ಮೇಷ: ಒಳ್ಳೆ ಕೆಲಸ ಮಾಡುವಾಗ ಹಲವು ಅಡೆತಡೆಗಳು ಬರುತ್ತವೆ. ಹಾಗೆ ಬಂದ ಕಷ್ಟಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುವಿರಿ. ನಿಮ್ಮ ದೃಢ ಹಾಗೂ ಪ್ರಾಮಾಣಿಕ ಪ್ರಯತ್ನವೇ ನಿಮ್ಮನ್ನು ಮುನ್ನಡೆಸಲಿದೆ. ವಾರಾಂತ್ಯದಲ್ಲಿ ನೆಮ್ಮದಿ ನೆಲಸಲಿದ್ದು, ಕುಟುಂಬದೊಂದಿಗೆ ಸಮಯ ಕಳೆಯಲು ದೂರ ಪ್ರಯಾಣ ಸಾಧ್ಯ.

ವೃಷಭ: ವೃತ್ತಿಯಲ್ಲಿ ವಿದೇಶಿ ಪ್ರಯಾಣ ಬೆಳೆಸಬೇಕು, ಅಲ್ಲಿದ್ದು ಕೆಲಸ ಮಾಡಬೇಕು ಎಂಬ ನಿಮ್ಮ ಆಸೆ, ಆಕಾಂಕ್ಷೆ, ಕನಸುಗಳು ಈ ವಾರ ಈಡೇರುವ ಸಾಧ್ಯತೆ. ಅದಕ್ಕೆ ಸ್ವಲ್ಪ ನೀವು ಶ್ರಮ ಹಾಕಬೇಕಷ್ಟೆ. ಮಕ್ಕಳ ಓದಿನಲ್ಲಿ ಕೊಂಚ ನೆಮ್ಮದಿ. ಪರೀಕ್ಷೆ ಸಮಯವಾದ್ದರಿಂದ ಸ್ವಲ್ಪ ಹೆಚ್ಚು ಸಮಯ ಓದಿನಲ್ಲಿ ನೀಡುವುದು ಒಳಿತು.

ಮಿಥುನ: ಹಳೆಯ ನೆನಪುಗಳನ್ನು ಕೆದಕಿಕೊಂಡು ಇಂದಿನ ಹಾಗೂ ಮುಂದಿನ ಸುಂದರ ದಿನಗಳನ್ನು ಹಾಳು ಮಾಡಿಕೊಳ್ಳದಿರಿ. ಹಳೆಯದ್ದನ್ನು ಮರೆತು ಮುನ್ನಡೆದರೆ ಮನೆಯಲ್ಲಿ ಸಂತೋಷ ನೆಮ್ಮದಿ ನೆಲಸಲಿದೆ. ವೃತ್ತಿಪರ ಮಹಿಳೆಯರಿಗೆ ಹೆಚ್ಚಿನ ಲಾಭ, ಕೆಲಸದಲ್ಲಿ ನೆಮ್ಮದಿ, ಮೇಲಧಿಕಾರಿಯಿಂದ ಪ್ರಶಂಸೆ ಸಿಗಲಿದೆ.

ಕಟಕ:  ನಿಮ್ಮ ನೇರ ಸ್ವಭಾವ ಮನೆಯ ವಾತಾವರಣ ಬದಲಿಸಲಿದೆ. ನಿಮ್ಮ ಆಪ್ತರಿಗೆ ಇನ್ನಷ್ಟು ಹತ್ತಿರವಾಗಲಿದ್ದೀರಿ. ಕಲಸ ಕಾರ್ಯಗಳಲ್ಲಿ ಈ ವಾರ ಹೆಚ್ಚು ತೊಡಗಿಕೊಳ್ಳುವುದರಿಂದ ಒತ್ತಡ ಹೆಚ್ಚಾಗಿರಲಿದೆ. ಹಳೆಯ ಸ್ನೇಹಿತರ ದಿಢೀರ್ ಭೇಟಿ ಸಾಧ್ಯತೆ. ವಾರಾಂತ್ಯದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ.

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಸಿಂಹ: ಶ್ರಮದ ಪ್ರಯತ್ನ ಸಫಲತೆ ತಂದುಕೊಡುತ್ತದೆ. ಕೆಲಸದ ವಿಚಾರದಲ್ಲಿ ಪ್ರಯತ್ನವೇ ಇಲ್ಲದೆ ಬರೀ ಜಪಿಸುತ್ತಿದ್ದರೆ ಪ್ರಯೋಜನವಿಲ್ಲ. ತಪ್ಪನ್ನು ತಿಳಿದು, ತಿದ್ದುಕೊಂಡು ಮುನ್ನಡೆಯಿರಿ. ವಾರಾಂತ್ಯದಲ್ಲಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದ್ದು, ಕುಟುಂಬದೊಂದಿಗೆ ದೂರ ಪ್ರಯಾಣ ಸಾಧ್ಯತೆ.

ಕನ್ಯಾ: ಕೆಟ್ಟ ಕೆಲಸಕ್ಕೆ ಬೆಂಬಲ ನೀಡಿ ಒಳ್ಳೆಯವರು ಎನಿಸಿಕೊಳ್ಳುವುದಕ್ಕಿಂತ ಒಳ್ಳೆಯ ಕೆಲಸ ಮಾಡಿ ನಿಮ್ಮವರನ್ನು ಸರಿ ದಾರಿಯಲ್ಲಿ ನಡೆಸುವ ಗುಣ ನಿಮ್ಮದು. ಮಕ್ಕಳಿಗೆ ಕಷ್ಟ ಹಾಗೂ ಶ್ರಮದ ಫಲದ ಬಗ್ಗೆ ಪಾಠ ಹೇಳಿಕೊಡಿ. ಸುಖದ ಪಾಠ ತಿಳಿಯಬೇಕೆಂದರೆ ಕಷ್ಟದ ಪಾಠದ ಅರಿವು ಬೇಕೇಬೇಕು. ವಾರಾಂತ್ಯದಲ್ಲಿ ಸಿಹಿ ಸುದ್ದಿ.

ತುಲಾ: ಹೊಸ ಅವಕಾಶ ಕಣ್ಮುಂದಿದೆ. ಆದರೆ ನೀವು ಅದರತ್ತ ಗಮನ ಹರಿಸುತ್ತಿಲ್ಲ. ಒದ್ದಾಟ, ನೋವು ಇದ್ದದ್ದೇ. ಅದನ್ನು ಪಕ್ಕಕ್ಕೆ ಸರಿಸಿ ಹೊಸ ಯೋಚನೆ, ಯೋಜನೆಗಳ ಕಾರ್ಯರೂಪಕ್ಕೆ ಪ್ರಯತ್ನಿಸಿ. ಬೇರೆಯವರ ಮಾತಿಗೆ ಗಮನಕೊಡಿ. ಅವರ ಅನುಭವ, ಕಾಳಜಿ ನಿಮ್ಮ ಸಹಾಯಕ್ಕೆ ಬರಬಹುದು.

ವೃಶ್ಚಿಕ:  ಹಿಂದಿನ ನೋವುಗಳಿಂದ ತುಸು ಚೇತರಿಕೆ ಸಿಗಬಹುದು. ಕಷ್ಟಕಾಲಗಳೆಲ್ಲ ಕಳೆದವು, ಇನ್ನು ನೆಮ್ಮದಿಯಿಂದಿರಿ. ಗೆಳೆಯರ ಸಹಾಯಕ್ಕೆ ಧಾವಿಸುವ ನಿಮನ್ನು ಮಿತ್ರರು ಕೈ ಹಿಡಿದು ದಡ ಸೇರಿಸುತ್ತಾರೆ. ಆದರೂ ವಾಹನ ಚಲಾಯಿಸುವ ಸಂದರ್ಭ, ದೂರ ಪ್ರಯಾಣದ ಸಂದರ್ಭ ಎಚ್ಚರಿಕೆ ಇರಲಿ.

ಸಾಲಿಗ್ರಾಮ ಪೂಜೆಯಿಂದ ನಿಮ್ಮ ಇಷ್ಟಾರ್ಥ ಸಿದ್ಧಿ ಖಚಿತ!

ಧನುಸ್ಸು: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಪರಿಸ್ಥಿತಿಯಲ್ಲಿ ತುಸು ಚೇತರಿಕೆ ಇದೆ. ವಾರದ ಮಧ್ಯಭಾಗದಿಂದ ಆರ್ಥಿಕ ಚೈತನ್ಯವೂ ಸಿಗುತ್ತದೆ. ನಿಮ್ಮ ಚಿಂತೆಗಳಿಗೆಲ್ಲ ಪರಿಹಾರ ಕಂಡುಕೊಳ್ಳುವುದರಲ್ಲಿ ಸಫಲರಾಗುವಿರಿ. ಛಲ, ಹಠ, ಕಷ್ಟದಲ್ಲೂ ಜಿಗಿದೇಳುವ ಗುಣ ನಿಮ್ಮನ್ನು ಕಾಯಲಿ.

ಮಕರ: ಮಾಡುವ ಕೆಲಸದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇರಲಿ. ಧೈರ್ಯದಿಂದ ಮುನ್ನಡೆಯಿರಿ. ಎಲ್ಲಾ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದರೆ ಯಾವುದೂ ಕಷ್ಟ ಎನ್ನುವುದಿರುವುದಿಲ್ಲ. ಹೊಸ ಕೆಲಸಕ್ಕೆ ಕುಟುಂಬದವರ ಬೆಂಬಲ, ಮಾರ್ಗದರ್ಶನ ಸಿಗಲಿದೆ.

ಕುಂಭ: ಕನಸುಗಳನ್ನು ಕೂಡಿಟ್ಟುಕೊಳ್ಳುತ್ತಿದ್ದರೆ, ಬೆಟ್ಟದಷ್ಟು ಬೆಳೆದು ನಿಲ್ಲುತ್ತವೆ. ಆದರೆ ಒಂದೊಂದೇ ಕನಸನ್ನು ಆಗಾಗ್ಗೆ ಸಾಕಾರಗೊಳ್ಳುವ ಕಡೆ ಹೆಜ್ಜೆ ಹಾಕಿದರೆ ಬದುಕು ಸುಂದರ. ಸಾವಿರ ಮೆಟ್ಟಿಲು ಹತ್ತ ಬೇಕೆಂದರೆ ಮೊದಲು ನಿಧಾನಕ್ಕೆ ಒಂದೊಂದೇ ಮೆಟ್ಟಿಲನ್ನು ಹತ್ತಲು ಆರಂಭಿಸಬೇಕು. ಆಗ ಗುರಿ ತಲುಪಲು ಸಾಧ್ಯ.

ಮೀನ: ಮಾತು ಸರಳ ಮತ್ತು ಸುಂದರವಾಗಿರಬೇಕು. ಆಗ ಎಲ್ಲರ ಮೆಚ್ಚುಗೆ ಪಡೆಯಲು ಸಾಧ್ಯ. ಕಟು ಮಾತುಗಳು, ಇಲ್ಲ ಸಲ್ಲದ ಮಾತುಗಳು ಬೇರೆಯವರಿಗೆ ಕಿರಿಕಿರಿ ಮೂಡಿಸಬಾರದು. ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ನಿಮಗೇ ಒಳಿತು. ಹೆಚ್ಚಿನ ಕೆಲಸದೊತ್ತಡ ಈ ವಾರ ಇರಲಿದೆ.