ಕಾರ್ಯದರ್ಶಿಗೆ ಕಾರ್ಯನಿರ್ವಾಹಕ ಆದೇಶ(ಎಕ್ಸಿಕ್ಯೂಟಿವ್ ಆರ್ಡರ್)ವು ನಿರ್ದೇಶನ ನೀಡಲಾಗಿದ್ದು, ಅಮೆರಿಕದಲ್ಲಿ ನಿರ್ವಹಣೆ ಮಾಡಲಾಗುತ್ತಿರುವ ಮಾಹಿತಿ ನಿರ್ವಹಣೆ, ಸಂಹವನ ತಂತ್ರಜ್ಞಾನ ಅಥವಾ ಸೇವೆಯನ್ನು ನೀಡುತ್ತಿರುವ ಆಪ್‌ಗಳು ಅಪಾಯವನ್ನು ತಂದೊಡ್ಡುತ್ತಿವೆ ಎಂಬುದನ್ನು ಪರಿಶೀಲಿಸಬೇಕಿದೆ. ಆಪ್‌ಗಳ ವಿನ್ಯಾಸ ವಿನ್ಯಾಸ, ಸಮಗ್ರತೆ, ಉತ್ಪಾದನೆ, ವಿತರಣೆ ಕುರಿತು ಪರಿಶೀಲನೆ ನಡೆಯಲಿದೆ.

Biden administration removes ban chines apps TiK Tok and WeChat

120 ದಿನಗಳಲ್ಲಿ ವಿದೇಶಿ ನಿಯಂತ್ರಿಸಲ್ಪಡುವ ಕಂಪನಿಗಳಿಂದ ಅಮೆರಿಕದ ದತ್ತಾಂಶಗಳನ್ನು ರಕ್ಷಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡುವಂತೆ ಆದೇಶವು ವಾಣಿಜ್ಯ ಇಲಾಖೆಗೆ ಸೂಚಿಸಿದೆ. 

ಮನುಷ್ಯ ಮುಖದ ಭಾವನೆ ಅಭಿವ್ಯಕ್ತಿಸುವ ಎಐ ಆಧರಿತ ರೊಬೋಟ್ ಅಭಿವೃದ್ಧಿ

ಅಮೆರಿಕದ ವಕ್ತಾರ ನೆಡ್ ಪ್ರೈಸ್ ಮಾಧ್ಯಮಗಳ ಈ ಬಗ್ಗೆ ಮಾಹಿತಿ ನೀಡಿ, ಸಂಪರ್ಕಿತ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳ ಮೂಲಕ ವಿದೇಶಿ ಕಂಪನಿಗಳು ಅಮೆರಿಕನ್ನರ ಸೂಕ್ಷ ದತ್ತಾಂಶಗಳನ್ನು ಬಳಸಿಕೊಳ್ಳುತ್ತಿರುವುದನ್ನು ತಡೆಯಲು ಬೈಡೆನ್ ಆಡಳಿತವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದ್ದಾರೆ. 

ಈ ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಸೇವೆ ಒದಗಿಸುತ್ತಿದ್ದ ಚೀನಾ ಮೂಲದ ಟಿಕ್ ಟಾಕ್ ಮತ್ತು ವಿ ಚಾಟ್‌ಗಳನ್ನು ಹೊಸ ಬಳಕೆದಾರರು ಡೌನ್‌ಲೋಡ್ ಮಾಡದಂತೆ ನಿಷೇಧಿಸಿದ್ದರು. ಈ ಆದೇಶಗಳನ್ನು ನ್ಯಾಯಾಲಯಗಳು ತಡೆಹಿಡಿದಿದ್ದವು. ಹಾಗಾಗಿ ಅವರು ಎಂದಿಗೂ ಪರಿಣಾಕಾರಿಯಾಗಿರಲಿಲ್ಲ.

ಚೀನಾ ಮೂಲದ ಟಿಕ್ ಟಾಕ್ ಮತ್ತು ವಿಚಾಟ್ ಆಪ್‌ಗಳ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡುತ್ತಿವೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿತ್ತು. ಈ ಆಪ್‌ಗಳ ಮೂಲಕ ಚೀನಾ ಸರ್ಕಾರವು ಅಮೆರಿಕನ್ನರ ಖಾಸಗಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ಆರೋಪಿಸಿತ್ತು. ಆದರೆ, ಟ್ರಂಪ್ ಆಡಳಿತ ಈ ಆರೋಪವನ್ನು ಟಿಕ್ ಟಾಕ್ ಮತ್ತು ವಿ ಚಾಟ್ ಅಲ್ಲಗಳೆದಿದ್ದವು.

ಟ್ವಿಟರ್ ನಿಷೇಧ ಬೆನ್ನಲ್ಲೇ ನೈಜೀರಿಯಾ ಮೇಲೆ ಬೆಂಗಳೂರು ಮೂಲದ ಕೂ ಆ್ಯಪ್ ಕಣ್ಣು!

ಕಳೆದ ವರ್ಷ ಭಾರತ ಕೂಡ ಟಿಕ್ ಟಾಕ್, ವಿ ಚಾಟ್ ಸೇರಿದಂತೆ ಚೀನಾ ಮೂಲದ ಕಂತು ಕಂತುಗಳಲ್ಲಿ ನೂರಾರು ಆಪ್‌ಗಳನ್ನು ನಿಷೇಧಿಸಿತ್ತು. ಈ ಎಲ್ಲ ಆಪ್‌ಗಳು ಭಾರತದ ಭದ್ರತೆಗೆ ಸವಾಲೊಡ್ಡುತ್ತಿವೆ ಎಂಬ ಕಾರಣವನ್ನು ನೀಡಲಾಗಿತ್ತು. ಗಡಿಯಲ್ಲಿ ಚೀನಾ ಮತ್ತು ಭಾರತ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದಂತೆ ಬಾಯ್ಕಾಟ್ ಚೀನಾ ಎಂಬ ಅಭಿಯಾನ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಚೀನಾ ಮೂಲದ ಆಪ್‌ಗಳನ್ನು ನಿಷೇಧಿಸುವ ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios