woman in towel metro viral video ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಕೆಲವರು ವಿಚಿತ್ರವಾಗಿ ವರ್ತಿಸುತ್ತಾರೆ. ಮಹಿಳೆಯೊಬ್ಬಳು ಮೈಗೆ ಕೇವಲ ಟವೆಲ್ ಸುತ್ತಿಕೊಂಡು ಮೆಟ್ರೋ ರೈಲು ಹತ್ತಿ ಮೇಕಪ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಸಹ ಪ್ರಯಾಣಿಕರು ಆಶ್ಚರ್ಯದಿಂದ ನಕ್ಕಿದ್ದಾರೆ.

ದೆಹಲಿ ಆಗಲಿ, ಬೆಂಗಳೂರು ಆಗಿರಲಿ ದೇಶದ ಯಾವುದೇ ಮೂಲೆಯ ಹಳ್ಳಿಯಾಗಿರಲಿ. ಇಂಟರ್‌ನೆಟ್ ಅದರಲ್ಲೂ ಇನ್‌ಸ್ಟಾಗ್ರಾಂ, ರೀಲ್ಸ್ ನಲ್ಲಿ ಏನಾದ್ರೂ ಘಟನೆಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಕೆಲವರು ವೈರಲ್ ಆಗಲೆಂದೇ ವಿಚಿತ್ರ ವರ್ತನೆ ತೋರಿಸುತ್ತಾರೆ. ಅಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟಿಜನ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಬಾತ್‌ರೂಂನಿಂದ ನೇರ ಮೆಟ್ರೋಗೆ ಬಂದ ಮಹಿಳೆ!

ಬೆಂಗಳೂರು ಮೆಟ್ರೋದಲ್ಲಿ ಹೋಗುವಾಗ ಮುಂದಿನ ನಿಲ್ದಾಣದಲ್ಲಿ ಯುವತಿಯೊಬ್ಬಳು ಮೈಗೆ ಟವೆಲ್ ಸುತ್ತಿಕೊಂಡು ಟ್ರೈನ್ ಒಳಗೆ ಬಂದರೆ ಒಳಗೆ ಕುಳಿತವರ ಪರಿಸ್ಥಿತಿ ಏನಾಗಬೇಡ? ಅಂತದ್ದೇ ಘಟನೆ ಇಲ್ಲಿ ನಡೆದಿರೋದು. ವಿಡಿಯೋದಲ್ಲಿ ತೋರಿಸಿರುವ ಅಂತಾ ರೈಲಿನೊಳಗೆ ಆಗಮಿಸುವ ಮಹಿಳೆ ಸೀಟಿನಲ್ಲಿ ಕುಳಿತು ಮೇಕಪ್ ಮಾಡಿಕೊಳ್ಳೋದ್ರಲ್ಲಿ ಬ್ಯುಸಿ ಆಗುತ್ತಾಳೆ.

ಆದರೆ ಎದುರುಗಡೆ ಆಸನದಲ್ಲಿ ಕುಳಿತವರು ಸುಮ್ಮನಿದ್ದಾರೆಯೇ? ಮಹಿಳೆ ತಲೆಗೆ ಟವೆಲ್ ಸುತ್ತಿಕೊಂಡಿದ್ದು ನೋಡಿ, ಮುಸಿಮುಸಿ ನಕ್ಕಿದ್ದಾರೆ. ಅವಸರದಲ್ಲಿ ಬಾತ‌ರೂಂನಲ್ಲಿ ನೇರವಾಗಿ ಮೆಟ್ರೋ ಬಂದ್ರ? ಅಥವಾ ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತ ಬಟ್ಟೆ ಧರಿಸುವುದನ್ನೇ ಮರೆತು ಹೀಗೆ ಬಂದಳಾ? ಅನುಮಾನದಲ್ಲಿ ಪ್ರಯಾಣಿಕರು ಈ ಮಹಿಳೆರನ್ನ ಕೆಳಗಿನಿಂದ ಮೇಲಿನವರೆಗೆ ನೋಡುವಲ್ಲಿ ನಿರತರಾಗಿದ್ದಾರೆ.

Scroll to load tweet…