Viral video : ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನ ಏನೆಲ್ಲ ಮಾಡ್ತಾರೆ. ಈ ಮಹಿಳೆ ಒಂದು ಕೈ ಮುಂದೆ ಹೋಗಿದ್ದಾಳೆ. ತನ್ನ ಮಗು ಪ್ರಾಣವನ್ನೇ ವೀವ್ಸ್ ಗಾಗಿ ಪಣಕ್ಕಿಟ್ಟಿದ್ದಾಳೆ.
ಮಕ್ಕಳಿಗೆ ಅಮ್ಮನ ಮಡಿಲಿಗಿಂತ ಸುರಕ್ಷಿತ ಜಾಗ ಬೇರಿಲ್ಲ ಅಂತಾರೆ. ಅಮ್ಮನಾದವಳು ಮಕ್ಕಳನ್ನು ಸೆರಗಿನಲ್ಲಿ ಬಚ್ಚಿಟ್ಟು ಆರೈಕೆ ಮಾಡ್ತಾರೆ. ಮಕ್ಕಳಿಗೆ ಸಣ್ಣ ಗಾಯವಾದ್ರೂ ನೋವಾಗೋದು ಅಮ್ಮನಿಗೆ. ಇತ್ತೀಚಿನ ದಿನಗಳಲ್ಲಿ ಅಮ್ಮ – ಮಕ್ಕಳ ಭಾವನೆಗೂ ಬೆಲೆ ಇಲ್ಲದಂತಾಗಿದೆ. ಸೋಶಿಯಲ್ ಮೀಡಿಯಾ, ವೀವ್ಸ್ ಚಟಕ್ಕೆ ಬಿದ್ದಿರುವ ಕೆಲವರು, ಮಕ್ಕಳ ಜೀವದ ಜೊತೆ ಆಟ ಆಡ್ತಿದ್ದಾರೆ. ಅದೇನೋ ಸಾಹಸ ಮಾಡ್ತೇವೆ ಅಂತ ಯಡವಟ್ಟು ಮಾಡ್ಕೊಳ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಾಯಿ ಮಾಡ್ತಿರುವ ಕೆಲಸ ನೆಟ್ಟಿಗರ ಕಣ್ಣು ಕೆಂಪು ಮಾಡಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಬರ್ತಿದ್ದಾಳೆ. ಮನೆ ಹೊರಗೆ ಸ್ಕೂಟರ್ ನಿಂತಿದೆ. ಆ ಸ್ಕೂಟರ್ ಸೀಟ್ ತೆಗೆದು ಡಿಕ್ಕಿ ಅಂದ್ರೆ ಸ್ಟೋರೇಜ್ ಬಾಕ್ಸ್ ನಲ್ಲಿ ಹಾಸಿರುವ ಬೆಡ್ ಮೇಲೆ ಮಗುವನ್ನು ಮಲಗಿಸ್ತಿದ್ದಾಳೆ. ಮಗುವನ್ನು ಮಲಗಿಸಿದ್ದಲ್ದೆ ಸೀಟ್ ಮುಚ್ಚಿ, ಸ್ಕೂಟರ್ ಕೀ ತಿರುಪಿ ಹೊರಟು ಹೋಗ್ತಾಳೆ.
ಡಿಕ್ಕಿಯಲ್ಲಿ ಮಗು ಮಲಗಸ್ತಿರುವ ವಿಡಿಯೋ ನೋಡಿದ್ರೆ ಶಾಕ್ ಆಗುತ್ತೆ. ಇನ್ನು ಸೀಟ್ ಹಾಕಿರೋದನ್ನು ನೋಡಿದ್ರೆ ಉಸಿರುಗಟ್ಟಿದ ಅನುಭವ ಆಗುತ್ತೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ವಿಡಿಯೋ ನೋಡಿ ಬಾಯಿಗೆ ಬಂದಂತೆ ಬೈತಿದ್ದಾರೆ.
42 ವರ್ಷದ ಶಿಕ್ಷಕ ತನ್ನದೇ ಶಾಲೆಯ 22 ವರ್ಷದ ವಿದ್ಯಾರ್ಥಿನಿ ಜೊತೆ ಎರಡನೇ ಮದುವೆ, ವೈರ
ಸೋಶಿಯಲ್ ಮೀಡಿಯಾ ಕಮೆಂಟ್
ಇವಳು ತಾಯಿಯೇ ಅಲ್ಲ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಕೊಲೆ ಯತ್ನ ಅಲ್ದೆ ಬೇರೇನೂ ಅಲ್ಲ. ಮಹಿಳೆಯನ್ನು ಬಂಧಿಸಿ ಎನ್ನುವ ಕಮೆಂಟ್ ಕೂಡ ಬಂದಿದೆ. ತಾಯಿಯಾದವಳು ಹೇಗಿರಬೇಕು ಅನ್ನೋದು ಜನಕ್ಕೆ ಗೊತ್ತಿಲ್ಲ, ಮಗುವನ್ನು ಅಪಾಯಕ್ಕೆ ತಳ್ತಿದ್ದಾಳೆ ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಡಿಕ್ಕಿಯಲ್ಲಿ ಮಗು ಮಲಗಿಸಿ ಸೀಟ್ ಕ್ಲೋಸ್ ಮಾಡಿದ್ರೆ ಕೆಲವೇ ಕ್ಷಣದಲ್ಲಿ ಮಗು ಉಸಿರುಗಟ್ಟಿ ಸಾಯುತ್ತೆ. ಅದಕ್ಕೆ ಆಕ್ಸಿಜನ್ ಸಿಗೋದಿಲ್ಲ ಎನ್ನುವ ಆತಂಕವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.
ಸ್ಕೂಟರ್ ನಲ್ಲಿ ಸ್ಟೋರೇಜ್ ಬಾಕ್ಸ್ ಇರೋದು ಹೆಲ್ಮೆಟ್, ವಸ್ತುಗಳನ್ನು ತುಂಬೋದಿಕ್ಕೆ. ಮನುಷ್ಯರನ್ನು ತುಂಬೋದಿಕ್ಕಲ್ಲ. ಸ್ಟೋರೇಜ್ ಬಾಕ್ಸ್ ತುಂಬಾ ಬಿಸಿಯಾಗುತ್ತೆ. ಅಲ್ಲಿ ಮಕ್ಕಳನ್ನು ಮಲಗಿಸೋದು ಬಹಳ ಅಪಾಯಕಾರಿ ಅಂತ ತಜ್ಞರು ಸಲಹೆ ನೀಡಿದ್ದಾರೆ.
ಟೋಲ್‌ನಲ್ಲಿ ಫಾಸ್ಟ್ಯಾಗ್ ಹಣ ಕಟ್ ಮಾಡಬೇಡಿ, ಹೆಂಡ್ತಿಗೆ ಮೆಸೇಜ್ ಹೋಗುತ್ತೆಂದ ಗಂಡ; ಫ್ರೀಯಾಗಿ ಕಳಿಸಿದ ಸಿಬ್ಬಂದಿ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಎಲ್ಲಿದು, ಯಾರದ್ದು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. @jahar_bhaiya ಹೆಸರಿನ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ಖಾತೆಯಲ್ಲಿ ಗಂಡ – ಹೆಂಡತಿ ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಮಗು ವಿಡಿಯೋ ವೈರಲ್ ಆಗ್ತಿದ್ದಂತೆ ಅದನ್ನು ಡಿಲಿಟ್ ಮಾಡಲಾಗಿದೆ. ಆದ್ರೆ ಬೇರೆ ಅಕೌಂಟ್ ಗಳಲ್ಲಿ ಇದು ವೈರಲ್ ಆಗ್ತಿದೆ.
ಇತ್ತೀಚಿಗೆ ಇಂಥ ವಿಡಿಯೋಗಳು ಕಾಮನ್ ಆಗ್ತಿವೆ. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಸಾಹಸ ವಿಡಿಯೋಗಳನ್ನು ಹಾಕ್ತಿರುತ್ತಾರೆ. ಇಂಥ ವಿಡಿಯೋಗಳು ಅವ್ರ ಪ್ರಾಣಕ್ಕೆ ಅಪಾಯಕಾರಿ. ಕೆಲವರು ಇಂಥವರನ್ನು ಫಾಲೋ ಮಾಡಿ, ತಾವೂ ಇಂಥ ಸಾಹಸಕ್ಕೆ ಕೈ ಹಾಕಿ ಬಲಿಯಾಗ್ತಿದ್ದಾರೆ.


