ಇನ್ನುಮುಂದೆ ನಿಮ್ಮ iPhone, MacBook ನೀವೇ ರಿಪೇರಿ ಮಾಡಬಹುದು, ಹೇಗೆ ಗೊತ್ತಾ?
*ನಿಮ್ಮ ಐಫೋನ್ ಹಾಗೂ ಮ್ಯಾಕ್ ನೀವೇ ರಿಪೇರಿ ಮಾಡಿ
*ಆ್ಯಪಲ್ ಗ್ರಾಹಕರಿಗೆ ನೀಡುತ್ತಿದೆ ಈ ಹೊಸ ಅವಕಾಶ
*ಒರಿಜಿನಲ್ ಪಾರ್ಟ್ಸ್‌ಗಳ ಜತೆಗೆ ತರಬೇತಿ ಕೂಡ ನೀಡಲಿರುವ ಸಂಸ್ಥೆ
*2022ರಲ್ಲಿ US ನಲ್ಲಿ ಸೇವೆ ಆರಂಭಿಸಲಿರುವ APPLE
*ನಂತರ ಇತರ ದೇಶಗಳಿಗೆ ವಿಸ್ತರಿಸುವ ನಿರ್ಧಾರ!
ಯುಎಸ್‌ಎ(ನ.18): ಜಗತ್ತಿನ ಪ್ರಸಿದ್ದ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್ವೇರ್, ಮತ್ತು ಆನ್ಲೈನ್ ಸೇವೆಗಳನ್ನು ಒದಗಿಸುವ ಆ್ಯಪಲ್ (Apple products) ಮೊದಲ ಬಾರಿಗೆ, ನಿಮ್ಮ ಐಫೋನ್ (Iphone) ಮತ್ತು ಮ್ಯಾಕ್ (Mac) ಅನ್ನು ನೀವೇ ರಿಪೇರಿ (Repair) ಮಾಡಲು ಅವಕಾಶ ನೀಡುತ್ತಿದೆ. ಹೌದು ಇನ್ನು ಆ್ಯಪಲ್ ಫೋನ್ ರಿಪೇರಿ ಮಾಡಲು ನಿಮ್ಮ ಸ್ಥಳೀಯ ರಿಪೇರಿ ಶಾಪ್‌ಗಳಿಗೆ ಹೋಗಬೇಕಾಗಿಲ್ಲ. ಸ್ಕ್ರೀನ್ (Screen) ಮತ್ತು ಬ್ಯಾಟರಿಯಂತಹ (Battery) ಪ್ರಮುಖ ಭಾಗಗಳನ್ನು ಬದಲಾಯಿಸಲು Apple ಗ್ರಾಹಕರಿಗೆ ತನ್ನ ಒರಿಜಿನಲ್ (Original) ಭಾಗಗಳು ಮತ್ತು ಸಾಧನಗಳನ್ನು ಮಾರಾಟ ಮಾಡಲಿದೆ. ಅಲ್ಲದೆ ಅವುಗಳನ್ನು ಹೇಗೆ ಬದಲಾಯಿಸಬೇಕು ಎಂಬುವುದರ ಬಗ್ಗೆ ಮಾಹಿತಿಯೂ ನೀಡಲಿದೆ. ಆ್ಯಪಲ್ ಐಫೋನ್ 13 , ಐಫೋನ್ 12 ಹಾಗೂ M1 ಚಿಪ್‌ಗಳನ್ನು ಹೊಂದಿರುವ ಮ್ಯಾಕ್ ರಿಪೇರಿ ಮಾಡಲು ಡು ಇಟ್ ವೊನ್ ಯುರ್ ವೋನ್ (Do it on your own) ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಹಾಗಾಗಿ ನಿಮ್ಮ ಐಪೋನ್ ರಿಪೇರಿ ಮಾಡಲು Apple ಅಧಿಕೃತ ಸೇವಾ ಪೂರೈಕೆದಾರರು ಅಥವಾ ಸ್ಥಳೀಯ ರಿಪೇರಿ ಅಂಗಡಿಗೆ ಹೋಗಬೇಕಾದ ಅವಶ್ಯಕತೆ ಇನ್ನಿಲ್ಲ.
Scammersಯಿಂದ ನಿಮ್ಮ ಆ್ಯಂಡ್ರಾಯ್ಡ್ ಫೋನ್ ರಕ್ಷಿಸಲು ಇಲ್ಲಿವೆ 8 ಸುಲಭ ಉಪಾಯಗಳು!
ಆ್ಯಪಲ್ ಅಧಿಕೃತ ಸೇವಾ ಕೇಂದ್ರದ ಹೊರಗೆ ಸ್ಕ್ರೀನ್ ರಿಪ್ಲೇಸ್ಮೆಂಟ್ ಮಾಡಿದರೆ ಐಫೋನ್‌ನಲ್ಲಿನ ಫೇಸ್ ಐಡಿ ಸಿಸ್ಟಮ್ (Face Id) ಅನ್ನು ನಿಷ್ಕ್ರಿಯಗೊಳಿಸುವುದಾಗಿ ಕಂಪನಿ ತಿಳಿಸಿತ್ತು. ಇದನ್ನು ಹಲವು ಆ್ಯಪಲ್ ಉತ್ಪನ್ನಗಳ ಬಳಕೆದಾರರು ವಿರೋಧಿಸಿದ್ದರು. ಇದಾದ ಕೆಲವೇ ದಿನಗಳ ನಂತರ ಆಪಲ್‌ನ ಈ ಪ್ರಕಟಣೆಯನ್ನು ಹೊರಡಿಸಿದೆ. ಈಗ, ಗ್ರಾಹಕರಿಗೆ ಕೇವಲ ಪರಿಕರಗಳಲ್ಲದೇ ಮನೆಯಲ್ಲಿಯೇ ಐಫೋನ್‌ಗಳು ಮತ್ತು ಮ್ಯಾಕ್‌ಗಳನ್ನು ಹೇಗೆ ರಿಪೇರಿ ಮಾಡುವುದು ಎಂಬುದರ ಕುರಿತು ಸೂಚನೆಗಳನ್ನು ನೀಡುವುದಾಗಿ ಆ್ಯಪಲ್ ಹೇಳಿದೆ. ರಿಪೇರಿಗೆ ಸಹ ಸ್ಥಳೀಯ ಅಂಗಡಿಗಳಿಗೆ ಹೋಗುವ ಅವಶ್ಯಕತೆ ಇಲ್ಲವೆಂದು ಗ್ರಾಹಕರಿಗೆ ಕಂಪನಿ ತಿಳಿಸಿದೆ. ಹೀಗಾಗಿ ಆ್ಯಪಲ್‌ನ ಈ ಹೊಸ ಯೋಜನೆಯ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.
ಹಳೆಯ ಮತ್ತು ಬಳಸಿದ ಭಾಗವನ್ನು ಹಿಂದಿರುಗಿಸಿದರೆ ವಿಶೇಷ ಆಫರ್!
ಸ್ವಯಂ ರಿಪೇರಿ (self service) ಯೋಜನೆಯನ್ನು "ಮುಂದಿನ ವರ್ಷದ ಆರಂಭದಲ್ಲಿ" US ನಲ್ಲಿ ಪ್ರಾರಂಭಿಸಿ ನಂತರ ಅದು ಹೆಚ್ಚಿನ ದೇಶಗಳಿಗೆ ವಿಸ್ತರಿಸುವ ನಿರ್ಧಾರ ಮಾಡಿದೆ. "ಐಫೋನ್ ಡಿಸ್ಪ್ಲೇ (Display) , ಬ್ಯಾಟರಿ ಮತ್ತು ಕ್ಯಾಮೆರಾದಂತಹ (Camera) ಸಾಮಾನ್ಯವಾಗಿ ಜನರು ಸರ್ವಿಸ್ ಮಾಡುವಂತಹ ಸೇವೆಗಳನ್ನು ಆ್ಯಪಲ್ ನೀಡಲಿದೆ ಎಂದು ಕಂಪನಿ ಹೇಳಿದೆ. ಗ್ರಾಹಕರು Apple ರಿಪೇರಿ ಹೇಗೆ ಮಾಡುವದು ಎಂಬುದರ ಬಗ್ಗೆ ಕೈಪಿಡಿಯನ್ನು (Manual) ಪಡೆಯುತ್ತಾರೆ. Apple ಸೆಲ್ಫ್ ಸರ್ವಿಸ್ ರಿಪೇರಿ ಆನ್‌ಲೈನ್ ಸ್ಟೋರ್‌ನಿಂದ ಒರಿಜಿನಲ್ ಭಾಗಗಳನ್ನು ಆರ್ಡರ್ ಮಾಡುವ ಮೊದಲು ಈ ಕೈಪಿಡಿಯನ್ನು ಖರೀದಿಸಿಲು ಆ್ಯಪಲ್ ತಿಳಿಸಿದೆ. ಜತೆಗೆ ನೀವು ಹಳೆಯ (Old) ಮತ್ತು ಬಳಸಿದ (Used) ಭಾಗವನ್ನು ಹಿಂದಿರುಗಿಸಿದರೆ ನಿಮ್ಮ ಖರೀದಿಗೆ ಆಪಲ್ ನಿಮಗೆ ವಿಶೇಷ ಕ್ರೆಡಿಟ್ (credit) ಕೂಡ ನೀಡಲಿದೆ.
200 ಕ್ಕೂ ಹೆಚ್ಚು ಪ್ರತ್ಯೇಕ ಭಾಗಗಳು ಮತ್ತು ಪರಿಕರಗಳು!
Apple iPhone 12 ಮತ್ತು iPhone 13 ರಿಪೇರಿಗಾಗಿ 200 ಕ್ಕೂ ಹೆಚ್ಚು ಪ್ರತ್ಯೇಕ ಭಾಗಗಳು ಮತ್ತು ಪರಿಕರಗಳನ್ನು ಕಂಪನಿ ನೀಡಲಿದೆ. ಗ್ರಾಹಕರಿಗೆ ಒರಿಜಿನಲ್ ಭಾಗಗಳನ್ನು ನೇರವಾಗಿ ಮಾರಾಟ ಮಾಡುವುದರಿಂದ ಆಪಲ್‌ನಿಂದ ಖರೀದಿಸದ ಭಾಗಗಳ ಬಳಕೆಯನ್ನು ತಡೆ ಹಿಡಿಯಲು ಸಾಧ್ಯವಿದೆ. ಈ ಮೂಲಕ ಒರಿಜಿನಲ್ (Original) ಐಫೋನ್‌ಗಳು ಮತ್ತು ಇತರ ಆಪಲ್ ಸಾಧನಗಳಲ್ಲಿ ಕೇವಲ ಕಂಪನಿಯ ಭಾಗಗಳನ್ನೇ ಬಳಸಲು ಸಾಧ್ಯವಾಗಲಿದೆ. ಕಂಪನಿಯ ಒರಿಜಿನಲ್ ಭಾಗಗಳ ಹೊರತಾಗಿ ಮಾರುಕಟ್ಟೆಯಲ್ಲಿ (Market) ಸಿಗುವ ಇತರ ಭಾಗಗಳು ಕೆಲವೊಮ್ಮೆ ಐಫೋನಿನ ಕೆಲವು ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸುತ್ತವೆ ಅಥವಾ ಐಫೋನ್‌ನಲ್ಲಿ ಸೆಟ್ಟಿಂಗ್ ಅನ್ನು ತಪ್ಪಾಗಿ ಕಾನ್ಫಿಗರ್ (Configure) ಮಾಡವುದು ಕಂಡುಬಂದಿವೆ. ಆ್ಯಪಲ್ ಈಗಾಗಲೇ ತನ್ನ ರಿಪೇರಿ ಕಾರ್ಯಕ್ರಮದ ಅಡಿಯಲ್ಲಿ ಸ್ಥಳೀಯ ಅಧಿಕೃತ ಅಂಗಡಿಗಳಿಗೆ ಒರಿಜಿನಲ್ ಭಾಗಗಳನ್ನು ಮಾರಾಟ ಮಾಡುತ್ತದೆ.
ಶೀಘ್ರವೇ Jiobook ಲ್ಯಾಪ್‌ಟ್ಯಾಪ್ ಲಾಂಚ್? ಬೆಲೆ ಕೂಡ ಕಡಿಮೆ ಇರುತ್ತಾ?
ಮೊಬೈಲ್ ಫೋನ್ ರಿಪೇರಿ ಮಾಡುವುದು ಸುಲಭವಲ್ಲ, ತಂತ್ರಜ್ಞಾನ ಹಾಗೂ ಇತರ ವಿಷಯಗಳ ಅಗತ್ಯವಿರುವ ಜ್ಞಾನವನ್ನು ಹೊಂದಿದ್ದರೆ ಮಾತ್ರ ರಿಪೇರಿ ಮಾಡಬೇಕು. ಗ್ರಾಹಕರು ವಾರಂಟಿ (Warranty) ಅವಧಿಯಲ್ಲಿ ಒಂದು ಭಾಗವನ್ನು ದುರಸ್ತಿ ಮಾಡಲು ಮುಂದಾದರೆ ಐಫೋನ್ ಅಥವಾ ಮ್ಯಾಕ್‌ನಲ್ಲಿ ಗ್ರಾಹಕರೇ ರಿಪೇರಿ ಮಾಡುವುದು ವಾರಂಟಿಯನ್ನು ರದ್ದುಗೊಳಿಸುವುದಿಲ್ಲ. ಆದಾಗ್ಯೂ, ಗ್ರಾಹಕರು ಸಾಧನ ಅಥವಾ ಒಳಗಿನ ಭಾಗವನ್ನು ಹಾನಿಗೊಳಿಸಿದರೆ, ಆಪಲ್ ವಾರಂಟಿಯನ್ನು ರದ್ದುಗೊಳಿಸಬಹುದು. ಅದಕ್ಕಾಗಿಯೇ, Apple iPhone ಮತ್ತು Mac ಗಾಗಿ ದುರಸ್ತಿ ಕಾರ್ಯಕ್ರಮವನ್ನು ತೆರೆದಿದ್ದರೂ, ಒರಿಜಿನಲ್ Apple ಭಾಗಗಳನ್ನು ಬಳಸುವ ಪ್ರಮಾಣೀಕೃತ ತಂತ್ರಜ್ಞರ ಬಳಿಯೇ ಹೋಗಲು ಗ್ರಾಹಕರನ್ನು ಒತ್ತಾಯಿಸುತ್ತದೆ. Apple 5,000 ಆಪಲ್ ಅಧಿಕೃತ ಸೇವಾ ಪೂರೈಕೆದಾರರನ್ನು ಮತ್ತು 2,800 ಸ್ವತಂತ್ರ ರಿಪೇರಿ ಪೂರೈಕೆದಾರರನ್ನು ಹೊಂದಿದೆ.
ಗ್ರಾಹಕರಿಗೆ ಹೊಸ ಆಯ್ಕೆಗಳು!
"ಆಪಲ್ ಒರಿಜಿನಲ್ ಭಾಗಗಳನ್ನು ಬಳಸಿ ರಿಪೇರಿ ಮಾಡುವುದು ನಮ್ಮ ಗ್ರಾಹಕರಿಗೆ ಇನ್ನಷ್ಟು ಬಗೆಯ ಆಯ್ಕೆಗಳನ್ನು ನೀಡುತ್ತದೆ" ಎಂದು ಆಪಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ವಿಲಿಯಮ್ಸ್ ( Jeff Williams) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಕಳೆದ ಮೂರು ವರ್ಷಗಳಲ್ಲಿ, Apple ಒರಿಜಿನಲ್ ಭಾಗಗಳು, ಉಪಕರಣಗಳು ಮತ್ತು ತರಬೇತಿಗೆ ನೀಡುವುದರೊಂದಿಗೆ ಸರ್ವಿಸ್ ಸೆಂಟರ್‌ಗಳ ಸಂಖ್ಯೆಯನ್ನು ಸುಮಾರು ದ್ವಿಗುಣಗೊಳಿಸಿದೆ ಮತ್ತು ಈಗ ತಮ್ಮ ಐಫೋನ್ ಅನ್ನು ತಾವೇ ರಿಪೇರಿಯನ್ನು ಮಾಡಲು ಬಯಸುವವರಿಗೆ ಒಂದು ಆಯ್ಕೆಯನ್ನು ಕೂಡ ಒದಗಿಸುತ್ತಿದ್ದೇವೆ." ಎಂದು ಅವರು ಹೇಳಿದ್ದಾರೆ