ಇತ್ತೀಚೆಗೆ ಒಂದು ಸ್ವೀಟ್ ಅಂಡ್ ಕ್ಯೂಟ್ ವಿಡಿಯೋ ಹೆಚ್ಚು ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥದ್ದೇನಿದೆ ಅಂತೀರಾ?. ನೀವೇ ನೋಡಿ…
Trending Cooking Dance ಸಾಮಾಜಿಕ ಜಾಲತಾಣಗಳಲ್ಲಿ ನಾವು ಅನೇಕ ಬಾರಿ ಇಂತಹ ವಿಡಿಯೋಗಳನ್ನು ನೋಡುತ್ತೇವೆ. ಅವುಗಳು ತುಂಬಾ ಕ್ಯೂಟ್ ಆಗಿರುತ್ತವೆ. ಆಗ ಜನರು ಹೆಚ್ಚು ಹೆಚ್ಚು ಶೇರ್ ಮಾಡ್ತಾ ಹೋಗ್ತಾರೆ. ಇತ್ತೀಚೆಗೆ ಅಂತಹ ಒಂದು ಡಾನ್ಸ್ ವಿಡಿಯೋ ಹೆಚ್ಚು ಚರ್ಚೆಯಾಗ್ತಿದೆ. ಇಲ್ಲಿ ಒರ್ವ ಮಹಿಳೆ ಅಡುಗೆಮನೆಯಲ್ಲಿ ಅಡುಗೆ ಮಾಡುವಾಗ ನೃತ್ಯ ಮಾಡುವುದನ್ನು ಕಾಣಬಹುದು. ಈ ಸಮಯದಲ್ಲಿ, ಅವಳ ಪತಿ ಬಂದು ಅಡುಗೆಯತ್ತ ಗಮನಹರಿಸಲು ಕೇಳುತ್ತಾನೆ. ಆದರೆ ಆಕೆ ನೃತ್ಯ ಮಾಡುತ್ತಲೇ ಸಿಹಿಯಾಗಿ ಉತ್ತರಿಸುತ್ತಾಳೆ. ಏನಂಥ ಗೊತ್ತಾ..?, ವಿಡಿಯೋ ನೋಡಿ..
ವಿಡಿಯೋದಲ್ಲಿ ನೋಡುವ ಪ್ರಕಾರ, ಮಹಿಳೆ ಅಡುಗೆಮನೆಯೊಳಗೆ ಖುಷ್ ಖುಷಿಯಾಗಿ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಕುತೂಹಲಕಾರಿ ವಿಷಯವೆಂದರೆ ಈ ಸಮಯದಲ್ಲಿ ಅವಳು ಅಡುಗೆಯನ್ನೂ ಏಕಾಗ್ರತೆಯಿಂದ ಮಾಡುತ್ತಿದ್ದಾಳೆ. ಇದೇ ಸಮಯಕ್ಕೆ ಬಂದ ಆಕೆಯ ಪತಿ ಮೊದಲು ಅಡುಗೆಯತ್ತ ಗಮನಹರಿಸು ಎನ್ನುತ್ತಾನೆ. ಆದರೂ ಆಕೆ ನೃತ್ಯ ಮಾಡುತ್ತಲೇ ಇರುತ್ತಾಳೆ. ಕೊನೆಯಲ್ಲಿ ಆಕೆಯ ಪತಿ ಅಲ್ಲಿಂದ ಹೊರಟು ಹೋಗುತ್ತಾನೆ. ಈ ವಿಡಿಯೋದಲ್ಲಿ ಮಹಿಳೆ ನೃತ್ಯ ಮಾಡುವ ರೀತಿ ಜನರಿಗೆ ಇಷ್ಟವಾಗುತ್ತದೆ. ಈ ಸಮಯದಲ್ಲಿ ಆಕೆ ತನ್ನ ಕೆಲಸಕ್ಕೂ ಧಕ್ಕೆ ಬರದಂತೆ ತರಕಾರಿಗಳನ್ನು ಸಹ ಬೆರೆಸುತ್ತಲೇ ಇರುತ್ತಾಳೆ.
ಈ ವಿಡಿಯೋವನ್ನು miss_sheetu_16 ಎಂಬ ಇನ್‌ಸ್ಟಾ ಪೇಜ್‌ನಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ಲಕ್ಷಾಂತರ ಜನರು ಇದನ್ನು ನೋಡಿದ್ದಾರೆ. ಜೊತೆಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
" ಆ ವ್ಯಕ್ತಿಗೆ ಇಷ್ಟು ಮುದ್ದಾದ ಹೆಂಡತಿ ಸಿಕ್ಕಿದ್ದು ಅದೃಷ್ಟ ಎಂದರೆ, ಮತ್ತೆ ಕೆಲವರು ಈ ಮಹಿಳೆ ಎಷ್ಟು ಚೆನ್ನಾಗಿ ನೃತ್ಯ ಮಾಡುತ್ತಿದ್ದಾಳೆ ಎಂದಿದ್ದಾರೆ". ವಿಡಿಯೋ ನೋಡಿ ನಿಮಗೆ ಏನನಿಸಿತು ಅನ್ನೋದನ್ನ ನಮ್ಮೊಂದಿಗೆ ಹಂಚಿಕೊಳ್ಳಿ..
ಇತ್ತೀಚೆಗೆ ವಿವಾಹ ಸಂಗೀತ ಸಮಾರಂಭದಲ್ಲಿ ವರನ ಸಹೋದರ ಮತ್ತು ವಧುವಿನ ಸಹೋದರಿ ವೇದಿಕೆಯಲ್ಲಿ ತಮ್ಮ ನೃತ್ಯದ ಮೂಲಕ ಸೆನ್ಸೇಶನಲ್ ಕ್ರಿಯೇಟ್ ಮಾಡಿದ್ದು, ಅವರ ನೃತ್ಯದ ವಿಡಿಯೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿತ್ತು.
ವೈರಲ್ ಆಗಿರುವ ವಿಡಿಯೋದಲ್ಲಿ, ರಾ.ಒನ್ ಸಿನಿಮಾದ ಹಿಟ್ ಹಾಡು 'ಚಮ್ಮಕ್ ಚಲ್ಲೊ' ಹಾಡಿಗೆ ಯುವಕ-ಯುವತಿ ನೃತ್ಯ ಮಾಡುತ್ತಿರುವುದು ನೋಡಬಹುದು. ವರನ ಸಹೋದರ ಸೂಟ್ ಧರಿಸಿದ್ದರೆ, ವಧುವಿನ ಸಹೋದರಿ ನೇರಳೆ ಬಣ್ಣದ ಲೆಹೆಂಗಾ ಧರಿಸಿದ್ದಾಳೆ. ವಿಡಿಯೋಗೆ 'POV ವಧುವಿನ ಸಹೋದರಿ ಮತ್ತು ವರನ ಸಹೋದರ ವೇದಿಕೆಯ ಮೇಲೆ ಬಂದಾಗ' ಎಂದು ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೋವನ್ನು wedding dreamco Instagram ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 8.6 ಮಿಲಿಯನ್ ವೀಕ್ಷಣೆಗಳು ಮತ್ತು 902K ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
ಈ ಇಬ್ಬರ ನೃತ್ಯವನ್ನು ನೋಡಿದ ನಂತರ ಇನ್ಸ್ಟ್ರಾಗ್ರಾಮ್ ಬಳಕೆದಾರರು ಕಾಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದರು. ಕೆಲವರು "ಕಥೆಯಲ್ಲಿ ತಿರುವಿದೆ. ಅವರು ಈಗಾಗಲೇ ಡೇಟಿಂಗ್ ಮಾಡುತ್ತಿದ್ದು, ಹೆತ್ತವರನ್ನು ಮನವೊಲಿಸಲು ತಮ್ಮ ಅಣ್ಣ ಅಕ್ಕಂದಿರ ಮದುವೆಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ" ಎಂದರೆ, ಮತ್ತೆ ಕೆಲವರು, "ಈ ಹುಡುಗಿ ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾಳೆ" "ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅವನು ಒಮ್ಮೆಯೂ ಹುಡುಗಿಯನ್ನು ಮುಟ್ಟದೆ ಹೆಜ್ಜೆ ಹಾಕಿರುವುದು ನಿಜಕ್ಕೂ ವ್ಹಾವ್" ಎಂದಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ವಧು-ವರರ ಒಡಹುಟ್ಟಿದವರು ಮದುವೆಗಳಲ್ಲಿ ಅಬ್ಬರಿಸುತ್ತಿರುವುದು ಇದೇ ಮೊದಲಲ್ಲ. ಈ ವಿವಾಹ ಸಮಾರಂಭಗಳ ನೃತ್ಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತವೆ. ಈ ವಿಡಿಯೋ ನೋಡಿದ ನಂತರ ನಿಮಗೆ ಅವರ ನೃತ್ಯ ನೋಡಿ ಏನನಿಸಿತು ಎಂದು ನಮಗೆ ಕಾಮೆಂಟ್ ವಿಭಾಗದಲ್ಲಿ ತಿಳಿಸಿ.