ಮಿಥುನ
ಸೂರ್ಯನು ನಿಮ್ಮ ರಾಶಿಯಲ್ಲೇ ಉರಿಯುತ್ತಿರುವುದರಿಂದ ಚಂದ್ರನಿಗೆ ನಿಮ್ಮ ಸ್ಥಾನದಲ್ಲಿ ಹೆಚ್ಚು ಕೆಲಸವಿಲ್ಲ. ಆದರೆ ನಮಗೆ ಸಮೀಪದ ಗ್ರಹವಾದ ಚಂದ್ರನು ಸುಮ್ಮನಿರುವುದಿಲ್ಲ. ಚಂದ್ರನ ಪ್ರೀತಿಮಯ ಶಾಂತ ಸ್ವಭಾವ ಹಾಗೂ ಸೂರ್ಯನ ಡಾಮಿನೇಟಿಂಗ್ ಸ್ವಭಾವಗಳು ಸೇರಿಕೊಂಡು, ಪ್ರಣಯದ ವಿಷಯದಲ್ಲಿ ನೀವೇ ಬಾಸ್‌ ಅಂತ ಆಗಲಿದೆ. ನಇಮ್ಮ ಪ್ರಿಯತಮ ಅಥವಾ ಪ್ರಿಯತಮೆ ನೀವು ಹೇಳಿದಂತೆ ಕೇಳುವ ಸಮಯ ಇದು. ಇದನ್ನು ಚೆನ್ನಾಗಿ ಬಳಸಿಕೊಳ್ಳಿ. 

ಕನ್ಯಾ
ಈ ವರ್ಷದ ಆರಂಭದಲ್ಲಿ ನಿಮ್ಮ ಪ್ರೀತಿಗೆ ನೀವಂದುಕೊಂಡಂಥಾ ತೀವ್ರತೆ ಸಿಗದೇ ಇದ್ದಿರಬಹುದು. ಆದರೆ ಒಂದು ಟೈಮ್‌ ಇದೆ, ಅಲ್ಲೀತನಕ ಕಾಯಲೇಬೇಕು. ಈ ಮಳೆಗಾಲ ನಿಮ್ಮ ಬದುಕಿನಲ್ಲೂ ರಮ್ಯ ಚೈತ್ರ ಕಾಲ. ನಿಮ್ಮ ಹೃದಯ ಬೆಚ್ಚಗಾಗುವ ಕಾಲ. ಮಳೆ ಸುರಿದಂತೆ ಪ್ರೀತಿಯ ಘಟನೆಗಳು ಘಟಿಸಬಹುದು. ಈ ನಡುವೆ ಸಣ್ಣಪುಟ್ಟ ಏರಿಳಿತಗಳು, ಕೋಪ ತಾಪಗಳು ಬರುತ್ತವೆ. ಆದರೆ  ಇದು ನಿಮ್ಮ ಪ್ರೀತಿಯನ್ನು ಇನ್ನಷ್ಟು ಗಟ್ಟಿಮಾಡುತ್ತಾ ಹೋಗುತ್ತದೆಯೇ ವಿನಃ ನಿರಾಸೆ ಮಾಡದು.

ತುಲಾ
ಸಂಗಾತಿಯ ಬಗ್ಗೆ ನಿಮಗೆ ಪ್ರೀತಿ ಇದೆ. ಜೊತೆಗೆ ಪೊಸೆಸ್ಸಿವ್‌ನೆಸ್‌ ತುಸು ಹೆಚ್ಚೇ ಇದೆ. ಇದನ್ನು ಈ ವರ್ಷವಾದರೂ ಕಡಿಮೆ ಮಾಡಿ. ಇಲ್ಲದಾವರೆ ನಿಮ್ಮ ಸಂಬಂಧ ಉಸಿರುಗಟ್ಟಿದಂತಾಗಬಹುದು. ಎಂಥಾ ಆತ್ಮೀಯ ಸಂಬಂಧವೇ ಆದರೂ ಒಂದಿಷ್ಟು ಗ್ಯಾಪ್‌ ಇದ್ದರೆ ಚೆನ್ನ. ಇಲ್ಲವಾದರೆ ಅದು ಕಡಿದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಪ್ರೀತಿಸಿ, ಆದರೆ ಅತಿಯಾದ ವ್ಯಾಮೋಹ ಬೇಡ. ಸಂಗಾತಿಯ ಬಗ್ಗೆ ಹೆಚ್ಚೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅವರಿದ್ದ ಹಾಗೇ ಅವರನ್ನು ಒಪ್ಪಿಕೊಳ್ಳುವ ಮನೋಭಾವ ನಿಮಗೂ ಒಳ್ಳೆಯದು, ಅವರಿಗೂ ಒಳ್ಳೆಯದು.

ಸಾಲಿಗ್ರಾಮ ಪೂಜೆಯಿಂದ ನಿಮ್ಮ ಇಷ್ಟಾರ್ಥ ಸಿದ್ಧಿ ಖಚಿತ!

ವೃಶ್ಚಿಕ
ಕಳೆದ ವರ್ಷ ಹೃದಯ ಒಡೆದು ಚೂರಾದ ಅನುಭವ ಆಗಿರಬಹುದು. ಆದರೆ ಮುಂದಿನ ಅವಧಿ ನಿಮ್ಮ ಆ ಗಾಯಗಳನ್ನೆಲ್ಲ ಮಾಯ ಮಾಡಲಿದೆ. ಪ್ರೀತಿಯ ತಂಗಾಳಿ ಈ ಅವಧಿಯಲ್ಲಿ ನಿಮ್ಮ ಹೃದಯಕ್ಕೆ ತಂಪೆರೆಯಲಿದೆ. ನಿಮ್ಮ ಗೃಹಗತಿಗಳ ಪ್ರಕಾರ ಸ್ನೇಹಿತರಲ್ಲೇ ಯಾರೋ ಒಬ್ಬರು ನಿಮ್ಮ ಹೃದಯದಲ್ಲಿ ಜಾಗ ಪಡೆಯಲಿದ್ದಾರೆ. ಈ ಪ್ರೀತಿಯಿಂದ ನೊಂದು ಬೆಂದ ನಿಮ್ಮ ಮನಸ್ಸಿಗೆ ಆಹ್ಲಾದಕರ ಅನುಭವವಾಗಲಿದೆ. ನಿರಾಸೆಯನ್ನು ಮರೆತು ಸಂಭ್ರಮಿಸಿ.

ಮಕರ
ಈ ವರ್ಷದ ನಿಮ್ಮ ಪ್ರೀತಿ ಸ್ಮೂಥ್‌ ಗೋಯಿಂಗ್‌ ವರ್ಷ. ಅಷ್ಟೇ ಅಲ್ಲ, ಪ್ರೀತಿ, ಪ್ರೇಮ ಸಂಬಂಧದ ವಿಚಾರಕ್ಕೆ ಬಂದರೆ ಎಲ್ಲವೂ ನಿಧಾನ ಗತಿಯಲ್ಲಿ ಚಲಿಸಲಿವೆ. ಹಾಗಂತ ಟೆನ್ಶನ್‌ ಬೇಡ. ಒಂದು ಟೈಮ್‌ನ ಬಳಿಕೆ ನಿಮ್ಮ ಪ್ರೀತಿ ಹೆಚ್ಚು ತೀವ್ರತೆ ಪಡೆದುಕೊಳ್ಳಬಹುದು. ಅನೇಕ ಅನಿರೀಕ್ಷಿತ ತಿರುವುಗಳು ಕಂಗಾಲು ಮಾಡಿದರೂ ಉತ್ತಮ ದಿನಗಳು ಮುಂದಿವೆ ಅನ್ನೋದನ್ನು ಮರೀಬೇಡಿ. ಯಾವ ಕಾರಣಕ್ಕೂ ಸಂಗಾತಿಯ ಬಗ್ಗೆ ನಂಬಿಕೆ ಕಳೆದುಕೊಳ್ಳಬೇಡಿ. ನಂಬಿಕೆಗೆ ಹಾನಿ ಮಾಡುವಂಥಾ ಕೆಲಸ ಮಾಡಬೇಡಿ.

ನೀವು ಫ್ಲರ್ಟ್ ಹೌದೋ ಅಲ್ಲವೋ ಅಂತ ನಿಮ್ಮ ರಾಶಿಯೇ ಹೇಳುತ್ತೆ!

ಕುಂಭ
ಈಗ ಪ್ರೀತಿಯ ಬಾಲ್‌ ನಿಮ್ಮ ಕೋರ್ಟ್‌ನಲ್ಲಿದೆ. ತಾನಾಗಿಯೇ ಒಲಿದು ಬಂದ ಪ್ರೀತಿಯನ್ನು ಒಪ್ಪಿ ಮುನ್ನಡೆಯುವುದೋ, ಅಥವಾ ನಿರಾಕರಿಸುವುದೋ ಅನ್ನೋದನ್ನು ನೀವೇ ನಿರ್ಧರಿಸಬೇಕಿದೆ. ನಿಮ್ಮ ಈ ನಿರ್ಧಾರ ನಿಮ್ಮ ಮುಂದಿನ ಭವಿಷ್ಯವನ್ನು ನಿರ್ಣಯಿಸಲಿದೆ. ಯೋಚಿಸಿ ಮುಂದಡಿ ಇಡಿ. ಪ್ರೀತಿಯ ವಿಷಯದಲ್ಲಿ ಯಾಮಾರಬೇಡಿ. ಈ ಬಾರಿ ನೀವು ಆಕರ್ಷಣೆಯ ಕೇಂದ್ರಬಿಂದು ಆಗಲಿದ್ದೀರಿ. ಆದರೆ  ಪರಿಸ್ಥಿತಿಯನ್ನು ನಾಜೂಕಾಗಿ ಹ್ಯಾಂಡಲ್‌ ಮಾಡೋದನ್ನು ಕಲಿಯಿರಿ. 

ಮೀನ
ಮೊದಲೆಲ್ಲ ಅಷ್ಟು ಕಾಳಜಿ ಮಾಡುತ್ತಿದ್ದ  ಗೆಳೆಯ/ತಿ ನನ್ನನ್ನೀಗ ನಿರ್ಲಕ್ಷಿಸುತ್ತಿದ್ದಾರಾ, ನನ್ನಲ್ಲಿ ಆಸಕ್ತಿ ಕಡಿಮೆ ಆಗಿರಬಹುದಾ .. ಈ ಥರದ ಅನುಮಾನಗಳು ಬರಬಹುದು. ಇದಕ್ಕೆ ಉತ್ತಮ ಪರಿಹಾರ ಇಂಥ ಸಂದೇಹಗಳನ್ನು ಅಲ್ಲಲ್ಲೇ ಪರಿಹರಿಸಿಕೊಳ್ಳೋದು. ದಯವಿಟ್ಟು ಮನಸ್ಸಲ್ಲೇ ಇಟ್ಟು ಮುಂದುವರಿಸಬೇಡಿ. ಅವಿವಾಹಿತರಿಗೆ ಲವ್‌ ಅಟ್‌ ಫಸ್ಟ್‌ ಸೈಟ್‌ನಂಥಾ ಅನುಭವಗಳಾಗಬಹುದು. ಆದರೆ  ಇಂಥಾ ಬೆಳವಣಿಗೆ ನಿಮ್ಮ ಬದುಕು ಬದಲಿಸೋದು ಬಿಡೋದು 50-50 ಇರುತ್ತದೆ.

ಜೂನ್‌ ತಿಂಗಳು ಈ ನಾಲ್ಕು ರಾಶಿಗಳಿಗೆ ತುಂಬಾ ಶುಭ!