ಟೈಮ್ಸ್ ಔಟ್ ಸಮೀಕ್ಷೆಯಲ್ಲಿ ಭಾರತದ ಈ ನಗರ ಅತ್ಯಂತ ರೋಮ್ಯಾಂಟಿಕ್ ನಗರವೆಂದು ಘೋಷಿಸಲ್ಪಟ್ಟಿದೆ. ಜಾಗತಿಕವಾಗಿ 49ನೇ ಸ್ಥಾನದಲ್ಲಿರುವ ಇದು ಡೇಟಿಂಗ್ ಮತ್ತು ತಾತ್ಕಾಲಿಕ ಸಂಬಂಧಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ.

ರೊಮ್ಯಾಂಟಿಕ್‌ ನಗರ, ಡೇಟಿಂಗ್‌ ನಗರ, ಪ್ರೀತಿಯನ್ನು ಕಂಡುಕೊಳ್ಳುವ ನಗರ- ಹೀಗೆಲ್ಲ ನೀವು ನಿಮ್ಮ ಬೆಂಗಳೂರನ್ನು ಕರೆಯಲು ಇಷ್ಟಪಡುತ್ತೀರಾ? ನಿಮ್ಮ ಪಾಲಿಗೆ ಬೆಂಗಳೂರು ಪರಿಪೂರ್ಣವೇ ಆಗಿರಬಹುದು, ನೀವು ಇಲ್ಲಿ ಲವ್‌ ಮಾಡಿರಬಹುದು, ನಿಮಗೆ ರೊಮ್ಯಾಂಟಿಕ್‌ ಪಾರ್ಟ್‌ನರ್‌ ಸಿಕ್ಕಿರಬಹುದು. ಆದರೆ, ಒಂದು ಸಮೀಕ್ಷೆಗಳ ಪ್ರಕಾರ ಬೆಂಗಳೂರಲ್ಲ ರೊಮ್ಯಾಂಟಿಕ್‌ ನಗರ. ಹಾಗಾದರೆ ಯಾವುದು? 2025ರಲ್ಲಿ ಟೈಮ್ಸ್ ಔಟ್ ನಡೆಸಿದ ಸಮೀಕ್ಷೆಯು ಮುಂಬಯಿಯನ್ನು 'ಭಾರತದ ಅತ್ಯಂತ ರೋಮ್ಯಾಂಟಿಕ್ ನಗರʼ ʼಪ್ರೀತಿ ಮತ್ತು ಸಂಗಾತಿಯನ್ನು ಹುಡುಕಲು ಪರಿಪೂರ್ಣ ನಗರ' ಎಂದು ಘೋಷಿಸಿದೆ.

ಇದೊಂದು ಜಾಗತಿಕ ಸಮೀಕ್ಷೆಯಂತೆ. ಈ ಸಮೀಕ್ಷೆಯಲ್ಲಿ ಸಿದ್ಧಪಡಿಸಲಾದ ಪಟ್ಟಿಯಲ್ಲಿ ಮುಂಬಯಿ ನಗರ 49ನೇ ಸ್ಥಾನದಲ್ಲಿದೆ. ಮತ್ತು ಇದು ಪಟ್ಟಿಯಲ್ಲಿರುವ ಭಾರತದ ಏಕೈಕ ನಗರ! ಅಯ್ಯೋ, ಈ ಅಖಂಡ ಭಾರತದ ಇನ್ಯಾವ ನಗರವೂ ಪ್ರೀತಿಸಲು ಅರ್ಹತೆ ಇಲ್ಲದೇ ಹೋಯಿತೇ ಎಂದು ಕೊರಗಬೇಡಿ. ಟೈಮ್ಸ್‌ ಈ ಸಮೀಕ್ಷೆಗಾಗಿ ಹಲವು ಮಾನದಂಡಗಳನ್ನು ನಿಗದಿಪಡಿಸಿತ್ತು. ಆ ಮಾನದಂಡಗಳಲ್ಲಿ ಮುಂಬಯಿ ಕನಿಷ್ಠ ಪಕ್ಷ 49ನೇ ಸ್ಥಾನಕ್ಕಾದರೂ ಏರಲು ಅರ್ಹವಾಯ್ತು ಎಂದು ಸಂತೋಷಪಡೋಣ.

ಹಾಗಾದರೆ ಆ ಮಾನದಂಡಗಳು ಯಾವುವು? ಪ್ರೇಮಿಗಳು ಹುಡುಕಿಕೊಂಡು ಹೋಗಬಲ್ಲ ಆಹಾರ, ಅವರಿಗೆ ಪೂರಕವಾದ ಸಂಸ್ಕೃತಿ, ಅವರಿಗೆ ಇಷ್ಟವಾಗುವ ನೈಟ್‌ಲೈಫ್‌, ಸಕಾರಣವೆನಿಸಬಲ್ಲ ಕಾಸ್ಟ್‌ ಆಫ್‌ ಲಿವಿಂಗ್‌ ಮತ್ತು ಕ್ವಾಲಿಟಿ ಆಫ್‌ ಲೈಫ್.‌ ಮುಂಬಯಿಯಲ್ಲಿ ನೈಟ್‌ಲೈಫ್‌ ಚೆನ್ನಾಗಿದೆ. ಬೆಂಗಳೂರಿನಂತಲ್ಲ. ಬೆಂಗಳೂರಿನಲ್ಲೂ ಸಾಕಷ್ಟು ಅದು ಇದೆಯಾದರೂ ಇನ್ನೂ ಮುಂಬಯಿ ಮಟ್ಟಕ್ಕಿಲ್ಲ. ಮುಂಬಯಿ ಆ ಮಟ್ಟಿಗೆ ಗ್ಲೋಬಲ್‌ ಮೆಟ್ರೋ ಸಿಟಿಯೇ ಸರಿ. ಅಲ್ಲಿ ರಾತ್ರಿಯೂ ಮೆಟ್ರೋ ಓಡಾಡುತ್ತದೆ. ರಾತ್ರಿಯೂ ಇಡೀ ನಗರ ಎಚ್ಚೆತ್ತಿರುತ್ತದೆ. ರುಚಿಕರವಾದ ಬೀದಿ ಆಹಾರ ಸಿಗುತ್ತದೆ. ಸುಂದರವಾದ ಪ್ರವಾಸಿ ಸ್ಥಳಗಳು ಇವೆ. ಮಿಶ್ರ ಸಂಸ್ಕೃತಿಗಳ ಸಂಯೋಜನೆ ಇದೆ. ಅಂದರೆ ದೇಶದ ಎಲ್ಲ ಕಡೆಯಿಂದ, ಹಲವೊಮ್ಮೆ ವಿದೇಶಗಳ ಜನ ಕೂಡ ಇಲ್ಲಿ ಬಂದು ಐಕ್ಯತೆಯಿಂದ ವಾಸಿಸುತ್ತದ್ದಾರೆ. ಭಯೋತ್ಪಾದಕ ಕೃತ್ಯ ಮೊದಲಾದವುಗಳ ಭಯ ಕಡಿಮೆ.

ಈ ಪಟ್ಟಿಯಲ್ಲಿ ಮುಂಬಯಿ ಭಾರತದ ಅಗ್ರ ನಗರವಾಗಿ ಹೊರಹೊಮ್ಮಿದೆ. ತನ್ನ ಪ್ರಣಯದ ಮೋಡಿ, ರೋಮಾಂಚಕ ಬೀದಿ ಆಹಾರ ಮತ್ತು ಹೆಚ್ಚಿನ ಸಂತೋಷದ ಮಟ್ಟಗಳಿಗೆ (ಹ್ಯಾಪಿನೆಸ್‌ ಲೆವೆಲ್)‌ ಹೆಸರುವಾಸಿಯಾದ ಮುಂಬಯಿಯನ್ನು ವಿಶ್ವದ ರೊಮ್ಯಾಂಟಿಕ್‌ ಮತ್ತು ಮೂರನೇ ಅತ್ಯಂತ ಸಂತೋಷದಾಯಕ ನಗರವೆಂದು ಹೆಸರಿಸಲಾಗಿದೆ. ಟೈಮ್ಸ್‌ ಪಟ್ಟಿಯಲ್ಲಿ ಕೇಪ್ ಟೌನ್ ಅಗ್ರಸ್ಥಾನದಲ್ಲಿದೆ. ಬ್ಯಾಂಕಾಕ್, ನ್ಯೂಯಾರ್ಕ್, ಮೆಲ್ಬೋರ್ನ್ ಮತ್ತು ಲಂಡನ್ ಈ ಪಟ್ಟಿಯಲ್ಲಿ ಮೇಲ್ಗಡೆ ಇವೆ.

ಈ ರಾಜ್ಯದ ಹೆಣ್ಮಕ್ಕಳು ಬಹಳ ಬೇಗ ಸಾಯ್ತಾರೆ!

ಇಲ್ಲಿ ಒಂದನ್ನು ಗಮನಿಸಬೇಕು. ಮುಂಬಯಿ ಭಾರತದ ಬೆಸ್ಟ್‌ ಪ್ಲೇಸ್‌ ಫಾರ್‌ ಡೇಟಿಂಗ್‌ ಎಂದು ಹೆಸರಿಸಲಾಗಿದೆಯಾದರೂ, ಈ ಪಟ್ಟಿಗೂ ಲಾಂಗ್‌ಟೈಮ್‌ ಕಮಿಟ್‌ಮೆಂಟ್‌ಗೂ ಸಂಬಂಧವಿಲ್ಲ. ಇದು ತಾತ್ಕಾಲಿಕ ಸಂಬಂಧಗಳಿಗೆ ಬೆಸ್ಟ್‌ ಎನ್ನಲಾಗಿದೆ. ನಿಮ್ಮ ಈ ಡೇಟಿಂಗ್‌ ಅಥವಾ ರೊಮ್ಯಾನ್ಸ್‌ಗಳು ಮದುವೆಯಾಗಿ ಪರಿವರ್ತನೆಯಾಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ತಾತ್ಕಾಲಿಕ ಸಂಗಾತಿಗಳನ್ನು ಹುಡುಕಿಕೊಳ್ಳುವುದಾದರೆ ಮುಂಬಯಿ ಬೆಸ್ಟ್.‌ ನಿಮ್ಮ ನಿಮ್ಮ ವರ್ಕ್‌ಪ್ಲೇಸ್‌ನಲ್ಲೇ ಸಿಗಬಹುದು. ನಿಮ್ಮ ನಿಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡ ಬಳಿಕ ಬೇರೆಯಾಗಲೂಬಹುದು. ಬೆಂಗಳೂರಿನಂಥ ಇನ್ನೂ ಸಾಂಪ್ರದಾಯಿಕ ಮನಸ್ಥಿತಿ ಇಟ್ಟುಕೊಂಡ ನಗರದಲ್ಲಿ ಇದೆಲ್ಲ ಸುಲಭವಲ್ಲ.

ಗೆಳತಿಯನ್ನು ಭೇಟಿಯಾಗಲು ಆರಿಸಿಕೊಂಡ ಸ್ಥಳವೇ ಮುಳುವಾಯ್ತು ಪ್ರೇಮಿಗೆ!‌