ನಿಮ್ಮ ಫೋನ್‌ನಲ್ಲಿ Weather Report ಅಲರ್ಟ್ ಸೆಟ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನು (Smartphone)ಗಳು ನಮ್ಮೆಲ್ಲರನ್ನು ಆವರಿಸಿಕೊಂಡಿದೆ.  ನೀವು ಹವಾಮಾನ ಎಚ್ಚರಿಕೆಯನ್ನು ಸೆಟ್‌ ಮಾಡಿಕೊಳ್ಳಬಹುದು. ಉಷ್ಣತೆ, ಮಳೆ, ಚಂಡಮಾರುತ ಸಂಗತಿಗಳ ಬಗ್ಗೆ  ನಿಮ್ಮ ಪೋನ್ ನಿಮಗೆ ಅಲರ್ಟ್‌(Alert) ರವಾನಿಸುತ್ತದೆ.  ನೀವು ಮತ್ತಷ್ಟು ಎಚ್ಚರಿಕೆ ತೆಗೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

How to set weather alerts in your smartphone

ಜಗತ್ತೇ ಸ್ಮಾರ್ಟ್ ಫೋನ್ (Smart Phone) ಲೋಕಕ್ಕೆ ಒಗ್ಗಿಕೊಂಡಿದೆ. ಪ್ರತಿ ದಿನ ಹೊಸ ಹೊಸ  ಅಪ್ಲಿಕೇಶನ್ ಗಳು ತೆರೆದುಕೊಳ್ಳುತ್ತಿವೆ. ವಾತಾವರಣ(Weather )ಪ್ರತಿದಿನ ಬದಲಾವಣೆಗೆ ಒಳಗಾಗುತ್ತಲೇ ಇದ್ದು ಪ್ರತಿಯೊಂದು ಮಾಹಿತಿಯೂ ನಮಗೆ ಅನಿವಾರ್ಯವಾಗುತ್ತದೆ. ಹಾಗಾದರೆ ನಿಮ್ಮ ಪೋನ್ ನಲ್ಲಿ Weather Report ಅಲರ್ಟ್ ನ್ನು ಆಟೋಮ್ಯಾಟಿಕ್ ಆಗಿ ಸೆಟ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ನಿಮ್ಮ ಫೋನ್‌ ನಲ್ಲಿ ಸ್ವಯಂಚಾಲಿತ ಹವಾಮಾನ(Weather)ಕ್ಕೆ ಸಂಬಂಧಿಸಿದ ನೋಟಿಫಿಕೇಷನ್‌ಗಳು ನಿಜಕ್ಕೂ ಪ್ರಯೋಜನಕಾರಿ. ನಿಮ್ಮ ಸುತ್ತಲಿನ ಹವಾಮಾನ ಸ್ಥಿತಿ ಹಾಗೂ ಮುನ್ಸೂಚನೆಗಳನ್ನು ತಿಳಿಯಲು ಇಂಥ ಆಪ್‌ಗಳು  ಬಳಕೆಯಾಗುತ್ತವೆ. . ಆದರೆ, ಬಹಳಷ್ಟು ಗ್ರಾಹಕರಿಗೆ ಇಂಥ ಆಪ್‌ ಅಲರ್ಟ್‌(Alert)ಗಳನ್ನು ಹೇಗೆ ಸೆಟ್ ಮಾಡಬೇಕೆಂಬುದು ತಿಳಿದಿರುವುದಿಲ್ಲ. ಆ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 

ಉದಾಹರಣೆಗೆ ಹೇಳುವುದಾದರೆ ಗೂಗಲ್ (Google) ಆಪ್ ನೀಡಿದಂತಹ ಫೀಚರ್‌ಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಬಾಹ್ಯ ತಾಪಮಾನವು ನಿರ್ದಿಷ್ಟ ಮಿತಿ ಅಥವಾ ಮಳೆ ಅಥವಾ ಚಂಡಮಾರುತದಂತಹ ಪರಿಸ್ಥಿತಿಗಳ Alerts ಪಡೆಯಬಹುದಾಗಿದೆ. ಪ್ರತಿಯೊಂದು ಸಂದರ್ಭದಲ್ಲಿಯೂ ಮಾಧ್ಯಮಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಕಡಿಮೆ ಮಾಡುತ್ತದೆ.

ನೆಟ್ವರ್ಕ್ ಇಲ್ಲದಿದ್ದರೂ ಈಗ ಕಾಲ್‌ ಮಾಡ್ಬಹುದು..! ಸೆಟ್ಟಿಂಗ್ಸ್‌ನಲ್ಲಿ ಹೀಗ್ಮಾಡಿ

ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಹವಾಮಾನ ಅಲರ್ಟ್‌ಗಳನ್ನು ಹೇಗೆ ಹೊಂದಿಸಬಹುದು?
-  ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ (Google Play Store)ಗೆ ಹೋಗಿ ಮತ್ತು ಕಸ್ಟಮ್ ಹವಾಮಾನ ಅಲರ್ಟ್ (Custom Weather Alerts) ಅಪ್ಲಿಕೇಶನ್‌ಗಾಗಿ ಹುಡುಕಿ.

-  ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು Next ಕೊಡುತ್ತ ಮುಂದಕ್ಕೆ ಸಾಗಿ

- ಆಪ್‌ನಲ್ಲಿ ಮೂರು ಟ್ಯಾಬ್‌(Tab)ಗಳು ಇರುತ್ತವೆ: ಹವಾಮಾನ(Weather), ಅಲಾರಂ(Alarms)ಗಳು ಮತ್ತು ಸೆಟ್ಟಿಂಗ್‌(Settings)ಗಳು. ಸೆಟ್ಟಿಂಗ್‌ಗಳ ಮೆನುವಿನ ಅಡಿಯಲ್ಲಿ ತಾಪಮಾನವನ್ನು ಪರೀಕ್ಷಿಸಲು ಅಪ್ಲಿಕೇಶನ್ ಬಯಸುವ ಸ್ಥಳವನ್ನು ಹೊಂದಿಸಿ. ನೀವು ಜಿಪಿಎಸ್ ಬಳಸಿ ಸ್ಥಳವನ್ನು ಹೊಂದಿಸಬಹುದು. ನೀವು ಬಯಸಿದ ಪ್ರದರ್ಶನ ಘಟಕಗಳನ್ನು ಸಹ ನೀವು ಆಯ್ಕೆ ಮಾಡಬಹುದು.

- ಮುಂದೆ, ಅಲಾರಂ ಟ್ಯಾಬ್ ಅನ್ನು ನ್ಯಾವಿಗೇಟ್ (Navigate) ಮಾಡಿ ಮತ್ತು ಅಲಾರಂ ರಚಿಸಲು ಫ್ಲೋಟಿಂಗ್ ಐಕಾನ್ ಕ್ಲಿಕ್ ಮಾಡಿ. ಬಟನ್ ಅದರೊಳಗೆ ಪ್ಲಸ್ ಚಿಹ್ನೆಯೊಂದಿಗೆ ಅಲಾರಾಂ ಐಕಾನ್ ಅನ್ನು ಪ್ರದರ್ಶಿಸುತ್ತದೆ.

-ಪಾಪ್-ಅಪ್ ಮೆನು ಕಾಣಿಸುತ್ತದೆ. ಮಳೆ, ಚಂಡಮಾರುತ, ಹಿಮ, ಅಥವಾ ಮೋಡದಂತಹ ಹವಾಮಾನ ಪರಿಸ್ಥಿತಿ ಅಥವಾ ಪಟ್ಟಿಯಿಂದ ನಿರ್ದಿಷ್ಟ ತಾಪಮಾನದ ಆಧಾರದ ಮೇಲೆ ನಿಮಗೆ ಅಲರ್ಟ್ ಅಗತ್ಯವಿದೆಯೇ ಎಂಬುದನ್ನು ನೀವು ಆಯ್ಕೆ ಮಾಡಬಹುದು.

- ತಾಪಮಾನದಂತ ಆಯ್ಕೆ ಮಾಡಿದ ನಂತರ, ಈ ಕೆಳಗಿನ ಪಾಪ್-ಅಪ್ (pop up) ನಿಮ್ಮ ಅಲಾರಂ ಅನ್ನು ಮತ್ತಷ್ಟು ಹೊಂದಿಸಲು ಕೇಳುತ್ತದೆ. ಸ್ಲೈಡರ್ (Slider) ಬಳಸಿ ನಿಮ್ಮ ಎಚ್ಚರಿಕೆಯನ್ನು ನಿರ್ದಿಷ್ಟ ತಾಪಮಾನಕ್ಕೆ ಹೊಂದಿಸಬಹುದು. ತಾಪಮಾನವು ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಾದರೆ ಅಥವಾ ನಿಗದಿತ ಮಟ್ಟಕ್ಕಿಂತ ಹೆಚ್ಚಾದರೆ ನಿಮಗೆ ಸೂಚಿಸಲು ಆಯ್ಕೆ ಮಾಡಬಹುದು. ನೀವು ದಿನಾಂಕ ಮತ್ತು ಗಂಟೆಯನ್ನು ಸಹ ಆಯ್ಕೆ ಮಾಡಬಹುದು.
 

How to set weather alerts in your smartphone

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಜೈಷ್‌ ಉಗ್ರರ ಆ್ಯಪ್‌!

-  ವೆದರ್ ಅಲರ್ಟ್ ಗಾಗಿ  ವಿವರಣೆಯನ್ನು ನಮೂದಿಸಿ ಮತ್ತು ಅಲಾರ್ಮ್ ಸೇರಿಸಿ ಬಟನ್ ಒತ್ತಿರಿ.

ನೀವು ಅದನ್ನು ಐಫೋನ್ ಅಥವಾ ಐಪ್ಯಾಡ್ನಲ್ಲಿ ಹೇಗೆ ಹೊಂದಿಸಬಹುದು? 

- ಆಪ್ ಸ್ಟೋರ್ಗೆ ನ್ಯಾವಿಗೇಟ್ ಮಾಡಿ ಮತ್ತು ಕಸ್ಟಮ್ ಹವಾಮಾನ ಅಲರ್ಟ್ ಅಪ್ಲಿಕೇಶನ್ ಗಳಿಗಾಗಿ ಹುಡುಕಿ.

- ಕಸ್ಟಮ್ ಹವಾಮಾನ ಎಚ್ಚರಿಕೆ (Custom Weather Alerts) ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಪ್ರಾರಂಭಿಸಿ, ನಂತರ ಖಾತೆಗೆ ಸೈನ್ ಅಪ್ (Sign Up) ಮಾಡಿ. ಮುಂದುವರಿಯಲು, ನೀವು ಉಚಿತ ಪ್ರಯೋಗ ಅಥವಾ ಸದಸ್ಯತ್ವವನ್ನು ಸಕ್ರಿಯಗೊಳಿಸಬೇಕಾಗಬಹುದು.

- ಕೆಳಗಿನ ಪಟ್ಟಿಯಲ್ಲಿ, 'ಅಲಾರಂಗಳು' ಆಯ್ಕೆಮಾಡಿ. ನಂತರ, ಮೇಲಿನ ಬಲ ಮೂಲೆಯಲ್ಲಿ, ಅಲಾರಂ ರಚಿಸಲು + ಚಿಹ್ನೆಯನ್ನು ಟ್ಯಾಪ್ ಮಾಡಿ. ಎಚ್ಚರಿಕೆಯ ಹೆಸರನ್ನು ನೀಡಿ ಮತ್ತು ನೀವು ಎಚ್ಚರಿಕೆಯನ್ನು ಪಡೆಯಲು ಬಯಸುವ ಸನ್ನಿವೇಶಗಳನ್ನು ಆರಿಸಿ.

Vivo X70 Pro, Vivo X70 Pro+ ಸ್ಮಾರ್ಟ್‌ಫೋನ್ ಲಾಂಚ್

- ಷರತ್ತುಗಳನ್ನು ಪರಿಶೀಲಿಸಲು ಆ್ಯಪ್ ಗೆ  ನೀವು ಸಮಯವನ್ನು ನಿರ್ದಿಷ್ಟಪಡಿಸಬಹುದು. ನೀವು ಎಲ್ಲವನ್ನೂ ಕಾನ್ಫಿಗರ್ ಮಾಡಿದ ನಂತರ, ಮೇಲಿನ ಬಲ ಮೂಲೆಯಲ್ಲಿರುವ 'ಸೇವ್(Save)' ಬಟನ್ ಒತ್ತಿರಿ. ಇಮೇಲ್ ಮೂಲಕ ವೈಯಕ್ತಿಕಗೊಳಿಸಿದ ಹವಾಮಾನ ಅಧಿಸೂಚನೆಗಳನ್ನು ಸ್ವೀಕರಿಸಲು ನೀವು IFTTT (If If then then) ಸಹ ಬಳಸಬಹುದು.

Latest Videos
Follow Us:
Download App:
  • android
  • ios