Unlock iPhone with Mask: ಮಾಸ್ಕ್ ಧರಿಸಿಯೂ ಮುಖ ಗುರುತಿಸುವ ಫೀಚರ್ ಬಿಡುಗಡೆ!
*ಐಫೋನ್ ಇನ್ನು ಮುಂದೆ ಮಾಸ್ಕ್ ಧರಿಸಿಯೇ ಅನ್‌ಲಾಕ್
*ಹೊಸ ಆವೃತ್ತಿಯ ಫೋನ್‌ಗಳಲ್ಲಿ ಫೀಚರ್ ಲಭ್ಯ
*ಐಫೋನ್ 12 ಮತ್ತು ಐಫೋನ್‌ನ ಹೊಸ ಆವೃತ್ತಿಗಳಿಗೆ ಸೀಮಿತ
Tech Desk: ಆ್ಯಪಲ್ ಕಂಪನಿಯ ಫೇಸ್ ಐಡಿ (Face ID) ಸೌಲಭ್ಯವುಳ್ಳ ಐಫೋನ್ ಅನ್ನು ಇನ್ನು ಮುಂದೆ ಮಾಸ್ಕ್ (Mask) ಧರಿಸಿಯೇ ಅನ್‌ಲಾಕ್ ಮಾಡಬಹುದಾಗಿದೆ. ಈವರೆಗೆ ಫೋನ್‌ಗಳು ಮಾಸ್ಕ್ ಧರಿಸಿದ್ದರೆ ಗುರುತಿಸುತ್ತಿರಲಿಲ್ಲ ಆದರೆ, ಹೊಸ ಆವೃತ್ತಿಯ ಫೋನ್‌ಗಳಲ್ಲಿ ಮಾಸ್ಕ್ ಧರಿಸಿಯೇ ಫೇಸ್‌ಐಡಿಯನ್ನು ಬಳಸುವ ಆಯ್ಕೆಯನ್ನು ನೀಡಲಾಗುತ್ತದೆ. ಈ ಆಯ್ಕೆಯನ್ನು ಒತ್ತಿದಾಗ ಮತ್ತೊಮ್ಮೆ ಮಾಸ್ಕ್ ಧರಿಸದೇ ಮುಖವನ್ನು ಸ್ಕ್ಯಾನ್ ಮಾಡಿಕೊಳ್ಳಬೇಕು. ಇದರ ನಂತರ ವ್ಯಕ್ತಿ ಮಾಸ್ಕ್ ಧರಿಸಿದ್ದರೂ ಫೋನನ್ನು ಅನ್‌ಲಾಕ್ (iPhone Unlock) ಮಾಡಬಹುದು.
ಇದೇ ರೀತಿ ‘ಆಡ್ ಗ್ಲಾಸಸ್’ ಎಂಬ ಆಯ್ಕೆ ನೀಡಲಾಗಿದ್ದು, ಮೊಬೈಲ್‌ನ್ನು ಕನ್ನಡಕ ಧರಿಸಿಯೂ ಅನ್‌ಲಾಕ್ ಮಾಡಬಹುದಾಗಿದೆ. ಈ ಹೊಸ ಸೌಲಭ್ಯ ಐಫೋನ್12, ಐಫೋನ್ 13ರ ಸಿರೀಸ್‌ನಲ್ಲೂ ಕಾರ್ಯನಿರ್ವಹಿಸಲಿದೆ. ಕೋವಿಡ್ ಸಾಂಕ್ರಾಮಿಕದ ದಿನಗಳಲ್ಲಿ ಮಾಸ್ಕ್ ಜನಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ ಈ ಹೊಸ ಫೀಚರ್ ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: No.1 Smartpone ಒಪ್ಪೋ, ವಿವೋ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್, 6 ವರ್ಷದ ಬಳಿಕ ಚೀನಾದಲ್ಲಿ ಮೋಡಿ!
ಫೇಸ್ ಐಡಿ ಅಪ್‌ಡೇಟ್ ಜತೆಗೆ iOS 15.4 ರ ಮೊದಲ ಡೆವಲಪರ್ ಬೀಟಾವು ನೋಟ್ಸ್ ಮತ್ತು ರಿಮೈಂಡರ್ ಅಪ್ಲಿಕೇಶನ್‌ಗಳಲ್ಲಿ ಕ್ಯಾಮರಾವನ್ನು ಬಳಸಿಕೊಂಡು ವಸ್ತುಗಳಿಂದ ಪಠ್ಯವನ್ನು ನಕಲಿಸುವ ಸಾಮರ್ಥ್ಯವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಅಪ್ಡೇಟ್‌ನಲ್ಲಿ ಹೊಸ ಎಮೋಜಿಗಳನ್ನು ಬಿಡುಗಡೆ ಮಾಡಲಾಗಿದೆ.
ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ನವೀಕರಣ: Apple iOS 15.4, iPadOS 15.4, ಮತ್ತು macOS Monterey 12.3ರ ಮೊದಲ ಡೆವಲಪರ್ ಬೀಟಾ ಬಿಡುಗಡೆ ಇದಾಗಿದೆ. iOS 15.4 ರ ಇತ್ತೀಚಿನ ಬೀಟಾ ಬಿಡುಗಡೆಯು ತರುವ ದೊಡ್ಡ ಬದಲಾವಣೆಗಳಲ್ಲಿ ಇದು ಒಂದಾಗಿದ್ದು ಮಾಸ್ಕ್ ಧರಿಸಿರುವಾಗ ಫೇಸ್ ಐಡಿಯನ್ನು ಬಳಸಿಕೊಂಡು ನಿಮ್ಮ ಐಫೋನ್ ಅನ್ನು ಅನ್ಲಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ಮಾಸ್ಕ್‌ನೊಂದಿಗೆ ಫೇಸ್ ಐಡಿಯನ್ನು ಬಳಸಿಕೊಂಡು ಐಫೋನ್ ಅನ್ನು ಅನ್ಲಾಕ್ ಮಾಡುವ ಸಾಮರ್ಥ್ಯದೊಂದಿಗೆ, ಆ್ಯಪಲ್ ತನ್ನ ಸ್ವಾಮ್ಯದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ನವೀಕರಿಸಿದೆ. 2020 ರ ಆರಂಭದಲ್ಲಿ COVID-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಜನರು ಮಾಸ್ಕ್ ಧರಿಸಿರುವುದರಿಂದ ಇದು ಹೆಚ್ಚು ಬೇಡಿಕೆಯಲ್ಲಿದ್ದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ಆ್ಯಪಲ್ ಈ ಹಿಂದೆಯೂ ಮಾಸ್ಕ್ ಧರಿಸಿದಾಗ ತನ್ನ ಸಾಧನಗಳು ಫೇಸ್ ಐಡಿ ಮೂಲಕ ಜನರನ್ನು ಗುರುತಿಸದಿರುವ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿತ್ತು. 2020 ರಲ್ಲಿ, ಫೇಸ್ ಐಡಿ ಬೆಂಬಲವನ್ನು ಹೊಂದಿರುವ ಸಾಧನಗಳಲ್ಲಿ ಮಾಸ್ಕ್ ಧರಿಸುವಾಗ ಪಾಸ್‌ಕೋಡ್‌ಗಳನ್ನು ಬಳಸಿಕೊಂಡು ಅನ್‌ಲಾಕ್ ಮಾಡಲು ವೇಗವಾದ ಮಾರ್ಗವನ್ನು ಸಕ್ರಿಯಗೊಳಿಸಿತ್ತು.
ಇದನ್ನೂ ಓದಿ: iPhone 15 Pro 5X ಪೆರಿಸ್ಕೋಪ್ ಕ್ಯಾಮೆರಾದೊಂದಿಗೆ 2023ರಲ್ಲಿ ಬಿಡುಗಡೆ: ಜೆಫ್ ಪು ಭವಿಷ್ಯ!
ಮಾಸ್ಕ್ ಧರಿಸಿದಾಗ ಆ್ಯಪಲ್ ವಾಚನ್ನು ಬಳಸಿಕೊಂಡು ಫೇಸ್ ಐಡಿ-ಸಜ್ಜಿತ ಐಫೋನ್ ಮಾದರಿಗಳನ್ನು ಅನ್ಲಾಕ್ ಮಾಡುವ ಸಾಮರ್ಥ್ಯವನ್ನು ಕಂಪನಿಯು ಕಳೆದ ವರ್ಷ ಒದಗಿಸಿತ್ತು. ಆದಾಗ್ಯೂ, ಎರಡೂ ನವೀಕರಣಗಳು ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಇಷ್ಟವಾಗಿರಲಿಲ್ಲ.iOS 15.4 ರ ಹೊಸ ಬೀಟಾ ಬಿಡುಗಡೆಯು ಅಂತಿಮವಾಗಿ ಮುಖವಾಡವನ್ನು ಧರಿಸಿರುವಾಗ ಫೇಸ್ ಐಡಿಯನ್ನು ಬಳಸಿಕೊಂಡು ತಮ್ಮ ಐಫೋನನ್ನು ಅನ್‌ಲಾಕ್ ಮಾಡಲು ಅನುವು ಮಾಡಿಕೊಡುವ ಬಳಕೆದಾರರ ವಿನಂತಿಗಳನ್ನು ಪರಿಹರಿಸುತ್ತಿದೆ ಎಂಬುದು ಟೆಕ್ ವಿಶ್ಲೇಷಕರ ಅಭಿಪ್ರಾಯ.
ಐಫೋನ್ X ಮತ್ತು ನಂತರದ ಮಾದರಿಗಳಲ್ಲಿ ಫೇಸ್ ಐಡಿ ಲಭ್ಯವಿದ್ದರೂ, ಮಾಸ್ಕ್ ಜತೆಗೆ ಫೇಸ್ ಐಡಿಯನ್ನು ಬಳಸುವ ವೈಶಿಷ್ಟ್ಯವು ಐಫೋನ್ 12 ಮತ್ತು ಐಫೋನ್‌ನ ಹೊಸ ಆವೃತ್ತಿಗಳಿಗೆ ಸೀಮಿತವಾಗಿದೆ. ಪ್ರಸ್ತುತ ಇದು ಐಪ್ಯಾಡ್ ಬಳಕೆದಾರರಿಗೂ ಲಭ್ಯವಿಲ್ಲ. ಮಾಸ್ಕ್ ಜತೆಗೆ ಫೇಸ್ ಐಡಿಯ ನಿಖರತೆ ಮತ್ತು ಸುರಕ್ಷತೆಯು ಅಸ್ತಿತ್ವದಲ್ಲಿರುವ ಮುಖ ಗುರುತಿಸುವಿಕೆ ಬೆಂಬಲದೊಂದಿಗೆ ಹೊಂದಾಣಿಕೆಯಾಗುತ್ತಿದೆ ಎಂದು ಆ್ಯಪಲ್ ಹೇಳುತ್ತದೆ.