ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ?
ವಾಟ್ಸಾಪ್ (Whatsapp) ಹೊಸ ಫೀಚರ್ ಪರಿಚಯಿಸಲು ಹೊರಟಿದ್ದು, ಬಳಕೆದಾರರಿಗೆ ದೊರೆಯುತ್ತಿದ್ದ ಅನಿಯಮಿತ ಬ್ಯಾಕ್‌ಅಪ್ (Backup) ಅನ್ನು ಇದರಿಂದ ನಿಯಂತ್ರಣ ಮಾಡಲು ಸಾಧ್ಯವಾಗಲಿದೆ. ಗೂಗಲ್ (Google) ಈ ವರೆಗೂ ವಾಟ್ಸಾಪ್ ಬಳಕೆದಾರರಿಗ ಅನಿಯಂತ್ರಿತ ಡ್ರೈವ್‌ನಲ್ಲಿ ಸ್ಪೇಸ್ ನೀಡುತ್ತಿತ್ತು. ಇನ್ನು ಮುಂದೆ ಇದರ ಮೇಲೆ ಮಿತಿ ಹೇರಲಿದೆ ಎನ್ನಲಾಗುತ್ತಿದೆ.
ವಾಟ್ಸಾಪ್ (Whatsapp) ಮತ್ತು ಗೂಗಲ್(Google) ಆಧುನಿಕ ಜಗತ್ತಿನ ಅನಿವಾರ್ಯತೆಗಳಾಗಿವೆ. ಬಹುತೇಕರು ಎಲ್ಲರೂ ಈ ಆಪ್‌ಗಳನ್ನು ಬಳಸಿಯೇ ಇರುತ್ತಾರೆ. ನಿಮಗೆ ಗೊತ್ತಿರದ ಸಂಗತಿ ಒಂದಿದೆ, ಏನೆಂದರೆ, ವಾಟ್ಸಾಪ್ ಬಳಸುವಾಗ ನಿಮ್ಮ ಎಲ್ಲ ಡೇಟಾ (Data) ಬ್ಯಾಕ್ ಅಪ್ ಆಗುತ್ತದೆಯಲ್ಲ, ಅದು ಸ್ಟೋರ್ ಆಗುವುದು ಗೂಗಲ್ ಒದಗಿಸಿರುವ ಡ್ರೈವ್‌ನಲ್ಲಿ. ಆದರೆ, ಶೀಘ್ರವೇ ಈ ಉಚಿತ ಸೇವೆಗೆ ಕುತ್ತು ಬರಲಿದೆ.
ಸುದ್ದಿ ವೆಬ್‌ತಾಣಗಳಲ್ಲಿ ವರದಿಯಾಗಿರುವ ಪ್ರಕಾರ, ಶೀಘ್ರವೇ ಗೂಗಲ್, ವಾಟ್ಸಾಪ್ ಫ್ರೀ ಬ್ಯಾಕ್‌ಅಪ್‌ಗೆ ಮಿತಿ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ, ವಾಟ್ಸಾಪ್ ಕೂಡ ಗೂಗಲ್‌ನಲ್ಲಿ ಯಾವುದೆಲ್ಲ ಬ್ಯಾಕ್ ಅಪ್ ಆಗಬೇಕು ಎಂಬುದರ ಬಗ್ಗೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ಒದಗಿಸುವ ಹೊಸ ಫೀಚರ್‌ಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ವಾಟ್ಸಾಪ್‌ನ ಈ ಹೊಸ ಫೀಚರ್ ನಿಜಕ್ಕೂ ಉತ್ತಮವಾಗಲಿದ್ದು, ಬಳಕೆದಾರರು ತಮ್ಮ ಬ್ಯಾಕ್‌ಅಪ್ (Backup) ಸೈಜ್ ಎಷ್ಟಿರಬೇಕು ಎಂಬುದನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.
ನೆಟ್ವರ್ಕ್ ಇಲ್ಲದಿದ್ದರೂ ಈಗ ಕಾಲ್ ಮಾಡ್ಬಹುದು..! ಸೆಟ್ಟಿಂಗ್ಸ್‌ನಲ್ಲಿ ಹೀಗ್ಮಾಡಿ
ವಾಟ್ಸಾಪ್‌ನಲ್ಲಿ ನೀವು ಮಾಡುವ ಚಾಟ್, ಷೇರ್ ಮಾಡಿಕೊಳ್ಳುವ ಆಡಿಯೋ (Audio), ಫೋಟೋ (Photos) ಗಳು ಮತ್ತು ವಿಡಿಯೋ (video) ಗಳು ಇತ್ಯಾದಿ ಸಂಗತಿಗಳು ಅಥವಾ ಡೇಟಾ ಬ್ಯಾಕ್‌ಅಪ್ ಆಗಿ ಗೂಗಲ್ ಡ್ರೈವ್‌ನಲ್ಲಿ ಸ್ಟೋರ್ ಆಗುತ್ತದೆ. ಇದಕ್ಕೆ ಯಾವುದೇ ರೀತಿಯ ಶುಲ್ಕವಿಲ್ಲ. ಗೂಗಲ್ ಇದನ್ನು ಉಚಿತವಾಗಿ ಒದಗಿಸುತ್ತದೆ. ಆದರೆ, ಇನ್ನು ಮುಂದೆ ಬಹುಶಃ ಅದಕ್ಕೆ ಅವಕಾಶ ಸಿಗಲಾರದು. ಯಾಕೆಂದರೆ, ಈ ಉಚಿತ ಬ್ಯಾಕ್ ಅಪ್ ಸ್ಪೇಸ್ ಮೇಲೆ ನಿಯಂತ್ರಣ ಹೇರಲು ಗೂಗಲ್ ಮುಂದಾಗಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಹೊರಬೀಳವುದು ಎಂದು ವಾಬೀಟಾಇನ್ಫೋ ವರದಿ ಮಾಡಿದೆ.
ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ, ವಾಟ್ಸಪ್‌ನ ಪ್ರತಿ ಗ್ರಾಹಕರು 2000 ಎಂಬಿ ಮಾತ್ರವೇ ಉಚಿತವಾಗಿ ಸ್ಟೋರ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಇದಕ್ಕೂ ಹೆಚ್ಚಿನ ಬ್ಯಾಕ್‌ಅಪ್ ಸ್ಪೇಸ್ ಬೇಕಾದರೆ ಅಂಥ ಗ್ರಾಹಕರಿಗೆ ಕಂಪನಿಯು ಶುಲ್ಕ ರೂಪದಲ್ಲಿ ನೀಡಲಿದೆ.
ವಾಟ್ಸಾಪ್ ಪರಿಚಯಿಸಲಿರುವ ಮ್ಯಾನೇಜ್ ಬ್ಯಾಕ್‌ಅಪ್ ಸೈಜ್ ಫೀಚರ್ ಮೂಲಕ ಬಳಕೆದಾರರು ಯಾವ ರೀತಿಯ ಕಂಟೆಂಟ್ ಅನ್ನು ಬ್ಯಾಕ್ ಅಪ್‌ನಲ್ಲಿ ಸ್ಟೋರ್ ಮಾಡಲು ಇಚ್ಚಿಸುತ್ತಾರೆಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡಲಿದೆ. ಮತ್ತು ಆ ರೀತಿಯಾಗಿ ಆಯ್ಕೆ ಮಾಡಿಕೊಂಡ ಕಂಟೆಂಟ್ ಎಷ್ಟು ಸ್ಟೋರೇಜ್ ಬೇಕಾಗುತ್ತದೆ ಎಂಬುದನ್ನು ಈ ಫೀಚರ್‌ನಿಂದ ತಿಳಿಯಲು ಸಾಧ್ಯವಾಗಲಿದೆ.
ಗೂಗಲ್ ಪ್ಲೇಸ್ಟೋರ್‌ನಲ್ಲಿ ಜೈಷ್ ಉಗ್ರರ ಆ್ಯಪ್!
ಬಳಕೆದಾರರಿಗೆ ವಾಟ್ಸಾಪ್‌ನಿಂದ ಸಾಕಷ್ಟು ಲಾಭಗಳಿವೆ. ಇಂದಿನ ಬಹುತೇಕರ ಕೆಲಸ ಕಾರ್ಯ ಈ ವಾಟ್ಸಾಪ್ ಮೇಲೆ ಅವಲಂಬಿತವಾಗಿದೆ. ವಾಟ್ಸಾಪ್ ಈಗ ಕೇವಲ ಸಂವಹನ ಮಾಧ್ಯಮವಾಗಿ ಮಾತ್ರವೇ ಉಳಿದುಕೊಂಡಿಲ್ಲು. ಅದು ಬಹು ಸಾಧ್ಯತೆ ಹಾಗೂ ಬಹೋಪಯೋಗಿ ಮಾಧ್ಯಮವಾಗಿ ಬದಲಾಗಿದೆ. ಹಾಗಾಗಿ, ವಾಟ್ಸಾಪ್ ಕೈಗೊಳ್ಳುವ ಅಥವಾ ಪರಿಚಯಿಸುವ ಹೊಸ ಫೀಚರ್‌ಗಳು ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ನೋಡಬೇಕಿದೆ.
ಅದೇ ರೀತಿ, ವಾಟ್ಸಾಪ್‌ನ ಡೇಟಾಗೆ ಸ್ಟೋರ್ ಮಾಡಲು ಗೂಗಲ್ ತನ್ನ ಡ್ರೈವ್‌ನಲ್ಲಿ ಉಚಿತವಾಗಿ ಅವಕಾಶ ನೀಡುತ್ತಿತ್ತು. ಇದೀಗ ಇದರ ಮೇಲೆ ಮಿತಿ ಹೇರಲು ಮುಂದಾಗಿರುವುದರಿಂದ ಸಹಜವಾಗಿಯೇ ಬಳಕೆದಾರರಿಗೆ ಕೊಂಚ ಅಧೀರರಾಗಬಹುದು. ಆದರೆ, ಯಾವ ರೀತಿಯ ಕಂಟೆಂಟ್ ಅನ್ನು ಬ್ಯಾಕ್‌ಅಪ್ ಮಾಡಿಕೊಳ್ಳಲು ನಿರ್ಧರಿಸಲು ಸಾಧ್ಯವಾಗಲಿರುವುದರಿಂದ ಗೂಗಲ್ ಒದಗಿಸುವ ಉಚಿತ ಸ್ಪೇಸ್ ಅನ್ನು ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಮ್ಯಾನೇಜ್ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎನ್ನಬಹುದು.
ಉಚಿತ ಅನಿಯಂತ್ರಿತ ಬ್ಯಾಕ್‌ಸ್ಪೇಸ್ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ವಾಟ್ಸಾಪ್ ಆಗಲಿ, ಗೂಗಲ್ ಆಗಲಿ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮಿತಿ ಹೇರುವ ಪ್ಲ್ಯಾನ್ ಸದ್ಯಕ್ಕೆ ರೂಮರ್ ಮಾತ್ರವೇ ಆಗಿದೆ ಎಂದು ಹೇಳಬಹುದು. ಈ ಬಗ್ಗೆ ಸ್ಪಷ್ಟತೆಯು ಬಳಕೆದಾರರಿಗೆ ಮುಂದಿನ ದಿನಗಳಲ್ಲಿ ಸಿಗಬಹುದು.
Vivo X70 Pro, Vivo X70 Pro+ ಸ್ಮಾರ್ಟ್‌ಫೋನ್ ಲಾಂಚ್