ಹೊಸ IT ನಿಯಮ; ಒಂದು ತಿಂಗಳ ಅವಧಿಯಲ್ಲಿ 20 ಲಕ್ಷ ಭಾರತೀಯರ ಖಾತೆ ನಿಷೇಧಿಸಿದ whatsapp!
- ಹೊಸ ಐಟಿ ನಿಯಮ; ನಿಯಮಬಾಹಿರ ಚಟುವಟಿಕೆಯ ವ್ಯಾಟ್ಸ್ಆ್ಯಪ್ ಬ್ಯಾನ್
- ಮೇ.15 ರಿಂದ ಜೂನ್ 15ರೊಳಗೆ 20 ಲಕ್ಷ ಭಾರತೀಯರ ವ್ಯಾಟ್ಸ್ಆ್ಯಪ್ ಖಾತೆ ನಿಷೇಧ!
- ಹಾನಿಕಾರಕ, ದೇಶದ ಸೌಹಾರ್ಧತೆ, ಶಾಂತಿ ಕದಡುವ ನಡವಳಿಕೆ ತಡೆಯಲು ಕ್ರಮ
ನವದೆಹಲಿ(ಜು.15): ದೇಶದಲ್ಲಿ ಭಾರಿ ಚರ್ಚೆಗೊಳಾಗಾಗಿದ್ದ ಹೊಸ ಐಟಿ ನಿಯಮಕ್ಕೆ ಕೊನೆಗೂ ಸಾಮಾಜಿಕ ಜಾಲತಾಣಗಳು ತಲೆಬಾಗಿದೆ. ಇದರಂತೆ ಹೊಸ ಐಟಿ ನಿಯಮದನ್ವಯ ಕ್ರಮ ಕೈಗೊಳ್ಳಲು ಆರಂಭಿಸಿದೆ. ಹಾನಿಕಾರಕ ಸೇರಿದಂತೆ ಕೆಲ ಮಾನದಂಡನಗಳನ್ನಿಟ್ಟುಕೊಂಡು ವ್ಯಾಟ್ಸ್ಆ್ಯಪ್ ಕೇವಲ ಒಂದು ತಿಂಗಳ ಅವಧಿಯಲ್ಲಿ 20 ಲಕ್ಷ ಭಾರತೀಯರ ವ್ಯಾಟ್ಸ್ಆ್ಯಪ್ ಖಾತೆ ನಿಷೇಧಿಸಿದಿಸಲಾಗಿದೆ ಎಂದು ವ್ಯಾಟ್ಸ್‌ಆ್ಯಪ್ ಹೇಳಿದೆ.
ವಿವಾದಿತ ಖಾಸಗಿತನ ನೀತಿಗೆ ತಡೆ: ವಾಟ್ಸಾಪ್ ನಿರ್ಧಾರ!
ವ್ಯಾಟ್ಸ್‌ಆ್ಯಪ್ ತನ್ನ ಮಾಸಿಕ ವರದಿಯಲ್ಲಿ ದೇಶದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಅನುಸಾರವಾಗಿ ಸಾಮಾಜಿಕ ಮಾಧ್ಯಮ ಮತ್ತು ವೆಬ್ ಪ್ಲಾಟ್‌ಫಾರ್ಮ್‌ಗಳು ಕೈಗೊಂಡ ಕ್ರಮಗಳ ವಿವರಗಳನ್ನು ತಿಳಿಸಿದೆ. ಈ ವರದಿಯಲ್ಲಿ ಮೇ.15 ರಿಂದ ಜೂನ್ 15ರೊಳಗೆ ಭಾರತೀಯರ 20 ಲಕ್ಷ ವ್ಯಾಟ್ಸ್ಆ್ಯಪ್ ನಿಷೇಧಿಸಿರುವುದಾಗಿ ಹೇಳಿದೆ.
ಹಾನಿಕಾರ ಚಟುವಟಿಕೆ ತಡೆಗಟ್ಟಲು ವ್ಯಾಟ್ಸ್‌ಆ್ಯಪ್ ದಿಟ್ಟ ಕ್ರಮ ಕೈಗೊಂಡಿದೆ. ಹಾನಿ ಸಂಭವಿಸಿದ ಬಳಿಕ ಪತ್ತೆ ಹಚ್ಚುವ ಬದಲು ಮೊದಲೇ ಈ ಕ್ರಮವನ್ನು ವ್ಯಾಟ್ಸ್‌ಆ್ಯಪ್ ಮಾಡುತ್ತಿದೆ ಎಂದು ತನ್ನ ಮಾಸಿಕ ವರದಿಯಲ್ಲಿ ಹೇಳಿದೆ. ವ್ಯಾಟ್ಸ್‌ಆ್ಯಪ್ ಖಾತೆ ಬ್ಯಾನ್ ಮಾಡಲು ಅನುಸರಿಸಿದ ಮಾನದಂಡಗಳ ಕುರಿತು ವರದಿಯಲ್ಲಿ ಹೇಳಿದೆ.
ಈ ಸಂದೇಶ ನಿಮಗೂ ಬರಬಹುದು ಎಚ್ಚರ, ಹೀಗ್ಮಾಡಿದ್ರೆ ಗ್ರೂಪಿಂದ ಔಟ್!
ನೋಂದಣಿ, ಸಂದೇಶ ಕಳುಹಿಸುವಿಕೆ, ನೆಗೆಟೀವ್ ಪ್ರತಿಕ್ರಿಯೆ, ಬ್ಲಾಕ್ ಸೇರಿದಂತೆ ಕೆಲ ವರದಿಗಳನ್ನು ಆಧರಿಸಿ ವ್ಯಾಟ್ಸ್ಆ್ಯಪ್ ಖಾತೆ ನಿಷೇಧಿಸಲಾಗಿದೆ.