Asianet Suvarna News Asianet Suvarna News

Love Horoscope: ಪ್ರೀತಿಯ ಹೆಂಡತಿಗಾಗಿ ಮನೆಯವರ ನಿರ್ಲಕ್ಷ್ಯ; ಈ ರಾಶಿಯವರ ಕುಟುಂಬದಲ್ಲಿ ಬಿರುಕು..!

ಈ ವಾರ ನಿಮ್ಮ ರಾಶಿಗೆ ಅನುಗುಣವಾಗಿ ಪ್ರೀತಿ ಹಾಗೂ ದಾಂಪತ್ಯ ಜೀವನದ ಹೇಗಿರಲಿದೆ? ಪ್ರೀಯಿಯಲ್ಲಿ ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? 21 ಆಗಸ್ಟ್‌ನಿಂದ 27ನೇ ಆಗಸ್ಟ್ 2023ರವರೆಗೆ ನಿಮ್ಮ ಪ್ರೀತಿ ಭವಿಷ್ಯ ಹೀಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Weekly Love Horoscope from 21th August to 27th August 2023 suh
Author
First Published Aug 20, 2023, 10:01 AM IST

ಮೇಷ ರಾಶಿ  (Aries) : ಈ ವಾರ ನಿಮ್ಮ ಪ್ರೀತಿಯ ಸಂಗಾತಿಯು ನಿಮ್ಮ ನಂಬಿಕೆಯನ್ನು ಪರೀಕ್ಷಿಸಬಹುದು, ನೀವು ಅದರಲ್ಲಿ ಗೆಲ್ಲುವಿರಿ. ಇದು ನಿಮ್ಮ ಪ್ರೀತಿ ಸಂಗಾತಿಗೆ ನಿಮ್ಮ ಮೇಲಿನ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನೀವು ಸಂಗಾತಿ ಜತೆ ಕ್ಯಾಂಡಲ್ ಲೈಟ್ ಡಿನ್ನರ್ ಅಥವಾ ಎಲ್ಲೋ ಅವರೊಂದಿಗೆ ಹೋಗಬಹುದು. ಅಂತಹ ಅನೇಕ ಸಂದರ್ಭಗಳು ಈ ವಾರ ನಿಮ್ಮ ಜೀವನದಲ್ಲಿ ಉದ್ಭವಿಸುತ್ತದೆ. ನೀವಿಬ್ಬರೂ ದೈಹಿಕವಾಗಿ ಪರಸ್ಪರ ಹತ್ತಿರವಾಗುತ್ತೀರಿ.

ವೃಷಭ ರಾಶಿ  (Taurus):  ಈ ವಾರ ಸಿಂಗಲ್ ಇದ್ದವರು ಪ್ರೀತಿಯ ಹುಡುಕಾಟದಲ್ಲಿ ಯಾರನ್ನಾದರೂ ಕುರುಡಾಗಿ ನಂಬಬಹುದು. ಈ ವಾರ ನೀವು ನಿಮ್ಮ ಸಂಗಾತಿಗೆ ಅವರ ನ್ಯೂನತೆಗಳ ಬಗ್ಗೆ ನೆನಪಿಸಬಹುದು. ಇದರಿಂದ ಅವರು ಕೋಪಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸಂಬಂಧ ಇನ್ನಷ್ಟು ಹದಗೆಬಹುದು.

ಮಿಥುನ ರಾಶಿ (Gemini) :   ಈ ವಾರ ನೀವು ಪ್ರೀತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ, ವಾರದ ಕೊನೆಯ ಅರ್ಧದವರೆಗೆ ನಿಮ್ಮ ಪ್ರೇಮಿಯಿಂದ ಸಹಕಾರ ಮತ್ತು ಪ್ರಣಯ ಸಿಗಲಿದೆ. ಈ ವಾರ ನೀವು ಪ್ರೀತಿ ಮತ್ತು ಬೆಂಬಲದ ಉಡುಗೊರೆಯನ್ನು ಪಡೆಯಬಹುದು. ಈ ಸಮಯದಲ್ಲಿ ನೀವಿಬ್ಬರೂ ಒಬ್ಬರಿಗೊಬ್ಬರು ತುಂಬಾ ಹತ್ತಿರದಲ್ಲಿ ಇರುವಿರಿ. ರೊಮ್ಯಾಂಟಿಕ್ ಕ್ಷಣಗಳನ್ನು ಜೀವಿಸಲು ನೀವು ಒಟ್ಟಿಗೆ ಪ್ರವಾಸಕ್ಕೆ ಹೋಗಲು ಸಹ ಯೋಜಿಸಬಹುದು.

ಕಟಕ ರಾಶಿ  (Cancer) :   ನಿಮ್ಮ ಪ್ರೀತಿಯ ಸಂಬಂಧವನ್ನು ಸುಧಾರಿಸಲು, ನೀವು ಎಲ್ಲಾ ಆಸೆಗಳನ್ನು ದೂರವಿಡಬೇಕು. ನಿಮ್ಮ ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗಿ, ಏಕೆಂದರೆ ಈ ಸಮಯವು ನಿಮಗೆ ಅನೇಕ ಅದ್ಭುತಗಳನ್ನು ನೀಡುತ್ತದೆ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನೀವು ಪ್ರಯತ್ನಿಸಬೇಕು.

ಗುರು ಗ್ರಹದಿಂದ ನಾಲ್ಕು ರಾಶಿಗಳಿಗೆ ಗೌರವ; ಜೇಬು ತುಂಬ ಹಣ..!

 

ಸಿಂಹ ರಾಶಿ  (Leo) :  ಕೆಲಸದ ಒತ್ತಡದ ನಡುವೆಯೂ, ನಿಮ್ಮ ಪ್ರೀತಿಪಾತ್ರರು ಸಂತೋಷದ ಕ್ಷಣಗಳನ್ನು ತರುತ್ತಾರೆ. ಸಂಗಾತಿ ನಿಮ್ಮೊಂದಿಗೆ ಹೊರಹೋಗುವ ಬಯಕೆಯನ್ನು ವ್ಯಕ್ತಪಡಿಸಬಹುದು. ಈ ವಿಷಯದಲ್ಲಿ,
ಅವರ ಆಸೆಗೆ ಪ್ರಾಮುಖ್ಯತೆ ನೀಡಿ, ಸ್ವಲ್ಪ ದೂರದ ಪ್ರವಾಸಕ್ಕೆ ಹೋಗುವ ಯೋಜನೆ ಮಾಡಿ. ಇದಕ್ಕಾಗಿ, ಪಿಕ್ನಿಕ್ ಯೋಜನೆ ಮಾಡುವುದು ಉತ್ತಮ.

ಕನ್ಯಾ ರಾಶಿ (Virgo) :  ಈ ವಾರ ನಿಮ್ಮ ಪ್ರೇಮಿಯ ಮನೋಭಾವವು ಸ್ವಲ್ಪ ಭಿನ್ನವಾಗಿರುವ ಕಾರಣ, ನಿಮ್ಮ ಪ್ರೀತಿ ಮತ್ತು ಪ್ರಣಯವು ಹಾಳಾಗುತ್ತದೆ. ಪ್ರತಿಯೊಂದು ಬದಲಾವಣೆಯು ಆರಂಭದಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಅದೇ ರೀತಿ ವೈವಾಹಿಕ ಜೀವನವೂ ಅಡ್ಡ ಪರಿಣಾಮಗಳನ್ನು ಹೊಂದಿದೆ. ಮತ್ತು ಈ ವಾರ ನೀವು ಇವುಗಳಿಂದ ತೊಂದರೆಗಳನ್ನು ಎದುರಿಸಬಹುದು.

ತುಲಾ ರಾಶಿ (Libra) :  ಈ ವಾರ ನೀವು ಅನಿರೀಕ್ಷಿತವಾಗಿ ಯಾರನ್ನಾದರೂ ಭೇಟಿಯಾಗುವ ಅವಕಾಶವನ್ನು ಹೊಂದಿರುತ್ತೀರಿ. ಆ ವ್ಯಕ್ತಿಯನ್ನು ಮತ್ತೆ ಭೇಟಿಯಾಗಲು ನೀವು ಉತ್ಸುಕರಾಗಿ ಕಾಣುತ್ತೀರಿ. ಸಂಗಾತಿಯೊಂದಿಗೆ ಈ ವಾರವು ನಿರೀಕ್ಷೆಗಿಂತ ಉತ್ತಮವಾಗಿ ಹಾದುಹೋಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ, ನಿಮ್ಮ ನೋವು-ನಲಿವನ್ನು ಅವರೊಂದಿಗೆ ಹಂಚಿಕೊಳ್ಳಿ. ಇದರಿಂದಾಗಿ ನಿಮ್ಮ ಸಂಗಾತಿಯು ನಿಮಗೆ ತುಂಬಾ ಹತ್ತಿರವಾಗುತ್ತಾರೆ. 

ವೃಶ್ಚಿಕ ರಾಶಿ (Scorpio) :  ಈ ವಾರ ನಿಮ್ಮ ಪ್ರೀತಿ ಮತ್ತು ಕಾಮ ಎರಡರ ಭಾವನೆಗಳು ಬಹಳಷ್ಟು ಹೆಚ್ಚಾಗುತ್ತವೆ. ಈ ಕಾರಣದಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಮತ್ತೆ ಮತ್ತೆ ನೀವು ಸಮಯವನ್ನು ಕಳೆಯಲು ಬಯಸಬಹುದು. ಹಾಗೆ ಮಾಡುವುದರಿಂದ, ನೀವು ಸ್ವಲ್ಪಮಟ್ಟಿಗೆ ನಿಮ್ಮ ಕುಟುಂಬದ ಜವಾಬ್ದಾರಿಗಳ ಕಡೆಗೆ ನಿರ್ಲಕ್ಷ್ಯ ಮಾಡುವಿರಿ. ಇದು ನಿಮ್ಮ ಕುಟುಂಬ ಸದಸ್ಯರನ್ನು ಕೋಪಗೊಳಿಸಬಹುದು.

ಧನು ರಾಶಿ (Sagittarius):  ಈ ವಾರ ನಿಮ್ಮ ವೈಯಕ್ತಿಕ ಜೀವನದಲ್ಲಿ ಸವಾಲಿನ ಸಂದರ್ಭಗಳು ಆಯಾಸವನ್ನು ಹೆಚ್ಚಿಸಬಹುದು. ನಿಮ್ಮ ಸ್ಥಿತಿಯನ್ನು ನೋಡಿ ನಿಮ್ಮ ಪ್ರೇಮಿ ಕೂಡ ಒತ್ತಡಕ್ಕೊಳಗಾಗಬಹುದು. ಕುಟುಂಬ ಸದಸ್ಯರನ್ನು ನಿರ್ಲಕ್ಷಿಸಬೇಡಿ.

ಮಕರ ರಾಶಿ (Capricorn) :  ಈ ವಾರ ನೀವು ಹಾಗೂ ನಿಮ್ಮ ಸಂಗಾತಿ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಲು ಅನೇಕ ಸುಂದರ ಅವಕಾಶಗಳನ್ನು ಬರಲಿವೆ. ನಿಮ್ಮ ಸಂಗಾತಿಯೊಂದಿಗೆ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು, ಪ್ರಣಯ ಕ್ಷಣಗಳನ್ನು ಆನಂದಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಗೆ ನೀವು ಸುಂದರವಾದ ಉಡುಗೊರೆಯನ್ನು ನೀಡಿದರೆ, ನೀವು ಅವರಿಂದ ಅಪಾರ ಪ್ರೀತಿ ಮತ್ತು ಪ್ರಣಯ ಪಡೆಯಲು ಸಾಧ್ಯವಾಗುತ್ತದೆ

ಈ ಐದು ದೇವಾಲಯಗಳಿಗೆ ಭೇಟಿ ಕೊಟ್ಟರೆ ನಿಮ್ಮ ಶನಿದೋಷ ನಿವಾರಣೆ ದೂರವಾಗಲಿದೆ

 

ಕುಂಭ ರಾಶಿ (Aquarius):   ಈ ವಾರ ನಿಮ್ಮ ಪ್ರೀತಿಪಾತ್ರರು ಯಾರೊಂದಿಗಾದರೂ ಸ್ವಲ್ಪ ಹೆಚ್ಚು ಸ್ನೇಹದಿಂದ ಇರುವುದನ್ನು ನೀವು ನೋಡುತ್ತೀರಿ, ಇದು ನಿಮಗೆ ಅತಿಯಾದ ನೋವು ಉಂಟುಮಾಡಬಹುದು.
ಇದರಿಂದ ನಿಮ್ಮ ಅನೇಕ ಕಾರ್ಯಗಳನ್ನು ಹಾಳಾಗಬಹುದು. ನಿಮ್ಮ ಸಂಗಾತಿಯ ಹಿಂದಿನ ಬಗ್ಗೆ ನಿಮಗೆ ಏನಾದರೂ ತಿಳಿಯಬಹುದು, ಇದು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಲಿದೆ.

ಮೀನ ರಾಶಿ  (Pisces): ವಿವಾಹಿತರಿಗೆ ಈ ವಾರ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಸ್ವಲ್ಪ ಜಗಳವಾಗಬಹುದು. ಇದು ಕೆಲವೊಮ್ಮೆ ನಿಮ್ಮ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.


 

Follow Us:
Download App:
  • android
  • ios