- Home
- Astrology
- Weekly Horoscope
- Valentine's Day Love Horoscope: ಯಾರ ಲವ್ ಸೆಟ್ಟಾಗುತ್ತೆ, ಯಾರಿಗೆ ಡಿವೋರ್ಸ್? ಯಾರ ಲವ್ ಯಕ್ಕುಟ್ಟೋಗುತ್ತೆ?
Valentine's Day Love Horoscope: ಯಾರ ಲವ್ ಸೆಟ್ಟಾಗುತ್ತೆ, ಯಾರಿಗೆ ಡಿವೋರ್ಸ್? ಯಾರ ಲವ್ ಯಕ್ಕುಟ್ಟೋಗುತ್ತೆ?
Valentine's day 2026 Love Horoscope: 2026ರ ಪ್ರೇಮಿಗಳ ದಿನವು ಫೆಬ್ರವರಿ 7 ರಿಂದ- ಫೆಬ್ರವರಿ 14 ರವರೆಗೆ ನಡೆಯಲಿದೆ. ಪ್ರತಿಯೊಂದು ರಾಶಿಯವರಿಗೂ ಈ ವಾರ ಹೇಗಿರಲಿದೆ? ಯಾರಿಗೆ ಶುಭ? ಯಾರಿಗೆ ಅಶುಭ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮೇಷ (Aries)
ಈ ವಾರ ಮೇಷ ರಾಶಿಯವರಿಗೆ ಗಟ್ಟಿಯಾದ ಪ್ರಣಯ ಶಕ್ತಿಯನ್ನು ತರುತ್ತದೆ. ಹೊಸ ಭಾವನಾತ್ಮಕ ಅನುಭವಗಳು, ಡೇಟಿಂಗ್‌ಗೆ ಇದು ಅತ್ಯುತ್ತಮ ಸಮಯ. ಪಾಸಿಟಿವ್ ರೊಮ್ಯಾಂಟಿಕ್ ವೈಬ್ ಬೇಕಾದಲ್ಲಿ ನಿಮ್ಮ ಕೆಲಸದ ಮೇಜು ಅಥವಾ ಮನೆಯಲ್ಲಿ ಕೆಂಪು ಗುಲಾಬಿಗಳನ್ನು ಇರಿಸಿ.
ವೃಷಭ (Taurus)
ಹಳೆಯ ಲವ್ವರ್ ಅಥವಾ 'ಎಕ್ಸ್' (Ex-partner) ಮತ್ತೆ ನಿಮ್ಮ ಜೀವನಕ್ಕೆ ಬರಬಹುದು, ಇದು ನಿಮಗೆ ಭಾವನಾತ್ಮಕವಾಗಿ ಒಂದು ಪರೀಕ್ಷೆಯಾಗಲಿದೆ. ಹಳೆಯ ತಪ್ಪುಗಳನ್ನು ಮತ್ತೆ ಮಾಡದಂತೆ ತಾರ್ಕಿಕವಾಗಿ ಯೋಚಿಸಿ ನೋಡಿ. ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ನಿಮಗೆ ಸ್ಪಷ್ಟತೆ, ಉತ್ಸಾಹ ಸಿಗುವುದು.
ಮಿಥುನ (Gemini)
ನೀವು ಈ ವಾರಪೂರ್ತಿ ಆಕರ್ಷಕವಾಗಿ, ಲವಲವಿಕೆಯಿಂದ ಸಮಯ ಕಳೆಯುತ್ತೀರಿ. ನಿಮ್ಮ ಕಾಂತಿಯಿಂದಾಗಿ, ಜನರು ನಿಮ್ಮತ್ತ ಸೆಳೆಯಲ್ಪಡುತ್ತಾರೆ. ಭಾವನಾತ್ಮಕ ಸಮತೋಲನಕ್ಕಾಗಿ ನೀವು ಹೊರಗಡೆ ಅಥವಾ ತೆರೆದ ಆಕಾಶದ ಕೆಳಗೆ ಸಮಯವನ್ನು ಕಳೆಯೋದು ಉತ್ತಮ.
ಕಟಕ (Cancer)
ಹಳೆಯ ಅಥವಾ ಟಾಕ್ಸಿಕ್ ಸಂಬಂಧಗಳಿಂದ ಹೊರಬರಲು, ನಿಮ್ಮ ಸ್ವಯಂ-ಗೌರವದ (Self-worth) ಮೇಲೆ ಗಮನ ಕೊಡಿ. ಮನಸ್ಸಿಗೆ ಖುಷಿ ಕೊಡುವ ಮ್ಯೂಸಿಕ್ ಕೇಳಿ.
ಸಿಂಹ (Leo)
ಪ್ರೀತಿಗಿಂತಲೂ ಹೆಚ್ಚಾಗಿ ನಿಮಗೆ ಒಂಟಿತನ, ವೈಯಕ್ತಿಕ ಸಮಯವನ್ನು ಬಯಸಬಹುದು. ಈ ಬ್ರೇಕ್ ಎನ್ನೋದು ನಿಮಗೆ ಲೈಫ್ ಬಗ್ಗೆ ಸ್ಪಷ್ಟತೆ ನೀಡುತ್ತದೆ. ಎಮೋಶನಲ್ ಆಗಿ ಚೆನ್ನಾಗಿರಲು ಕೃಷಿಯಲ್ಲಿ ತೊಡಗಿಸಿಕೊಳ್ಳಿ.
ಕನ್ಯಾ (Virgo)
ಸಾಮಾಜಿಕವಾಗಿ ಈ ವಾರ ತುಂಬ ಕ್ರಿಯೇಟಿವ್ ಆಗಿರುತ್ತದೆ. ನೀವು ಈ ವಾರ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳತ್ತ ಆಕರ್ಷಿತರಾಗುವ ಸಾಧ್ಯತೆಯಿದೆ, ಹೀಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಪ್ರಣಯ ಶಕ್ತಿಯನ್ನು ಹೆಚ್ಚಿಸಲು 'ಅರೋಮಾಥೆರಪಿ' (ಸುಗಂಧ ಚಿಕಿತ್ಸೆ) ಬಳಸಿ.
ತುಲಾ (Libra)
ಲವ್ ಲೈಫ್ ಮಧ್ಯೆ ನಿಮ್ಮ ಕರಿಯರ್ ಜವಾಬ್ದಾರಿ ಮರೆಯಬೇಡಿ. ಕೆಲಸ, ಲವ್ ನಡುವೆ ಸಮತೋಲನ ಕಾಯ್ದುಕೊಳ್ಳಿ. ಏಕಾಗ್ರತೆ ಹೆಚ್ಚಿಸಲು ಬಿಳಿ ಬೆಳಕನ್ನು ಕಲ್ಪಿಸಿಕೊಂಡು, ದೀರ್ಘವಾಗಿ ಉಸಿರಾಡುವ ಪ್ರಾಣಾಯಾಮ ಮಾಡಿ.
ವೃಶ್ಚಿಕ (Scorpio)
ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಅಥವಾ ಮನೆಯಲ್ಲಿ ಅಶಾಂತಿ, ಜಗಳ ಆಗಬಹುದು. ಮನಃಶಾಂತಿಗಾಗಿ ಮ್ಯೂಸಿಕ್ ಕೇಳಿ, ಧ್ಯಾನ ಮಾಡಿ.
ಧನು (Sagittarius)
ವೈಯಕ್ತಿಕವಾಗಿ ನಿಮಗೆ ಲವ್‌ಗಿಂತ ಹೆಚ್ಚಾಗಿ ಸಮಾಜ ಸೇವೆ ಅಥವಾ ಇತರರಿಗೆ ಸಹಾಯ ಮಾಡುವುದರಿಂದಲೇ ಹೆಚ್ಚು ತೃಪ್ತಿ ಸಿಗಲಿದೆ. ಸ್ವಾಧಿಷ್ಠಾನ ಚಕ್ರದ ಸಮತೋಲನ ಬೇಕು ಎಂದಾದಲ್ಲಿ 'ವಂ' (Vam) ಬೀಜ ಮಂತ್ರವನ್ನು ಪಠಿಸಿ.
ಮಕರ (Capricorn)
ರಿಲೇಶನ್‌ಶಿಪ್‌ನಲ್ಲಿ ಸ್ಥಿರತೆ ಇರಲಿದೆ. ಪಾರ್ಟ್ನರ್ ಜೊತೆ ಮತ್ತೆ ಹತ್ತಿರವಾಗಲು, ಪರಸ್ಪರ ಪ್ರೀತಿಯನ್ನು ಪ್ರಶಂಸಿಸಲು ಒಳ್ಳೆಯ ಸಮಯವಾಗಿದೆ. ಮನೆಯಲ್ಲಿ ಕ್ಯಾಂಡಲ್, ಮ್ಯೂಸಿಕ್ ಜೊತೆಗೆ ರಿಲ್ಯಾಕ್ಸ್ ಆಗಿ
ಕುಂಭ (Aquarius)
ಗ್ರಹಗತಿಗಳು ನಿಮ್ಮ ಪರವಾಗಿವೆ. ಪ್ರೀತಿ, ಸಂತೋಷ ಒಲಿದು ಬರಲಿದೆ. ನಿಮ್ಮ ಲವ್ ಬಗೆಗಿನ ಕನಸುಗಳು ನನಸಾಗುವ ಸಾಧ್ಯತೆಯಿದೆ. ಪ್ರೇಮವನ್ನು ಆಕರ್ಷಿಸಲು "ಅಹಂ ಪ್ರೇಮ" ಮಂತ್ರವನ್ನು ಜಪಿಸಿ.
ಮೀನ (Pisces)
ಈ ವಾರ ಸ್ವಲ್ಪ ಎಮೋಶನಲ್ ಆಗಿ ಏರಿಳಿತಗಳು, ಮನಸ್ಸಿನಲ್ಲಿ ಶೂನ್ಯತೆ ಕಾಡಬಹುದು. ತಾಳ್ಮೆ, ಸ್ವಯಂ ಕಾಳಜಿ ಅಗತ್ಯ.
ಎಮೋಶನಲ್ ಸಮತೋಲನಕ್ಕಾಗಿ ಮ್ಯೂಸಿಕ್ ಕೇಳಿ.

