ರೊಮೇನಿಯನ್ ಮೂಲದ ಪ್ರವಾಸಿ ಮಹಿಳೆ ಮಾರಿಯಾ ಅಲೆಕ್ಸಾಂಡ್ರಾ ಮುಂಬೈನಲ್ಲಿ ನವರಾತ್ರಿಯ ಗರ್ಬಾ ನೃತ್ಯ ನೋಡಿ ಭಾವುಕರಾಗಿದ್ದಾರೆ. ಭಾರತೀಯರ ಸಂಸ್ಕೃತಿ ಮತ್ತು ಭಕ್ತಿಗೆ ಮಾರುಹೋದ ಅವರು, ಈ ಅದ್ಭುತ ದೇಶವನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಹಬ್ಬಗಳ ದೇಶ. ವರ್ಷವಿಡೀ ತಿಂಗಳಿಗೊಮ್ಮೆಯಾದರೂ ಹಬ್ಬಗಳು ಇರುತ್ತವೆ. ಈಗ ಮುಂದೆ ಬೆಳಕಿನ ಹಬ್ಬ ದೀಪಾವಳಿಗೆ ಬರಲಿದೆ. ಈಗ ಭಾರತೀಯರು ನವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತದಲ್ಲಿನ ಹಬ್ಬಗಳು ಕೇವಲ ಆಚರಣೆಗಳಲ್ಲ. ಅದಕ್ಕೊಂದು ಹಿನ್ನೆಲೆ ಇದೆ, ಸ್ಪಷ್ಟ ಕಾರಣಗಳಿವೆ. ಜೀವನ ಸಂದೇಶಗಳಿವೆ. ಇದೇ ಕಾರಣಕ್ಕೆ ಏನೋ ಭಾರತೀಯ ಹಬ್ಬಗಳು ವಿದೇಶಿಯರನ್ನು ಆಕರ್ಷಿಸುತ್ತವೆ. ಹಬ್ಬಗಳ ಸಂಭ್ರಮ ನೋಡಲೆಂದೇ ವಿದೇಶಿಯರು ಭಾರತಕ್ಕೆ ಬರುತ್ತಾರೆ. ಇಲ್ಲಿನ ವರ್ಣರಂಜಿತ ಸಂಪ್ರಾದಾಯ, ಸಂಗೀತ, ನೃತ್ಯ ಜನರಲ್ಲಿನ ಉತ್ಸಾಹ ಅಪರಿಚಿತವಾಗಿರುವ ವಿದೇಶಿಯರಿಗೆ ಹೆಚ್ಚು ಇಷ್ಟವಾಗುತ್ತವೆ.
ಇತ್ತೀಚೆಗೆ ಭಾರತ ಪ್ರವಾಸಕ್ಕೆ ಬಂದಿದ್ದ ರೊಮೇನಿಯನ್ ಮೂಲದ ಮಾರಿಯಾ ಅಲೆಕ್ಸಾಂಡ್ರಾ ಪ್ರವಾಸಿ ಮಹಿಳೆಯೊಬ್ಬರು ಮುಂಬೈನ ಮಾಲ್ ಒಂದಕ್ಕೆ ಹೋಗಿದ್ದಾರೆ. ಅಲ್ಲಿ ಮಹಿಳೆಯರು ಪುರುಷರು ಒಂದಾಗಿ ಗರ್ಬಾ(Garba) ನೃತ್ಯ ಪ್ರದರ್ಶಿಸುತ್ತಿದ್ದಾರೆ. ಈ ವಿಶೇಷ ದೃಶ್ಯವನ್ನು ಕಣ್ತುಂಬಿಕೊಂಡ ವಿದೇಶಿ ಮಹಿಳೆ. ಮೊಬೈಲ್ನಲ್ಲಿ ಸೆರೆಹಿಡಿದಿದ್ದರೆ. ಆ ವಿಡಿಯೋವನ್ನು ತಮ್ಮ Instagram ನಲ್ಲಿ b.marialexandra ಹೆಸರಿನ ತಮ್ಮ ಅಕೌಂಟ್ನಲ್ಲಿ ಹಂಚಿಕೊಂಡಿದ್ದು, ಇಂಥ ಅದ್ಭುತ ಭಾರತವನ್ನು ಬಿಟ್ಟುಬರಲು ಮನಸಾಗುವುದಿಲ್ಲ ಎಂದು ಭಾವುಕವಾಗಿ ಬರೆದುಕೊಂಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಇದೀಗ ಭಾರತೀಯರ ಮನಸು ಗೆದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗರ್ಬಾ ನೋಡಿ ಭಾವುಕರಾದ ವಿದೇಶಿ ಮಹಿಳೆ
ನವರಾತ್ರಿಯ ಸಮಯದಲ್ಲಿ ಗರ್ಬಾ ಮತ್ತು ದಾಂಡಿಯಾ ನೃತ್ಯ ಭಾರತದಲ್ಲಿ ಜನಪ್ರಿಯವಾಗಿದೆ. ಜನರು ಈ ಹಬ್ಬವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತ್ರವಲ್ಲದೆ, ಕೆಲವೊಮ್ಮೆ ಅಪರಿಚಿತರೊಂದಿಗೆ ಸಹ ಸೇರಿ ಆಚರಿಸುತ್ತಾರೆ. ಗರ್ಬಾದ ವಿಶಿಷ್ಟತೆಯೆಂದರೆ ಅದು ನೃತ್ಯವನ್ನು ದುರ್ಗಾ ದೇವಿಯ ಆರಾಧನೆಯೊಂದಿಗೆ ಮಾಡಲಾಗುತ್ತೆ. ಜನರು ಭಕ್ತಿ ಮತ್ತು ಆಚರಣೆಯನ್ನು ಒಟ್ಟಿಗೆ ವಾಸಿಸುವ ಭಾರತೀಯ ಸಂಸ್ಕೃತಿ ಮಾರಿಯಾಗೆ ವಿಶೇಷವಾಗಿ ಕಾಣಿಸಿದೆ.
ಭಾರತದೊಂದಿಗೆ ಸಂಬಂಧವಿರುವಂತೆ ಭಾಸವಾಗುತ್ತಿದೆ..
ಇಂದು ನಾನು ಗರ್ಬಾ ನೋಡುತ್ತಿದ್ದಂತೆ ನಾನು ಭಾರತೀಯಳು. ಅವರ ಆಚರಣೆಯಲ್ಲಿ ನಾನೂ ಇದ್ದೇನೆ ಎಂಬ ಭಾವನೆ ಉಂಟಾಗುತ್ತಿದೆ.. ಭಾರತವನ್ನು ನಾನೇಕೆ ಪ್ರೀತಿಸುತ್ತೇನೆ ಎಂಬ ಬಗ್ಗೆ ವೀಡಿಯೊದಲ್ಲಿ ವಿವರಿಸಿದ್ದಾಳೆ. ಇದಕ್ಕೆ ಇನ್ಸ್ಟಾಗ್ರಾಮ್ನಲ್ಲಿ ಯೂಸರ್ಸ್ ಅದರಲ್ಲೂ ಭಾರತೀಯರು ತುಂಬಾ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. 'ಭಾರತದ ಸೌಂದರ್ಯ ಅದರ ಹಬ್ಬಗಳು ಮತ್ತು ಜನರ ನಡುವಿನ ಬಾಂಧವ್ಯದಲ್ಲಿದೆ' ಎಂದು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು, ಗರ್ಬಾ ಕೇವಲ ನೃತ್ಯವಲ್ಲ. ಅದು ಭಾರತೀಯರ ನಂಬಿಕೆ, ಸಂಸ್ಕೃತಿಯ ಸಂಕೇತವೆಂದು ಬರೆದಿದ್ದಾರೆ.
ಒಟ್ಟಾರೆ, ವಿದೇಶಿ ಮಹಿಳೆಗೆ ಭಾರತದಲ್ಲಿ ಸಂಪ್ರಾದಾಯ, ಗರ್ಬಾ ನೃತ್ಯ, ಜನರು ಒಂದಾಗಿ ದುರ್ಗಾ ದೇವಿಯ ಆರಾಧನೆ ಮಾಡುವುದು ಇವೆಲ್ಲ ದೃಶ್ಯಗಳನ್ನು ಕಂಡು ವಿದೇಶಿ ಮಹಿಳೆ ಭಾವುಕರಾಗಿದ್ದಷ್ಟೇ ಅಲ್ಲದೆ ಎಲ್ಲರೊಳಗಾಗಿ ಒಂದಾದ ಭಾವ ಅನುಭವಿಸಿದ್ದಾಳೆ. ಇದೇ ಕಾರಣಕ್ಕೆ ಮಾರಿಯಾ ವಾಪಸ್ ತಾಯ್ನಾಡಿಗೆ ಹೋಗಲು ಮನಸಾಗದೆ ಭಾವುಕಳಾಗಿದ್ದಾಳೆ.


