18ರ ಪೋರನಿಂದ Uber ಡೇಟಾ ಹ್ಯಾಕ್, ಜೋಕ್ ಎಂದು ಸುಮ್ಮನಿದ್ದ ಉದ್ಯೋಗಿಗಳಿಗೆ ಶಾಕ್!

ಇತ್ತೀಚೆಗೆ ಸೈಬರ್ ಸೆಕ್ಯೂರಿಟಿ ಅತ್ಯಂತ ಸವಾಲಾಗಿ ಪರಿಣಮಿಸಿದೆ. ಇದೀಗ ಉಬರ್ ಡೇಟಾ ಹ್ಯಾಕ್ ಮಾಡಿದ ಘಟನೆ ವರದಿಯಾಗಿದೆ. ಆರಂಭದಲ್ಲಿ ಜೋಕ್ ಎಂದು ಸುಮ್ಮನಿದ್ದ ಉಬರ್ ಉದ್ಯೋಗಿಳಿಗೆ ಅಸಲಿಯತ್ತು ತಿಳಿದಾಗ ಶಾಕ್ ಆಗಿದೆ. 

18 year old hack uber internal communications Company issues high alert and investigating cyber security ckm

ನವದೆಹಲಿ(ಸೆ.16): ವಿಶ್ವದ ಅತೀ ದೊಡ್ಡ ಟ್ಯಾಕ್ಸಿ ಸರ್ವೀಸ್ ಉಬರ್ ಒಂದು ಕ್ಷಣ ಬೆಚ್ಚಿ ಬಿದ್ದಿದೆ. ಕಾರಣ ಹ್ಯಾಕರ್ಸ್. ಆರಂಭದಲ್ಲಿ ಇದು ಜೋಕ್, ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ನಕಲಿ ಮೆಸೇಜ್ ಎಂದು ಸುಮ್ಮನಿದ್ದ ಉಬರ್ ಅಸಲಿ ವಿಚಾರ ತಿಳಿದಾಗ ಶಾಕ್ ಆಗಿದೆ. ಇಷ್ಟೇ ಅಲ್ಲ ತಕ್ಷಣವೇ ಸೈಬೆರ್ ಸೆಕ್ಯೂರಿಟಿಕೆ ಮಾಹಿತಿ ನೀಡಿದೆ. ಇಷ್ಟೇ ಅಲ್ಲ ತನಿಖೆಗೂ ಆದೇಶಿಸಿದೆ. ಉಬರ್ ಆಂತರಿಕ ಸಂವಹನ ಸಿಸ್ಟಮ್, ಎಂಜಿನಿಯರ್ ಸಿಸ್ಟಮ್ ಸೇರಿದಂತೆ ಉಬರ್ ಬಹುತೇಕ ಡೇಟಾಗಳು ಹ್ಯಾಕ್ ಆಗಿದೆ ಎಂದು ಉಬರ್ ದೂರು ನೀಡಿದೆ. ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಉಬರ್ ಕಂಪನಿಯ ಉದ್ಯೋಗಿಗಳ ಸ್ಲಾಕ್ ಆ್ಯಪ್‌ನ್ನೇ ಹ್ಯಾಕ್ ಮಾಡಲಾಗಿದೆ. ಬಳಿಕ ಉದ್ಯೋಗಿಳಿಗೆ ಸಂದೇಶ ರವಾನಿಸಲಾಗಿದೆ. ತಾನು ಉಬರ್ ಆಡಳಿತ ಮಂಡಳಿ ಸದಸ್ಯ ಎಂದು ಸಂದೇಶ ಕಳುಹಿಸಿದ್ದಾನೆ. ಉಬರ್ ಚಾಲಕರಿಗೆ ಕಡಿಮೆ ಸಂಬಳ ನೀಡುತ್ತಿದೆ ಎಂದು ಹೇಳಿಕೊಂಡು ಉಬರ್ ಆಂತರಿಕ ಡೇಟಾಗಳನ್ನು ಬಹಿರಂಗ ಪಡಿಸಲಾಗಿದೆ. ಉಬರ್ ಉದ್ಯೋಗಿಗಳಿಗೆ ಸತತವಾಗಿ ರಹಸ್ಯ ಮಾಹಿತಿಗಳು ಬರತೊಡಗಿದೆ. ಇವೆಲ್ಲಾ ಜೋಕ್ ಎಂದು ಉದ್ಯೋಗಿಗಳು ಸುಮ್ಮನಾಗಿದ್ದಾರೆ. ಆದರೆ ಕೆಲ ಆತಂರಿಕ ವಿಚಾರ ಬಹಿರಂಗವಾಗುತ್ತಿದ್ದಂತೆ ಉದ್ಯೋಗಿಗಳು ಕಂಪನಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆ್ಯಪ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. 

ಉಬರ್(Uber hack) ಡೇಟಾ, ಆ್ಯಪ್ ಸೇರಿದಂತೆ ಬಹುತೇಕ ಗೌಪ್ಯ ಮಾಹಿತಿಗಳು, ಸೆಕ್ಯೂರಿಟಿಗಳನ್ನು ಹ್ಯಾಕ್ ಮಾಡಿರುವುದು 18ರ ಹರೆಯದ ಯುವಕ. ತಾನು ಹ್ಯಾಕರ್,ವಯಸ್ಸು 18 ಎಂದು ಹೇಳಿಕೊಂಡಿದ್ದಾನೆ.  ಉಬರ್ ಹ್ಯಾಕಿಂಗ್(Uber Slack App) ಮಾಹಿತಿ ತಿಳಿಯುತ್ತಿದ್ದಂತೆ ಉಬರ್ ಆಡಳಿತ ಮಂಡಳಿ ಸೈಬರ್ ಸೆಕ್ಯೂರಿಟಿ(Cyber Security) ಮೊರೆ ಹೋಗಿದೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಉಬರ್ ಹೇಳಿದೆ.

 

Facebook Hacked..? ಸೆಲೆಬ್ರಿಟಿ ಪೋಸ್ಟ್‌ಗಳನ್ನು ಮಾತ್ರ ತೋರಿಸುತ್ತಿದ್ದ ಮೆಟಾ..!

ಹ್ಯಾಕಿಂಗ್ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತದಲ್ಲಿ ಹ್ಯಾಕಿಂಗ್ ಎಗ್ಗಿಲ್ಲದೆ ನಡೆಯತ್ತಿದೆ. 

ಲಡಾಖ್‌ನ 7 ವಿದ್ಯುತ್‌ ಗ್ರಿಡ್‌ ಹ್ಯಾಕ್‌ಗೆ ಚೀನಾ ಯತ್ನ
ಚೀನಾದವರು ಭಾರತದ ಮೇಲೆ ಕೇವಲ ಗಡಿ ತಂಟೆಯ ಮೂಲಕವಷ್ಟೇ ಅಲ್ಲ, ವಿದ್ಯುತ್‌ ಗ್ರಿಡ್‌ಗಳ ಮೇಲೂ ‘ದಾಳಿ’ ನಡೆಸಲು ಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ. ಚೀನಾ ಗಡಿ ತಗಾದೆಯ ಪ್ರಮುಖ ಕೇಂದ್ರವಾಗಿರುವ ಗಡಿ ಪ್ರದೇಶ ಲಡಾಖ್‌ ಹಾಗೂ ಉತ್ತರ ಭಾರತದಲ್ಲಿನ 7 ಪವರ್‌ ಗ್ರಿಡ್‌ಗಳ ತಂತ್ರಾಂಶಕ್ಕೆ ಚೀನಿ ಹ್ಯಾಕರ್‌ಗಳು ಕನ್ನ ಹಾಕಿ, ವಿದ್ಯುತ್‌ ಪೂರೈಕೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸಿದ್ದಾರೆ. ಆದರೆ ಈ ಯತ್ನ ವಿಫಲವಾಗಿದೆ. ‘ರೆಕಾರ್ಡೆಡ್‌ ಫ್ಯೂಚರ್’ ಎಂಬ ಖಾಸಗಿ ಗುಪ್ತಚರ ಸಂಸ್ಥೆ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ವರದಿ ಪ್ರಕಟಿಸಿದೆ. ಹ್ಯಾಕಿಂಗ್‌ ಯತ್ನ ನಡೆದಿದ್ದನ್ನು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಕೂಡ ಖಚಿತಪಡಿಸಿದ್ದಾರೆ.

ವ್ಯಾಟ್ಸ್ಆ್ಯಪ್‌ಗೆ ಬಂತು ಲಿಂಕ್, ಕ್ಲಿಕ್ ಮಾಡಿದ ನಿವೃತ್ತ ಶಿಕ್ಷಕಿಯ ಖಾತೆಯಿಂದ 21 ಲಕ್ಷ ರೂಪಾಯಿ ಗುಳುಂ!

ಕೇಂದ್ರ ಸಾಂಖ್ಯಿಕ ಸಚಿವಾಲಯದ ಟ್ವೀಟರ್‌ ಖಾತೆ ಹ್ಯಾಕ್‌
ಕೇಂದ್ರ ಅಂಕಿ ಅಂಶಗಳ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಟ್ವೀಟರ್‌ ಖಾತೆಯನ್ನು ಹ್ಯಾಕರ್‌ಗಳು ಗುರುವಾರ ಹ್ಯಾಕ್‌ ಮಾಡಿದ್ದಾರೆ. 40 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದ ಟ್ವೀಟರ್‌ಅನ್ನು ಹ್ಯಾಕ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಅಧಿಕಾರಿಗಳು ಸರಿಪಡಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಹ್ಯಾಕ್‌ ಮಾಡಿದ ನಂತರ ಹ್ಯಾಕರ್‌ಗಳು ಕೆಲವು ಟ್ವೀಟ್‌ಗಳಿಗೆ ಮರು ಟ್ವೀಟ್‌ ಮಾಡಿದ್ದಾರೆ. ಆದರೆ ಯಾವುದೇ ಹೊಸ ಟ್ವೀಟ್‌ ಮಾಡಿಲ್ಲ ಎಂದು ಸೈಬರ್‌ ಕ್ರೈಂ ಅಧಿಕಾರಿಗಳು ತಿಳಿಸಿದ್ದಾರೆ. ಸಚಿವಾಲಯವು ಹಣದುಬ್ಬರ ಸೂಚ್ಯಂಕ ಸೇರಿದಂತೆ ಇನ್ನಿತರ ಡೇಟಾಗಳನ್ನು ಪ್ರಕಟಿಸುತ್ತದೆ. ಕೆಲವು ದಿನಗಳ ಹಿಂದೆ ಹ್ಯಾಕರ್‌ಗಳು ನರೇಂದ್ರ ಮೋದಿ ಹಾಗೂ ಜೆ.ಪಿ. ನಡ್ಡಾ ಅವರ ಟ್ವೀಟರ್‌ ಖಾತೆಗಳನ್ನೂ ಹ್ಯಾಕ್‌ ಮಾಡಿದ್ದರು.

Latest Videos
Follow Us:
Download App:
  • android
  • ios