ಈ ಹಳ್ಳಿಯಲ್ಲಿ, ವಿಷಪೂರಿತ ಹಾವು ಕಚ್ಚಿದರೂ ಯಾರೂ ಸಾಯುವುದಿಲ್ಲ. ಇದರ ಹಿಂದೆ ಒಂದು ಆಸಕ್ತಿದಾಯಕ ಕಥೆಯಿದೆ.

ಯಾರಿಗಾದ್ರೂ ಹಾವು ಕಚ್ಚಿದರೆ ಏನಾಗುತ್ತೆ?, ತಕ್ಷಣ ಅಲ್ಲೇ ಪ್ರಾಣ ಬಿಡ್ತಾರೆ ಅಲ್ವಾ. ಆದ್ರೆ ಉತ್ತರ ಪ್ರದೇಶದಲ್ಲಿ ಒಂದು ಹಳ್ಳಿ ಇದೆ. ಅದು ಒಂದು ವಿಶೇಷತೆಗೆ ಹೆಸರುವಾಸಿಯಾಗಿದೆ. ಹೌದು, ಈ ಹಳ್ಳಿಯಲ್ಲಿ, ವಿಷಪೂರಿತ ಹಾವು ಕಚ್ಚಿದರೂ ಯಾರೂ ಸಾಯುವುದಿಲ್ಲ. ಇದರ ಹಿಂದೆ ಒಂದು ಆಸಕ್ತಿದಾಯಕ ಕಥೆಯಿದೆ. ಬನ್ನಿ ಈ ವಿಶಿಷ್ಟ ಹಳ್ಳಿಯ ಬಗ್ಗೆ ತಿಳಿದುಕೊಳ್ಳೋಣ...

ಉತ್ತರ ಪ್ರದೇಶದ ವಿಶಿಷ್ಟ ಗ್ರಾಮ
ಉತ್ತರ ಪ್ರದೇಶವು ದೇಶದ ಅತಿದೊಡ್ಡ ರಾಜ್ಯವಾಗಿದೆ. ಇಲ್ಲಿ 75 ಜಿಲ್ಲೆಗಳಿವೆ. ಈ ರಾಜ್ಯದ ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಒಂದು ಹಳ್ಳಿಯಂತೂ ಪೂರ್ತಿಯಾಗಿ ಧಾರ್ಮಿಕ ನಂಬಿಕೆಗಳಿಂದಲೇ ಆವೃತವಾಗಿದೆ. ದೇಶಾದ್ಯಂತದ ಭಕ್ತರು ಪೂಜೆಗೆಂದು ಈ ಹಳ್ಳಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಂದಹಾಗೆ ಈ ಹಳ್ಳಿ ಸಹರಾನ್‌ಪುರದಲ್ಲಿದೆ. ಮಹಾಭಾರತ ಕಾಲದ ಗ್ರಾಮವಾದ ಈ ಹಳ್ಳಿಯ ಹೆಸರು ಜರೋಡ ಪಾಂಡ. ಈ ಹಳ್ಳಿಯಲ್ಲಿರುವ ಬಾಬಾ ನಾರಾಯಣದಾಸರ ದೇವಾಲಯವು ದೇಶಾದ್ಯಂತ ಪ್ರಸಿದ್ಧವಾಗಿದೆ.

12 ಗ್ರಾಮಗಳ ಮೇಲೆಯೂ ಆಶೀರ್ವಾದವಿದೆ
ಜರೋಡ ಪಾಂಡ ಸೇರಿದಂತೆ ಕಿಶನ್‌ಪುರ, ಜೈಪುರ, ಶೇರ್‌ಪುರ, ಘಿಸರ್‌ಪಾಡಿ, ಕಿಶನ್‌ಪುರ, ಚರ್ತವಾಲ್, ಖುಸ್ರೋಪುರ, ಮೊಗ್ಲಿಪುರ, ಚೋಕ್ಡಾ, ಘಿಸುಖೇರಾ, ನ್ಯಾಮು ಎಂಬ 12 ಗ್ರಾಮಗಳ ಮೇಲೆ ಬಾಬಾ ನಾರಾಯಣ ದಾಸರ ಆಶೀರ್ವಾದ ಎಷ್ಟಿದೆಯೆಂದರೆ ಇಲ್ಲಿ ಯಾರಿಗಾದರೂ ವಿಷಪೂರಿತ ಹಾವು ಕಚ್ಚಿದರೆ ಅವರಿಗೆ ಹಾವಿನ ಕಡಿತದಿಂದ ಏನೂ ಆಗಲ್ಲ, ಅಂದ್ರೆ ಅವರು ಸಾಯುವುದಿಲ್ಲ. ಸ್ಥಳೀಯ ಜನರು ಹೇಳುವ ಪ್ರಕಾರ ಬಾಬಾ ನಾರಾಯಣ ದಾಸ್ ಎಂಬ ವ್ಯಕ್ತಿ ಸುಮಾರು 700 ವರ್ಷಗಳ ಹಿಂದೆ ಜರೋಡ ಪಾಂಡ ಹಳ್ಳಿಯ ನಿವಾಸಿಗಳಾದ ಉಗ್ರಸೇನ್ ಮತ್ತು ಮಾತಾ ಭಗವತಿ ದಂಪತಿಗಳಿಗೆ ಜನಿಸಿದರು.

ಪ್ರತಿಯೊಂದು ಆಸೆಯೂ ಈಡೇರುತ್ತೆ
ಬಾಬಾ ನಾರಾಯಣ್ ದಾಸ್ ಶಿವ ಭಕ್ತರಾಗಿದ್ದರು. ಹಾಗೆಯೇ ಅನೇಕ ಸ್ಥಳಗಳಲ್ಲಿ ತಪಸ್ಸು ಮಾಡಿದ್ದರು ಎಂದು ಹೇಳಲಾಗುತ್ತದೆ. ಬಾಬಾ ತಮ್ಮ 80 ಬಿಘಾ ಭೂಮಿಯನ್ನು ಶಿವ ದೇವಾಲಯಕ್ಕೆ ದಾನ ಮಾಡಿದ್ದರು. ಈ ಮಹಾಭಾರತ ಯುಗದ ಶಿವ ದೇವಾಲಯದ ಬಳಿ ಧ್ಯಾನ ಮಾಡುವಾಗ ಅವರು ತಮ್ಮ ಸೇವಕ, ಕುದುರೆ, ನಾಯಿಯೊಂದಿಗೆ ಭೂಮಿ ತಾಯಿಯ ಮಡಿಲಲ್ಲಿ ವಿಲೀನರಾದರು. ಬಾಬಾ ಅವರ ಸಮಾಧಿಯನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ, ಅದು ಇಂದಿಗೂ ಅಲ್ಲೇ ಇದೆ. ದೂರದೂರದಿಂದ ಜನರು ತಮ್ಮ ಇಚ್ಛೆಯೊಂದಿಗೆ ಈ ಸಮಾಧಿ ಬಳಿ ಬರುತ್ತಾರೆ. ಇಲ್ಲಿಗೆ ಬರುವವರ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿಯವರೆಗೆ ನಾವು ಯಾರನ್ನೂ ಹಾವು ಕಚ್ಚಿ ಸತ್ತ ಬಗ್ಗೆ ಕೇಳಿಲ್ಲ ಎಂದು ಗ್ರಾಮದ ಪಂಡಿತರು ಹೇಳುತ್ತಾರೆ.

ಜುಡ ಮಂದಿರ
ಬಾಬಾ ನಾರಾಯಣದಾಸರಿಂದ 12 ಹಳ್ಳಿಗಳ ಮೇಲೂ ವಿಶೇಷ ಆಶೀರ್ವಾದವಿದೆ ಎಂದು ಹೇಳಲಾಗುತ್ತದೆ. ಹಾವು ಕಚ್ಚಿದ ನಂತರವೂ ಯಾರೂ ಯಾವುದೇ ಔಷಧವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಬಾಬಾ ನಾರಾಯಣದಾಸರ ಸಮಾಧಿ ಸ್ಥಳ ಇಲ್ಲಿದೆ ಮತ್ತು ಈ ಗ್ರಾಮಕ್ಕೆ ದೈವಿಕ ಶಕ್ತಿ ಇದೆ. ಹಿಂದೆ ಇಲ್ಲಿ ಬಿದಿರಿನ ಕಾಡು ಇತ್ತು. ಬಾಬಾ ಅವರ ಸಮಾಧಿ ಸ್ಥಳವನ್ನು ಜುಡ ಎಂದು ಕರೆಯಲಾಗುತ್ತಿತ್ತು. ಅದಕ್ಕಾಗಿಯೇ ಇದನ್ನು ಜುಡ ಮಂದಿರ ಎಂದೂ ಕರೆಯುತ್ತಾರೆ. ಗ್ರಾಮಸ್ಥರ ಪ್ರಕಾರ ಇಂದು ಬಾಬಾ ನಾರಾಯಣದಾಸರ ಸಮಾಧಿಯಿರುವ ಸ್ಥಳವು ಒಂದು ಕಾಲದಲ್ಲಿ ಬಿದಿರಿನ ಕಾಡಾಗಿತ್ತು. ಈ ಪ್ರದೇಶವನ್ನು ಸ್ಥಳೀಯ ಭಾಷೆಯಲ್ಲಿ ಜುಡ ಎಂದು ಕರೆಯಲಾಗುತ್ತದೆ.