ಸೋಶಿಯಲ್ ಮೀಡಿಯಾದಲ್ಲಿ ಏನು ಸಾಧ್ಯವಿಲ್ಲ ಹೇಳಿ? ಅರೆ ಕ್ಷಣದಲ್ಲಿ ಜನ ಪ್ರಸಿದ್ಧಿಗೆ ಬರ್ತಾರೆ. ಇದಕ್ಕೆ ಉತ್ತರ ಪ್ರದೇಶದ ಅಜ್ಜ ಉತ್ತಮ ನಿದರ್ಶನ. ಇಳಿ ವಯಸ್ಸಿನಲ್ಲಿ ಅವರ ಸಾಹಸ ಮೆಚ್ಚಲೇಬೇಕು.
ಹೊಸದನ್ನು ಕಲಿಯೋಕೆ ವಯಸ್ಸು ಬೇಕಾಗಿಲ್ಲ, ಮನಸ್ಸು ಮುಖ್ಯ. ಇದು ಎಐ ಕಾಲ. ವಯಸ್ಕರು ಮೊಬೈಲ್, ಲ್ಯಾಪ್ ಟಾಪ್, ರೀಲ್ಸ್, ಎಐ ಅಂತ ಬ್ಯುಸಿ ಇದ್ದಾರೆ. ಆದ್ರೆ ವೃದ್ಧರು ಕಡಿಮೆ ಏನಿಲ್ಲ. ಮಕ್ಕಳು, ಮೊಮ್ಮಕ್ಕಳ ಸಲಹೆ ಪಡೆದು, ಎಐ, ವಿಡಿಯೋ, ಬ್ಲಾಗಿಂಗ್ ಕಲಿತು ಇಳಿ ವಯಸ್ಸಿನಲ್ಲಿ ಹೊಸ ಜೀವನ ಶುರು ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹಿರಿಯ ನಾಗರಿಕರ ಅನೇಕ ವಿಡಿಯೋಗಳು ವೈರಲ್ ಆಗ್ತಿವೆ. ಆದ್ರೆ ಈಗ ವೈರಲ್ ಆಗಿರೋದು ಸ್ವಲ್ಪ ಡಿಫರೆಂಟ್ ಆಗಿದೆ. ತಮ್ಮ 70ನೇ ವಯಸ್ಸಿನಲ್ಲಿ ಮೊದಲ ವ್ಲಾಗ್ (vlog ) ಶುರು ಮಾಡಿದ ವ್ಯಕ್ತಿಯೊಬ್ಬರು ಬರೀ ಒಂದೇ ಒಂದು ವ್ಲಾಗ್ ನಲ್ಲಿ ಫೇಮಸ್ ಆಗಿದ್ದಾರೆ.
ಮೊದಲ ವ್ಲಾಗ್ ಗೆ 22.2 ಮಿಲಿಯನ್ ವೀವ್ಸ್ (views)
ಸೋಶಿಯಲ್ ಮೀಡಿಯಾದಲ್ಲಿ ಏನು ಬೇಕಾದ್ರೂ ಆಗ್ಬಹುದು. ಜನರು ಕೆಲವರನ್ನು ಅಪ್ಪಿಕೊಂಡ್ರೆ ಮತ್ತೆ ಕೆಲವರನ್ನು ತಿರುಗಿಯೂ ನೋಡೋದಿಲ್ಲ. ಎಷ್ಟೋ ದಿನಗಳಿಂದ ವಿಡಿಯೋ ಹಾಕಿ, ವೀವ್ಸ್, ಸಬ್ಸ್ಕ್ರೈಬ್ ಇಲ್ಲದೆ ಬೇಸತ್ತವರು ಅನೇಕರಿದ್ದಾರೆ. ಮತ್ತೆ ಕೆಲವರು ಒಂದೇ ಒಂದು ಪೋಸ್ಟ್ ಗೆ ಫೇಮಸ್ ಆಗಿದ್ದಾರೆ. ಅವರಲ್ಲಿ 70 ವರ್ಷದ ಉತ್ತರ ಪ್ರದೇಶದ ಈ ವಿನೋದ್ ಕುಮಾರ್ ಕೂಡ ಸೇರ್ತಾರೆ. ವಿನೋದ್ ಕುಮಾರ್ ಮೊದಲ ಬಾರಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ವ್ಲಾಗ್ ಪೋಸ್ಟ್ ಮಾಡಿದ್ದಾರೆ. ಅದನ್ನು ಪೋಸ್ಟ್ ಮಾಡಿ 48 ಗಂಟೆಯಾಗಿಲ್ಲ ಆಗ್ಲೇ ಪೋಸ್ಟ್ 22.2 ಮಿಲಿಯನ್ ವೀವ್ಸ್ ಪಡೆದಿದೆ.
ಸೊಳ್ಳೆ ಹತ್ತಿಕ್ಕಲು ಚರಂಡಿಗೆ ಪರದೆ ಹಾಕಿದ ನಗರ ಪಾಲಿಕೆ: ಮೇಯರ್ ಟ್ರೋಲ್, ವಿಡಿಯೋ ವೈರಲ್
ವ್ಲಾಗ್ ನಲ್ಲಿ ಏನಿದೆ?
ವಿನೋದ್ ಕುಮಾರ್ ಮೊದಲ ವ್ಲಾಗ್ ತುಂಬಾ ಚಿಕ್ಕದಿದೆ. ಇದ್ರಲ್ಲಿ ವಿನೋದ್ ಕುಮಾರ್ ತಮ್ಮ ಪರಿಚಯ ಮಾಡ್ಕೊಂಡಿದ್ದಾರೆ. ಸೆಲ್ಫಿ ಮೋಡ್ ನಲ್ಲಿ ಅವರು ವಿಡಿಯೋ ಮಾಡಿದ್ದಾರೆ. ನನಗೆ 70 ವರ್ಷ ವಯಸ್ಸು. ನಾನು ಉತ್ತರ ಪ್ರದೇಶದ ವಿನೋದ್ ಕುಮಾರ್. ಇದು ನನ್ನ ಮೊದಲ ವ್ಲಾಗ್. ನನಗೆ ವ್ಲಾಗ್ ಮಾಡೋಕೆ ಬರೋದಿಲ್ಲ. ಕಲಿಯುತ್ತಿದ್ದೇನೆ. ಕಲಿತು ಇನ್ನಷ್ಟು ವಿಡಿಯೋ ಪೋಸ್ಟ್ ಮಾಡ್ತೇನೆ ಎಂದಿದ್ದಾರೆ.
ವಿನೋದ್ ಕುಮಾರ್ ಈ ವ್ಲಾಗ್ ಹಾಕಿದ ತಕ್ಷಣ ವೈರಲ್ ಆಗಿದೆ. ಜನರು 70ನೇ ವಯಸ್ಸಿನಲ್ಲಿ ಹೊಸದನ್ನು ಕಲಿಯಲು ಆಸಕ್ತಿ ತೋರಿದ ವಿನೋದ್ ಕುಮಾರ್ ಕೆಲ್ಸವನ್ನು ಮೆಚ್ಚಿಕೊಂಡಿದ್ದಾರೆ. ಇಳಿ ವಯಸ್ಸಿನಲ್ಲಿ ಆರಾಮಾಗಿರುವ ಬದಲು, ಕಲಿಕೆಗೆ ಉತ್ಸಾಹ ತೋರಿದ್ದು ಖುಷಿ ನೀಡಿದೆ ಎಂದಿದ್ದಾರೆ. ನಿಮಗೆ ನನ್ನ ಬೆಂಬಲ ಸದಾ ಇದೆ ಅಂತ ಕಮೆಂಟ್ ಮಾಡಿದ್ದಾರೆ. ವಿನೋದ್ ಕುಮಾರ್ ಇನ್ಸ್ಟಾಗ್ರಾಮ್ ನಲ್ಲಿ 65.5 ಕೆ ಫಾಲೋವರ್ಸ್ ಹೊಂದಿದ್ದಾರೆ. ಅವರು 7 ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಈ ವ್ಲಾಗ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊದಲ ವ್ಲಾಗ್ ನಂತ್ರ ವಿನೋದ್ ಕುಮಾರ್ ಇಂದು ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಅವರು ಕಥೆಯೊಂದನ್ನು ಹೇಳಿದ್ದಾರೆ.
ಜಸ್ಟ್ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್!
ಅತಿ ಬೇಗ ಪ್ರಸಿದ್ಧಿಪಡೆಯಲು ಹಾಗೂ ಹಣ ಮಾಡಲು ಜನರು ಸೋಶಿಯಲ್ ಮೀಡಿಯಾ ಮೊರೆ ಹೋಗ್ತಿದ್ದಾರೆ. ಆದ್ರೆ ಕೆಲವರಿಗೆ ಇದು ಮನರಂಜನೆ ಹಾಗೂ ನೋವು ಮರೆಸುವ ಜಾಗವಾಗಿದೆ. ನಿವೃತ್ತಿ ನಂತ್ರ ಮುಂದೇನು ಎನ್ನುವ ಪ್ರಶ್ನೆಗೆ ಸೋಶಿಯಲ್ ಮೀಡಿಯಾ ಉತ್ತರವಾಗ್ತಿದೆ. ಇದು ಮನರಂಜನೆ ಜೊತೆ ಕಲಿಕೆ, ಕೆಲ್ಸ ಎರಡನ್ನೂ ನೀಡ್ತಿದೆ.


