ನಾರ್ವೆಯ ಅಕ್ವೇರಿಯಂ ಒಂದರಲ್ಲಿ ನೀರುನಾಯಿ ಮರಿಗಳು ತಮ್ಮ ಅಜ್ಜನ ಜೊತೆ ಸೇರಿ ಆಟಿಕೆಗಳನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿವೆ. ಕೆಲಸ ಮುಗಿದ ಮೇಲೆ ಅಜ್ಜ ಪ್ರೀತಿಯಿಂದ ಐಸ್ ಕ್ಯೂಬ್ಸ್ ಬಹುಮಾನ ನೀಡಿದ್ದು, ಪ್ರಾಣಿಗಳ ಈ ಬಾಂಧವ್ಯ ಮತ್ತು ಬುದ್ಧಿವಂತಿಕೆಯ ವಿಡಿಯೋ ಈಗ ವೈರಲ್ ಆಗಿದೆ.
ನಾರ್ವೆಯ ಅಕ್ವೇರಿಯಂ ಒಂದರಲ್ಲಿ ಮನಸಿಗೆ ತಟ್ಟುವ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಕತ್ ವೈರಲ್ ಆಗ್ತಿದೆ. ಈ ವಿಡಿಯೋ ಎಷ್ಟು ಮುದ್ದಾಗಿದೆ ಎಂದರೆ ಇದನ್ನ ಇಷ್ಟಪಡದ ಜೀವಗಳೇ ಇರಲಿಕ್ಕಿಲ್ಲ. ಮನುಷ್ಯನಿಗೆ ಮಾತ್ರ ಬುದ್ಧಿ ಇದೆ ಅಂತಾ ಹೇಳೋದು ಕೇಳಿರ್ತಿರಿ. ಆದರೆ ಈ ವಿಡಿಯೋ ನೋಡುವಾಗ ಮನುಷ್ಯನಷ್ಟೇ ನೀರುನಾಯಿಗಳು ಸ್ಮಾರ್ಟ್, ನಮ್ಮಂತೆ ಅವುಗಳಿಗೆ ಸೂಕ್ಷತೆ ಇದೆ. ಭಾವನೆಗಳಿವೆ ಅಂತಾ ಅನ್ನಿಸದೆ ಇರದು. ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಕ್ವೇರಿಯಂ ಮುಚ್ಚಿದ ನಂತರ, ಕೆಲವು ನೀರುನಾಯಿ ಮರಿಗಳು ತಮ್ಮ ಅಜ್ಜನ ಜೊತೆ ಸೇರಿ ಆಟಿಕೆಗಳನ್ನು ಕ್ಲೀನ್ ಮಾಡುವ ದೃಶ್ಯ ಕಾಣಬಹುದಾಗಿದೆ. ಪ್ರಾಣಿಗಳ ನಡುವಿನ ಈ ಸಹಕಾರ ಮತ್ತು ಶಿಸ್ತನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ನಾರ್ವೆ ಮೂಲದ್ದು ಎಂದು ಹೇಳಲಾಗಿದೆ.
ವಿಡಿಯೋ ಶುರುವಾದಾಗ, ನೀರುನಾಯಿ ಮರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಟಿಕೆಗಳನ್ನು ಒಂದೊಂದಾಗಿ ಸಂಗ್ರಹಿಸುವುದನ್ನು ಕಾಣಬಹುದು. ಹಿರಿಯ ನೀರುನಾಯಿ (ಅಜ್ಜ) ಎಲ್ಲವನ್ನೂ ಗಮನಿಸುತ್ತಾ, ಎಲ್ಲ ಆಟಿಕೆಗಳನ್ನು ಸರಿಯಾದ ಜಾಗದಲ್ಲಿ ಇಡುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಈ ಕ್ಲೀನಿಂಗ್ ಕೆಲಸ ಮುಗಿದ ತಕ್ಷಣ, ಅಜ್ಜ ಆ ಮರಿಗಳಿಗೆ ಬಹುಮಾನವಾಗಿ ಐಸ್ ಕ್ಯೂಬ್‌ಗಳನ್ನು ನೀಡುತ್ತಾನೆ. ಈ ದೃಶ್ಯ ನೋಡಿದ ಪ್ರೇಕ್ಷಕರಿಗೆ ಅಷ್ಟೇ ಖುಷಿ ಕೊಟ್ಟಿದೆ.
ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
ಸೋಶಿಯಲ್ ಮೀಡಿಯಾ(Social media)ದಲ್ಲಿ ಈ ವೈರಲ್ ವಿಡಿಯೋ(Viral video) ನೋಡಿದ ಜನ, ಪ್ರಾಣಿಗಳ ಬುದ್ಧಿವಂತಿಕೆ ಮತ್ತು ಕುಟುಂಬದ ಬಾಂಧವ್ಯವನ್ನು ಕೊಂಡಾಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳು ಜವಾಬ್ದಾರಿ ಕಲಿಯುವಂತೆಯೇ ಈ ನೀರುನಾಯಿ ಮರಿಗಳು ವರ್ತಿಸುತ್ತಿವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಬಹುಮಾನವಾಗಿ ಐಸ್ ಕ್ಯೂಬ್ಸ್ ನೀಡಿರುವುದು, ಶಿಸ್ತಿನ ಜೊತೆಗೆ ಪ್ರೀತಿಯನ್ನೂ ತೋರಿಸುತ್ತದೆ ಎಂದು ಹೇಳಿದ್ದಾರೆ.
ಪ್ರಾಣಿ ಪ್ರಪಂಚದಲ್ಲೂ ಸಹಕಾರ ಮತ್ತು ನಿಯಮಗಳನ್ನು ಕಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ವಿಡಿಯೋ ನೆನಪಿಸುತ್ತದೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಈಗಾಗಲೇ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದ್ದು, ನೈಸರ್ಗಿಕ ಪಾಲನೆ ಮತ್ತು ತಂಡ ಸ್ಫೂರ್ತಿಗೆ ಉತ್ತಮ ಉದಾಹರಣೆಯಾಗಿದೆ.
ಪ್ರಾಣಿಗಳ ವರ್ತನೆಯಿಂದ ಪಾಠ
ತಜ್ಞರ ಪ್ರಕಾರ, ನೀರುನಾಯಿಗಳಂತಹ ಅನೇಕ ಡೊಮೆಸ್ಟಿಕ್ ಎನಿಮಲ್ಸ್ ಮಾನವ ಸಂವಹನವನ್ನು ಹೋಲುವ ಸಂಕೀರ್ಣ ನಡವಳಿಕೆಗಳನ್ನು ಪ್ರದರ್ಶಿಸುತ್ತವೆ. ನಾರ್ವೆಯ ಈ ಕ್ಲಿಪ್, ಪ್ರಾಣಿಗಳು ತಮ್ಮ ಮರಿಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಮೂಲಕ ಹೇಗೆ ಕಲಿಸುತ್ತವೆ ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ಉತ್ತಮ ನಡವಳಿಕೆಗೆ ಐಸ್ ಕ್ಯೂಬ್ಸ್ ಬಹುಮಾನವಾಗಿ ನೀಡಿರುವುದು ಅವುಗಳು ಆ ರೀತಿ ಶಿಸ್ತು, ಉತ್ತಮ ನಡೆವಳಿಕೆ ಕಲಿಯಲು ಸಾ ಈ ದೃಶ್ಯ ಕೇವಲ ಮನರಂಜನೆ ಮಾತ್ರವಲ್ಲ, ಪ್ರಾಣಿಗಳ ಶಿಸ್ತು ಮತ್ತು ಬಾಂಧವ್ಯದ ಬಗ್ಗೆ ಒಂದು ಒಳನೋಟ ನೀಡುವ ಶೈಕ್ಷಣಿಕ ಪಾಠವೂ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.


