ಎಕ್ಸ್, ಚಾಟ್‌ಜಿಪಿಟಿ ಸೇರಿ 100ಕ್ಕೂ ಹೆಚ್ಚು ವೆಬ್‌ಸೈಟ್ ಡೌನ್ ಮಾಡಿದ ಕ್ಲೌಡ್‌ಫೇರ್ ರಿಸ್ಟೋರ್, ಜಗತನ್ನೇ ತಲ್ಲಣಗೊಳಿಸಿದ ಕ್ಲೌಡ್‌ಪೇರ್ ಡೌನ್ ಸದ್ಯ ಸರಿಯಾಗಿದೆ. ಹಿಡಿ ಶಾಪ ಹಾಕಿದ್ದ ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ.
ನವದೆಹಲಿ (ನ.18) ಎಕ್ಸ್, ಚಾಟ್‌ಜಿಪಿಟಿ, ಸ್ಪಾಟಿಫೈ, ಜೆಮಿನಿ, ಪರ್ಪ್ಲೆಕ್ಸಿಟಿ, ಉಬರ್, ಕ್ಯಾನ್ವಾ ಸೇರಿದಂತೆ 100ಕ್ಕೂ ಹೆಚ್ಟು ವೈಬ್‌ಸೈಟ್, ಇಂಟರ್ನೆಟ್ ಸರ್ವೀಸ್ ಏಕಾಏಕಿ ಡೌನ್ ಆಗಿತ್ತು. ವಿಶ್ವದೆಲ್ಲೆಡೆ ಬಳಕೆದಾರರು ಪರದಾಡಿದ್ದರು. ತಾಂತ್ರಿಕ ಸಮಸ್ಯೆಯಿಂದ ಸರ್ವೀಸ್ ಸಿಗದೆ ಬಳಲಿ ಬೆಂಡಾಗಿದ್ದರು. ಇದಕ್ಕೆ ಮುಖ್ಯ ಕಾರಣವಾಗಿದ್ದು, ಸೈಬರ್ ಸೆಕ್ಯೂರಿಟಿ ಕಂಪನಿಯ ಕ್ಲೌಡ್‌ಫೇರ್ ಸರ್ವರ್ ಡೌನ್. ಕಳೆದ ಕೆಲ ಗಂಟೆಗಳಿಂದ ಹಲವರ ನಿದ್ದೆಗೆಡಿಸಿದ ಕ್ಲೌಡ್‌ಫೇರ್ ಸರ್ವಸ್ ರಿಸ್ಟೋರ್ ಮಾಡಲಾಗಿದೆ. ಪರಿಣಾಮ ಎಲ್ಲಾ ಸೇವೆಗಳು ಕಾರ್ಯಾರಂಭಗೊಂಡಿದೆ.
ಹಲವು ಸೇವೆಗಳು ಪುನರ್ ಆರಂಭ
ಇಂದು ಸಂಜೆಯಿಂದ ಹಲವು ಸೇವೆಗಳು ಸ್ಥಗಿತಗೊಂಡಿತ್ತು. ಬಳಕೆಗಾರರು ಹಲವು ಸೇವೆಗಳನ್ನು ಬಳಸಲು ಸಾಧ್ಯವಾಗದೆ ಆಕ್ರೋಶ ಹೊರಹಾಕಿದ್ದರು. ಕ್ಲೌಡ್‌ಪೇರ್ ಸರ್ವರ್ ಸಮಸ್ಯೆ ಪರಿಹಾರವಾಗುತ್ತಿದ್ದಂತೆ ಚಾಟ್‌ಜಿಪಿಟಿ, ಎಕ್ಸ್ ಸೇರಿದಂತೆ ಹಲವು ಸೇವೆಗಳು ಪುನರ್ ಆರಂಭಗೊಂಡಿದೆ. ಆದರೆ ಕೆಲ ಸೇವೆಗಳಲ್ಲಿ ಇನ್ನು ಸಮಸ್ಯೆ ಮುಂದುವರಿದಿದೆ.
ಏನಿದು ಕ್ಲೌಡ್‌ಫೇರ್
ಕ್ಲೌಡ್‌ಫೇರ್ ಅಮೆರಿಕನ್ ಟೆಕ್ನಾಲಜಿ ಕಂಪನಿ. ವಿಶ್ವದ ಅತೀ ದೊಡ್ಡ ಕ್ಲೌಡ್ ನೆಟ್‌ವರ್ಕ್ ಕಂಪನಿಯಾಗಿದೆ. ಕ್ಲೌಡ್‌ಫೇರ ಕಂಪನಿ ಹಲವು ಸೇವೆಗಳನ್ನು ನೀಡುತ್ತದೆ. ಪ್ರಮುಖವಾಗಿ ಇಂಟರ್ನೆಟ್ ಕನೆಕ್ಟ್ ಆಗುವ ಸೇವೆಗಳು ಇದೇ ಕ್ಲೌಡ್‌ಫೇರ್ ಅಡಿಯಲ್ಲಿ ಬರುತ್ತದೆ. ಪ್ರವೈಸಿ, ಸೈಬರ್ ಸೆಕ್ಯೂರಿಟಿ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತದೆ. ಇನ್ನು ವೆಬ್‌ಸೈಟ್, ಆ್ಯಪ್‌ಗಳ ವಿಚಾರದಲ್ಲಿ ಕ್ಲೌಡ್‌ಫೇರ್ ಮುಖ್ಯ ಸರ್ವರ್ ಹಾಗೂ ಬಳಕೆದಾರನ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ. ತನ್ನ ಅತೀ ದೊಡ್ಡ ಡೇಟಾ ಸೆಂಟರ್, ನೆಟ್‌ವರ್ಕ್‌ನಿಂದ ವೆಬ್‌ಸೈಟ್ ಸೇರಿ ಆ್ಯಪ್‌ಗಳು ಅಡೆತಡೆ ಇಲ್ಲದೆ ಸರ್ವರ್ ಮೂಲಕ ಕಾರ್ಯನಿರ್ವಹಣೆಗೆ ಇದೇ ಕ್ಲೌಡ್‌ಫೇರ್ ನರವಾಗುತ್ತದೆ. ಇದೇ ಕ್ಲೌಡ್‌ಪೇರ್ ಸ್ಟೋರೇಜ್ ಕೂಡ ನೀಡುತ್ತದ.
ತಾಂತ್ರಿಕ ಸಮಸ್ಯೆ ಕುರಿತು ಕ್ಲೌಡ್‌ಪೇರ್ ಪ್ರತಿಕ್ರಿಯೆ ನೀಡಿದೆ. ಮಂಗಳವಾರ ಸಂಜೆಯಿಂದ ಕಾಣಿಸಿಕೊಂಡ ಟೆಕ್ನಿಕಲ್ ಸಮಸ್ಯೆಯಿಂದ ಹಲವರಿಗ ತೊಂದರೆಯಾಗಿದೆ.ತಕ್ಷಣವೇ ಕ್ಲೌಡ್‌ಪೇರ್ ಸಮಸ್ಯೆ ಬಗೆ ಹರಿಸಲುಕಾರ್ಯನಿರ್ವಹಿಸಿದೆ ಎಂದಿದೆ. ವಿಶೇಷವಾಗಿ ಯಾವುದೆ ಟೆಕ್ನಿಕಲ್ ಸಮಸ್ಯೆಗಳು ಕಾಣಿಸಿಕೊಂಡಾಗ ಡೌನ್‌ಡಿಟೆಕ್ಟರ್ ಪೋರ್ಟಲ್ ಸಮಸ್ಯೆಗಳನ್ನು ಬೇಗನೆ ಪತ್ತೆ ಹಚ್ಚಿ ತೋರಿಸುತ್ತದೆ. ಆದರೆ ಈ ಬಾರಿ ಕ್ಲೌಡ್‌ಫೇರ್ ಸಮಸ್ಯೆಯಾದಾಗ ಡೌನ್ ಡಿಟೆಕ್ಟರ್ ಕೂಡ ಡೌನ್ ಆಗಿತ್ತು.


