21 ವರ್ಷದ ಯುವಕನೋರ್ವ ರೈಲ್ವೆ ಹಳಿ ಮೇಲೆ ಮಲಗಿ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ ಮಾಡಿದ್ದಾನೆ. ಅಷ್ಟೇ ಅಲ್ಲ, ಮೇಲಿಂದ ರೈಲು ಕೂಡ ಹೋಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ: ರಾಜಸ್ಥಾನದ ಬಾಲೋತ್ರಾದಲ್ಲಿ ಒಂದು ಆಶ್ಚರ್ಯಕರ ವಿಡಿಯೋ ಹೊರಬಂದಿದೆ. ಒಬ್ಬ ಯುವಕ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಾಮಾಜಿಕ ಜಾಲತಾಣಗಳಿಗೆ ರೀಲ್ ಮಾಡುತ್ತಿರುವುದು ಕಂಡುಬಂದಿದೆ. 18 ಸೆಕೆಂಡುಗಳ ಈ ವಿಡಿಯೋದಲ್ಲಿ, ಯುವಕ ರೈಲ್ವೆ ಹಳಿಗಳ ಮಧ್ಯೆ ಉಲ್ಟಾ ಮಲಗಿದ್ದು, ಮೇಲಿಂದ ರೈಲು ಹಾದು ಹೋಗುತ್ತಿದೆ. ಆಶ್ಚರ್ಯದ ಸಂಗತಿಯೆಂದರೆ, ಯುವಕನೇ ಮೊಬೈಲ್‌ನಿಂದ ಈ ಅಪಾಯಕಾರಿ ಸಾಹಸವನ್ನು ರೆಕಾರ್ಡ್ ಮಾಡುತ್ತಿದ್ದಾನೆ.

ಮೇಲಿಂದ ರೈಲು ಹೋಯ್ತು... ಯುವಕ ನಗುತ್ತಾ ಎದ್ದ!

ಜೂನ್ 20 ರಂದು ಈ ಘಟನೆ ನಡೆದಿದೆ. ಜಸೋಲ್ ಠಾಣಾ ವ್ಯಾಪ್ತಿಯ ತಿಲ್ವಾಡ ನಿವಾಸಿ 21 ವರ್ಷದ ಕಮಲೇಶ್ ಬಾಲೋತ್ರಾ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಮಲಗಿ ರೀಲ್ ಮಾಡಿ ಅದೇ ದಿನ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ರೈಲು ಹತ್ತಿರ ಬರುತ್ತಿದ್ದಂತೆ ಯುವಕ ತಲೆ ಕೆಳಗೆ ಬಗ್ಗಿಸಿ, ರೈಲು ಹಾದುಹೋಗುವವರೆಗೂ ಹಳಿಗಳ ಮೇಲೆ ಮಲಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

 ರೈಲು ಹೋದ ನಂತರ ಯುವಕ ನಗುತ್ತಾ ಎದ್ದಿದ್ದಾನೆ, ಏನೂ ಆಗಿಲ್ಲ ಎಂಬಂತೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡರು. ಬಾಲೋತ್ರಾ ಎಸ್ಪಿ ಅಮಿತ್ ಜೈನ್ ಅವರ ನಿರ್ದೇಶನದ ಮೇರೆಗೆ ಎಎಸ್ಐ ರಾಕೇಶ್ ಕುಮಾರ್ ತಂಡದೊಂದಿಗೆ ಯುವಕನ ಮನೆಗೆ ದಾಳಿ ನಡೆಸಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಬಂಧಿಸಿದರು. ವಿಚಾರಣೆ ವೇಳೆ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡು ಕೈಮುಗಿದು ಕ್ಷಮೆ ಕೇಳಿದ್ದಾನೆ.

ಈ ಅಪಾಯಕಾರಿ ರೀಲ್ ಬಗ್ಗೆ ರೈಲ್ವೆ ಏನು ಮಾಡುತ್ತೆ?

ರೈಲ್ವೆ ಹಳಿಗಳಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ, ಮುಂದಿನ ಕ್ರಮಕ್ಕಾಗಿ ಯುವಕನನ್ನು ರೈಲ್ವೆ ಸುರಕ್ಷಾ ಪಡೆ (RPF)ಗೆ ಹಸ್ತಾಂತರಿಸಲಾಗಿದೆ. ಇಂತಹ ಸಾಹಸಗಳು ಕಾನೂನುಬಾಹಿರ ಮಾತ್ರವಲ್ಲ, ಪ್ರಾಣಾಪಾಯಕಾರಿಯೂ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಆಕರ್ಷಣೆಯಲ್ಲಿ ಯುವಕರು ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಇಂತಹ ಅಪಾಯಕಾರಿ ಕೃತ್ಯಗಳನ್ನು ಮಾಡುತ್ತಿದ್ದಾರೆ, ಇದು ಅವರ ಪ್ರಾಣಕ್ಕೆ ಕುತ್ತು ತರಬಹುದು. ಇಂತಹ ಅಪಾಯಕಾರಿ ಟ್ರೆಂಡ್‌ಗಳಿಂದ ದೂರವಿರಿ ಮತ್ತು ಇತರರನ್ನು ಕೂಡ ತಡೆಯಿರಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಅಪಾಯಕಾರಿ ವಿಡಿಯೋ ನೋಡಿ

Scroll to load tweet…

ರೈಲು/ಸೇತುವೆ ಬಳಿ ಅಪಾಯಕಾರಿ ವಿಡಿಯೋ

ಇತ್ತೀಚೆಗೆ ಹೆಚ್ಚು ಲೈಕ್ಸ್ ಹಿಂದೆ ಬಿದ್ದಿರುವ ಜನರು ಪ್ರಾಣವನ್ನು ಲೆಕ್ಕಿಸದೇ ವಿಡಿಯೋ ಮಾಡುತ್ತಿರುತ್ತಾರೆ. ಅದರಲ್ಲಿಯೂ ವೇಗವಾಗಿ ಚಲಿಸುತ್ತಿರುವ ರೈಲಿನ ಪಕ್ಕದಲ್ಲಿಯೇ ನಿಂತು ರೀಲ್ಸ್ ಮಾಡುತ್ತಿರುತ್ತಾರೆ. ಈ ರೀತಿಯಲ್ಲಿ ರೀಲ್ಸ್ ಮಾಡುತ್ತಾ ಜನರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಇನ್ನು ಕೆಲವರು ರೈಲು ಸೇತುವೆ ಮೇಲೆ ವಿಡಿಯೋ ಮಾಡುತ್ತಾ ನೀರು ಪಾಲಾಗಿದ್ದಾರೆ.

ಕೈ ಜಾರಿ ಕೆಳಗೆ ಬಿದ್ದ ಯುವತಿ

ಚಲಿಸುವ ರೈಲಿನ ಬಾಗಿಲಲ್ಲಿ ನಿಂತಿದ್ದ ಯುವತಿ ರೀಲ್ಸ್ ಮಾಡುವಾಗ ಜಾರಿ ಬಿದ್ದಿದ್ದಾಳೆ. ಈ ಅಪಾಯಕಾರಿ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈಗ ಈ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗಿತ್ತು. ಈ ವಿಡಿಯೋಗೆ ರೀಲ್ಸ್‌ಗಾಗಿ ಜೀವವನ್ನು ಪಣಕ್ಕಿಡುವುದು ಬುದ್ಧಿವಂತಿಕೆಯಲ್ಲ ಎಂದು ಯುವತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.

View post on Instagram