Asianet Suvarna News Asianet Suvarna News

Tarot Readings: ಸಾಲಬಾಧೆಗೆ ಮುಕ್ತಿ; ಈ ರಾಶಿಯವರ ಜೀವನ ಚೇಂಜ್..!

ಟ್ಯಾರೋ ಕಾರ್ಡ್ ಎಲ್ಲ ರಾಶಿಗಳ ಈ ವಾರದ ಭವಿಷ್ಯವನ್ನು ಸೂಚಿಸಿದೆ. ಅಂತೆಯೇ ಈ ವಾರ 31ನೇ ಜುಲೈನಿಂದ 06ನೇ ಆಗಷ್ಟ್ 2023ವರೆಗೆ ನೆಮ್ಮದಿಯ ಬದುಕಿಗಾಗಿ ಏನು ಮಾಡಬಾರದು, ಏನು ಮಾಡಬೇಕು ಎಂಬುದನ್ನೂ ತಿಳಿಸಿದೆ. ಈ ಕುರಿತು ಇಲ್ಲಿದೆ ಮಾಹಿತಿ.

Weekly Tarot Readings from 31th July to 6th august 2023 suh
Author
First Published Jul 30, 2023, 9:56 AM IST

ಮೇಷ ರಾಶಿ  (Aries) ACE OF WANDS

ನಿಮ್ಮ ವೈಯಕ್ತಿಕ ಪ್ರಗತಿಯನ್ನು ಹೆಚ್ಚಾಗಲಿದೆ. ನಿಮ್ಮ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀವು ಶೀಘ್ರದಲ್ಲೇ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಸಕಾರಾತ್ಮಕ ಮತ್ತು ನಿರೀಕ್ಷಿತ ಸಂಬಂಧವು ಇದ್ದಕ್ಕಿದ್ದಂತೆ ಪ್ರಾರಂಭವಾಗಬಹುದು. ಮಲಬದ್ಧತೆಯಿಂದ ಬಳಲುವ ಸಾಧ್ಯತೆ ಇದೆ. ಆಹಾರದ ಬಗ್ಗೆ ಸಾಕಷ್ಟು ಗಮನ ಹರಿಸಿ.

ವೃಷಭ ರಾಶಿ  (Taurus): KING OF SWORDS

ನೀವು ಜನರಿಗೆ ಮಾಡಿದ ಕಠಿಣ ವರ್ತನೆಗೆ ನೀವು ವಿಷಾದಿಸಬಹುದು. ನಿಮ್ಮ ಸ್ವಭಾವವನ್ನು ಬದಲಾಯಿಸಲು ನೀವು ಪ್ರಯತ್ನಿಸಬೇಕು. ನಿಮ್ಮ ಕೋಪವನ್ನು ಬೇರೆಯವರ ಮೇಲೆ ವ್ಯಕ್ತಪಡಿಸಲು ಪ್ರಯತ್ನಿಸುತ್ತೀರಿ. ಇದು ನೀವಿಬ್ಬರು ಮಾನಸಿಕ ತೊಂದರೆಗೆ ಒಳಗಾಗುವಂತೆ ಮಾಡುತ್ತದೆ. 

ಮಿಥುನ ರಾಶಿ (Gemini): SEVEN OF SWORDS

ಅನಿಶ್ಚಿತ ವೆಚ್ಚಗಳು ನಿಮ್ಮನ್ನು ಚಿಂತೆಗೀಡುಮಾಡುತ್ತವೆ. ಕೆಲವು ಮಾನಸಿಕ ಕಿರಿಕಿರಿ ಇರುತ್ತದೆ. ಪ್ರತಿ ಸಣ್ಣ ವಿಷಯವನ್ನು ನಿಯಂತ್ರಿಸುವ ಒತ್ತಾಯವು ನಿಮಗೆ ಕೋಪ ತರುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಪಾರ್ಟ್ನರ್‌ಗಳಿಂದ ಹಾನಿಯಾಗಲಿದೆ. 

ಕಟಕ ರಾಶಿ  (Cancer): SEVEN OF CUPS

ಕೆಲವು ವಿಷಯಗಳಲ್ಲಿ ಅಸಮಾಧಾನ ಮೂಡಿ, ನಿಮಗೆ ನಿರಾಸಕ್ತಿ ಉಂಟಾಗಲಿದೆ. ವಿಭಿನ್ನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಜೀವನವು ನಿಮ್ಮನ್ನು ಪ್ರೇರೇಪಿಸುತ್ತದೆ. ಕೆಲವು ಕೆಲಸದಲ್ಲಿ ಬದಲಾವಣೆ ಇರಲಿದೆ.

ಈ ರಾಶಿಯವರಿಗೆ ಹನುಮಾನ್‌ ಮತ್ತು ಶನಿಯ ಅನುಗ್ರಹ ಇದೆ; ಇವರು ಎಲ್ಲಾ ತೊಂದರೆಗಳಿಂದ ಮುಕ್ತ..!

 

ಸಿಂಹ ರಾಶಿ  (Leo): JUSTICE

ಇಂದು ಸ್ನೇಹಿತರೊಂದಿಗಿನ ವಿವಾದಗಳನ್ನು ಪರಿಹರಿಸಿ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ಕ್ರಮೇಣ ಮಾಯವಾಗುತ್ತವೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಂದ
ಸೂಕ್ತವಾದ ವೃತ್ತಿಗೆ ಸಂಬಂಧಿತ ಅವಕಾಶಗಳು ದೊರೆಯಲಿವೆ.

ಕನ್ಯಾ ರಾಶಿ (Virgo): JUDGMENT

ಕೆಲವು ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ನಿಮ್ಮದನ್ನು ಎಂದಿಗೂ ಇತರರೊಂದಿಗೆ ಹೋಲಿಸಬೇಡಿ. ಕೆಲವು ವಿಷಯಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಮುಖ್ಯ ಆಗಲಿವೆ. ಹೊಟ್ಟೆ ಉರಿಯಿಂದ ತೊಂದರೆ ಉಂಟಾಗುತ್ತದೆ.

ತುಲಾ ರಾಶಿ (Libra): THREE OF CUPS

ನಿಮ್ಮನ್ನು ಖಿನ್ನತೆಗೆ ಒಳಪಡಿಸುತ್ತಿದ್ದ ವಿಷಯಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ. ಕುಟುಂಬದೊಂದಿಗೆ ಪಾರ್ಟಿ ಅಥವಾ ಪಿಕ್ನಿಕ್ ಪ್ಲಾನ್ ಮಾಡುವಿರಿ. ಜನರೊಂದಿಗೆ ಸಾಮರಸ್ಯವನ್ನು ಕಾಣಿಸಿಕೊಳ್ಳುತ್ತೀರಿ. ನಿಮ್ಮ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯಗಳಲ್ಲಿ ಪ್ರಗತಿ ಆಗಲಿದೆ.

ವೃಶ್ಚಿಕ ರಾಶಿ (Scorpio): ACE OF CUPS

ನಿಮ್ಮ ಪ್ರಯತ್ನಗಳ ಪ್ರಕಾರ ಫಲಿತಾಂಶಗಳು ಬರದಿರಬಹುದು, ಆದರೆ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ. ನೀವು ಚಿಂತಿಸುತ್ತಿದ್ದ ವಿಷಯಗಳನ್ನು ಜಯಿಸಲು ನೀವು ಪರಿಚಿತ ವ್ಯಕ್ತಿಯ ಸಹಾಯವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಧನು ರಾಶಿ (Sagittarius): QUEEN OF PENTACLES

ಹಣಕ್ಕೆ ಸಂಬಂಧಿಸಿದ ವ್ಯವಹಾರಗಳು ಯಶಸ್ವಿಯಾಗುತ್ತವೆ. ನೀವು ಸಣ್ಣ ತಪ್ಪನ್ನು ಮಾಡುವ ಸಾಧ್ಯತೆಯಿದೆ, ಇದರಿಂದ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ಆದ್ದರಿಂದ
ಈಗಿನಿಂದಲೇ ಜಾಗರೂಕರಾಗಿರಬೇಕು.

ಮಕರ ರಾಶಿ (Capricorn): SEVEN OF CUPS

ಇಂದು ನೀವು ಸಮಸ್ಯೆಗಳನ್ನು ಹೇಗೆ ಎದುರಿಸುವಿರಿ ಎಂಬುದು ಮುಖ್ಯವಾಗಿದೆ. ಹಳೆಯ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸಿ. ಅತಿಯಾಗಿ ಯೋಚಿಸುವ ಮೂಲಕ ನೀವು ಸಮಸ್ಯೆಗಳನ್ನು ಸೃಷ್ಟಿಸಬಹುದು.

ಶನಿ ಪ್ರಭಾವದ ರಾಶಿಗಳು; ವೃತ್ತಿಪರ ಜೀವನದಲ್ಲಿ ಸಮಸ್ಯೆ, ಕೊನೆಯಲ್ಲಿ ಯಶಸ್ಸು..!

 

ಕುಂಭ ರಾಶಿ (Aquarius): SEVEN OF WANDS

ಯೋಜನಾಬದ್ಧತೆ ಮತ್ತು ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಅವಶ್ಯಕತೆ ಇರುತ್ತದೆ, ಇಲ್ಲವಾದಲ್ಲಿ ಒತ್ತಡ ಉಂಟಾಗುತ್ತದೆ. ಬೇರೆ ಜನರಿಂದಾಗಿ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಬಹುದು.

ಮೀನ ರಾಶಿ  (Pisces): KNIGHT OF CUPS

ಪ್ರತಿಯೊಂದು ಸಂದರ್ಭದಲ್ಲೂ ತಾಳ್ಮೆಯನ್ನು ತೋರಿಸಬೇಕು. ಇದರಿಂದ ನಿಮ್ಮಲ್ಲಿ ಮಹತ್ತರವಾದ ಬದಲಾವಣೆ ಕಂಡುಬರುತ್ತದೆ. ಜನರ ಅಭಿನಂದನೆಗಳು ಮತ್ತು ಸಲಹೆಗಳೆರಡಕ್ಕೂ ಗಮನ ಕೊಡಿ. ನಿಮ್ಮ ಆಂತರಿಕ ಆತ್ಮವಿಶ್ವಾಸ ಹೆಚ್ಚುತ್ತದೆ.

Follow Us:
Download App:
  • android
  • ios