Asianet Suvarna News Asianet Suvarna News

iPhone 15 Pro 5X ಪೆರಿಸ್ಕೋಪ್ ಕ್ಯಾಮೆರಾದೊಂದಿಗೆ 2023ರಲ್ಲಿ ಬಿಡುಗಡೆ: ಜೆಫ್ ಪು ಭವಿಷ್ಯ!

2023ರಲ್ಲಿ ಬಿಡುಗಡೆಯಾಗುವ ಐಫೋನ್ 15 ಪ್ರೊ ಮಾದರಿಗಳು 5x ಆಪ್ಟಿಕಲ್ ಜೂಮ್‌ ಹಾಗೂ ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಬರುತ್ತವೆ ಎಂದು ವಿಶ್ಲೇಷಕ ಜೆಫ್ ಪು ಭವಿಷ್ಯ ನುಡಿದಿದ್ದಾರೆ. 

analyst Jeff Pu predicts iPhone 15 Pro may come with 5X periscope camera mnj
Author
Bengaluru, First Published Jan 23, 2022, 4:35 PM IST

Tech Desk: ಐಫೋನ್ 14 ಬಿಡುಗಡೆಗೆ ಇನ್ನೂ ತಿಂಗಳುಗಳಿರುವಾಗ, ಐಫೋನ್ 15 ಕುರಿತು ವದಂತಿಗಳು ಈಗಾಗಲೇ ಸುತ್ತು ಹಾಕಲು ಪ್ರಾರಂಭಿಸಿವೆ. ಕೆಲ ದಿನಗಳ ಹಿಂದೆ ಮುಂಬರುವ iPhone 14 ಸರಣಿಯ ಬಗ್ಗೆ ಮಾತ್ರ ಸೋರಿಕೆಗಳು ಮತ್ತು ರೆಂಡರ್‌ಗಳು ಇದ್ದವು. ಹೊಸ ವರದಿಯು ಈಗ ಐಫೋನ್ 15 ಸರಣಿಯ ಕ್ಯಾಮೆರಾ ವಿಶೇಷಣಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಹಂಚಿಕೊಂಡಿದೆ. 2023 ರಲ್ಲಿ ಬರುವ ನಿರೀಕ್ಷೆಯಿರುವ iPhone 15 Pro 5X ಪೆರಿಸ್ಕೋಪ್ ಕ್ಯಾಮೆರಾದೊಂದಿಗೆ ಬರಲಿದೆ ಎಂದು ವರದಿ ತಿಳಿಸಿವೆ. 

9toMac ಪ್ರಕಾರ, 2023 ರ ಐಫೋನ್ 15 ಪ್ರೊ ಮಾದರಿಗಳು 5x ಆಪ್ಟಿಕಲ್ ಜೂಮ್‌ನೊಂದಿಗೆ ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಬರುತ್ತವೆ ಎಂದು ವಿಶ್ಲೇಷಕ ಜೆಫ್ ಪು (Jeff Pu) ಭವಿಷ್ಯ ನುಡಿದಿದ್ದಾರೆ. ಆಪಲ್ ಈಗಾಗಲೇ ಇದರ ಮಾದರಿಗಳನ್ನು ಸ್ವೀಕರಿಸಿದೆ ಮತ್ತು ಮೇ 2022 ರ ವೇಳೆಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಪು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ: Apple Fitness ಹೊಸ ವರ್ಷದ ಫಿಟ್ನೆಸ್ ರೆಸಲ್ಯೂಶನ್ ಕಾರ್ಯಗತಗೊಳಿಸಲು ಬಂದಿದೆ ಆ್ಯಪಲ್ ಫಿಟ್ನೆಸ್ ಪ್ಲಸ್

ಲ್ಯಾಂಟೆ ಆಪ್ಟಿಕ್ಸ್‌ನೊಂದಿಗೆ ಮಾತುಕತೆ: 5x ಪೆರಿಸ್ಕೋಪ್ ಲೆನ್ಸನ್ನು ಹೆಚ್ಚಾಗಿ ಐಫೋನ್ 15 ಪ್ರೊ ಮಾದರಿಗಳಲ್ಲಿ ಸೇರಿಸಲಾಗುವುದು, ಅದು ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಆಗಿರಬಹುದು. ಈ ಬೆನ್ನಲ್ಲೇ ಆಪಲ್ ಪ್ರಸ್ತುತ ಲ್ಯಾಂಟೆ ಆಪ್ಟಿಕ್ಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿಶ್ಲೇಷಕರು ಬಹಿರಂಗಪಡಿಸಿದ್ದಾರೆ. ಇದು 2023 ರ ಐಫೋನ್‌ಗಳಲ್ಲಿ ಬಳಸಲಾಗುವ ಪೆರಿಸ್ಕೋಪ್ ಲೆನ್ಸ್‌ಗಳ ಮುಖ್ಯ ಪೂರೈಕೆದಾರ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ, ಕಂಪನಿಗಳು ಒಂದು ತೀರ್ಮಾನಕ್ಕೆ ಬಂದರೆ, ಲ್ಯಾಂಟೆ ಆಪ್ಟಿಕ್ಸ್ ಆಪಲ್‌ಗೆ 100 ಮಿಲಿಯನ್‌ಗಿಂತಲೂ ಹೆಚ್ಚು ಘಟಕಗಳನ್ನು ಪೂರೈಸುವ ನಿರೀಕ್ಷೆಯಿದೆ ಎಂದು ಜೆಫ್ ಪು ತಿಳಿಸಿದ್ದಾರೆ. ಆಪಲ್ ಪೆರಿಸ್ಕೋಪ್ ಲೆನ್ಸ್‌ನಲ್ಲಿ ಕೆಲಸ ಮಾಡುವುದು ಮುಂಚೂಣಿಗೆ ಬಂದಿರುವುದು ಇದೇ ಮೊದಲಲ್ಲ. 2023 ರ ಐಫೋನ್‌ಗಳಲ್ಲಿ ಪೆರಿಕೋಪ್ ಲೆನ್ಸ್ ಅನ್ನು ಸೇರಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ವಿಶ್ಲೇಷಕ ಮಿಂಗ್-ಚಿ ಕುವೊ ಭವಿಷ್ಯ ನುಡಿದಿದ್ದರು. ಈ ಮಾಹಿತಿಯು ಸಂಪೂರ್ಣವಾಗಿ ಊಹಾಪೋಹಗಳನ್ನು ಆಧರಿಸಿದೆ. ಆಪಲ್ ತನ್ನ ಉತ್ಪನ್ನ ಬಿಡುಗಡೆಗೂ ಮುನ್ನ ಯಾವುದೇ ಮಾಹಿತಿ ಬಿಟ್ಟಕೊಡುವುದಿಲ್ಲ. 2023 ರ ಮೊದಲು Apple iPhone 15 ಕುರಿತು ಏನನ್ನೂ ಬಹಿರಂಗಪಡಿಸುವುದಿಲ್ಲ, ಆದ್ದರಿಂದ iPhone 15 Pro ನಲ್ಲಿ ಯಾವ ಕ್ಯಾಮೆರಾ ಲೆನ್ಸ್ ಅನ್ನು ಸೇರಿಸಲಾಗುವುದು ಎಂದು ತಿಳಿಯಲು, ನೀವು ಕನಿಷ್ಟ 2023 ರವರೆಗೆ ಕಾಯಬೇಕಾಗುತ್ತದೆ.‌

ಇದನ್ನೂ ಓದಿ: Apple CEO Earnings 2021ರಲ್ಲಿ ಊಹೆಗೂ ನಿಲುಕದ ಆದಾಯ ಗಳಿಸಿದ ಆ್ಯಪಲ್ ಸಿಇಒ ಟಿಮ್ ಕುಕ್!

iPhone 14 ಬಗ್ಗೆ ವದಂತಿಗಳು: ಮುಂಬರುವ iPhone 14 ಬಗ್ಗೆ ವದಂತಿಗಳು ಪದೇ ಪದೇ ಪಾಪ್ ಅಪ್ ಆಗುತ್ತಲೇ ಇರುತ್ತವೆ. ಹಿಂದಿನ ಸೋರಿಕೆಗಳು iPhone 14 ಮಾದರಿಗಳು 120Hz ಡಿಸ್ಪ್ಲೇಗಳು ಮತ್ತು 6GB RAM ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ ಎಂದು ಸೂಚಿಸಿದೆ. Apple iPhone 14 ಸರಣಿಯು ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ವದಂತಿಗಳಿವೆ, ಇದು iPhone 14, iPhone 14 Pro, iPhone 14 Pro Max ಮತ್ತು iPhone 14 mini ಅನ್ನು ಒಳಗೊಂಡಿರುತ್ತದೆ. 

ಈ ಹಿಂದೆ, ಐಫೋನ್ 14 ಮಾದರಿಗಳ ಕ್ಯಾಮೆರಾ ವಿಶೇಷಣಗಳ ಬಗ್ಗೆ ವರದಿಗಳು ಇದ್ದವು. ಸ್ಮಾರ್ಟ್‌ಫೋನ್ ಬೃಹತ್ ಕ್ಯಾಮೆರಾ ಅಪ್‌ಗ್ರೇಡ್‌ನೊಂದಿಗೆ ಬರಲಿದೆ ಎಂದು ಊಹಿಸಲಾಗಿದೆ. iPhone 14 ಆಪಲ್‌ನ Next Gen A16 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Follow Us:
Download App:
  • android
  • ios