ಮದುವೆ ಆಗೋದು ಸುಲಭ ಅಲ್ವೇ ಅಲ್ಲ. ಸುಳ್ಳು ಹೇಳಿದ್ರೂ ಕಷ್ಟ, ಸತ್ಯ ಹೇಳಿದ್ರೂ ಕಷ್ಟ. ಸತ್ಯ ಹೇಳಿ ಪ್ರಾಮಾಣಿಕತೆ ತೋರಿದವನ ಸ್ಥಿತಿ ಏನಾಯ್ತು ಅನ್ನೋದು ರೆಡ್ಡಿಟ್ ನಲ್ಲಿ ವೈರಲ್ ಆಗಿದೆ. 

ಒಂದು ಮದುವೆ ಆಗ್ಬೇಕು ಅಂದ್ರೆ ನೂರು ಸುಳ್ಳು ಹೇಳ್ಬೇಕು ಎನ್ನುವ ಮಾತೊಂದಿದೆ. ಆದ್ರೆ ಮದುವೆ ಮಾಡುವಾಗ ಹೇಳಿದ ಸುಳ್ಳು ಮದುವೆ ಆದ್ಮೇಲೆ ನಾನಾ ಸಮಸ್ಯೆ ತರುತ್ತೆ. ಮದುವೆಗೂ ಮುನ್ನ ಸತ್ಯವನ್ನು ಹೇಳ್ಬೇಕು, ಆಗ್ಲೆ ದಾಂಪತ್ಯ ಪಾರದರ್ಶಕವಾಗಿರೋದು. ಅರೇಂಜ್ಡ್ ಮ್ಯಾರೇಜ್ ನಲ್ಲಿ ಸತ್ಯ, ಪ್ರಾಮಾಣಿಕತೆ ಮುಖ್ಯ. ಇದನ್ನೆ ನಂಬಿ, ಸತ್ಯ ಹೇಳ್ತಾ ಬಂದಿರುವ ವ್ಯಕ್ತಿಗೆ ಮೂರು ವರ್ಷದಿಂದ ಹೆಣ್ಣು ಸಿಗ್ತಿಲ್ಲ. ಮದುವೆ ಆಗ್ತಿಲ್ಲ ಅನ್ನೋದು ಒಂದ್ಕಡೆಯಾದ್ರೆ ಇನ್ನೊಂದು ಕಡೆ ಅಪ್ಪನಿಂದ ಬೈಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮದುವೆ ಆಗ್ಬೇಕು ಅಂದ್ರೆ ತನ್ನ ವ್ಯಕ್ತಿತ್ವ ಬದಲಿಸಿಕೊಳ್ಳಬೇಕಾ ಎನ್ನುವ ಪ್ರಶ್ನೆಗೆ ಆತ ಉತ್ತರ ಹುಡುಕ್ತಿದ್ದಾನೆ.

ರೆಡ್ಡಿಟ್ ನಲ್ಲಿ ವೈರಲ್ ಪೋಸ್ಟ್

ರೆಡ್ಡಿಟ್ ನಲ್ಲಿ ಮದುವೆಗೆ ಸಂಬಂಧಿಸಿದ ಪೋಸ್ಟ್ ಒಂದು ವೈರಲ್ ಆಗಿದೆ. ಸತ್ಯ, ಪ್ರಾಮಾಣಿಕತೆ ಮೇಲೆ ಸಂಬಂಧ ಬೆಳೆಸಲು ವ್ಯಕ್ತಿ ಮುಂದಾಗಿದ್ದಾರೆ. ಮ್ಯಾಟ್ರಿಮೋನಿಯಾದಲ್ಲಿ ಕಳೆದ ಮೂರು ವರ್ಷಗಳಿಂದ ಹುಡುಗಿ ಹುಡುಕ್ತಿದ್ದಾರೆ. ಕೊನೆಗೂ ಬೇರೆ ರಾಜ್ಯದ ಹುಡುಗಿ ಪ್ರೊಫೈಲ್ ಮ್ಯಾಚ್ ಆಗಿದೆ. ಇಬ್ಬರೂ ಮಾತುಕತೆ ಶುರು ಮಾಡಿದ್ದಾರೆ. ಆರಂಭದಲ್ಲಿ ಮಾತುಕತೆ ಚೆನ್ನಾಗಿಯೇ ನಡೆದಿದೆ. ನಂತ್ರ ಹುಡುಗಿ ಒಂದೊಂದೇ ಪ್ರಶ್ನೆ ಕೇಳಲು ಶುರು ಮಾಡಿದ್ದಾಳೆ.

"ಬೆನ್ನೆಲುಬಿಲ್ಲದವ".. ಹೆಂಡ್ತಿ-ಪೋಷಕರ ನಡುವೆ ಸಿಲುಕಿ ಒದ್ದಾಡುತ್ತಿರುವ ವ್ಯಕ್ತಿಗೇ ಚಳಿ ಬಿಡಿಸಿದ ನೆಟ್ಟಿಗರು!

ಮದುವೆಗೆ ಮುನ್ನ ಹುಡುಗಿ ಷರತ್ತು ವಿಧಿಸಿದ್ದಾಳೆ. ಮನೆಯಲ್ಲಿರಬೇಕು, ಮದ್ಯ ಸೇವನೆ ಮಾಡ್ಬಾರದು ಹಾಗೂ ನಾನ್ ವೆಜ್ ತಿನ್ಬಾರದು ಅನ್ನೋದು ಆಕೆ ಷರತ್ತು. ಹುಡುಗ ಪ್ರಾಮಾಣಿಕವಾಗಿ ತನ್ನ ವ್ಯಕ್ತಿತ್ವವನ್ನು ಹೇಳಿದ್ದಾರೆ. ತಿಂಗಳಿಗೆ ಒಂದೆರಡು ಬಾರಿ ಬಿಯರ್ ಕುಡಿತೇನೆ, ತೀರಾ ಅಪರೂಪಕ್ಕೆ ಚಿಕನ್ ತಿನ್ನುತ್ತೇನೆ ಎಂದಿದ್ದಾರೆ. ಮೊದಲು ಇದಕ್ಕೆ ಹುಡುಗಿ ಒಪ್ಪಿದಂತೆ ಕಂಡಿದೆ. ನಂತ್ರ ಮದುವೆ ಆದ್ಮೇಲೆ ಇದನ್ನು ಬಿಡ್ತೀರಾ ಅಂತ ಕೇಳಿದ್ದಾಳೆ. ಅದಕ್ಕೆ ಹುಡುಗ ನೇರವಾಗಿ ಉತ್ತರ ನೀಡಿದ್ದಾರೆ. ಇದು ನನ್ನ ಸ್ವಭಾವ. ಅದನ್ನು ಬಿಡಲು ಕಂಫರ್ಟೇಬಲ್ ಇಲ್ಲ ಎಂದಿದ್ದಾರೆ. ಇದಾದ್ಮೇಲೆ ಹುಡುಗಿ, ನ್ಯೂಕ್ಲಿಯರ್ ಫ್ಯಾಮಿಲಿಯಾಗಿ ಇರೋಣ ಅಂತ ಕೇಳಿದ್ದಾಳೆ. ಅದಕ್ಕೆ ಹುಡುಗ, ನಮ್ಮದು ಜಾಯಿಂಟ್ ಫ್ಯಾಮಿಲಿ, ಅಮ್ಮನಿಗೆ ಆರೋಗ್ಯ ಸಮಸ್ಯೆ ಇದೆ. ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ಹುಡುಗಿ ಒಂದ್ರ ಮೇಲೆ ಒಂದು ಪ್ರಶ್ನೆ ಕೇಳಿದ ಮೇಲೆ ಹುಡುಗ, ನಿಮಗೆ ಒಳ್ಳೆಯ ವರ ಸಿಗಲಿ, ಆಲ್ ದಿ ಬೆಸ್ಟ್ ಅಂತ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಅಲ್ಲಿಗೇ ಕಥೆ ಮುಗಿಯಲಿಲ್ಲ. ಹುಡುಗಿ, ನೀವು ಒಳ್ಳೆಯ ವ್ಯಕ್ತಿ ಅಲ್ಲ, ಸಮುದಾಯಕ್ಕೆ ಸೂಕ್ತವಲ್ಲ ಅಂತ ಪರ್ಸನಲ್ ಮೆಸ್ಸೇಜ್ ಹಾಕಿದ್ದಾಳೆ. ಇದಕ್ಕೂ ಆತ ಹೆಚ್ಚು ಉತ್ತರಿಸದೆ ಧನ್ಯವಾದ ಎಂದಿದ್ದಾರೆ.

ಹೆಂಡ್ತಿ ಗಂಡನ ದಾಸಿ, ಆಕೆಗೆ ಮನಬಂದಂತೆ ಹೊಡೀಬಹುದು: ತಾಲಿಬಾನ್ ಹೊಸ ಕಾನೂನು!

ಆದ್ರೆ ಅಲ್ಲಿಗೇ ಪ್ರಕರಣ ನಿಲ್ಲಲಿಲ್ಲ. ಹುಡುಗಿ ತಾಯಿ, ಹುಡುಗನಬ ತಂದೆಗೆ ಫೋನ್ ಮಾಡಿ, ನಿಮ್ಮ ಮಗ ಆಲ್ಕೋಹಾಲಿಕ್ ಎಂದಿದ್ದಾರೆ. ಸಾಮಾನ್ಯವಾಗಿ ಶಾಂತವಾಗಿರ್ತಿದ್ದ ತಂದೆ ಕೋಪಗೊಂಡಿದ್ದಾರೆ. ನೀನು ಬದಲಾಗಿಲ್ಲ ಅಂದ್ರೆ ಮದುವೆ ಆಗಲ್ಲ ಅಂತ ಮಗನಿಗೆ ಹೇಳಿದ್ದಾರೆ.

ಇದು ಸದ್ಯ ರೆಡ್ಡಿಟ್ ನಲ್ಲಿ ವೈರಲ್ ಆಗಿದ್ದು, ಜನರು ನಾನಾ ರೀತಿ ಕಮೆಂಟ್ ಮಾಡ್ತಿದ್ದಾರೆ. ಹುಡುಗನ ಪ್ರಾಮಾಣಿಕತೆಯನ್ನು ಬಹುತೇಕರು ಮೆಚ್ಚಿದ್ದಾರೆ. ಸತ್ಯ ಕಹಿಯಾಗಿರುತ್ತೆ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಸುಳ್ಳು ಹೇಳಿ ಮದುವೆ ಮಾಡಿಕೊಂಡು ಮುಂದಿನ ಜೀವನ ಹಾಳು ಮಾಡ್ಕೊಳ್ಳೊದಕ್ಕಿಂತ ಇದು ಬೆಸ್ಟ್ ಎಂದಿದ್ದಾರೆ. ಬಿಯರ್, ಚಿಕನ್ ಬಿಟ್ಟು ನಿಮ್ಮನ್ನು ಪ್ರೀತಿಸುವವರನ್ನು ಹುಡುಕಿಕೊಳ್ಳಿ ಅಂತ ಮತ್ತೊಬ್ಬರು ಸಲಹೆ ನೀಡಿದ್ದಾರೆ.