"ಅದೃಷ್ಟವಶಾತ್ ವಧುವಿಗೆ ಹೃದಯಾಘಾತವಾಗಲಿಲ್ಲ ನಾನಾಗಿದ್ದರೆ ಈ ಸ್ನೇಹಿತನ ಕಿವಿಗೆ ಬಾರಿಸುತ್ತಿದೆ" ಎಂದೆಲ್ಲಾ ಬಳಕೆದಾರರು ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.  

ಪ್ರತಿಯೊಬ್ಬರಿಗೂ ಮದುವೆಯ ಬಗ್ಗೆ ಹಲವು ಕನಸುಗಳಿರುತ್ತವೆ. ತನ್ನ ಸಂಗಾತಿ ತನಗೆ ಮಾತ್ರ ಸೀಮಿತವಾಗಿರಬೇಕು, ತನ್ನನ್ನು ಮಾತ್ರ ಪ್ರೀತಿಸಬೇಕು. ಜೀವನದುದ್ದಕ್ಕೂ ಮದುವೆಯೆಂಬ ಪವಿತ್ರ ಬಂಧಕ್ಕೆ ನಿಷ್ಠನಾಗಿರಬೇಕು ಎಂಬೆಲ್ಲಾ ನಿರೀಕ್ಷೆಗಳಿರುತ್ತವೆ. ಹೀಗಿರುವಾಗ ವೇದಿಕೆಯ ಮೇಲೆಯೇ ವಧುವಿನ ಮುಂದೆಯೇ ಯುವತಿಯೊಬ್ಬಳು ಬಂದು ವರನನ್ನು ನೇರವಾಗಿ ಅಪ್ಪಿಕೊಂಡರೆ ಹೇಗನಿಸುತ್ತದೆ ಎಂದು ನೀವೇ ಊಹಿಸಿ.

ಇದ್ದಕ್ಕಿದ್ದಂತೆ ಬುರ್ಖಾ ಧರಿಸಿ ಬಂದಳು ಆಕೆ
ಇತ್ತೀಚಿನ ದಿನಗಳಲ್ಲಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿರುವುದು ಕಂಡುಬರುತ್ತದೆ. ನಂತರ ಬುರ್ಖಾ ಧರಿಸಿದವರೊಬ್ಬರು ವೇದಿಕೆಯ ಮೇಲೆ ಬಂದು ನೇರವಾಗಿ ವರನನ್ನು ಅಪ್ಪಿಕೊಳ್ಳಲು ಪ್ರಾರಂಭಿಸುತ್ತಾರೆ. ಇದನ್ನು ನೋಡಿ ವಧು ಶಾಕ್ ಆಗುತ್ತಾಳೆ. ಇನ್ನೇನು ಆಕೆ ಅಳುವುದೊಂದು ಬಾಕಿ. ಇತರರು ಬಂದು ಬುರ್ಖಾ ತೆಗೆಯುತ್ತಾರೆ. ಆಗ ಬುರ್ಖಾ ಧರಿಸಿರುವುದು ಹುಡುಗಿ ಇಲ್ಲ. ಮದುವೆಗೆ ಬಂದು ತಮಾಷೆ ಮಾಡುತ್ತಿದ್ದ ವರನ ಸ್ನೇಹಿತ ಎಂದು ಗೊತ್ತಾಗುತ್ತದೆ. ಸತ್ಯ ಬಹಿರಂಗವಾದ ನಂತರ ವರನ ಸ್ನೇಹಿತ ವಧುವಿಗೆ ಹೂಗುಚ್ಛವನ್ನು ನೀಡುತ್ತಾನೆ. ಇದನ್ನು ನೋಡಿ ವಧು ನಗುತ್ತಾಳೆ.

View post on Instagram

ಇಲ್ಲಿದೆ ವೈರಲ್ ವಿಡಿಯೋ
ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಪೋಸ್ಟ್ ಮಾಡಿದಾಗಿನಿಂದ, ಲಕ್ಷಾಂತರ ಬಳಕೆದಾರರು ವೀಕ್ಷಿಸಿದ್ದಾರೆ. 88 ಸಾವಿರಕ್ಕೂ ಹೆಚ್ಚು ಬಳಕೆದಾರರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮಾಷೆಯ ಕಾಮೆಂಟ್‌ ಸಹ ಮಾಡಿದ್ದಾರೆ. ಕೆಲವರು "ವಧು ಎಲ್ಲವೂ ಮುಗಿದುಹೋಗಿದೆ ಎಂದು ಭಾವಿಸಿದ್ದಳು" ಎಂದರೆ, ಮತ್ತೆ ಕೆಲವರು "ಸತ್ಯ ಹೊರಬರಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರೆ, ವಧು ಕೋಮಾಗೆ ಹೋಗುತ್ತಿದ್ದಳು", "ದೇವರೇ...ನನ್ನ ಮದುವೆಯಲ್ಲಿ ನನ್ನ ಯಾವುದೇ ಸ್ನೇಹಿತರು ಇಂತಹ ಕೆಲಸ ಮಾಡಲು ಬಿಡಬೇಡಿ", "ಅದೃಷ್ಟವಶಾತ್ ವಧುವಿಗೆ ಹೃದಯಾಘಾತವಾಗಲಿಲ್ಲ ನಾನಾಗಿದ್ದರೆ ಈ ಸ್ನೇಹಿತನ ಕಿವಿಗೆ ಬಾರಿಸುತ್ತಿದೆ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.

ವರನ ನೃತ್ಯ ವೈರಲ್
ಇಂತಹುದೇ ಮತ್ತೊಂದು ಮದುವೆಯ ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಮದುವೆಗಳಲ್ಲಿ ವಧು-ವರರು ನೃತ್ಯ ಮಾಡುವುದನ್ನು ನೋಡಿರಬಹುದು. ಇಂದು ನಾವು ನಿಮಗೆ ವರನ ನೃತ್ಯವನ್ನು ತೋರಿಸುತ್ತೇವೆ. ಇದರಲ್ಲಿ ಅವರು ನೃತ್ಯಕ್ಕಿಂತ ಹೆಚ್ಚು ಜಿಮ್ನಾಸ್ಟಿಕ್ಸ್ ಮಾಡುವುದನ್ನು ಕಾಣಬಹುದು. ಅವನ ತಾಯಿ ಕೂಡ ಈ ಸಮಯದಲ್ಲಿ ಶೇರ್ವಾನಿಯನ್ನು ಮತ್ತೆ ಮತ್ತೆ ಸರಿಪಡಿಸಲು ಬರುತ್ತಿದ್ದಾರೆ. ಅಷ್ಟೇ ಅಲ್ಲ, ವರನ ನೃತ್ಯ ನೋಡಿ ವಧು ಕೂಡ ಮುಜುಗರಕ್ಕೊಳಗಾಗುತ್ತಾಳೆ. ಸುತ್ತಲೂ ನಿಂತ ಜನರು ಇದನ್ನೆಲ್ಲಾ ನೋಡುತ್ತಲೇ ಇದ್ದಾರೆ. ಬನ್ನಿ, ವರನ ಈ ವೈರಲ್ ನೃತ್ಯವನ್ನು ಒಮ್ಮೆ ನೋಡೋಣ.

ಇನ್‌ಸ್ಟಾಗ್ರಾಮ್‌ನಲ್ಲಿ ರೂಪ್ಬಿಸ್ವಾ ಎಂಬ ಪೇಜ್‌ನಲ್ಲಿ ಈ ವಿವಾಹದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮರೂನ್ ಕಲರ್ ಶೇರ್ವಾನಿ ಧರಿಸಿದ ವರನೊಬ್ಬ ಸಲ್ಮಾನ್ ಖಾನ್ ಅವರ ತೇನು ಲೇಕೆ ಮೈ ಜವಂಗಾ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಅವರ ನೃತ್ಯದ ಚಲನೆಗಳನ್ನು ನೋಡಿ ನಿಮ್ಮ ತಲೆ ತಿರುಗಿದರೆ ಆಶ್ಚರ್ಯವಿಲ್ಲ ಬಿಡಿ.

View post on Instagram

ಹೀಗಿವೆ ಕಮೆಂಟ್‌ಗಳು
ಈ ವರನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, 54000 ಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. "ಸಹೋದರನನ್ನು ನೃತ್ಯ ಮಾಡಲು ಪ್ರಚೋದಿಸಿದವರು ಪಾಪಕ್ಕೆ ಹೋಗುತ್ತಾರೆ", "ವಧು ತನ್ನ ಆಯ್ಕೆಯ ಬಗ್ಗೆ ಅನುಮಾನಿಸುತ್ತಿದ್ದಾಳೆ", "ಈ ವಿಡಿಯೋವನ್ನು ನೋಡಿದ ನಂತರ ನನಗೆ ನಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ" ಎಂದೆಲ್ಲಾ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ವರನು ಎನರ್ಜಿ ಡ್ರಿಂಕ್ ಕುಡಿದಿರುವಂತೆ ತೋರುತ್ತಿದೆ ಎಂದು ವಿಡಿಯೋಗೆ ನಗುವ ಇಮೋಜಿ ಹಾಕುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.