ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡುತ್ತಿರುವ ತಾಯಿಯ ಬಳಿ ಬರಲು ಅಳುತ್ತಿರುವ ಮಗುವಿನ ವೈರಲ್ ವಿಡಿಯೋ ಇದು. ತಾಯಿ ಮತ್ತು ಮಗುವಿನ ಮಮಕಾರವನ್ನು ಚಿತ್ರಿಸುವ ಈ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ.  

ಈ ಹಿಂದೆ ನಾವು ಪ್ರಕಟಿಸಿದ್ದ ಸುದ್ದಿಯಲ್ಲಿ ತಾಯಿ ತನ್ನ ಮಗುವನ್ನು ಕಲ್ಲಿನ ರಾಶಿಯಲ್ಲೇ ಬಿಟ್ಟು ಹಳಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ಮನ ಕಲುಕುವಂತಿತ್ತು. ಈಗ ಇಂತಹುದೇ ವಿಡಿಯೋವೊಂದು ವೈರಲ್ ಆಗಿದೆ. ಅಂದರೆ ಮನುಷ್ಯನ ಬಡತನ ಅವನನ್ನು ಯಾವ ಕೆಲಸ ಮಾಡುವ ಮಟ್ಟಕ್ಕಾದರೂ ಕೊಂಡೊಯ್ಯುತ್ತದೆ. ಮಗು ಅಳುತ್ತಿದ್ದರೂ, ಕಾಯಿಲೆಗೆ ಬಿದ್ದರೂ ತಾಯಿ ಇದಾವುದನ್ನು ಲೆಕ್ಕಿಸದೆ ಕೆಲಸ ಮಾಡಬೇಕಾದ ಸಂದರ್ಭ ಬಂದೇ ಬರುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ
ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದು ಬಳಕೆದಾರರ ಹೃದಯ ಮುಟ್ಟಿದೆ. ವಿಡಿಯೋದಲ್ಲಿ ಒರ್ವ ಮಹಿಳೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತಿದೆ. ವಿಡಿಯೋ ನೋಡಿದರೆ ಬಹುಶಃ ಆಕೆ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿರುವಂತೆ ತೋರುತ್ತದೆ. ಆಕೆಯ ಪುಟ್ಟ ಮಗು ಕೂಡ ಅಲ್ಲಿಯೇ ಇದೆ (ಅಂದರೆ ಸ್ಟೇಜ್‌ ಸಮೀಪದಲ್ಲಿ ಆಕೆಯ ಸ್ನೇಹಿತೆ ಎತ್ತಾಡಿಸುತ್ತಿದ್ದಾಳೆ). ಆದರೆ ಮಗು ಪದೇ ಪದೇ ತಾಯಿಯತ್ತ ಕೈ ಮಾಡಿ ಬಳಿಗೆ ಬರಲು ಪ್ರಯತ್ನಿಸುತ್ತಿದೆ. ಇದನ್ನು ನೋಡಿದರೆ ಯಾರಿಗಾದರೂ ಒಂದು ರೀತಿ ಬೇಸರವಾಗುತ್ತದೆ.

ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಸೀರೆ ಧರಿಸಿದ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವೇದಿಕೆಯ ಹಿಂದೆ ಕೇವಲ ಒಂದೂವರೆಯಿಂದ ಎರಡು ವರ್ಷ ವಯಸ್ಸಿನ ಮಹಿಳೆಯ ಪುಟ್ಟ ಮಗು ತನ್ನ ತಾಯಿಯ ಬಳಿಗೆ ಬರಲು ಅಳುತ್ತಿದೆ. ಆದರೆ ಮಗುವನ್ನು ಎತ್ತಿಕೊಂಡ ಹುಡುಗಿ ತಾಯಿಯತ್ತ ಹೋಗದಂತೆ ತಡೆಯುತ್ತಾಳೆ. ಆದರೂ ಅದು ತನ್ನ ಕೈಯನ್ನು ಬಿಡಿಸಿಕೊಂಡು ತಾಯಿಯ ಬಳಿಗೆ ಹೋಗಲು ಬಯಸುತ್ತದೆ. ಕೊನೆಗೆ ತಾಯಿ ಆ ಹುಡುಗಿಗೆ ಮಗುವನ್ನು ಸ್ವಲ್ಪ ಸಮಯದವರೆಗೆ ಹಿಡಿದಿಟ್ಟುಕೊಳ್ಳಲು ಸನ್ನೆ ಮಾಡುತ್ತಾಳೆ. ಇಲ್ಲಿ ತಾಯಿಯ ಪ್ರೀತಿ ಮತ್ತು ಬಡತನದೊಂದಿಗಿನ ಹೋರಾಟ ನೋಡಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

View post on Instagram

ಲಕ್ಷಾಂತರ ಲೈಕ್ಸ್ ಪಡೆದುಕೊಂಡ ವಿಡಿಯೋ
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಇಲ್ಲಿಯವರೆಗೆ ಲಕ್ಷಾಂತರ ವೀಕ್ಷಣೆಗಳು ಮತ್ತು ಲೈಕ್ಸ್‌ ಗಳಿಸಿದೆ. ಬಳಕೆದಾರರು ಸಹ ತಮ್ಮ ಭಾವನೆಗಳನ್ನು ಹೊರಹಾಕಿದ್ದು, ಕಾಮೆಂಟ್‌ ವಿಭಾಗದಲ್ಲಿ ತಾಯಿಯ ಬಗ್ಗೆ, ಕರುಣೆ ಮತ್ತು ಸಹಾನುಭೂತಿಯನ್ನು ವ್ಯಕ್ತವಡಿಸಿದ್ದಾರೆ.

ಓರ್ವ ಬಳಕೆದಾರರು, "ಅಮ್ಮ ನೃತ್ಯ ಮಾಡುತ್ತಿಲ್ಲ, ಜೀವನ ಅವಳನ್ನು ನೃತ್ಯ ಮಾಡುವಂತೆ ಮಾಡುತ್ತಿದೆ' ಎಂದು ಬರೆದರೆ, ಮತ್ತೊಬ್ಬ ಬಳಕೆದಾರರು, “ಓ ಜಗತ್ಜನನಿ ಮಾ ವೈಷ್ಣೋ, ಈ ಇನ್ನೊಬ್ಬ ತಾಯಿ ನಿಮ್ಮ ಉಪಸ್ಥಿತಿಯಲ್ಲಿ ಏಕ ಅಸಹಾಯಕಳಾಗಿದ್ದಾಳೆ, ಮಾ ಎಲ್ಲರ ಆಸೆಗಳನ್ನು ಪೂರೈಸುತ್ತಾಳೆ" ಎಂದು ಹೇಳಿದ್ದಾರೆ. ಬಹುತೇಕರು "ಬಡವನೊಬ್ಬ ಮಾತ್ರ ಬಡವನ ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬಲ್ಲ, ಸಹೋದರ, ನೀನು ಏನು ಬೇಕಾದರೂ ಹೇಳು, ವಿಡಿಯೋ ನೋಡಿದ ತಕ್ಷಣ ನನ್ನ ಕಣ್ಣಲ್ಲಿ ನೀರು ಬಂತು" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನೋಡಬಹುದು.

ಇದೇ ತರಹದ ವಿಡಿಯೋ
ಈ ಹಿಂದೆಯೂ ಇಂತಹುದೇ ವಿಡಿಯೋ ವೈರಲ್ ಆಗಿತ್ತು. ಅದನ್ನು _prasad_dargude7788 Instagram ಪೇಜ್‌ನಿಂದ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋದಲ್ಲಿ ರೈಲ್ವೆ ಹಳಿಗಳನ್ನು ಹಾಕುವ ಕೆಲಸವು ಸುಡುವ ಬಿಸಿಲಿನಲ್ಲಿ ನಡೆಯುತ್ತಿದೆ ಎಂದು ತೋರಿಸುತ್ತದೆ. ಪುರುಷ ಮತ್ತು ಮಹಿಳಾ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ, ಮಗುವಿನ ಅಳುವ ಶಬ್ದ ಕೇಳಿಸುತ್ತದೆ. ನಂತರ ಒಬ್ಬ ಮಹಿಳೆ ಓಡಿಹೋಗಿ ಕಲ್ಲುಗಳ ನಡುವೆ ಮಲಗಿದ್ದ ಮಗುವನ್ನು ಎತ್ತಿಕೊಳ್ಳುತ್ತಾಳೆ. ನಂತರ ಆ ಮಗುವನ್ನು ಸಮಾಧಾನಪಡಿಸಿ, ಕರೆತಂದು ಕಲ್ಲುಗಳ ನಡುವೆ ಕೂರಿಸಿ, ಮತ್ತೆ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸುತ್ತಾಳೆ. ಒಂದು ವರ್ಷ ಕೂಡ ತುಂಬದ ಆ ಹುಡುಗಿ ಕಲ್ಲುಗಳೊಂದಿಗೆ ಆಟವಾಡುತ್ತಿರುವುದು ಕಂಡುಬರುತ್ತದೆ. ಬಡತನ ಮತ್ತು ತಾಯ್ತನದ ನಡುವಿನ ಮಹಿಳೆಯ ಹೋರಾಟದ ವಿಡಿಯೋ ಬಳಕೆದಾರರನ್ನು ಭಾವುಕರನ್ನಾಗಿ ಮಾಡಿದೆ.