ಮೇಷ - ಲಾಭ ಕಡಿಮೆಯಾಯಿತೆಂದು ಆತಂಕ ಬೇಡ. ಪರಿಸ್ತೀತಿ ಸೂಕ್ತವಾಗಿ ನಿಭಾಯಿಸುವ ಮನಸ್ಥಿತಿ ಬೆಳೆಸಿಕೊಳ್ಳಿ. ಅಂದುಕೊಂಡಿದ್ದು ಆಗಲಿಲ್ಲ ಎಂಬ ಹತಾಶೆ ಬೇಡ. ನಿಮ್ಮ ಒಳ್ಳೆಯತನಕ್ಕೆ ಸರಿಯಾದ ಪ್ರತಿಫಲ ಸಿಗುತ್ತದೆ. ಆತ್ಮೀಯರೊಂದಿಗೆ ಒಂದಷ್ಟು ಸಮಯ ಮಾತನಾಡಿ.

ವೃಷಭ - ಮಡದಿ, ಮಕ್ಕಳೊಂದಿಗೆ ಮೃದುವಾಗಿ ವರ್ತಿಸಿ. ಗೃಹಿಣಿಯರ ಮೇಲೆ ಹೆಚ್ಚಿನ ಜವಾಬ್ದಾರಿಇ ಇದೆ. ಮಕ್ಕಳ ಆರೋಗ್ಯದ ಕಡೆ ಹಹೆಚ್ಚು ಗಮನ ನೀಡಿ. ಸುಳ್ಳು ಸುದ್ದಿ ಕಡೆ ಬಗ್ಗೆ ಎಚ್ಚರವಿರಲಿ. ಸಕಾರಾತ್ಮಕ ಚಿಂತನೆಗಳು ಹೆಚ್ಚಾಗಲಿವೆ. ದೊಡ್ಡ ಸವಾಲುಗಳಿಗೆ ಈ ವಾರ ತೆಗೆದುಕೊಳ್ಳಲಿದ್ದೀರಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿರಿ.

ಮಿಥುನ - ಸದುದ್ದೇಶಕ್ಕಾಗಿ ನಿಮ್ಮದೂ ಒಂದು ಸೇವೆ ಸಲ್ಲಿಕೆಯಗಲಿದೆ. ಗೊಂದಲಗಳಿಂದ ದೂರ ಇರಿ, ಹಿರಿಯರ ಬಗ್ಗೆ ಗೌರವ ಇರಲಿ. ನಿಮ್ಮ ಅಹಂಕಾರಕ್ಕೆ ಪೆಟ್ಟು  ಬೀಳಲಿದೆ. ವಾರಾಂತ್ಯಕ್ಕೆ ಶುಭ ಸುದ್ದಿ ಸಿಗಲಿದೆ. ಮನಸ್ಸಿನ ಶಾಂತಿ ತುಸು ಕೆಟ್ಟರೂ, ಶೀಘ್ರವೇ ಎಲ್ಲವೂ ಸರಿಯಾಗಲಿದೆ. ಸಕಾರಾತ್ಮಕ ಚಿಂತನೆ ಹೆಚ್ಚಿಸಿಕೊಳ್ಳಿ.

ಕಟಕ - ನಿಮ್ಮ ದೃಢ ಮನಸ್ಸಿಂದ ಎಲ್ಲವನ್ನೂ ಗೆಲ್ಲಬಹುದು. ನಿಮ್ಮ ಧೈರ್ಯದಿಂದ ಇಡೀ ಕುಟುಂಬ ನೆಮ್ಮದಿಯಿಂದ ಇರಲಿದೆ. ಒಳ್ಳೆಯ ಹವ್ಯಾಸ ಹೆಚ್ಚಿಸಿಕೊಳ್ಳಿ. ಲಾಭ ನಷ್ಟದ ಲೆಕ್ಕಾಚಾರ ಬೇಡ. ಆರೋಗ್ಯ ಕಡೆ ಹೆಚ್ಚು ಗಮನ ನೀಡಿ. ಮಕ್ಕಳು, ಹಿರಿಯರ ಅರೋಗ್ಯದ ಬಗ್ಗೆಯೂ ಸೂಕ್ತ ಗಮನ ಇಟ್ಟಿರಿ.

ಇಂದ್ರಾಸನ ಕೋರಲು ಹೋಗಿ ನಿದ್ರಾಸನ ವರ ಬೇಡಿದ ಕುಂಭಕರ್ಣ!

ಸಿಂಹ - ಮನಸ್ಸು ಮರ್ಕಟನಂತೆ ಅದನ್ನು ಹಿಡಿತಕ್ಕೆ ತೆಗೆದುಕೊಂಡರೆ ನೆಮ್ಮದಿ ದೊರೆಯುತ್ತದೆ. ವದಂತಿಗಳಿಗೆ ಕಿವಿ ಕೊಡಬೇಡಿ. ಸೂಕ್ತ ವ್ಯಕ್ತಿಗಳಿಂದ ಬಂದ ಸಲಹೆಯನ್ನು ಪಾಲಿಸಿ. ಭವಿಷ್ಯದ ಬಗ್ಗೆ ಆತಂಕ ಬೇಡ. ಕೆಲಸದ ಒತ್ತಡ ಅಧಿಕವಾಗಿ ಮಾನಸಿಕ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.

ಕನ್ಯಾ - ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳುವುದು ಬೇಡ. ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬೇಡಿ, ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ತಾಳ್ಮೆಯಿಂದ ಇದ್ದರೆ ಎಲ್ಲವೂ ತನ್ನಿಂದ ತಾನೇ ಸರಿಯಾಗುತ್ತದೆ.

ತುಲಾ - ಕೆಲಸದ ಬಗ್ಗೆ ಬದ್ಧತೆ, ಕುಟುಂಬದ ಮೇಲೆ ಪ್ರೀತಿ ಇರಲಿ. ನಿಧಾನಕ್ಕೆ ಬದುಕು ಹಳಿಗೆ ಬರುತ್ತದೆ. ನೀವು ಆರೋಗ್ಯವಾಗಿದ್ದರೆ, ಸಮಾಜವೂ ಆರೋಗ್ಯವಾಗಿರುತ್ತದೆ ಎಂಬುವುದು ನೆನಪಿರಲಿ. ಅನಾವಶ್ಯಕ ವಸ್ತುಗಳನ್ನು ಕೊಳ್ಳುವುದು ಬೇಡ. ಜೀವನ ಸರಳವಾಗಿದ್ದರೆ ಚೆನ್ನ.

ವೃಶ್ಚಿಕ -ಬಂಧುಗಳ ಕಷ್ಟಕ್ಕೆ ನೆರವಾಗುವಿರಿ. ನಿಮ್ಮ ಅವಶ್ಯಕತೆಗೆ ಏನು ಬೇಕೋ ಅದನ್ನು ಮಾಡಿಕೊಂಡು ಸಮಾಜಕ್ಕೂ ನೆರವಿನ ಹಸ್ತ ಚಾಚಲಿದ್ದೀರಿ. ತಾಳ್ಮೆಯಿಂದ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸಿ. ವಿಷಯ ಪರಿಣತರೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ.

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

ಧನುಸ್ಸು - ಅಧಿಕೃತ ಮೂಲದಿಂದ ಬಂದ ಸುದ್ದಿಗಳನ್ನು ಮಾತ್ರವೇ ನಂಬಿ. ನಿಮ್ಮನ್ನು ಮೋಸಗೊಳಿಸಲು ಸಾಕಷ್ಟು ಕಾಣದ ಕೈಗಳು ಕೆಲಸ ಮಾಡುತ್ತಿರುತ್ತವೆ. . ಎಚ್ಚರದಿಂದ ಹೆಜ್ಜೆ ಹಾಕಿರಿ. ಅನಾವಶ್ಯಕವಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಕಾರ್ಯ ಮಾಡುವುದು ಬೇಡ. 

ಮಕರ - ಆತ್ಮೀಯರೊಂದಿಗೆ ದಿನ ಕಳೆಯಿದ್ದೀರಿ. ನಿಮ್ಮ ಹವ್ಯಾಸಗಳಿಂದ ದಿನಗಳು ಸುಲಭವಾಗಿ ಸಾಗುತ್ತವೆ. ಮನೆಯಲ್ಲಿ ಒಂದಷ್ಟು ಬದಲಾವಣೆ ಉಂಟಾಗಲಿದೆ. ಮಹಿಳೆಯರಿಗೆ ಇದು ಒಂದಷ್ಟು ನೆಮ್ಮದಿ ತಂದುಕೊಡುವ ವಾರವಾಗಲಿದೆ.

ಕುಂಭ - ಕಷ್ಟ ಕಾಲದಲ್ಲಿ ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ. ಆರೋಗ್ಯ ಕೆಟ್ಟಿದೆ ಎಂಬ ಅನಾವಶ್ಯಕ ಗೊಂದಲ ಬೇಡವೇ ಬೇಡ. ಸಾಧಾರಣವಾದ ಆರೋಗ್ಯ ಸಮಸ್ಯೆಗಳಿಗೆ ಮದ್ದನ್ನು ಉಪಯೋಗಿಸಿ. ಗೊಂದಲಗಳಿಗೆ ಎಡೆ ಮಾಡಿಕೊಡಬೇಡಿ. ಎಲ್ಲವೂ ಒಳೆತಾಗಲಿದೆ. 

ಮೀನ - ಸಮಯ ಸಿಕ್ಕಿದೆ ಎಂದು ಅದನ್ನು ಪೋಲು ಮಾಡಿಕೊಳ್ಳುವುದು ಬೇಡ. ಸೂಕ್ತ ರೀತಿಯಲ್ಲಿ ಸಮಯವನ್ನು ಬಳಕೆ ಮಾಡಿಕೊಳ್ಳಿ. ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವುದು ಬೇಡ. ನಿಮ್ಮ ಶಕ್ತಿಯ ಬಗ್ಗೆ ನೀವು ತಿಳಿದುಕೊಳ್ಳಲು ಇದ ಸಕಾಲ. ಧಾನ್ಯಸ್ಥ ಸ್ಥಿತಿಯನ್ನು ಸಿದ್ಧಿಸಿಕೊಳ್ಳಲಿದ್ದೀರಿ.