ಆರ್ ಬಿಐ ಸಾವಿರ ಹಾಗೂ ಹಳೆ 500 ರೂಪಾಯಿ ಮೇಲೆ ನಿಷೇಧ ಹೇರಿ 10 ವರ್ಷಕ್ಕೆ ಬಂತು. ಈಗ್ಲೂ ಅನೇಕರ ಕೈನಲ್ಲಿ ಈ ನೋಟಿದೆ. ಎಲ್ಲೋ ಬಚ್ಚಿಟ್ಟಿದ್ದ ನೋಟು ಕಣ್ಣಿಗೆ ಕಾಣ್ತಿದ್ದಂತೆ ಕಣ್ಣಲ್ಲಿ ನೀರು ಬರುತ್ತೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮಹಿಳೆ ನೋಟುಗಳನ್ನು ಹಿಡಿದು ಅಳ್ತಿರೋದನ್ನು ನೋಡ್ಬಹುದು. ಹಣ ಕೈನಲ್ಲಿದ್ರೂ ಅದನ್ನು ಬಳಸೋ ಸ್ಥಿತಿಯಲ್ಲಿ ಆಕೆ ಇಲ್ಲ. ಗಂಡನಿಂದ ಹಣವನ್ನು ಸೇವ್ ಮಾಡೋ ಆತುರದಲ್ಲಿ ಮಹಿಳೆ ದೊಡ್ಡ ತಪ್ಪು ಮಾಡಿದ್ದಾಳೆ. ಈಗ ನೋಟಿನ ಮುಂದೆ ಕುಳಿತು ಕಣ್ಣೀರಿಡ್ತಿದ್ದಾಳೆ.

Add Asianetnews Kannada as a Preferred SourcegooglePreferred

ಕ್ಲೀನ್ ಮಾಡುವಾಗ ಸಿಕ್ತು ಹಳೆ 1000 ರೂ. ನೋಟು

ಮಹಿಳೆಯರು ಕದ್ದು ಮುಚ್ಚಿ ಒಂದಿಷ್ಟು ಹಣವನ್ನು ಸೇವ್ ಮಾಡಿರ್ತಾರೆ. ಹಿಂದೆ ಸಾಸಿವೆ ಡಬ್ಬ, ಬೇಳೆ ಡಬ್ಬದಲ್ಲಿ ಹಣವನ್ನು ಇಡ್ತಿದ್ದ ಮಹಿಳೆಯರು ಈಗ ತಮ್ಮ ಸ್ಟೈಲ್ ಬದಲಿಸಿದ್ದಾರೆ. ಕಪಾಟಿನಲ್ಲಿ, ಬಟ್ಟೆ, ಸೀರೆ ಒಳಗೆ ಅನೇಕರು ನೋಟುಗಳನ್ನು ಬಚ್ಚಿಡ್ತಾರೆ. ಮನೆಯಲ್ಲಿ ಯಾರ ಕಣ್ಣಿಗೂ ಕಾಣದೆ ಅವರು ಹಣವನ್ನು ಸೇವ್ ಮಾಡಲು ಕಾರಣ ಇದೆ. ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಬರ್ಲಿ ಎನ್ನುವ ಉದ್ದೇಶವನ್ನು ಅವರು ಹೊಂದಿರ್ತಾರೆ. ಅದೇ ರೀತಿ ಈ ಮಹಿಳೆ ಕೂಡ ಗಂಡನಿಗೆ ಕಾಣಿಸದೆ ಒಂದಿಷ್ಟು ಸಾವಿರ ರೂಪಾಯಿ ನೋಟುಗಳನ್ನು ಬಚ್ಚಿಟ್ಟಿದ್ದರು. ಆದ್ರೆ ನೋಟು ನಿಷೇಧವಾದ ಟೈಂನಲ್ಲಿ ಅವರಿಗೆ ಈ ಹಣ ನೆನಪಿಗೆ ಬರ್ಲಿಲ್ಲ. ಈಗ ನೋಟುಗಳು ಸಿಕ್ಕಿದೆ. ಆದ್ರೆ ಅದ್ರಿಂದ ಲಾಭ ಇಲ್ಲ.

ಸ್ವೀಟ್ ಪ್ರಿಯರಿಗೆ ಗುಡ್ ನ್ಯೂಸ್, ಬೆಂಗಳೂರಿಗೆ ಬರ್ತಿದೆ ವಿಶ್ವ ಪ್ರಸಿದ್ಧ Cheesecake Factory

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಮಹಿಳೆ ಅಳ್ತಿದ್ದಾರೆ. ಅವರ ಮಗಳು ಇದ್ರ ವಿಡಿಯೋ ಮಾಡ್ತಿದ್ದಾರೆ. ಅಮ್ಮ, ಅಪ್ಪನಿಗೆ ಕಾಣದೆ ಸಾವಿರ ರೂಪಾಯಿ ಮುಖಬೆಲೆಯ ಒಂದಿಷ್ಟು ನೋಟನ್ನು ಬಚ್ಚಿಟ್ಟಿದ್ದರು. ಕ್ಲೀನ್ ಮಾಡುವಾಗ ನೋಟು ಸಿಕ್ಕಿದೆ ಅಂತ ಮಗಳು ವಿಡಿಯೋದಲ್ಲಿ ಹೇಳ್ತಿದ್ದಾರೆ.

ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ತಿದ್ದಾರೆ. ಕೆಲವರು ತಾವೂ ಐದು, ಹತ್ತು ಸಾವಿರ ರೂಪಾಯಿ ನಷ್ಟ ಅನುಭವಿಸಿರೋದಾಗಿ ಹೇಳಿದ್ದಾರೆ. ಪುಸ್ತಕದ ಒಳಗೆ ಹಣವಿಟ್ಟು ಮರೆತಿದ್ದೆ, ಈಗ ಸಿಕ್ಕಿದೆ, 11 ಸಾವಿರ ಇತ್ತು ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಮ್ಮ ಮನೆಯಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯದ ನೋಟಿದೆ ಆದ್ರೆ ಪ್ರಯೋಜನವಿಲ್ಲ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಳೆ ನೋಟುಗಳ ಎಕ್ಸ್ಜೇಂಜ್ ಬಗ್ಗೆ ಚರ್ಚೆ ಆಗ್ತಿದೆ. ಕೆಲವರು ಆರ್ ಬಿಐನಲ್ಲಿ ಈ ಹಳೆ ನೋಟುಗಳನ್ನು ಎಕ್ಸ್ಜೇಂಜ್ ಮಾಡ್ಬಹುದು ಅಂದ್ರೆ ಮತ್ತೆ ಕೆಲವರು ಇಲ್ಲ ಎನ್ನುತ್ತಿದ್ದಾರೆ.

ಬೆಂಗಳೂರಲ್ಲಿ ಅಮೆಜಾನ್ ಬೆನ್ನಲ್ಲೇ, ಆಪಲ್ ಕಚೇರಿ ವಿಸ್ತರಣೆ: ವಾರ್ಷಿಕ ₹108 Cr ಬಾಡಿಗೆ, ದಶಕಕ್ಕೆ 1,333 ಕೋಟಿ ಡೀಲ್!

ಆರ್ ಬಿಐನಲ್ಲಿ ಹಳೆ ನೋಟು ಎಕ್ಸ್ಜೇಂಜ್ ಮಾಡ್ಬಹುದೇ?

2016ರಲ್ಲಿ ಕೇಂದ್ರ ಸರ್ಕಾರ ಸಾವಿರ ಹಾಗೂ ಐದು ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ನೋಟುಗಳ ವಿನಿಮಯಕ್ಕೆ ಸಮಯ ನೀಡಿತ್ತು. ಅಷ್ಟರೊಳಗೆ ಜನರು ತಮ್ಮಲ್ಲಿದ್ದ ಹಳೆ ನೋಟುಗಳನ್ನು ಬದಲಿಸಿಕೊಳ್ಳಬೇಕಿತ್ತು. ಈಗ ಹಳೆ ಸಾವಿರ ರೂಪಾಯಿ ನೋಟಿನ ಬದಲಾವಣೆಗೆ ಅವಕಾಶವಿಲ್ಲ. ಆರ್ ಬಿಐ ಕೂಡ ಈ ನೋಟುಗಳನ್ನು ಪಡೆಯುವುದಿಲ್ಲ. ನಿಮ್ಮ ಬಳಿ 2 ಸಾವಿರ ಮುಖ ಬೆಲೆಯ ನೋಟುಗಳಿದ್ದಲ್ಲಿ ಅದನ್ನು ಮಾತ್ರ ನೀವು ಬದಲಿಸಿಕೊಳ್ಳಬಹುದು. ಆರ್ ಬಿಐನ 19 ಶಾಖೆಗಳಲ್ಲಿ 2 ಸಾವಿರ ನೋಟನ್ನು ವಿನಿಮಯ ಮಾಡ್ಕೊಳ್ಳುವ ಅವಕಾಶವಿದೆ. ಈಗ್ಲೇ ಮನೆ ಜಾಲಾಡಿ, ನೋಟುಗಳಿದ್ರೆ ಎಕ್ಸ್ಜೇಂಜ್ ಮಾಡ್ಕೊಳ್ಳಿ. ಸಮಯ ಮುಗಿದ್ಮೇಲೆ ಹಣ ಸಿಕ್ಕಿದ್ರೆ ಪ್ರಯೋಜನ ಇಲ್ಲ.