- Home
- Entertainment
- Cine World
- ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ನಾನು ನಟ ಎಂದ ರಾಮ್ ಚರಣ್; ಈ ಶಾಕಿಂಗ್ ಸ್ಟೇಟ್‌ಮೆಂಟ್ ಹೇಳಿದ್ಯಾಕೆ?
ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ನಾನು ನಟ ಎಂದ ರಾಮ್ ಚರಣ್; ಈ ಶಾಕಿಂಗ್ ಸ್ಟೇಟ್‌ಮೆಂಟ್ ಹೇಳಿದ್ಯಾಕೆ?
'ಸಿನಿಮಾ ಕುಟುಂಬದಿಂದ ಬಂದಿರುವುದು ಒಂದು ಅದ್ಭುತ ಅವಕಾಶ. ಮನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಜನರಿದ್ದಾಗ, ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತೇವೆ. ಇಂತಹ ವಾತಾವರಣದಲ್ಲಿ ಬೆಳೆದವರು ನಟನಾ ಶಾಲೆಗೆ ಹೋಗಿ ಕಲಿಯುವವರಿಗಿಂತ ಹೆಚ್ಚು ವೇಗವಾಗಿ ಕಲಿಯುತ್ತಾರೆ' ಎಂದಿದ್ದಾರೆ ರಾಮ್ ಚರಣ್.

ಟಾಲಿವುಡ್ ಸ್ಟಾರ್ ನಟ, ಆರ್‌ಆರ್ ಅರ್ ಚಿತ್ರದ 'ನಾಟು ನಾಟು..' ಹಾಡಿನ ಮೂಲಕ ಪ್ರಪಂಚದಾದ್ಯಂತ ಪ್ರಸಿದ್ಧಿ ಗಳಿಸಿರುವ ರಾಮ್ ಚರಣ್ (Ram Charan) ಇತ್ತೀಚೆಗೆ ಓಪನ್ ಆಗಿ ಮಾತನಾಡಿದ್ದಾರೆ. ಅನೇಕ ನಾಯಕರು ತಮ್ಮ ಕುಟುಂಬದ ಪರಂಪರೆ ಒತ್ತಡ ಸೃಷ್ಟಿಸುತ್ತದೆ ಎಂದು ಹೇಳಿದ್ದರೂ, ನಟ ರಾಮ್ ಚರಣ್ ಮಾತ್ರ ಅನುಕೂಲ ಎನ್ನುತ್ತಿದ್ದಾರೆ. ಆಸ್ಕರ್ ಮಟ್ಟವನ್ನು ತಲುಪಿದ ನಂತರವೂ ಅವರು ತಮ್ಮನ್ನು ತಾವು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.
ಚರಣ್ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಮಾತು:
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ನಟ ರಾಮ್ ಚರಣ್, 'ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾಗಿ ಹುಟ್ಟಿದ್ದರಿಂದ ಆದ ಪ್ರಯೋಜನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ಸಿನಿಮಾ ಕುಟುಂಬದಿಂದ ಬಂದಿರುವುದು ಒಂದು ಅದ್ಭುತ ಅವಕಾಶ.
ಮನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಜನರಿದ್ದಾಗ, ನಾವು ಈ ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತೇವೆ. ಇಂತಹ ವಾತಾವರಣದಲ್ಲಿ ಬೆಳೆದವರು ನಟನಾ ಶಾಲೆಗೆ ಹೋಗಿ ಹೊಸ ವಿಷಯಗಳನ್ನು ಕಲಿಯುವವರಿಗಿಂತ ಹೆಚ್ಚು ವೇಗವಾಗಿ ಕಲಿಯುತ್ತಾರೆ' ಎಂದು ರಾಮ್ ಚರಣ್ ಹೇಳಿದ್ದಾರೆ.
'ಪರಂಪರೆಯುನನ್ನ ಮೇಲೆ ಹೊರೆಯಾಗಿದೆ ಎಂದು ನಾನು ಎಂದಿಗೂ ಭಾವಿಸಿಲ್ಲ. ಆದರೆ ಅದನ್ನು ಅದಕ್ಕಿಂತ ಸ್ಪೆಷಲ್ ಎಂಬಂತೆ, ಒಂದು ಅವಕಾಶವಾಗಿ ನೋಡಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. 'ಆರಂಭದಲ್ಲಿ ನನಗೆ ಕಷ್ಟವಾಗಲಿಲ್ಲ. ಆದರೆ ಪ್ರೇಕ್ಷಕರಿಗೆ ನನ್ನನ್ನು ನಟನಾಗಿ ಸ್ವೀಕರಿಸುವುದು ಕಷ್ಟಕರವಾಗಿರಬಹುದು.
ಏಕೆಂದರೆ ಅವರ ನಿರೀಕ್ಷೆಗಳು ತುಂಬಾ ಹೆಚ್ಚಿರುತ್ತವೆ. ಆದರೆ ಕಾಲಾನಂತರದಲ್ಲಿ, ನಾವು ಮಾಡುವ ಕೆಲಸದ ಮೂಲಕ ಅವರ ಅಭಿಪ್ರಾಯಗಳು ಬದಲಾಗುತ್ತವೆ ಎಂದು ನಾನು ನಂಬುತ್ತೇನೆ' ಎಂದು ಅವರು ಪ್ರಾಮಾಣಿಕವಾಗಿ ಹೇಳಿದರು.
'ನಾನು ನನ್ನನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ನನ್ನ ಕೆಲಸದ ಮೇಲೆ ಗಮನ ಹರಿಸುತ್ತೇನೆ. ಅದು ಮುಗಿದ ಬಳಿಕ, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಮರೆತುಬಿಡುತ್ತೇನೆ.
ಯಶಸ್ಸಿನ ಬಗ್ಗೆ ನಾನು
ಹೆಚ್ಚು ಯೋಚಿಸುವುದಿಲ್ಲ, ತಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ' ಎಂದು ಎಂದು ರಾಮ್ ಚರಣ್ ತಮ್ಮ ಸರಳ ಜೀವನಶೈಲಿಯ ಬಗ್ಗೆ ವಿವರಿಸಿದ್ದಾರೆ. ಜೊತೆಗೆ, 'ಈ ಅಭ್ಯಾಸವು ನನ್ನನ್ನು ಯಾವಾಗಲೂ ಶಾಂತವಾಗಿರಿಸುತ್ತದೆ' ಎಂದು ಅವರು ಹೇಳಿದ್ದಾರೆ.
ರಾಮ್ ಚರಣ್ ಪ್ರಸ್ತುತ ತಮ್ಮ ಮುಂದಿನ ಚಿತ್ರ 'ಪೆದ್ದಿ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಮಾರ್ಚ್ 27, 2026 ರಂದು ಬಿಡುಗಡೆಯಾಗಲಿದೆ. ಅವರ ಮುಂದಿನ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳು ಸೃಷ್ಟಿಯಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

