ವೇದಿಕೆ ಮೇಲೆ ಕಾಲ್ಗೆಜ್ಜೆ ತೊಡಿಸುವಾಗ ವಧು-ವರನ ನಡುವೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.
ತಾಳಿದವನು ಬಾಳಿಯಾನು ಎಂಬ ಮಾತು ನಿಮಗೆಲ್ಲಾ ನೆನಪಿರಬೇಕು. ಇಂದು ವೈರಲ್ ಆಗಿರುವ ವಿಡಿಯೋದಲ್ಲಿ ವರನಿಗೆ ತಾಳ್ಮೆ ಇದ್ದಿದ್ರೆ ಸುದ್ದಿಯಾಗುತ್ತಿರಲಿಲ್ಲ. ಮದುವೆ ಅಂದ್ಮೇಲೆ ಅಲ್ಲಿ ತಮಾಷೆಯೂ ಇರುತ್ತದೆ. ಪ್ರತಿಯೊಂದು ಶಾಸ್ತ್ರದಲ್ಲಿಯೂ ಅದರಲ್ಲೊಂದು ಒಳಾರ್ಥ ಇರುತ್ತದೆ. ಮದುವೆ ಅಂದ್ರೆ ಕೇವಲ ಮಾಂಗಲ್ಯಧಾರಣೆ ಮಾತ್ರವಲ್ಲ. ಮಾಂಗಲ್ಯಧಾರಣೆ ಹೊರತಾಗಿಯೂ ಮದುವವೆಯಲ್ಲಿ ಹಲವು ಶಾಸ್ತ್ರಗಳಿರುತ್ತವೆ. ಇಂದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೇದಿಕೆ ಮೇಲೆಯೇ ವಧು ಮತ್ತು ವರ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಕೋಪಗೊಂಡ ವರ, ವೇದಿಕೆಯಿಂದಲೇ ಕೆಳಗೆ ಇಳಿದು ಹೋಗಿದ್ದಾನೆ.
ತನ್ನ ಸಂಗಾತಿಯೇ ತನ್ನ ಪಾದವನ್ನು ಆತನ ಮೊಣಕಾಲಿನ ಮೇಲೆ ಇರಿಸಿಕೊಂಡು ರೊಮ್ಯಾಂಟಿಕ್ ಆಗಿ ಕಾಲ್ಗೆಜ್ಜೆ ತೊಡಿಸಬೇಕು. ಸೀರೆ ನೆರಿಗೆ ಸರಿ ಮಾಡಲು ಸಹಾಯ ಮಾಡಬೇಕು. ಆಗಾಗ್ಗೆ ಹೂ ಮುಡಿಸುತ್ತಿರಬೇಕು ಎಂದು ಮಹಿಳೆಯರು ಕನಸು ಕಾಣುತ್ತಿರುತ್ತಾರೆ. ಸಿನಿಮಾ ರೀತಿಯಲ್ಲಿಯೇ ನಿಜ ಜೀವನದಲ್ಲಿಯೂ ನಡೆಯಬೇಕು ಅನ್ನೋದು
ಇಂದಿನ ಮಹಿಳೆಯರ ಆಸೆಯಾಗಿರುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ವೇದಿಕೆ ಮೇಲೆ ವಧುವಿಗೆ ಕಾಲ್ಗೆಜ್ಜೆ ತೊಡಿಸಲು ಮುಂದಾಗಿರುತ್ತಾನೆ. ಈ ಸಮಯದಲ್ಲಿ ವಧುವಿನ ತಮಾಷೆ ವರನನ್ನು ರೊಚ್ಚಿಗೇಳುವಂತೆ ಮಾಡಿತ್ತು.
ವೈರಲ್ ವಿಡಿಯೋದಲ್ಲಿ ಏನಿದೆ?
ವೇದಿಕೆ ಮೇಲಿರುವ ಕುರ್ಚಿ ಮೇಲೆ ವಧು ಕುಳಿತಿರುತ್ತಾಳೆ. ಪಕ್ಕದಲ್ಲಿದ್ದ ವರ ಕೈಯಲ್ಲಿ ಸುಂದರವಾದ ಕಾಲ್ಗೆಜ್ಜೆ ಹಿಡಿದುಕೊಂಡು ಬರುತ್ತಾನೆ. ವಧುವಿನ ಮುಂದೆ ಮಂಡಿಯೂರಿ ಕುಳಿತ ವರ, ಆಕೆಯ ಕೋಮಲವಾದ ಪಾದಗಳನ್ನು ತನ್ನ ಮೊಣಕಾಲಿನ ಮೇಲೆ ಇರಿಸಿಕೊಳ್ಳುತ್ತಾನೆ. ಇನ್ನೇನು ಕಾಲ್ಗೆಜ್ಜೆ ಹಾಕಲು ಮುಂದಾಗುತ್ತಿದ್ದಂತೆ, ವಧು ತನ್ನ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾಳೆ. ಆಗ ವರ ಸಹ ನಗುತ್ತಾನೆ. ಎರಡನೇ ಬಾರಿಯೂ ಇದೇ ರೀತಿ ಮಾಡುತ್ತಾಳೆ. ಆಗಲೂ ವರ ಸಹ ಕೋಪದಲ್ಲಿಯೇ ಮುಗಳ್ನಗುತ್ತಾನೆ.
ಇಷ್ಟಕ್ಕೆ ಸುಮ್ಮನಾಗದ ವಧು, ಕಾಲ್ಗೆಜ್ಜೆ ತೊಡಿಸಲು ಬಂದಾಗ ಪಾದವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾಳೆ. ಇದರಿಂದ ನಖಶಿಖಾಂತನಾದ ವರ, ಆಕೆಯ ಕಾಲು ಎಳೆದು ಕುರ್ಚಿಯಿಂದ ಕೆಳಗೆ ಬೀಳಿಸುತ್ತಾನೆ. ನಂತರ ವಧುವಿನ ತಲೆ ಮೇಲೆ ನಾಲ್ಕು ಬಾರಿ ಹೊಡೆಯುತ್ತಾನೆ. ಈ ಸಮಯದಲ್ಲಿಯೂ ವಧು ಕಾಲ್ಗೆಜ್ಜೆ ಹಾಕುವಂತೆ ಸನ್ನೆ ಮಾಡುತ್ತಾಳೆ. ಆದ್ರೆ ಅಲ್ಲಿಂದ ಯುವಕ ಹೋಗುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದು ಹೆಣ್ಣಿನ ಮೇಲಿನ ದಬ್ಬಾಳಿಕೆ
ಈ ವಿಡಿಯೋ ನೋಡಿದ ನೆಟ್ಟಿಗರು, ವಧುವಿನ ಮೇಲೆ ಬಹಿರಂಗವಾಗಿ ಹಲ್ಲೆ ನಡೆಸಿದ ವರನ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಈಗಲೇ ಎಲ್ಲರ ಮುಂದೆ ಈ ರೀತಿ ಹಲ್ಲೆ ಮಾಡ್ತಾನೆ ಅಂದ್ರೆ ಮುಂದೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಮದುವೆ ಆಗಿರದಿದ್ದರೆ, ವಧು ಜಾಣೆಯಾಗಿದ್ದರೆ ಈ ಸಂಬಂಧವನ್ನು ಇಲ್ಲಿಯೆ ಕೊನೆಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಒಂದು ವೇಳೆ ವಧು ಮದುವೆಯಿಂದ ಹಿಂದೆ ಸರಿದ್ರೆ ಪೋಷಕರು ಆಕೆಯನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂದಿದ್ದಾರೆ. ಮತ್ತೆ ಕೆಲವರು ವಧು ಮಾಡಿದ ತಪ್ಪಾದ್ರೂ ಏನು? ಇಷ್ಟು ತಮಾಷೆ ಮಾಡುವ ಸ್ವಾತಂತ್ರ್ಯವೂ ಮಹಿಳೆಯರಿಗಿಲ್ಲವಾ ಎಂದು ಮಹಿಳಾ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕೆಲವರಿಂದ ತಮಾಷೆಯ ಕಮೆಂಟ್‌ಗಳು
ಇನ್ನು ಮತ್ತೊಂದು ವರ್ಗದ ನೆಟ್ಟಿಗರು ಈ ಘಟನೆಯನ್ನು ತಮಾಷೆಯಾಗಿ ಪರಿಗಣಿಸಿ ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ. ವರನಿಗೆ ಇಷ್ಟು ಕೋಪ ಒಳ್ಳೆಯದಲ್ಲ, ಬಹುಶಃ ಅಲ್ಲಿ ಎಲ್ಲರ ಮುಂದೆ ವರನ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿರಬಹುದು. ಆದ್ದರಿಂದ ಆತ ಆ ರೀತಿಯಾಗಿ ವರ್ತಿಸಿರಬಹುದು. ವರನ ಬಗ್ಗೆ ತಿಳಿದಿದ್ದರೆ ವಧು ಆ ರೀತಿಯಾಗಿ ನಡೆದುಕೊಳ್ಳಬಾರದಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು? ಈ ಘಟನೆ ಬಳಿಕ ಏನಾಯ್ತು ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.


