Asianet Suvarna News Asianet Suvarna News

Fake Accounts ವಿರುದ್ಧ ಸಮರ ಸಾರಲು ಇನ್ಸ್ಟಾಗ್ರಾಮ್‌ ಹೊಸ ತಂತ್ರ!

*ಫೇಕ್, ಸ್ಪ್ಯಾಮ್‌ ಖಾತೆಗಳ ವಿರುದ್ಧ ಸಮರಕ್ಕೆ Instagram ಹೊಸ ಮಾರ್ಗ!
*ಬಳಕೆದಾರಿಗೆ Video Selfie ಕೇಳುತ್ತಿರುವ ಸಾಮಾಜಿಕ ಜಾಲತಾಣ ದೈತ್ಯ!
*ಕಂಪನಿಯು ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದ ಕಂಪನಿ

Instagram asking video selfies from users for identity verification mnj
Author
Bengaluru, First Published Nov 18, 2021, 2:58 PM IST

ನವದೆಹಲಿ(ನ.18): ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು (Social Media) ಮನುಷ್ಯರ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಕೆಲವೇ ನಿಮಿಷಗಳ ಕಾಲ ಸಾಮಾಜಿಕ ಜಾಲತಾಣ ಸ್ಥಗಿತಗೊಂಡರೂ ಮಾನವ ತಡಪಡಿಸಲು ಆರಂಭಿಸುವ ಸ್ಥಿತಿಗೆ ಬಂದಿದ್ದಾನೆ. ದಿನ ಕಳೆದಂತೆ ಮಾರುಕಟ್ಟೆಯಲ್ಲಿ (Market) ಹೊಸ ಸಾಮಾಜಿಕ ಜಾಲತಣಾಗಳ ಅಬ್ಬರ ಜೋರಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ನೈಜ ಬಳಕೆದಾರ (Users) ಸಂಖೈ ಎಷ್ಟಿದೆಯೋ ಅಷ್ಟೇ ನಕಲಿ ಖಾತೆಗಳು (Fake accounts) ಕೂಡ ಇವೆ. ಇಂತಹ ನಕಲಿ ಖಾತೆಗಳ ವಿರುದ್ಧ ಸಮರ ಸಾರಲು ಫೇಸ್‌ಬುಕ್ (ಮೆಟಾ -Meta) ಒಡೆತನದ ಇನ್ಸ್ಟಾಗ್ರಾಮ್‌ (Instagram) ಹೊಸ ಮಾರ್ಗವೊಂದನ್ನು ಸಿದ್ಧಪಡಿಸಿದೆ.

ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ ( Matt Navara) ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳ ಪ್ರಕಾರ, Instagram ಇದೀಗ ಗುರುತಿನ ಪರಿಶೀಲನೆಗಾಗಿ ವೀಡಿಯೊ ಸೆಲ್ಫಿಗಳನ್ನು (Video Selfie) ಕೇಳಲು ಪ್ರಾರಂಭಿಸಿದೆ. ಈ ಕ್ರಮವು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಪ್ರೊಫೈಲ್‌ಗಳು (Fake profile) ಮತ್ತು ಸ್ಪ್ಯಾಮ್ (Spam) ಖಾತೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ.

ತಲೆಯನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸುವ ಕಿರು ವೀಡಿಯೊ!

ಹೊಸ ಗುರುತಿನ ಪರಿಶೀಲನೆ ಪ್ರಕ್ರಿಯೆಯು, ನಿರ್ದಿಷ್ಟ ಬಳಕೆದಾರರು ನಿಜವಾದ ವ್ಯಕ್ತಿಯೇ ಅಥವಾ ಇಲ್ಲವೇ ಎಂಬುದನ್ನು Instagram ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸ್ಕ್ರೀನ್‌ಶಾಟ್‌ಗಳು (Screen Shot) ತೋರಿಸುತ್ತವೆ.  ಇನ್ಸ್ಟಾಗ್ರಾಮ್‌  ನಿಮ್ಮ ತಲೆಯನ್ನು (Head) ವಿವಿಧ ದಿಕ್ಕುಗಳಲ್ಲಿ ತಿರುಗಿಸುವ ಕಿರು ವೀಡಿಯೊವನ್ನು ಕೇಳುತ್ತದೆ. ಈ ವೀಡಿಯೊ ಸೆಲ್ಫಿಗಳನ್ನು ಬ್ಯಾಕೆಂಡ್‌ನಲ್ಲಿ (Back End) ಸಂಗ್ರಹಿಸಲಾಗುವುದಿಲ್ಲ ಮತ್ತು 30 ದಿನಗಳಲ್ಲಿ ಅಳಿಸಲಾಗುತ್ತದೆ ಎಂದು ಕಂಪನಿ ಭರವಸೆ ನೀಡುತ್ತಿದೆ.

ಇನ್ನುಮುಂದೆ ನಿಮ್ಮ iPhone, MacBook ನೀವೇ ರಿಪೇರಿ ಮಾಡಬಹುದು, ಹೇಗೆ ಗೊತ್ತಾ?

“ನಿಮ್ಮ ತಲೆಯನ್ನು ಬೇರೆ ಬೇರೆ ದಿಕ್ಕುಗಳಲ್ಲಿ ತಿರುಗಿಸುವ ಕಿರು ವೀಡಿಯೊ ನಮಗೆ ಬೇಕು. ನೀವು ನಿಜವಾದ ವ್ಯಕ್ತಿ ಎಂದು ಖಚಿತಪಡಿಸಲು ಮತ್ತು ನಿಮ್ಮ ಗುರುತನ್ನು (Identity) ದೃಢೀಕರಿಸಲು ಇದು ನಮಗೆ ಸಹಾಯ ಮಾಡುತ್ತದೆ" ಎಂದು Instagram ಹೇಳಿದೆ. ಇದರ ಜೊತೆಗೆ, Instagram ಪ್ರಕಾರ ನೀವು ಅಪ್‌ಲೋಡ್ ಮಾಡುವ ವೀಡಿಯೊ ಸೆಲ್ಫಿಗಳನ್ನು ಎಂದಿಗೂ ಪ್ಲಾಟ್‌ಫಾರ್ಮ್‌ನಲ್ಲಿ ತೋರಿಸಲಾಗುವುದಿಲ್ಲ. ಕಂಪನಿಯು ಬಯೋಮೆಟ್ರಿಕ್ ಡೇಟಾವನ್ನು (Bio Metric) ಸಂಗ್ರಹಿಸುವುದಿಲ್ಲ ಅಥವಾ ಕಂಪನಿಯ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು (face Recognition) ಬಳಸುವುದಿಲ್ಲ ಎಂದು ಭರವಸೆ ನೀಡುತ್ತಿದೆ ಎಂದು ಸ್ಕ್ರೀನ್‌ಶಾಟ್‌ಗಳಲ್ಲಿ ಹೇಳಲಾಗಿದೆ. 

 

 

ವೀಡಿಯೊ ಸೆಲ್ಫಿ ಪರಿಶೀಲನೆಯ ಇದೇ ಮೊದಲಲ್ಲ!

Instagram ಈ ವೀಡಿಯೊ ಸೆಲ್ಫಿ ಪರಿಶೀಲನೆಯ ವಿಷಯವನ್ನು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸಾಮಾಜಿಕ ಮಾಧ್ಯಮ ದೈತ್ಯ ಇನ್ಸ್ಟಾಗ್ರಾಮ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಇದೇ ರೀತಿಯ ಭದ್ರತಾ ತಪಾಸಣೆ ವೈಶಿಷ್ಟ್ಯವನ್ನು ಮೊದಲು ಬಿಡುಗಡೆ ಮಾಡಿತ್ತು. ಆದರೆ ಕಂಪನಿಯು ಕೆಲವು ತಾಂತ್ರಿಕ (Technical) ಸಮಸ್ಯೆ ಎದುರಿಸಿದ್ದರಿಂದ ಇದು ಅಲ್ಪಾವಧಿಗೆ (limited time) ಮಾತ್ರ ಲಭ್ಯವಿತ್ತು. XDA ಡೆವಲಪರ್‌ಗಳ ವರದಿಯ ಪ್ರಕಾರ, ಈ ವೈಶಿಷ್ಟ್ಯವು ಈಗ ಬಹಳಷ್ಟು ಬಳಕೆದಾರರಿಗೆ ಲಭ್ಯವಿರುವುದರಿಂದ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತೋರುತ್ತಿದೆ.

Whatsapp: ಯಾವ ಹೊಸ ಫೀಚರ್‌ ಅಭಿವೃದ್ಧಿಪಡಿಸತ್ತಿದೆ ವಾಟ್ಸಾಪ್?

ಇನ್‌ಸ್ಟಾಗ್ರಾಮ್ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಎಲ್ಲಾ ಖಾತೆಗಳಿಗೆ ವೀಡಿಯೊ ಸೆಲ್ಫಿ ಪರಿಶೀಲನೆಯನ್ನು ಕೇಳುತ್ತಿಲ್ಲ ಅದರೆ ಹೊಸ ಖಾತೆಗಳು (New Account) ತೆರಯುವಾಗ ಚಿಕ್ಕ ಸೆಲ್ಫಿ ವೀಡಿಯೊ ಕ್ಲಿಪ್ ಮೂಲಕ ತಮ್ಮ ಗುರುತನ್ನು ಪರಿಶೀಲಿಸಲು ಇನ್ಸ್ಟಾಗ್ರಾಮ್  ಕೇಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆ ಸಂಪೂರ್ಣವಾಗಿ ಹೇಗೆ ಕೆಲಸ ಮಾಡಲಿದೆ ಎಂಬುದರ ಬಗ್ಗೆ ಇನ್ಸ್ಟಾಗ್ರಾಮ್‌ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

Follow Us:
Download App:
  • android
  • ios