ಟ್ಯಾರೋ ಕಾರ್ಡ್ ಎಲ್ಲ ರಾಶಿಗಳ ಈ ವಾರದ ಭವಿಷ್ಯವನ್ನು ಸೂಚಿಸಿದೆ. ಅಂತೆಯೇ ಈ ವಾರ 21 ಆಗಸ್ಟ್‌ನಿಂದ 27ನೇ ಆಗಸ್ಟ್ 2023ರವರೆಗೆ ನೆಮ್ಮದಿಯ ಬದುಕಿಗಾಗಿ ಏನು ಮಾಡಬಾರದು, ಏನು ಮಾಡಬೇಕು ಎಂಬುದನ್ನೂ ತಿಳಿಸಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಮೇಷ ರಾಶಿ (Aries) : SEVEN OF CUPS

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೀವು ವಿಭಿನ್ನ ದೃಷ್ಟಿಕೋನ ಅಳವಡಿಕೊಳ್ಳಬೇಕು. ಇತರರ ಮಾತುಗಳು ನಿಮ್ಮ ಆಲೋಚನೆಗಳಿಗೆ ಹೊಸ ದಿಕ್ಕನ್ನು ನೀಡುತ್ತವೆ. ಅದು ಕೆಲಸದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಕಷ್ಟಕರವಾದ ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ವೃವೃಷಭ ರಾಶಿ (Taurus): KNIGHT OF CUPS

ಪ್ರತಿಯೊಂದು ಸಂದರ್ಭದಲ್ಲೂ ತಾಳ್ಮೆಯಿಂದ ಇರುವುದನ್ನು ಕಲಿಯಿರಿ. ಇದರಿಂದ ನಿಮ್ಮಲ್ಲಿ ಮಹತ್ತರವಾದ ಬದಲಾವಣೆ ಕಂಡುಬರುತ್ತದೆ. ನೀವು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ, ನಿಮ್ಮ ಆಧ್ಯಾತ್ಮಿಕ ಪ್ರಗತಿ ಹೆಚ್ಚಾಗುತ್ತದೆ. ನಿಮ್ಮ ಆಂತರಿಕ ಆತ್ಮವಿಶ್ವಾಸ ಹೆಚ್ಚುತ್ತದೆ.

ಮಿಥುನ ರಾಶಿ (Gemini) : JUSTICE

ನಿಮ್ಮ ಪ್ರಯತ್ನಗಳಿಗೆ ಅನುಗುಣವಾಗಿ ಫಲಿತಾಂಶಗಳು ಬರಲಿವೆ, ಇದರಿಂದ ನಿಮಗೆ ನಿರ್ಣಯದ ಮಹತ್ವ ಗೊತ್ತಾಗಲಿದೆ. ಸ್ನೇಹಿತರೊಂದಿಗಿನ ವಿವಾದಗಳನ್ನು ಪರಿಹರಿಸಿ, ಪರಸ್ಪರ ಸಾಮರಸ್ಯ ಕಾಪಾಡಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ಕ್ರಮೇಣ ಮಾಯವಾಗುತ್ತವೆ. ಯಾವುದೇ ತಪ್ಪಾಗಿದ್ದರೆ ಸರಿಪಡಿಸಲು ಪ್ರಯತ್ನಿಸಲಾಗುವುದು.

ಕಟಕ ರಾಶಿ (Cancer) : JUDGMENT

ನೀವು ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ಗಳಿಸುವಿರಿ. ಇತರರೊಂದಿಗೆ ನಿಮ್ಮ ಪ್ರಗತಿಯನ್ನು ಎಂದಿಗೂ ಹೋಲಿಸಬೇಡಿ. ನೀವು ತೆಗೆದುಕೊಳ್ಳುವ ನಿರ್ಧಾರದಿಂದಾಗಿ ಇತರರಿಗೆ ಆಶ್ಚರ್ಯವಾಗಬಹುದು. ಹೊಟ್ಟೆ ನೋವಿನಿಂದ ತೊಂದರೆ ಉಂಟಾಗುತ್ತದೆ.

ಮಗನ ಸಾಧನೆಗೆ ಮೂಕಳಾದ ತಾಯಿ, ವೈರಲ್ ಆಯ್ತು ಫೋಟೋ, ಯಾರು ಈ ಪ್ರಜ್ಞಾನಂದ..?

ಸಿಂಹ ರಾಶಿ (Leo) : ACE OF WANDS

ನಿಮ್ಮ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀವು ಶೀಘ್ರದಲ್ಲೇ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನೀವುಎಲ್ಲಾ ರೀತಿಯ ಅವಕಾಶಗಳಿಗೆ ಸಿದ್ಧರಾಗಿರಿ. ಜೀವನದಲ್ಲಿ ಸಕಾರಾತ್ಮಕ ಮತ್ತು ನಿರೀಕ್ಷಿತ ಸಂಬಂಧವು ಇದ್ದಕ್ಕಿದ್ದಂತೆ ಪ್ರಾರಂಭವಾಗಬಹುದು. ಮಲಬದ್ಧತೆಯಿಂದ ಬಳಲುವ ಸಾಧ್ಯತೆ ಇದೆ.

ಕನ್ಯಾ ರಾಶಿ (Virgo) : SEVEN OF SWORDS

ಅನಿಶ್ಚಿತ ವೆಚ್ಚಗಳು ನಿಮ್ಮನ್ನು ಚಿಂತೆಗೀಡುಮಾಡುತ್ತವೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವುದು ಹಾನಿಯನ್ನುಂಟುಮಾಡುತ್ತದೆ. ಹೊಸ ವ್ಯಕ್ತಿಯೊಂದಿಗಿನ ವ್ಯಾಪಾರ ಆರಂಭಿಸುವ ಮೊದಲು ಒಮ್ಮೆ ಯೋಚನೆ ಮಾಡಿ. ಊತದಿಂದಾಗಿ ಪಾದಗಳಲ್ಲಿ ತೊಂದರೆ ಇರುತ್ತದೆ.

ತುಲಾ ರಾಶಿ (Libra) : THREE OF CUPS

ನಿಮ್ಮನ್ನು ಖಿನ್ನತೆಗೆ ಒಳಪಡಿಸುತ್ತಿದ್ದ ವಿಷಯಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ. ಸ್ನೇಹಿತರ ಭೇಟಿಯಿಂದ ಮನಸ್ಸಿನ ಭಾರ ಕಡಿಮೆಯಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಪಾರ್ಟಿ ಅಥವಾ ಪಿಕ್ನಿಕ್ ಆಯೋಜಿಸುವಿರಿ. ಜನರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. 

ವೃಶ್ಚಿಕ ರಾಶಿ (Scorpio) : QUEEN OF PENTACLES

ಹಣಕ್ಕೆ ಸಂಬಂಧಿಸಿದ ವ್ಯವಹಾರಗಳು ಯಶಸ್ವಿಯಾಗುತ್ತವೆ. ನೀವು ಸಣ್ಣ ತಪ್ಪನ್ನು ಮಾಡಬಹುದು, ಅದು ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ಈಗಿನಿಂದಲೇ ಜಾಗರೂಕರಾಗಿರಬೇಕು.

ಧನು ರಾಶಿ (Sagittarius): ACE OF CUPS

ನಿಮ್ಮ ಪ್ರಯತ್ನಗಳ ಪ್ರಕಾರ ಫಲಿತಾಂಶಗಳು ಬರದಿರಬಹುದು, ಆದರೆ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ. ನೀವು ಚಿಂತಿಸುತ್ತಿದ್ದ ವಿಷಯಗಳನ್ನು ಜಯಿಸಲು ಪರಿಚಿತ ವ್ಯಕ್ತಿಯ ಸಹಾಯವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ ರಾಶಿ (Capricorn) :  SEVEN OF CUPS

ಹಳೆಯ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸಿ. ಇದರಿಂದ ನೀವು ಧನಾತ್ಮಕ ಭಾವನೆ ಹೊಂದಬಹುದು. ಅತಿಯಾಗಿ ಯೋಚಿಸುವ ಮೂಲಕ ನೀವು ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದ್ದರಿಂದ ಹೆಚ್ಚು ಚಿಂತಿಸಬೇಡಿ.

ಕುಂಭ ರಾಶಿ (Aquarius): SEVEN OF WANDS

ಯೋಜನಾಬದ್ಧತೆ ಮತ್ತು ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಅವಶ್ಯಕತೆ ಇರುತ್ತದೆ ಇಲ್ಲವಾದಲ್ಲಿ ಒತ್ತಡ ಉಂಟಾಗುತ್ತದೆ. ನಿಮ್ಮ ಕೆಲಸವನ್ನು ನೀವು ಸಂಪೂರ್ಣ ಸಮರ್ಪಣೆಯೊಂದಿಗೆ ಮಾಡಿದರೂ ಸಹ, ಕೆಲವು ಜನರಿಂದ ಅಸಮಾಧಾನ ಎದುರಿಸಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಬಹುದು.

Love Horoscope: ಪ್ರೀತಿಯ ಹೆಂಡತಿಗಾಗಿ ಮನೆಯವರ ನಿರ್ಲಕ್ಷ್ಯ; ಈ ರಾಶಿಯವರ ಕುಟುಂಬದಲ್ಲಿ ಬಿರುಕು..!

ಮೀನ ರಾಶಿ (Pisces): KING OF SWORDS

ನೀವು ಜನರಿಗೆ ಮಾಡಿದ ಕಠಿಣ ವರ್ತನೆಗೆ ನೀವು ವಿಷಾದಿಸಬಹುದು, ನಿಮ್ಮ ಸ್ವಭಾವವನ್ನು ಬದಲಾಯಿಸಿ. ನಿಮ್ಮಲ್ಲಿ ಮೂಡುವ ಕೋಪವನ್ನು ಬೇರೆಯವರ ಮೇಲೆ ವ್ಯಕ್ತಪಡಿಸಲು ನೀವು ಪ್ರಯತ್ನಿಸುತ್ತೀರಿ. ಇದು ನೀವು ಮತ್ತು ಆ ವ್ಯಕ್ತಿ ಮಾನಸಿಕ ತೊಂದರೆಗೆ ಒಳಗಾಗುವಂತೆ ಮಾಡುತ್ತದೆ.