ವಿವಾದಿತ ಖಾಸಗಿತನ ನೀತಿಗೆ ತಡೆ: ವಾಟ್ಸಾಪ್‌ ನಿರ್ಧಾರ!

* ವಾಟ್ಸಾಪ್‌ ಖಾಸಗಿತನ ನೀತಿ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ವ್ಯಾಜ್ಯ 

* ವಿವಾದಿತ ಖಾಸಗಿತನ ನೀತಿಗೆ ತಡೆ: ವಾಟ್ಸಾಪ್‌ ನಿರ್ಧಾರ

* ದತ್ತಾಂಶ ರಕ್ಷಣಾ ಕಾಯ್ದೆ ಜಾರಿವರೆಗೆ ನೀತಿಗೆ ತಡೆ

WhatsApp says privacy policy on hold Shift in stand accounts safe for now pod

ನವದೆಹಲಿ(ಜು.10): ತನ್ನ ವಿವಾದಿತ ಖಾಸಗಿತನ ನೀತಿಗೆ ತಡೆ ನೀಡಲು ಹಾಗೂ ತನ್ನ ನೀತಿಯನ್ನು ಒಪ್ಪಿ ಎಂದು ಬಳಕೆದಾರರ ಮೇಲೆ ಒತ್ತಡ ಹೇರದೇ ಇರಲು ವಾಟ್ಸಾಪ್‌ ನಿರ್ಧರಿಸಿದೆ. ದಿಲ್ಲಿ ಹೈಕೋರ್ಟ್‌ಗೆ ಶುಕ್ರವಾರ ಈ ವಿಷಯವನ್ನು ವಾಟ್ಸಾಪ್‌ ತಿಳಿಸಿದೆ.

ವಾಟ್ಸಾಪ್‌ ಖಾಸಗಿತನ ನೀತಿ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಸಂಬಂಧ ಕಂಪನಿ ಪರ ವಾದ ಮಾಡಿದ ಹಿರಿಯ ವಕೀಲ ಹರೀಶ್‌ ಸಾಳ್ವೆ, ‘ಸರ್ಕಾರದ ದತ್ತಾಂಶ ರಕ್ಷಣಾ ಕಾಯ್ದೆ ಜಾರಿಗೆ ಬರುವ ತನಕ ನಾವು ನಮ್ಮ ಖಾಸಗಿತನ ನೀತಿ ತಡೆಹಿಡಿಯಲು ನಿರ್ಧರಿಸಿದ್ದೇವೆ. ನೀತಿ ಒಪ್ಪಿ ಎಂದು ಬಳಕೆದಾರರಿಗೂ ಬಲವಂತ ಮಾಡುವುದಿಲ್ಲ. ಈ ನಿರ್ಧಾರವನ್ನು ನಾವು ಬಳಕೆದಾರರಿಗೆ ಪ್ರದರ್ಶಿಸಲಿದ್ದೇವೆ’ ಎಂದು ತಿಳಿಸಿದರು.

ಕಳೆದ ವರ್ಷ ವಾಟ್ಸಾಪ್‌, ಖಾಸಗಿತನ ನೀತಿ ಒಪ್ಪಿಕೊಳ್ಳಿ ಎಂದು ಬಳಕೆದಾರರಿಗೆ ತಾಕೀತು ಮಾಡಿತ್ತು. ಮಾಡದೇ ಇದ್ದರೆ ಅಂಥ ಬಳಕೆದಾರರ ಖಾತೆ ನಿಷ್ಕಿ್ರಯಗೊಳುವುದಾಗಿ ಎಚ್ಚರಿಸಿತ್ತು. ಆದರೆ ಈ ನೀತಿ ಒಪ್ಪಿದರೆ ತಮ್ಮ ಖಾಸಗಿತನಕ್ಕೆ ಭಂಗ ಬರಬಹುದು ಎಂದು ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದರು. ವಾಟ್ಸಾಪ್‌ ನೀತಿ ವಿವಾದಕ್ಕೀಡಾಗಿ ಕೋರ್ಟ್‌ ಮೆಟ್ಟಿಲೇರಿತ್ತು.

Latest Videos
Follow Us:
Download App:
  • android
  • ios