ಸಾಕ್ಸ್ ವಾಸನೆ ಸಹಿಸೋದು ಕಷ್ಟ. ಥಿಯೇಟರ್ ನಂತ ಎಸಿ ಜಾಗದಲ್ಲಿ ಸಾಕ್ಸ್ ವಾಸನೆ ಮತ್ತಷ್ಟು ಹಿಂಸೆ ನೀಡುತ್ತೆ. ಈ ಸಾಕ್ಸ್ ನಿಂದ ಏನೆಲ್ಲ ಆಯ್ತು, ಏನೆಲ್ಲ ಮಾಡ್ಬೇಕು ಅಂತ ವಿನಂತಿ ಮಾಡಿದ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. 

ಒಳ್ಳೆ ಮೂಡ್ ನಲ್ಲಿ ನಿಮ್ಮ ಫೆವರೆಟ್ ಹೀರೋ ಸಿನಿಮಾ ನೋಡೋಕೆ ಥಿಯೇಟರ್ (Theater) ಗೆ ಹೋಗಿರ್ತೀರಿ. ಇನ್ನೇನು ಸಿನಿಮಾ ಶುರು ಆಗ್ತಿದೆ, ಅಷ್ಟರಲ್ಲಿ ಗಬ್ಬು ವಾಸನೆಯೊಂದು ನಿಮ್ಮ ಮೂಗಿಗೆ ಬಡಿಯುತ್ತೆ. ಅದು ನಿಲ್ಲೋ ವಾಸ್ನೆ ಅಲ್ವೇ ಅಲ್ಲ. ಸಿನಿಮಾ (Cinema) ಮುಗಿಯೋವರೆಗೂ ನೀವು ಈ ವಾಸನೆಯಲ್ಲಿ ಇರ್ಲೇಬೇಕು. ಯಾಕೆಂದ್ರೆ ಆ ವಾಸನೆ ಬರ್ತಿರೋದು ಪಕ್ಕದಲ್ಲಿರುವ ವ್ಯಕ್ತಿ ಸಾಕ್ಸ್ ನಿಂದ. ಪಾಪ್ ಕಾರ್ನ್ ತಿಂತಾ ಇಲ್ಲ ಐಸ್ ಕ್ರೀಂ ತಿಂತಾ ಸಿನಿಮಾ ನೋಡ್ಬೇಕು ಅಂದ್ಕೊಂಡಿದ್ದ ನಿಮಗೆ ಇಡೀ ಮೂರು ಗಂಟೆ ಮೂಗು ಮುಚ್ಚಿಕೊಳ್ಳೋದೆ ಆಗ್ಬಿಟ್ರೆ ಸಿಟ್ಟು ಬರದೆ ಇರುತ್ತಾ? ಇದು ಉಗುಳೋಕೂ ಆಗದ, ನುಂಗೋಕು ಆಗದ ಬಿಸಿ ತುಪ್ಪ. ಪಕ್ಕದಲ್ಲಿರೋನು ಹಣ ಕೊಟ್ಟೆ ಥಿಯೇಟರ್ ಗೆ ಬಂದಿರ್ತಾನೆ. ನಿಮ್ಮ ಸಾಕ್ಸ್ ವಾಸ್ನೆ ಬರ್ತಿದೆ, ಸ್ವಲ್ಪ ಹೊರಗೆ ಹೋಗಿ ಅಂದ್ರೆ ಅಲ್ಲೊಂದು ಯುದ್ಧವಾಗೋದು ಗ್ಯಾರಂಟಿ. ಈ ಸಮಸ್ಯೆ ಎದುರಿಸಿದ ವ್ಯಕ್ತಿಯೊಬ್ಬರು ರೆಡ್ಡಿಟ್ ಮೂಲಕ ಜನರಿಗೆ ಸವಿನಯ ವಿನಂತಿ ಮಾಡ್ಕೊಂಡಿದ್ದಾರೆ. ದಯವಿಟ್ಟು ಥಿಯೇಟರ್ ಗೆ ಬರೋವಾಗ ಸಾಕ್ಸ್, ಶೂ ಕ್ಲೀನ್ ಮಾಡ್ಕೊಂಡು ಬನ್ನಿ ಅಂತ ಬರೆದುಕೊಂಡಿದ್ದಾರೆ.

ರೆಡ್ಡಿಟ್ ಪೋಸ್ಟ್ (Reddit Post ) ನಲ್ಲಿ ಏನಿದೆ? : r/bangalore ಹೆಸರಿನ ರೆಡ್ಡಿಟ್ ಪೋಸ್ಟ್ ನಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಆತ್ಮೀಯರೇ, ವಿನಮ್ರ ವಿನಂತಿ. ದಯವಿಟ್ಟು ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿಕೊಂಡು ಥಿಯೇಟರ್ಗೆ ಬನ್ನಿ ಅಂತ ಶೀರ್ಷಿಕೆ ಬರೆಯಲಾಗಿದೆ. ಇದು ಬರೀ ಬೆಂಗಳೂರಿನ ವಿಷ್ಯವಲ್ಲ. ಭಾರತ, ವಿಶ್ವದಾದ್ಯಂತ ಜನರು ಈ ಸಮಸ್ಯೆ ಎದುರಿಸ್ತಿದ್ದಾರೆ. ನಾನು ಬರೀ ಬೆಂಗಳೂರಿನ ಕೆಲ ಮಾಲ್, ಥಿಯೇಟರ್ ಗೆ ಹೋದ ಕಾರಣ, ಇಲ್ಲಿನ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ ಅಂತ ಪೋಸ್ಟ್ ಹಾಕಿದ್ದಾರೆ.

ಸಾಕ್ಸ್ (Socks) ವಾಸ್ನೆ ನಿಯವಾಗಿಯೂ ಅಸಹನೀಯ. ಇದ್ರಿಂದ ಪಕ್ಕದಲ್ಲಿ ಕುಳಿತವರಿಗೆ ವಿಪರೀತ ತೊಂದ್ರೆ ಆಗುತ್ತೆ. ಪಾಪ್ ಕಾರ್ನ್, ಕೋಲ್ಡ್ ಡ್ರಿಂಕ್ಸ್, ಫಾಸ್ಟ್ ಫುಡ್ ತಿಂತಾ ಸಿನಿಮಾ ಆನಂದ ಪಡೆಯೋದು ಕಷ್ಟ ಸಾಧ್ಯ. ಸಾಕ್ಸ್ ವಾಸನೆ ಹೋಗಲಾಡಿಸೋಕೆ ಥಿಯೇಟರ್ ನಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹಾಗಾಗಿ ನಾವೇ ಕೆಲ ರೂಲ್ಸ್ ಫಾಲೋ ಮಾಡ್ಬೇಕು ಅಂತ ಬಳಕೆದಾರ ಹೇಳಿದ್ದಾನೆ.

ರೆಡ್ಡಿಟ್ ಪೋಸ್ಟ್ ನಲ್ಲಿ ನೀಡಿದ ಸಲಹೆ ಏನು? :

• ಸಾಧ್ಯವಾದ್ರೆ ಥಿಯೇಟರ್ ಗೆ ಬರುವ ಮುನ್ನ ಪಾದಗಳನ್ನು ಕ್ಲೀನ್ ಮಾಡ್ಕೊಂಡು ಬನ್ನಿ. ಬಳಸಿದ ಸಾಕ್ಸ್ ಬಿಚ್ಚಿ, ಬೇರೆ ಸಾಕ್ಸ್ ಹಾಕಿಕೊಂಡು ಬನ್ನಿ.

• ಆಫೀಸ್ ನಿಂದ ನೇರವಾಗಿ ಥಿಯೇಟರ್ ಗೆ ಬರ್ತಿದ್ದೀರಿ, ನಿಮ್ಮ ಸಾಕ್ಸ್ ವಾಸನೆ ಬರ್ತಿದೆ ಅನ್ನೋದು ನಿಮಗೆ ಗೊತ್ತಿದ್ರೆ ಶೂನಿಂದ ನಿಮ್ಮ ಕಾಲನ್ನು ತೆಗೆಯಬೇಡಿ. ಶೂ ಒಳಗೆ ಸಾಕ್ಸ್ ಇದ್ರೆ ವಾಸನೆ ಅಷ್ಟಾಗಿ ಬರೋದಿಲ್ಲ.

ಸಮಸ್ಯೆ ಎಲ್ಲರಿಗೂ ಇದೆ. ಆದ್ರೆ ಅದನ್ನು ನಾವೇ ಬಗೆಹರಿಸಿಕೊಳ್ಬೇಕು. ಎಲ್ಲರೂ ಜವಾಬ್ದಾರಿಯುವ ಪ್ರಜೆಗಳಾಗಿ ವರ್ತಿಸೋಣ ಅಂತ ಪೋಸ್ಟ್ ನಲ್ಲಿ ಬರೆಯಲಾಗಿದೆ.

ಸಾಕ್ಸ್ ವಾಸನೆ ಬರದಂತೆ ಏನು ಮಾಡ್ಬೇಕು? :

ಅಡುಗೆ ಸೋಡಾ : ಸಾಕ್ಸ್‌ ಗಳ ಮೇಲೆ ಒಂದು ಅಥವಾ ಎರಡು ಚಮಚ ಬೇಕಿಂಗ್ ಪೌಡರ್ ಸಿಂಪಡಿಸಿ. 30 ನಿಮಿಷಗಳ ಕಾಲ ಹೀಗೆಯೇ ಬಿಟ್ಟು ನಂತ್ರ ಸಾಕ್ಸ್ಗಳನ್ನು ಕ್ಲೀನ್ ಮಾಡಿ.

ನಿಂಬೆ ರಸ : ನಿಂಬೆ ರಸವನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಬೇಕು. ನಂತ್ರ ವಾಸನೆ ಬರುವ ಸಾಕ್ಸ್ಗಳ ಮೇಲೆ ಾದನ್ನು ಸಿಂಪಡಿಸಿ. ಇಡೀ ರಾತ್ರಿ ಸಾಕ್ಸ್ಗಳನ್ನು ಗಾಳಿಯಲ್ಲಿ ನೇತುಹಾಕಿ. ಬೆಳಿಗ್ಗೆ ಸಾಕ್ಸ್ಗಳಿಂದ ತಾಜಾ ವಾಸನೆ ಬರುತ್ತದೆ. ನೀವು ಅದನ್ನು ತೊಳೆಯಬೇಕಾಗಿಲ್ಲ.

ಬಿಳಿ ವಿನೆಗರ್ : ಸ್ಪ್ರೇ ಬಾಟಲಿಗೆ ಅರ್ಧ ಟೀಚಮಚ ವಿನೆಗರ್ ಮತ್ತು ನೀರನ್ನು ಬೆರೆಸಿ ದ್ರಾವಣವನ್ನು ತಯಾರಿಸಿ. ಅದನ್ನು ಸಾಕ್ಸ್ ಮೇಲೆ ಸಿಂಪಡಿಸಿ. ಸಾಕ್ಸ್ ನ್ನು ರಾತ್ರಿಯಿಡೀ ಗಾಳಿಯಲ್ಲಿ ಇಟ್ಟರೆ ವಾಸನೆ ಕಡಿಮೆ ಆಗುತ್ತದೆ.