* ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಈ ಫೇಕ್‌ ಮೆಸೇಜ್* ಡಿಪಿ ಯಾರು ನೋಡಿದ್ದಾರೆಂದು ಚೆಕ್ ಮಾಡಲು ಹೋಗಿ ಎಡವಟ್ಟು ಮಾಡ್ಕೋಬೇಡಿ* ಸಂದೇಶದಂತೆ ನಡ್ಕೊಂಡ್ರೆ ಗ್ರೂಪಿಂದ ಔಟ್, ಸೇರಿಸೋಕೂ ಆಗಲ್ಲ

ನವದೆಹಲಿ(ಮೇ.31): ವಾಟ್ಸಾಪ್ ಇದೊಂದು ಪುಟ್ಟ ನಮ್ಮದೇ ಆದ ಲೋಕ. ಆರಂಭದಲ್ಲಿ ಹೆಚ್ಚೇನೂ ಫೀಚರ್‌ಗಳಿಲ್ಲದ ಈ ಆಪ್‌ ನೋಡ ನೋಡುತ್ತಿದ್ದಂತೆಯೇ ಬಲು ಫೇಮಸ್‌ ಆಯ್ತು. ದಿನಗಳೆದಂತೆ ಪರಿಚಯಿಸಲಾಗುತ್ತಿರುವ ನೂತನ ಫೀಚರ್‌ಗಳು ಬಳಕೆರದಾರರಿಗೆ Whatsapp ಮತ್ತಷ್ಟು ಹತ್ತಿರವಾಗುವಂತೆ ಮಾಡಿದೆ. ಆದರೀಗ ಈ ವಾಟ್ಸಾಪ್‌ನಲ್ಲಿ ಹೊಸ ಸಂದೇಶವೊಂದು ಹರಿದಾಡಲಾರಂಭಿಸಿದೆ. ಆದರೆ ಎಚ್ಚರ ಇದು ವಾಟ್ಸಾಪ್‌ನ ಹೊಸ ಫೀಚರ್‌ ಎಂದು ಯಾಮಾರಿ ಅಲ್ಲಿರುವ ಮೆಸೇಜ್‌ನಂತೆ ನೀವು ನಡೆದುಕೊಂಡ್ರೆ ಖೆಡ್ಡಾಗೆ ಬೀಳೋದು ಮಾತ್ರ ಸತ್ಯ.

ಕೇಂದ್ರದ ಎಚ್ಚರಿಕೆಗೆ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಥಂಡಾ; ಹೊಸ ನಿಯಮಕ್ಕೆ ಸಮ್ಮತಿ!

ಅಷ್ಟಕ್ಕೂ ಆ ಸಂದೇಶ ಏನು?
ಎಚ್ಚರ, ಈ ಕೆಳಗೆ ನೀಡಿರುವ ಸಂದೇಶ ನಿಮಗೂ ಬರಬಹುದು. ಆದರೆ ಹೀಗೆ ನಡೆದುಕೊಳ್ಳುವ ಮುನ್ನ ಸಂದೇಶವೇನು? ಮುಂದೇನಾಗುತ್ತೆ ಎಂಬ ಬಗ್ಗೆ ತಿಳಿದುಕೊಳ್ಳಿ. ಹರಿದಾಡುತ್ತಿರುವ ವಾಟ್ಸಾಪ್ ಸಂದೇಶ ಹೀಗಿದೆ

ಗುಂಪಿನಲ್ಲಿರುವ ಯಾರಾದರೂ ನಿಮ್ಮ ಪ್ರೊಫೈಲ್ ಅನ್ನು ಜನರು ನೋಡಿದ್ದಾರೆಯೇ ಎಂದು ಕಂಡುಹಿಡಿಯುವುದು ಹೇಗೆ:
* ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳಿಗೆ ಹೋಗಿ
* More ಒತ್ತಿರಿ
* Report ಒತ್ತಿರಿ
* ಮತ್ತೊಮ್ಮೆ report ಒತ್ತಿರಿ
 ನಿಮ್ಮ ಡಿಪಿಯನ್ನು ನೋಡಿದ ಜನರ ಸಂಪೂರ್ಣ ಪಟ್ಟಿಯನ್ನು ಪ್ರದರ್ಶಿಸುತ್ತದೆ.

ಇಂತಹುದ್ದೊಂದು ಸಂದೇಶ ಬಂದರೆ ಅದನ್ನು ನಿರ್ಲಕ್ಷಿಸುವುದೇ ಜಾಣತನ. ಯಾಕೆಂದರೆ ಈ ಸಂದೇಶದಲ್ಲಿರುವಂತೆ ನಿಮ್ಮ ಡಿಪಿಯನ್ನು ಯಾರೆಲ್ಲಾ ನೋಡಿದ್ದಾರೆಂಬ ಕುತೂಹಲದಿಂದ ನೀವು ಹೀಗೆ ನಡೆದುಕೊಂಡ್ರೆ ಏಕಾಏಕಿ ಗ್ರೂಪ್‌ನಿಂದ ಲೆಫ್ಟ್‌ ಆಗುತ್ತೀರಿ. ಅದಕ್ಕೂ ವಿಶೇಷ ವಿಚಾರವೆಂದರೆ ಗ್ರೂಪ್‌ ಅಡ್ಮಿನ್‌ಗಳಿಗೆ ಈ ಪ್ರಕ್ರಿಯೆ ಅನುಸರಿಸಿ ಲೆಫ್ಟ್‌ ಆದವರನ್ನು ಮತ್ತೆ ಗ್ರೂಪ್‌ಗೆ ಸೇರಿಸಲು ಸಾಧ್ಯವಾಗುವುದಿಲ್ಲ. 

ಭಾರತದ ಕಾನೂನಿಗೆ ಗೂಗಲ್ ಬದ್ಧ; ನೂತನ ಡಿಜಿಟಲ್ ನಿಯಮ ಕುರಿತು ಸುಂದರ್ ಪಿಚೈ ಸ್ಪಷ್ಟನೆ!

ಈಗಾಗಲೇ ಅನೇಕರು ಈ ಸಂದೇಶಕ್ಕೆ ಯಾಮಾರಿ ಗ್ರೂಪ್‌ಗಳಿಂದ ಲೆಫ್ಟ್‌ ಆಗಿದ್ದಾರೆ. ಅರಿವಿಲ್ಲದೇ ಮಾಡಿದ ಎಡವಟ್ಟಿನಿಂದಾಗಿ ಮತ್ತೆ ಗ್ರೂಪ್‌ಗೆ ಜಾಯಿನ್‌ ಆಗಲು ಸಾಧ್ಯವಾಗದೇ ಪರದಾಡಲಾರMಭಿಸಿದ್ದಾರೆ. ಅಡ್ಮಿನ್‌ಗಳಿಗೆ ತಮ್ಮನ್ನು ಮತ್ತೆ ಸೇರಿಸಲೂ ಆಗುತ್ತಿಲ್ಲ ಎಂದು ತಿಳಿಯದೇ, ದಯವಿಟ್ಟು ನಮ್ಮನ್ನು ಮತ್ತೆ ಗ್ರೂಪ್‌ಗೆ ಸೇರಿಸಿ ಎಂದು ವೈಯುಕ್ತಿಕವಾಗಿ ಸಂದೇಶ ಕಳುಹಿಸಿದ ಪ್ರಸಂಗಗಳೂ ಬೆಳಕಿಗೆ ಬಂದಿವೆ. ಬಹುತೇಕ ಎಲ್ಲ ಗ್ರೂಪ್‌ಗಳ ಕತೆ ಹೀಗೇ ಆಗಿದೆ. 

ಆದರೆ ಎಲ್ಲಾ ಸಮಸ್ಯೆಗೂ ಯಾವುದಾದರೂ ಒಂದು ಪರಿಹಾರವಿರುತ್ತದೆ. ಹಾಗೆಯೇ ಗ್ರೂಪ್‌ಗೆ ಸೇರಿಸಲು ಅಡ್ಮಿನ್‌ಗೆ ಸಾಧ್ಯವಾಗುತ್ತಿಲ್ಲವಾದರೂ, ಗ್ರೂಪ್‌ಗೆ ಜಾಯಿನ್ ಆಗುವ ಲಿಂಕ್ ಬಳಸಿ ಮತ್ತೆ ನೀವು ಸೇರಬಹುದು. ಆದರೆ ಇಂತಹುದ್ದೊಂದು ಮಾರ್ಗ ಇದೆಯಲ್ವೇ ಎಂದು ಈ ಸಂದೇಶ ಪರೀಕ್ಷಿಸಲು ಹೋಗ್ಬೇಡಿ. ಇದು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತಾಗುತ್ತದೆ. ಹೀಗಾಗಿ ಯಾವುದೇ ಸಂದೇಶ ಬರುವ ಮುನ್ನ ಅದು ನಿಜಾನಾ ಎರಂಬುವುದನ್ನು ಖಾತ್ರಿಪಡಿಸಿ ಮುಂದುವರೆಯಿರಿ.