Apple tap-to-pay Technology: ಸ್ಯಾಮ್‌ಸಂಗ್ ಮಾದರಿಯಲ್ಲಿ ಐಫೋನ್ ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್?
ಆ್ಯಪಲ್ ಶೀಘ್ರದಲ್ಲೇ ಸಣ್ಣ ವ್ಯಾಪಾರಿಗಳು ಐಫೋನ್‌ಗಳಲ್ಲಿ ನೇರವಾಗಿ ಪಾವತಿಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ಇತ್ತೀಚೆಗಿನ ವರದಿಯೊಂದು ತಿಳಿಸಿದೆ.
Tech Desk: ತನ್ನ ಯೂನಿಕ್ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿರುವ ಆ್ಯಪಲ್ (Apple) ಈಗ ಮತ್ತೊಂದು ಹೊಸ ಸೇವೆಯನ್ನು ನೀಡಲು ಎದುರು ನೋಡುತ್ತಿದೆ. ಆ್ಯಪಲ್ ಸಣ್ಣ ವ್ಯವಹಾರಗಳಿಗೆ ಪಾವತಿಗಳನ್ನು (Contact Less Payment) ಸ್ವೀಕರಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯದ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಕಂಪನಿಯು ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದ್ದು ಸಣ್ಣ ವ್ಯಾಪಾರಿಗಳು ತಮ್ಮ ಐಫೋನ್‌ಗಳಲ್ಲಿ ನೇರವಾಗಿ ಪಾವತಿಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಫೋನ್ ಬಿಟ್ಟು ಯಾವುದೇ ಇತರ ಸಾಧನ ಬಳಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಆ್ಯಪಲ್ ಮುಂಬರುವ ತಿಂಗಳುಗಳಲ್ಲಿ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಕಂಪನಿಯು 2020ರಿಂದ ಈ ಹೊಸ ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತಿದ್ದು ಕ್ರೆಡಿಟ್ ಕಾರ್ಡ್‌ನ ಟ್ಯಾಪ್‌ನೊಂದಿಗೆ ಪಾವತಿಗಳನ್ನು ಸ್ವೀಕರಿಸಲು ಸ್ಮಾರ್ಟ್‌ಫೋನ್‌ಗಳಿಗೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ Mobewave ಎಂಬ ಕೆನಡಾದ ಸ್ಟಾರ್ಟ್‌ಅಪ್‌ಗಾಗಿ ಸುಮಾರು $100 ಮಿಲಿಯನ್ (ಸುಮಾರು ರೂ. 750 ಕೋಟಿ) ಪಾವತಿಸಿತ್ತು. ಈ ವ್ಯವಸ್ಥೆಯು ಪ್ರಸ್ತುತ Apple Payಗಾಗಿ ಬಳಸುತ್ತಿರುವ ಐಫೋನ್‌ನ Near field communications ಅಥವಾ NF ಚಿಪ್ ಬಳಸಬಹುದು.
ಇದನ್ನೂ ಓದಿ: Unlock iPhone with Mask: ಮಾಸ್ಕ್ ಧರಿಸಿಯೂ ಮುಖ ಗುರುತಿಸುವ ಫೀಚರ್ ಬಿಡುಗಡೆ!
Samsung Point of Sale: ಅದಕ್ಕೂ ಮೊದಲು, 2019 ರಲ್ಲಿ, ಸ್ಯಾಮ್‌ಸಂಗ್ ಈ ಸಂಸ್ಥೆಯೊಂದಿಗೆ ಕೆಲಸ ಮಾಡಿತ್ತು ಮತ್ತು ವ್ಯಾಪಾರಿಗಳಿಗೆ ಇದೇ ರೀತಿಯ ಸೇವೆಯನ್ನು ನೀಡಿತ್ತು. ಇದು Mobewave ನೊಂದಿಗೆ ಪಾಲುದಾರಿಕೆ ಜತೆಗೆ Samsung POS (Samsung Point of Sale) ಅನ್ನು ಪರಿಚಯಿಸಿತ್ತು. ಈ ಸೇವೆಯು ಸ್ಯಾಮ್‌ಸಂಗ್ ಫೋನ್‌ಗಳನ್ನು ಬಳಸಿಕೊಂಡು ಸಂಪರ್ಕವಿಲ್ಲದ ಪಾವತಿಗಳನ್ನು ಸ್ವೀಕರಿಸಲು ಸಣ್ಣ ವ್ಯಾಪಾರಗಳಿಗೆ ಅನುವು ಮಾಡಿಕೊಟ್ಟಿತ್ತು. ಈ ಮೂಲಕ ವ್ಯಾಪಾರಿಗಳು ತಮ್ಮ NFC-ಸಾಮರ್ಥ್ಯದ Samsung ಸಾಧನಗಳನ್ನು ಹೆಚ್ಚುವರಿ ಯಂತ್ರಾಂಶವಿಲ್ಲದೆಯೇ mPOS (ಮೊಬೈಲ್ ಪಾಯಿಂಟ್ ಆಫ್ ಸೇಲ್) ಟರ್ಮಿನಲ್‌ಗಳಾಗಿ ಪರಿವರ್ತಿಸಲು ಸಾಧ್ಯವಾಯಿತು.
ಸ್ಯಾಮ್‌ಸಂಗ್ ಪಿಒಎಸ್ ಅಪ್ಲಿಕೇಶನನ್ನು ಗ್ಯಾಲಕ್ಸಿ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪೂರ್ಣಗೊಂಡ ನಂತರ, ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರ ಮಾಲೀಕರು Apple Pay, Google Pay, Samsung Pay ಅಥವಾ Visa ಮತ್ತು Mastercard ನಿಂದ ಸಂಪರ್ಕವಿಲ್ಲದ ಕಾರ್ಡ್‌ಗಳನ್ನು ಬಳಸಿಕೊಂಡು ಸಂಪರ್ಕರಹಿತ ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಆಪಲ್ ಕೂಡ ಇದೇ ರೀತಿಯ ವೈಶಿಷ್ಟ್ಯ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: iPhone 15 Pro 5X ಪೆರಿಸ್ಕೋಪ್ ಕ್ಯಾಮೆರಾದೊಂದಿಗೆ 2023ರಲ್ಲಿ ಬಿಡುಗಡೆ: ಜೆಫ್ ಪು ಭವಿಷ್ಯ!
ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಬಿಡುಗಡೆ: ಕಂಪನಿಯು ನೇರವಾಗಿ NFC-ಸಕ್ರಿಯಗೊಳಿಸಿದ ಐಫೋನ್‌ಗಳಿಗೆ ಟ್ಯಾಪ್-ಟು-ಪೇ ಟರ್ಮಿನಲ್ ತಂತ್ರಜ್ಞಾನವನ್ನು ಸಂಯೋಜಿಸುವ ನಿರೀಕ್ಷೆಯಿದೆ. ಪ್ರಸ್ತುತ, ಸಣ್ಣ ವ್ಯಾಪಾರ ಮಾಲೀಕರು ಸ್ಕ್ವೇರ್‌ನಂತಹ ಹಣಕಾಸು ಸೇವೆಗಳ (Square Financial Services) ಕಂಪನಿಗಳಿಂದ ಬರುವ ಹೆಚ್ಚುವರಿ ಹಾರ್ಡ್‌ವೇರ ಬಳಸಿ ಪಾವತಿಗಳನ್ನು ಸ್ವೀಕರಿಸಬಹುದಾಗಿದೆ. ಇದು ಐಫೋನ್‌ಗಳಿಗಾಗಿ ವಿಭಿನ್ನ ಪಾವತಿ ಟರ್ಮಿನಲ್‌ಗಳನ್ನು ಮಾರಾಟ ಮಾಡುತ್ತದೆ.
ಈ ಹೊಸ ವೈಶಿಷ್ಟ್ಯ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಮತ್ತು Mobewave ತಂತ್ರಜ್ಞಾನವನ್ನು Apple Pay ಸೇವೆಯ ಭಾಗವಾಗಿ ಬ್ರಾಂಡ್ ಮಾಡಲಾಗುತ್ತದೆಯೇ ಎಂಬುದು ಪ್ರಸ್ತುತ ತಿಳಿದಿಲ್ಲ. ಆ್ಯಪಲ್ ಈ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಪಾವತಿ ನೆಟ್‌ವರ್ಕ್‌ನೊಂದಿಗೆ ಪಾಲುದಾರಿಕೆ ಪಡೆಯುತ್ತದೆಯೇ ಅಥವಾ ಅದರ ಸ್ವಂತ ಪಾವತಿ ನೆಟ್‌ವರ್ಕನ್ನು ಬಳಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಮುಂಬರುವ ತಿಂಗಳುಗಳಲ್ಲಿ ಆಪಲ್ "ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ವೈಶಿಷ್ಟ್ಯವನ್ನು ಹೊರತರಲು ಪ್ರಾರಂಭಿಸಬಹುದು" ಎಂದು ವರದಿ ಹೇಳುತ್ತದೆ.