Asianet Suvarna News Asianet Suvarna News

ರಿಬ್ರ್ಯಾಂಡಿಂಗ್ ಕಸರತ್ತು, ಫೇಸ್‌ಬುಕ್ ಹೆಸರು ಮೆಟಾ- Meta!

ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ (Facebook) ರಿಬ್ರ್ಯಾಂಡಿಂಗ್ ಮಾಡುತ್ತಿದೆ. ಪೇರೆಂಟ್ ಕಂಪನಿಯ ಹೆಸರನ್ನು ಫೇಸ್‌ಬುಕ್‌ನಿಂದ ಮೆಟಾ (Meta) ಎಂದು ನಾಮಕರಣ ಮಾಡುವ ಬಗ್ಗೆ ವಾರ್ಷಿಕ ಸಮ್ಮೇಳನದಲ್ಲಿ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್  ಘೋಷಿಸಿದ್ದಾರೆ.  ಆದರೆ, ಕಂಪನಿಯ ಯಾವುದೇ ಆ್ಯಪ್‌ನ ಹೆಸರು ಬದಲಾವಣೆಯಾಗುತ್ತಿಲ್ಲ.

 

Facebook re branding its parent company as Meta
Author
Bengaluru, First Published Oct 29, 2021, 6:16 PM IST
  • Facebook
  • Twitter
  • Whatsapp

ಅತ್ಯಂತ ಜನಪ್ರಿಯ ಹಾಗೂ ಜಗತ್ತಿನಾದ್ಯಂತ ಅತಿ ಹೆಚ್ಚಿನ ಬಳಕೆದಾರರು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ (Facebook) ತನ್ನ ಹೆಸರನ್ನು ಬದಲಾಯಿಸಿಕೊಳ್ಳಲಿದೆ ಎಂದು ವರದಿಗಳು ತಿಳಿಸಿದ್ದವು. ಅದೇ ರೀತಿ, ಅಕ್ಟೋಬರ್ 28ರಂದು ನಡೆದ ವಾರ್ಷಿಕ ಸಮ್ಮೇಳನದಲ್ಲಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು, (Mark Zuckerberg) ಫೇಸ್‌ಬುಕ್ ಪೇರೆಂಟ್ ಕಂಪನಿಯು ಮೆಟಾ(Meta) ಎಂದು ಬದಲಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಸಮಸ್ಯಾತ್ಮಕ ಸೋಷಿಯಲ್ ನೆಟ್ವರ್ಕ್ ಆಚೆಗಿನ ಭವಿಷ್ಯವನ್ನು ಪ್ರತಿನಿಧಿಸುವ ಸಲುವಾಗಿ, ಫೇಸ್‌ಬುಕ್ ಪೇರೆಂಟ್ ಕಂಪನಿಯನ್ನು ಮೆಟಾ(Meta) ಎಂದು ಕರೆಯಲಾಗುವುದು ಎಂದು ಘೋಷಿಸಿದ್ದಾರೆ ಝುಕರ್ಬರ್ಗ್.

ದೀಪಾವಳಿಗೆ Jiophone Next ಲಾಂಚ್, ಊಹೆಗೆ ನಿಲುಕದ ಬೆಲೆ ಸ್ಮಾರ್ಟ್‌ಫೋನ್?

ನಾವು ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಡುವುದರಿಂದ ಮತ್ತು ಮುಚ್ಚಿದ ಪ್ಲಾಟ್‌ಫಾರ್ಮ್‌ಗಳ ಅಡಿಯಲ್ಲಿ ಬದುಕುವುದರಿಂದ ಬಹಳಷ್ಟು ಕಲಿತಿದ್ದೇವೆ ಮತ್ತು ಈಗ ನಾವು ಕಲಿತ ಎಲ್ಲವನ್ನೂ ತೆಗೆದುಕೊಂಡು ಮುಂದಿನ ಅಧ್ಯಾಯವನ್ನು ನಿರ್ಮಿಸಲು ಸಹಾಯ ಮಾಡುವ ಸಮಯ ಬಂದಿದೆ ಎಂದು ವಾರ್ಷಿಕ ಡೆವಲಪರ್‌ಗಳ ಸಮ್ಮೇಳನದಲ್ಲಿ ಜುಕರ್ಬರ್ಗ್ ಹೇಳಿರುವ ಮಾತನ್ನ ಉಲ್ಲೇಖಿಸಿ ಹಲವು ಸುದ್ದಿತಾಣಗಳು ವರದಿ ಮಾಡಿವೆ.

ಇದೇ ವೇಳೆ, ಫೇಸ್‌ಬುಕ್‌ನ ಯಾವುದೇ ಅಪ್ಲಿಕೇಷನ್‌ಗಳನ್ನು ಮತ್ತು ಬ್ರ್ಯಾಂಡ್‌ಗಳು ಬದಲಾಗುತ್ತಿವೆ. ಬದಲಿಗೆ ಪೇರೆಂಟ್ ಕಂಪನಿಯ ಫೇಸ್‌ಬುಕ್ಕಿನಿಂದ ಮೆಟಾ ಎಂದು ಬದಲಿಸಲಾಗುತ್ತಿದೆ. ಈ ಹಿಂದೆ ಗೂಗಲ್(Google) ಕೂಡ ಇದೇ ರೀತಿಯ ರಿಬ್ರ್ಯಾಂಡಿಂಗ್ ಮಾಡಿತ್ತು. ತನ್ನ ಪೇರೆಂಟ್ ಕಂಪನಿಯ ಹೆಸರನ್ನು ಅದು ಅಲ್ಪಾಬೆಟ್ ಎಂದು ನಾಮಕರಣ ಮಾಡಿತ್ತು. 

ಕಂಪನಿಯನ್ನು ಮರುನಾಮಕರಣ ಮಾಡಿಕೊಳ್ಳುವ ಮೂಲಕ ಫೇಸ್‌ಬುಕ್ ಕಂಪನಿಯೂ ಬೇರೆ ಆ್ಯಪ್‌ಗಳ ರೀತಿ ಮಾತೃ ಸಂಸ್ಥೆಯೊಂದರ ಅಧೀನದಲ್ಲಿ ಕೆಲಸ ಮಾಡಲಿದೆ. ಈ ಮಾತೃ ಸಂಸ್ಥೆಯ ಅಧೀನದಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಮ್‌, ವಾಟ್ಸಾಪ್ ಸೇರಿದಂತೆ ಇತರ ಕಂಪನಿಗಳು ಕೆಲಸ ಮಾಡಲಿವೆ. ಅಮೆರಿಕಾದ ಸಿಲಿಕನ್ ವ್ಯಾಲಿಯಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸಲು ಕಂಪನಿಗಳು ಈ ರೀತಿ ಹೆಸರು ಬದಲಾಯಿಸುವುದು ಸರ್ವೆ ಸಾಮಾನ್ಯ. ಆದರೆ ಯಾವ ಫೇಸ್‌ಬುಕ್ ಏನೆಂದು ಮರುನಾಮಕರಣವಾಗಲಿದೆ ಎಂದು ಇನ್ನೂ ತಿಳಿದು ಬಂದಿಲ್ಲ

ನ.1ರಿಂದ ಈ ಫೋನಲ್ಲಿ What's App ಇರೋಲ್ಲ, ಲಿಸ್ಟಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ?

ಮಾರ್ಕ್‌ ಜುಕರ್‌ಬರ್ಗ್‌ ಜತೆಗೆ Harvard ಕಾಲೇಜಿನ ಇತರ ವಿದ್ಯಾರ್ಥಿಗಳು ಸೇರಿ 2004ರಲ್ಲಿ  ‘ಫೇಸ್‌ ಮ್ಯಾಶ್‌ʼ ಆರಂಭಿಸಿದ್ದರು. ಇದೇ ಫೇಸ್‌ ಮ್ಯಾಶ್‌ ನಂತರ ʼದ ಫೇಸ್‌ಬುಕ್‌ʼ(The Facebook) ಎಂದು ಮರುನಾಮಕರಣಗೊಂಡು ಕೊನೆಗೆ ಕೇವಲ ಫೇಸ್‌ಬುಕ್‌ ಎಂಬ ಹೆಸರನ್ನು ಉಳಿಸಿಕೊಳ್ಳಲು ಕಂಪನಿ ನಿರ್ಧರಿಸಿತ್ತು. 2.8 ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇಂದು ಜಗತ್ತಿನಾದ್ಯಂತ ಸುಪ್ರಸಿದ್ಧ ಜಾಲತಾಣವಾಗಿ ಬೆಳೆದು ನಿಂತಿದೆ. 

ಜಾಗತಿಕ ಮಟ್ಟದಲ್ಲಿ ದೈತ್ಯನಾಗಿ ಬೆಳೆದಿರುವ ಫೇಸ್‌ಬುಕ್ ಈವರೆಗೂ ಸಾಕಷ್ಟು ಕಂಪನಿಗಳನ್ನು ಖರೀದಿಸಿದೆ. 2012 ರಲ್ಲಿ  $1 ಬಿಲಿಯನ್‌ ಮೊತ್ತಕ್ಕೆ ಇನ್ಸ್ಟಾಗ್ರಾಮ್‌ (Instagram) ಖರೀದಿಸಿದ್ದರೆ, 2014 ರಲ್ಲಿ $19 ಬಿಲಿಯನ್‌ ಮೊತ್ತಕ್ಕೆ ಅತ್ಯಂತ ಜನಪ್ರಿಯ ಮೆಸೆಜಿಂಗ್‌  ವಾಟ್ಸಾಪ್ (WhatsApp) ಅನ್ನು ಖರೀದಿಸಿತ್ತು.

ಇತ್ತೀಚೆಗೆ ಫೇಸ್‌ಬುಕ್‌, ವಾಟ್ಸಾ ಪ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿ ಭಾರತ ಸೇರಿದಂತೆ ವಿಶ್ವದ ಹಲವೆಡೆ ಈ ಸೇವೆಗಳಲ್ಲಿ ಭಾರೀ ವ್ಯತ್ಯಯ ಕಂಡುಬಂದಿತ್ತು. ಇದರಿಂದಾಗಿ ಫೇಸ್‌ಬುಕ್‌ ಸೇರಿದಂತೆ ಫೇಸ್ಬುಕ್‌ ಒಡೆತನದ ವಾಟ್ಸಪ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ಸಂದೇಶ ಕಳಿಸಲು, ಸ್ವೀಕರಿಸಲು ಮತ್ತು ಲಾಗಿನ್‌ ಮಾಡಲಾಗದೆ ಪರದಾಡಿದ್ದರು.

ಟ್ವಿಟರ್‌ನ ಸ್ಪೇಸ್ ಎಲ್ಲರೂ ಬಳಸಬಹುದು, ಫಾಲೋವರ್ಸ್ ಮಿತಿ ಇಲ್ಲ!

ಅಲ್ಲದೆ ಈ ಬಗ್ಗೆ ಟ್ವೀಟರ್‌ ಮುಖಾಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಟ್ವೀಟರ್‌ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಫೇಸ್ಬುಕ್‌, ಸರ್ವರ್‌ ಡೌನ್‌ನಿಂದ ಆಗಿರುವ ಸಮಸ್ಯೆ ಪರಿಹಾರಕ್ಕೆ ಕಾರ್ಯ ನಿರ್ವಹಿಸಲಾಗುತ್ತಿದೆ. ಶೀಘ್ರದಲ್ಲೇ ಗ್ರಾಹಕರು ತಮ್ಮ ಸೇವೆಯನ್ನು ಬಳಸಬಹುದು ಎಂದು ಹೇಳಿತ್ತು. ಫೋಟೋ ಹಂಚಿಕೊಳ್ಳುವ ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್‌ಗಳು ಇದೇ ರೀತಿಯ ಸ್ಪಷ್ಟನೆ ನೀಡಿದವು. ಈ ಆ್ಯಪ್‌ಗಳ ಸ್ಥಗಿತದಿಂದ ವಿಶ್ವಾದ್ಯಂತ ಸಾವಿರಾರು ಜನ ಸಮಸ್ಯೆಗೆ ಸಿಲುಕಿದ್ದರು. 

Follow Us:
Download App:
  • android
  • ios