ಶನಿ ಪ್ರಭಾವದ ರಾಶಿಗಳು; ವೃತ್ತಿಪರ ಜೀವನದಲ್ಲಿ ಸಮಸ್ಯೆ, ಕೊನೆಯಲ್ಲಿ ಯಶಸ್ಸು..!

ಜ್ಯೋತಿಷ್ಯದ ಪ್ರಕಾರ ಗ್ರಹಗಳು ಮನುಷ್ಯನ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಜೀವನದಲ್ಲಿ ಏನಾದರೂ ಸರಿಯಾಗದಿದ್ದರೆ ಅಥವಾ ಕೆಲವು ವಿಷಯಗಳು ಅಸ್ತವ್ಯಸ್ತವಾಗಿದ್ರೆ, ಆಗ ಶನಿಯ  ಪ್ರಭಾವವಿರಬಹುದು ಎನ್ನುತ್ತಾರೆ. ಶನಿಯಿಂದ ಶುಭ ಫಲಗಳೂ ದೊರೆಯುತ್ತವೆ.

how shani affects life of zodiac signs how can we move forward suh

ಜ್ಯೋತಿಷ್ಯ (Astrology) ದ ಪ್ರಕಾರ ಗ್ರಹಗಳು ಮನುಷ್ಯನ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಜೀವನದಲ್ಲಿ ಏನಾದರೂ ಸರಿಯಾಗದಿದ್ದರೆ ಅಥವಾ ಕೆಲವು ವಿಷಯಗಳು ಅಸ್ತವ್ಯಸ್ತವಾಗಿದ್ರೆ, ಆಗ ಶನಿಯ  ಪ್ರಭಾವವಿರಬಹುದು ಎನ್ನುತ್ತಾರೆ. ಶನಿ (Sat) ಯಿಂದ ಶುಭ ಫಲಗಳೂ ದೊರೆಯುತ್ತವೆ.

ಸೌರವ್ಯೂಹ (solar system) ದಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹ. ಇದು ಎರಡೂವರೆ ತಿಂಗಳಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬದಲಾಗುತ್ತದೆ. ಆದ್ದರಿಂದ ಶನಿಯು 12 ರಾಸಿಗಳ ಒಂದು ಚಕ್ರವನ್ನು ಪೂರ್ಣಗೊಳಿಸಲು ಸುಮಾರು 30 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಶನಿಯು ಮನುಷ್ಯನ ಹೇಗೆ ಪ್ರಭಾವ ಬೀರುತ್ತಾನೆ? ಹಾಗೂ ಅದರಿಂದ ಯಾವ ರಾಶಿಯವರಿಗೆ ಎಲ್ಲಿ ಲಾಭವಿದೆ ಎಂಬ ಮಾಹಿತಿ ಇಲ್ಲಿದೆ.

ಮೇಷ ರಾಶಿ (Aries )

ಮೇಷ ರಾಶಿಯ ಜನರು ಶನಿಯ ಪ್ರಭಾವದಿಂದ ವೃತ್ತಿಪರ ಜೀವನ (Professional life) ದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ವಿಶೇಷವಾಗಿ ವೃತ್ತಿಪರ ಜೀವನದಲ್ಲಿ ನೀವು ಸ್ವಲ್ಪ ಕಾಯಬೇಕಾಗಬಹುದು ಅಥವಾ ಎಲ್ಲದಕ್ಕೂ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು  ಆದರೆ ನಿಮ್ಮ ಕುಂಡಲಿಯಲ್ಲಿ ಧನಾತ್ಮಕ ಶನಿ ಇದ್ದರೆ, ನೀವು ಶಾಶ್ವತ ಮತ್ತು ದೀರ್ಘಕಾಲೀನ ಯಶಸ್ಸ (Long-term success) ನ್ನು ಪಡೆಯುತ್ತೀರಿ. ಹಣದ ವಿಚಾರದಲ್ಲಿ ನೀವು ಜಾಗರೂಕರಾಗಿರಿ. ಇದಲ್ಲದೆ ನೀವು ಸ್ವಲ್ಪ ವಿಳಂಬದೊಂದಿಗೆ ನಿಮ್ಮ ಹಣಕ್ಕೆ ಸಂಬಂಧಿಸಿದ ಗುರಿಗಳನ್ನು ಸಾಧಿಸುವಿರಿ. ಶನಿ ಧನಾತ್ಮಕವಾಗಿದ್ದರೆ, ನೀವು ಕಠಿಣ ಪರಿಣಶ್ರಮದಿಂದ ಪ್ರಗತಿಯನ್ನು ಸಾಧಿಸಬಹುದು. 

ಶುಕ್ರನ ಹಿಮ್ಮುಖ ಚಲನೆ; ನಿಮ್ಮಿಂದ 'ಭಾಗ್ಯಲಕ್ಷ್ಮಿ' ದೂರ..!

 

ವೃಷಭ ರಾಶಿ (Taurus)

ಶನಿಯಿಂದಾಗಿ ನೀವು ಜೀವನದಲ್ಲಿ ಅಧ್ಯಯನದ ಬಗ್ಗೆ ಗಂಭೀರವಾಗಿರಲು ಸಾಧ್ಯವಾಗುತ್ತದೆ ಮತ್ತು ಜ್ಞಾನವನ್ನು ಪಡೆಯುವ ಹಂಬಲವನ್ನು ಹೊಂದಿರುತ್ತೀರಿ. 
ಶನಿಯು ತಾತ್ವಿಕ ಮತ್ತು ಆಧ್ಯಾತ್ಮಕ ವಿಷಯ (Theological matter) ಗಳನ್ನು ಅನ್ವೇಷಿಸಲು ನಿಮಗೆ ಆಸಕ್ತಿಯನ್ನುಂಟು ಮಾಡುತ್ತದೆ. ಮತ್ತು ಧರ್ಮಕ್ಕೆ ನಿಮ್ಮ ವಿಧಾನವು ಸಾಂಪ್ರದಾಯಿಕವಾಗಿರಬಹುದು. ವೃಷಭ ರಾಶಿಯ ಜನರು ಶನಿಗ್ರಹದಿಂದ ಮಾತ್ರ ಅವರು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. ವೃತ್ತಿಪರ ಜೀವದಲ್ಲಿ ಸ್ಥಿರತೆ ಮತ್ತು ಭದ್ರತೆ ಎರಡೂ ಶನಿಯಿಂದ ಉಂಟಾಗುತ್ತದೆ. ಕೆಲಸಗಳನ್ನು ಮಾಡಲು ನೀವು ಸ್ವಲ್ಪ ತಾಳ್ಮೆಯನ್ನು ಹೊಂದಿರಬೇಕು.

ಮಿಥುನ ರಾಶಿ (Gemini)

ಈ ಜನರಲ್ಲಿ ಶನಿಯಿಂದ ವೈಯಕ್ತಿಕ ಪರಿವರ್ತನೆ ಸಂಭವಿಸುತ್ತದೆ ಅಥವಾ ನೀವು ಆಧ್ಯಾತ್ಮಿಕತೆಯತ್ತ ವಾಲುತ್ತೀರಿ. ಇದು ಹಳೆಯ ಸಂಪ್ರದಾಯ (tradition) ಮತ್ತು ನಂಬಿಕೆಗಳನ್ನು ಅನುಸರಿಸುವುದನ್ನು ಒಳಗೊಂಡಿರುತ್ತದೆ. ನಿಮ್ಮ ಶನಿಯು ಉತ್ತಮವಾಗಿದ್ದರೆ, ನೀವು ಶಿಸ್ತು ಮತ್ತು ಗಂಭೀರತೆ (Seriousness) ಯಿಂದ ಅಧ್ಯಯನದಲ್ಲಿ ಮುಂದುವರಿಯುತ್ತೀರಿ, ಮಾತ್ರವಲ್ಲ ನೀವು ಆಳವಾದ ಅಧ್ಯಯನದ ಕಡೆಗೆ ಒಲವು ತೋರುತ್ತೀರಿ.

ಪ್ರಕೃತಿ ವಿಕೋಪಕ್ಕೆ ಕಾರಣವೇ 'ಸಂಸಪ್ತಕ ಯೋಗ': ಈ ಆರು ರಾಶಿಯವರಿಗಂತೂ ಇದು 'ಸಂಕಷ್ಟ' ಕಾಲ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios