ಕಾರ್ಯಕ್ರಮದಲ್ಲಿ ಹುಡುಗಿಯರು ಸೀರೆ ಧರಿಸಿ ನೃತ್ಯ ಮಾಡಿ ತಾವು ಯಾವುದೇ ನಾಯಕಿಯರಿಗಿಂತ ಕಡಿಮೆಯಿಲ್ಲ ಎಂದು ತೋರಿಸಿದ್ದಾರೆ.
ಕಾಲೇಜು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಫ್ರೆಶರ್ಸ್, ಫೇರ್‌ವೆಲ್ ಅಥವಾ ಯಾವುದೇ ಇತರ ಫಂಕ್ಷನ್ ಆದರಂತೂ ಹುಡುಗ, ಹುಡುಗಿಯರು ನೃತ್ಯ ಪ್ರದರ್ಶನ ನೀಡುವುದು ಕಾಮನ್. ಹಾಗೆಯೇ ಇತ್ತೀಚೆಗೆ ಕೆಲವು ಹುಡುಗಿಯರು ಕಾಲೇಜು ಫೇರ್‌ವೆಲ್ ಸಮಾರಂಭದಲ್ಲಿ ಹಾಡೊಂದಕ್ಕೆ ಅದ್ಭುತ ಪ್ರದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಹುಡುಗಿಯರು ಸೀರೆ ಧರಿಸಿ ನೃತ್ಯ ಮಾಡಿ ತಾವು ಯಾವುದೇ ನಾಯಕಿಯರಿಗಿಂತ ಕಡಿಮೆಯಿಲ್ಲ ಎಂದು ತೋರಿಸಿದ್ದಾರೆ.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರಾದ ಹಾರ್ದಿಕ ತಲ್ವಾರ್ (@hk_talwar29) ಪೋಸ್ಟ್ ಮಾಡಿದ್ದು, ಇವರು ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈಕೆ ಕಟೆಂಟ್ ಕ್ರಿಯೇಟರ್ ಕೂಡ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆಗಾಗ್ಗೆ ತಮ್ಮ ನೃತ್ಯ ವಿಡಿಯೋಗಳನ್ನೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಇದೀಗ ಮೇ ತಿಂಗಳಲ್ಲಿ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಸಮಾರಂಭದಲ್ಲಿ ಹಾರ್ದಿಕ ಹಾಗೂ ಆಕೆಯ ಕೆಲವು ಸ್ನೇಹಿತರು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ಅದು ಜನರಿಗೆ ತುಂಬಾ ಇಷ್ಟವಾಗಿದೆ. ಹಾಗಾಗಿ ವಿಡಿಯೋ ಕೂಡ ವೈರಲ್ ಆಗಿದೆ. ಆದರೆ ನೆಗೆಟಿವ್ ಕಾಮೆಂಟ್ಸ್ ತಪ್ಪಿಸಲು ಅವರು ಕಾಮೆಂಟ್ ವಿಭಾಗವನ್ನು ಕ್ಲೋಸ್ ಮಾಡಿದ್ದಾರೆ. ವಿಡಿಯೋದಲ್ಲಿ, ಹುಡುಗಿಯರು ಆಜಾದ್ ಚಿತ್ರದ ರಾಶಾ ಥಡಾನಿ ಅವರ 'ಉಯಿ ಅಮ್ಮ' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಇದು ಜನಪ್ರಿಯ ಸ್ಪೆಶಲ್ ಸಾಂಗ್ ಆಗಿದ್ದು, ಇದಕ್ಕೂ ಮೊದಲು ಈ ಹಾಡಿಗೆ ಅನೇಕ ಹುಡುಗಿಯರು ನೃತ್ಯ ಮಾಡುವ ವಿಡಿಯೋಗಳು ವೈರಲ್ ಆಗಿರುವುದನ್ನು ನೀವೂ ನೋಡಿರಬಹುದು.
ಇಲ್ಲಿದೆ ನೋಡಿ ವಿಡಿಯೋ
ಹಾರ್ದಿಕ ಬಗ್ಗೆ ಹೇಳುವುದಾದರೆ, ಅವರು ನೃತ್ಯದಲ್ಲಿ ತುಂಬಾ ಸಕ್ರಿಯರಾಗಿದ್ದು, ನೃತ್ಯಕ್ಕೆ ಸಂಬಂಧಿಸಿದ ಇತರ ಹಲವು ವಿಡಿಯೋಗಳನ್ನು ಸಹ ಅವರ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಮಾರಂಭಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಸಹ ಪೋಸ್ಟ್ ಮಾಡಲಾಗಿದ್ದು, ಅವುಗಳೂ ವೈರಲ್ ಆಗುತ್ತಿವೆ. ಒಂದು ವಿಡಿಯೋದಲ್ಲಿ ಅವರು ಸಮಂತಾ ಪ್ರಭು ಅವರ 'ಊ ಅಂಟಾವ ಮಾವ' ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಜನರು ಆ ವಿಡಿಯೋಗೆ ಸಹ ಸಾಕಷ್ಟು ಲೈಕ್ಸ್ ಕೊಟ್ಟಿದ್ದು, ಸುದ್ದಿ ಬರೆಯುವವರೆಗೂ ವಿಡಿಯೋ ಸುಮಾರು 50 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಂದಹಾಗೆ ಅವರು ಈ ಸಮಾರಂಭಕ್ಕೆ ಸಂಬಂಧಿಸಿದ ಅನೇಕ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ದಂಪತಿ ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ವಿವಿಧ ಟೆಕ್ನಿಕ್ ಫಾಲೋ ಮಾಡ್ತಾರೆ. ವೈರಲ್ ಆಗಲು ಅವರು ಏನು ಬೇಕಾದರೂ ಮಾಡೋಕೂ ರೆಡಿ ಇರ್ತಾರೆ. ಅಂತಹ ವಿಡಿಯೋಗಳನ್ನ ನೀವೂ ಈಗಾಗಲೇ ನೋಡಿರ್ಬೇಕು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವವರ ಅನೇಕ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ, ಆಗ್ತಾನೆ ಇರ್ತಾವೆ. ಇವರ ಹುಚ್ಚಾಟಕ್ಕೆ ಜನರೂ ಸಾಕು ಸಾಕಾಗಿ ಹೋಗಿದ್ದಾರೆ. ಇದೀಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ದಂಪತಿ ನಡೆದುಕೊಂಡ ರೀತಿ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಏನಿದೆ ವಿಡಿಯೋದಲ್ಲಿ?
ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ ಕಾಲುವೆಯ ಬಳಿ ನಿಂತಿರುವುದು ಕಂಡುಬರುತ್ತದೆ. ಕಾಲುವೆಯಲ್ಲಿ ನೀರಿನ ಹರಿವು ತುಂಬಾ ವೇಗವಾಗಿದೆ. ಕಾಲುವೆ ತುತ್ತ ತುದಿಗೆ ಬಂದು ನಿಂತ ಇಬ್ಬರೂ ಪರಸ್ಪರ ಹಿಡಿದುಕೊಂಡು ನದಿಗೆ ಬೀಳುತ್ತಾರೆ. ಥೇಟ್ ಸಿನಿಮಾಗಳಲ್ಲಿ ನೋಡುವಂತೆ. ಈ ಸಮಯದಲ್ಲಿ ಅನೇಕ ಜನರು ಅಲ್ಲಿಯೇ ನಿಂತು ಅವರ ಚೆಲ್ಲಾಟ ನೋಡುತ್ತಿದ್ದಾರೆ. ವಿಡಿಯೋದಲ್ಲಿ ಒರ್ವ ವ್ಯಕ್ತಿ ದಂಪತಿಯ ವಿಡಿಯೋ ಸಹ ಮಾಡುತ್ತಿರುವುದು ಕಂಡುಬರುತ್ತದೆ. ಆದ್ರೆ ದೇವ್ರು ದೊಡ್ಡವನು ಅವರಿಬ್ಬರಿಗೂ ಏನೂ ಆಗಿಲ್ಲ.