ಭಾರತದಲ್ಲಿ Facebook, Instagramನ 2.7 ಕೋಟಿ ಪೋಸ್ಟ್‌ಗಳ ವಿರುದ್ಧ ಕ್ರಮ: Meta
ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 705 ವ್ಯಕ್ತಿಗಳು ತಮ್ಮ ನಕಲಿ ಪ್ರೊಫೈಲ್‌ಗಳ ಬಗ್ಗೆ ದೂರು ನೀಡಿದ್ದಾರೆ ಮತ್ತು ಅವರಲ್ಲಿ 639 ವಿರುದ್ಧ ಕ್ರಮವನ್ನು ಮೆಟಾ ತೆಗೆದುಕೊಂಡಿದೆ. ಈ ಸಂಬಂಧ ಮೆಟಾ ತನ್ನ ಮಾಸಿಕ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.
ಸಾಮಾಜಿಕ ಮಾಧ್ಯಮ ಮೆಟಾ ಜುಲೈನಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 2.7 ಕೋಟಿ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಕಂಪನಿಯು ತನ್ನ ಮಾಸಿಕ ಪಾರದರ್ಶಕತೆ ವರದಿಯಲ್ಲಿ (Monthly Transparency Report) ಬುಧವಾರ ತಿಳಿಸಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ಕ್ಕೆ ಅನುಗುಣವಾಗಿ ಕಂಪನಿಯು ಫೇಸ್‌ಬುಕ್‌ನಲ್ಲಿ (Facebook) 2.5 ಕೋಟಿ ಪೋಸ್ಟ್‌ಗಳು (Posts) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ (Instagram) 20 ಲಕ್ಷ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಮೆಟಾ ಮಾಹಿತಿ ನೀಡಿದೆ.
ಫೇಸ್‌ಬುಕ್‌ನಲ್ಲಿ 1.73 ಕೋಟಿ ಸ್ಪ್ಯಾಮ್ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. "ವಯಸ್ಕರ ನಗ್ನತೆ ಮತ್ತು ಲೈಂಗಿಕ ಚಟುವಟಿಕೆ" ಗೆ ಸಂಬಂಧಿಸಿದ 27 ಲಕ್ಷ ಪೋಸ್ಟ್‌ಗಳು ಮತ್ತು 23 ಲಕ್ಷ "ಹಿಂಸಾತ್ಮಕ ಹಾಗೂ ಗ್ರಾಫಿಕ್ ವಿಷಯ" ಸಂಬಂಧಿತ ವಿಷಯಗಳು ಇದನ್ನು ಅನುಸರಿಸಿವೆ. ಈ ಪೈಕಿ ಮೆಟಾ ತನ್ನದೇ ಆದ 9.98 ಲಕ್ಷ “ಅಪಾಯಕಾರಿ ಸಂಸ್ಥೆಗಳು ಮತ್ತು ವ್ಯಕ್ತಿಗಳು: ಭಯೋತ್ಪಾದನೆ” ಸಂಬಂಧಿತ ವಿಷಯವನ್ನು ಗುರುತಿಸಿದೆ ಮತ್ತು ಅಂತಿಮವಾಗಿ ಅದು ಗುರುತಿಸಲಾದ 99.8 ಪ್ರತಿಶತ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
WHATSAPPನಲ್ಲಿ ಶೀಘ್ರದಲ್ಲೇ ಈ 7 ಬದಲಾವಣೆ: ಅತ್ಯಾಕರ್ಷಕ ವೈಶಿಷ್ಟ್ಯಗಳು ಹೀಗಿವೆ..
ಹಾಗೆ, ಇನ್ಸ್ಟಾಗ್ರಾಮ್‌ನಲ್ಲಿ, ವರದಿಯ ಪ್ರಕಾರ, "ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆ" ಹಾಗೂ "ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯ" ಸಂಬಂಧಿತ ಪೋಸ್ಟ್ ನಂತರ "ಆತ್ಮಹತ್ಯೆ ಮತ್ತು ಸ್ವಯಂ ಗಾಯ" ವಿಷಯದ ಮೇಲಿನ ಹೆಚ್ಚಿನ ವಿಷಯವು ತನ್ನ ನೀತಿಯನ್ನು ಉಲ್ಲಂಘಿಸುತ್ತಿದೆ ಎಂದು ಮೆಟಾ ಕಂಡುಕೊಂಡಿದೆ. ಕಂಪನಿಯು ಫೇಸ್‌ಬುಕ್‌ನಲ್ಲಿ ವ್ಯಕ್ತಿಗಳಿಂದ 626 ದೂರುಗಳನ್ನು ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗಾಗಿ 1,033 ದೂರುಗಳನ್ನು ಸ್ವೀಕರಿಸಿದೆ. “ಜುಲೈ 1 ಮತ್ತು 31 ರ ನಡುವೆ, ನಾವು ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 626 ವರದಿಗಳನ್ನು ಸ್ವೀಕರಿಸಿದ್ದೇವೆ ಮತ್ತು ಈ 626 ವರದಿಗಳಲ್ಲಿ 100 ಪ್ರತಿಶತಕ್ಕೆ ನಾವು ಪ್ರತಿಕ್ರಿಯಿಸಿದ್ದೇವೆ. ಈ ವರದಿಗಳಲ್ಲಿ, 603 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಪರಿಕರಗಳನ್ನು ಒದಗಿಸಿದ್ದೇವೆ ಎಂದು ಮೆಟಾ ವರದಿ ಹೇಳಿದೆ.
ಇನ್ನು, 185 ವ್ಯಕ್ತಿಗಳು ತಮ್ಮ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ದೂರಿದರು ಮತ್ತು ನಂತರ ಅವರು ನಿರ್ವಹಿಸುತ್ತಿದ್ದ "ಪುಟ ಅಥವಾ ಗುಂಪಿಗೆ ಪ್ರವೇಶವನ್ನು ಕಳೆದುಕೊಂಡರು". ಹಾಗೆ, ಮೆಟಾ ಇತರ 23 ವರದಿಗಳನ್ನು ಪರಿಶೀಲಿಸಿದೆ ಮತ್ತು 9 ವರದಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಆದರೆ 14 ವರದಿಗಳ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ. ಏಕೆಂದರೆ ಅದು ತನ್ನ ನೀತಿಗಳನ್ನು ಉಲ್ಲಂಘಿಸಿಲ್ಲ ಎಂದು ಕಂಡುಬಂದಿರಬಹುದು. ಅದೇ ರೀತಿ ಇನ್ಸ್ಟಾಗ್ರಾಮ್‌ನಲ್ಲಿ ವೈಯಕ್ತಿಕ ದೂರುಗಳ ಸಂದರ್ಭದಲ್ಲಿ, ಮೆಟಾ ಬಳಕೆದಾರರಿಗೆ 945 ಪ್ರಕರಣಗಳಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧನಗಳನ್ನು ಒದಗಿಸಿದೆ.
ನೂತನ ಗೌಪ್ಯತೆ ವೈಶಿಷ್ಟ್ಯಗಳನ್ನು ಪ್ರಕಟಿಸಿದ WhatsApp: ಇನ್ಮುಂದೆ ಸೈಲೆಂಟ್ ಆಗಿ ಗ್ರೂಪ್‌ಗಳಿಂದ ಎಕ್ಸಿಟ್ ಆಗಿ..!
ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 705 ವ್ಯಕ್ತಿಗಳು ತಮ್ಮ ನಕಲಿ ಪ್ರೊಫೈಲ್‌ಗಳ (Fake Profiles) ಬಗ್ಗೆ ದೂರು ನೀಡಿದ್ದಾರೆ ಮತ್ತು ಅವರಲ್ಲಿ 639 ಅಕೌಂಟ್‌ಗಳ ವಿರುದ್ಧ ಮೆಟಾ ಕ್ರಮವನ್ನು ತೆಗೆದುಕೊಂಡಿದೆ. ಅಲ್ಲದೆ, 715 ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ದೂರು ನೀಡಿದ್ದು, 167 ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. "ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 88 ವರದಿಗಳಲ್ಲಿ, ನಾವು ನಮ್ಮ ನೀತಿಗಳ ಪ್ರಕಾರ ವಿಷಯವನ್ನು ಪರಿಶೀಲಿಸಿದ್ದೇವೆ ಮತ್ತು ಒಟ್ಟು 35 ವರದಿಗಳ ಮೇಲೆ ಕ್ರಮ ಕೈಗೊಂಡಿದ್ದೇವೆ" ಎಂದು ವರದಿ ಹೇಳಿದೆ. ಇನ್‌ಸ್ಟಾಗ್ರಾಮ್‌ನಲ್ಲಿನ ಉಳಿದ 53 ವರದಿಗಳ ವಿರುದ್ಧ ಮೆಟಾ ಕ್ರಮ ಕೈಗೊಂಡಿಲ್ಲ. ಏಕೆಂದರೆ ಅದು ತನ್ನ ನೀತಿ ಮಾನದಂಡಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮೆಟಾ ಕಂಡುಕೊಂಡಿದೆ ಎಂದೂ ವರದಿ ಹೇಳಿದೆ.