* ಕಳೆದ ವರ್ಷ ಬಿಡುಗಡೆಯಾಗಿದ್ದ ಮೋಟೋರೊಲಾ ಎಡ್ಜ್ 20 ಪ್ರೋನ ಮುಂದುವರಿದ ಆವೃತ್ತಿಯೇ ಈ ಫೋನು* ಟ್ರಿಪಲ್ ಕ್ಯಾಮೆರಾಗಳನ್ನು ಕಂಪನಿ ಒದಗಿಸಿದ್ದು, 8 ಜಿಬಿ RAM, 128 ಜಿಬಿ ಸ್ಟೋರೇಜ್ ಇದೆ.* ಫೋನ್ ಫ್ರಂಟ್‌ನಲ್ಲಿ ಸೆಲ್ಫಿಗಾಗಿ ಕಂಪನಿಯು 60 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ.

Tech Desk: ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ತನ್ನದೇ ಆದ ಪ್ರಭಾವಳಿಯನ್ನು ಹೊಂದಿರುವ ಮೋಟೋರೊಲಾ ಇದೀಗ ಮತ್ತೊಂದು ಸ್ಮಾರ್ಟ್‌ಫೋನ್ ಮೂಲಕ ಭಾರತಕ್ಕೆ ಲಗ್ಗೆ ಇಟ್ಟಿದೆ. ಕಂಪನಿಯು ಮೋಟೋರೊಲಾ ಎಡ್ಜ್ 30 ಪ್ರೋ (Motorola Edge 30) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ಬಳಕೆದಾರರಲ್ಲಿ ಬಹಳ ನಿರೀಕ್ಷೆ ಇತ್ತು. ಯಾಕೆಂದರೆ, ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿದ್ದ ಮೋಟೋರೊಲಾ ಎಡ್ಜ್ 20 ಪ್ರೋ ಸ್ಮಾರ್ಟ್‌ಫೋನ್‌ನ ಮುಂದುವರಿದ ಆವೃತ್ತಿಯೇ ಎಡ್ಜ್ 30 ಪ್ರೋ ಸ್ಮಾರ್ಟ್‌ಫೋನ್ ಆಗಿದೆ.

ಸಾಕಷ್ಟು ಹೊಸ ಫೀಚರ್‌ಗಳು ಮತ್ತು ತಂತ್ರಜ್ಞಾನದ ಮೂಲಕ ಗಮನ ಸೆಳೆಯುತ್ತಿರುವ ಈ ಮೋಟೋರೊಲಾ ಎಡ್ಜ್ 30 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಸ್ನ್ಯಾಪ್ ಡ್ರಾಗನ್ 8 ಜೆನ್ 1 ಪ್ರೊಸೆಸರ್ ಮತ್ತು ಟ್ರಿಪಲ್ ಕ್ಯಾಮೆರಾಗಳನ್ನು ಬಳಸಲಾಗಿದೆ. ಗಮನ ಸೆಳೆಯಬಹುದಾದ ಮತ್ತೊಂದು ಸಂಗತಿ ಎಂದರೆ 144Hz pOLED ಡಿಸ್‌ಪ್ಲೇಯನ್ನು ಈ ಫೋನ್‌ಗೆ ಉಪಯೋಗಿಸಲಾಗಿದೆ. 68 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ ಈ ಸ್ಮಾರ್ಟ್‌ಫೋನ್ ಆಸುಸರ್ ರೋಗ್ ಫೋನ್ 5ಎಸ್, ವಿವೋ ಎಕ್ಸ್70 ಪ್ರೋ, ಐಕ್ಯೂ 9 ಸೀರೀಸ್‌ ಫೋನುಗಳಿಗೆ ಭಾರೀ ಪೈಪೋಟಿ ನೀಡುವ ನಿರೀಕ್ಷೆ ಇದೆ. 

ಇದನ್ನೂ ಓದಿ:Indian Smartphone Market: 2026ರ ಹೊತ್ತಿಗೆ ಭಾರತದಲ್ಲಿ 100 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು!

ಮೋಟೋರೊಲಾ ಎಡ್ಜ್ 30 ಪ್ರೋ (Motorola Edge 30 Pro) ಸ್ಮಾರ್ಟ್‌ಫೋನ್ ತನ್ನ ವಿಶಿಷ್ಟ ಫೀಚರ್‌ಗಳ ಮೂಲಕ ಬಳಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಡುಯಲ್ ಸಿಮ್ ಹೊಂದಿರುವ ಈ ಫೋನ್, ಆಂಡ್ರಾಯ್ಡ್ 12 ಆಪರೇಟಿಂಗ್ ಸಾಫ್ಟ್‌ವೇರ್ ಆಧರಿತವಾಗಿದೆ. 6.7 ಇಂಚ್ ಫುಲ್ ಎಚ್‌ಡಿ ಪ್ಲಸ್ ಪೋಎಲ್ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. 2.5ಡಿ ಕರ್ವಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಡಿಸ್‌ಪ್ಲೇಗೆ ಬಳಸಲಾಗಿದೆ.

8 ಜಿಬಿ LPDDR5 RAMನೊಂದಿಗೆ ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್ ಒಳಗೊಂಡಿದೆ. ಇನ್ನು ಕ್ಯಾಮೆರಾ ಬಗ್ಗೆ ಹೇಳಬೇಕೆಂದರೆ, ಕಂಪನಿಯು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, 50 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡರ್ ಶೂಟರ್ ಮತ್ತ್ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಕ್ಯಾಮೆರಾಗಳನ್ನು ಕೊಡಲಾಗಿದೆ. ಕಂಪನಿಯು ಡುಯಲ್ ಎಲ್ಇಡಿ ಫ್ಲ್ಯಾಶ್ ಕೂಡ ನೀಡಿದೆ. ನೀವು ಫೋನ್ ಬಳಸಿಕೊಂಡು 8ಕೆ ವಿಡಿಯೋ ರೆಕಾರ್ಡಿಂಗ್ ಮಾಡಬಹುದು. 960fps frame rateನಲ್ಲಿ ಸ್ಲೋ ಮೋಷನ್ ಫುಲ್ ಎಚ್‌ಡಿ ವಿಡಿಯೋ ರೆಕಾರ್ಡಿಂಗ್ ಮಾಡಲು ಈ ಫೋನ್ ಸಹಕರಿಸುತ್ತದೆ.

ಇದನ್ನೂ ಓದಿ:Apple’s March 8 Spring Event: ಮ್ಯಾಕ್‌ಬುಕ್ ಪ್ರೊ & ಏರ್, ಮ್ಯಾಕ್ ಮಿನಿ ಲಾಂಚ್? ಏನೆಲ್ಲಾ ವಿಶೇಷತೆ?

ಈ ಫೋನ್ ಬೆಲೆ ಎಷ್ಟು?: ಭಾರತೀಯ ಮಾರುಕಟ್ಟೆಯಲ್ಲಿ 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಮೋಟೋರೊಲಾ ಎಡ್ಜ್ 30 ಪ್ರೋ ಬೆಲೆ 49,999 ರೂಪಾಯಿ ಆಗುತ್ತದೆ. ಬೆಲೆಯನ್ನು ಪರಿಗಣಿಸಿ ಹೇಳುವುದಾದರೆ ಖಂಡಿತವಾಗಿಯೂ ಫೋನ್ ಪ್ರೀಮಿಯಿಂ ಸೆಗ್ಮೆಂಟ್‌ ಫೋನ್ ಆಗಿದೆ. ಮಾರ್ಚ್ 4ರಿಂದ ಆನ್‌ಲೈನ್ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಸಿಗಲಿದೆ.

ಕಾಸ್ಮೋಸ್ ಬ್ಲೂ ಮತ್ತು ಸ್ಟಾರ್‌ಡ್ಸ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆದೊರೆಯಲಿದೆ. ಲಾಂಚ್ ಆಫರ್ ಆಗಿ ಕಂಪನಿಯು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ 5000 ರೂ. ಡಿಸ್ಕೌಂಟ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಸಿದರೆ 5000 ರೂ. ಕ್ಯಾಶ್‌ಬ್ಯಾಕ್ ಸಿಗಲಿದೆ. ಇದಕ್ಕೆ ಬಳಕೆದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಬೇಕಾಗುತ್ತದೆ. 

ಈ ಮೋಟೋರೊಲಾ ಫೋನ್‌ ಡಾಲ್ಬಿ ಆಟ್ಮೋಸ್ ಮೂಲಕ ಟ್ಯೂನ್ ಮಾಡಲಾಗಿರುವ ಡುಯಲ್ ಸ್ಟಿರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ. ಕಂಪನಿಯು ಸೆಲ್ಫಿಗಾಗಿ 60 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ನೀಡಿದೆ. ಫ್ರಂಟ್ ‌ಕ್ಯಾಮೆರಾ ದೃಷ್ಟಿಯಿಂದ ಈ ಫೋನ್ ಅತ್ಯುತ್ತಮ ಆಯ್ಕೆಯಾಗಲಿದೆ ಎಂದು ಹೇಳಬಹುದು.